4,115 ಪೊಲೀಸ್ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಅವುಗಳ ಪೈಕಿ ಬರೋಬ್ಬರಿ 3,500 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿವೆ ಹಾಗೂ 615 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿವೆ. 2023-24 2022-23 ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಪ್ರಸ್ತಾವನೆ ಸಲ್ಲಿಸಲಾಗಿರುವ ಹುದ್ದೆಗಳು ಇವಾಗಿವೆ.
ಅಧಿಸೂಚನೆ ಯಾವಾಗ?
ಈ ಮೇಲಿನ ಎಲ್ಲ ಹುದ್ದೆಗಳಿಗೆ ಈಗ ತಾನೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಮುಂದಿನ 3 ತಿಂಗಳೊಳಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಆದರೆ ನೇಮಕಾತಿ ಜರೂರು ಆದೇಶ ಗೃಹ ಇಲಾಖೆಯಿಂದ ಬಂದಲ್ಲಿ 40 ದಿನಗಳೊಳಗೆ ಸಹ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳು ಇವೆ.
ಹುದ್ದೆವಾರು ವಿದ್ಯಾರ್ಹತೆ ವಿವರಗಳು
▶ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್): ಎಸ್‌ಎಸ್‌ಎಲ್‌ಸಿ/ 10ನೇ ತರಗತಿ/ ತತ್ಸಮಾನ ವಿದ್ಯಾರ್ಹತೆ.
▶ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್: ಎಸ್ಎಸ್‌ಎಲ್‌ಸಿ/ 10ನೇ ತರಗತಿ/ ತತ್ಸಮಾನ ವಿದ್ಯಾರ್ಹತೆ.
▶ಪೊಲೀಸ್ ಸಬ್ ಇನ್ಸ್‌ಪೆಕ್ಟರ್: ಯಾವುದೇ ಪದವಿ ಪಾಸ್,
▶ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್): ದ್ವಿತೀಯ ಪಿಯುಸಿ ಪಾಸ್.
ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ.
ಚಾಲ್ತಿಯಲ್ಲಿರುವ ಹುದ್ದೆಗಳ ವಿವರ
▶10 ಡಿವೈಎಸ್ಪಿ (ಸಿವಿಲ್) – (2023-24, 2024- 25)ನೇ ಸಾಲಿನ ಹುದ್ದೆಗಳು.
▶4000 ಪಿಸಿ (ಸಿವಿಲ್)- 2021-22 ನೇ ಸಾಲಿನ ಹುದ್ದೆಗಳು.
▶250- (ಕೆಎಸ್‌ಆರ್‌ಪಿ)- 2021-22ನೇ ಸಾಲಿನ ಹುದ್ದೆಗಳು.
▶3000 ಪಿಸಿ (ಸಿವಿಲ್)- 2022-23 ನೇ ಸಾಲಿನ ಹುದ್ದೆಗಳು.
▶1500 ಎಪಿಸಿ (ಸಿಎಆರ್)/ (ಡಿಎಆರ್) 2022-23 ನೇ ಸಾಲಿನ ಹುದ್ದೆಗಳು.
ಹುದ್ದೆ ಹೆಸರು | ಹುದ್ದೆ ಸಂಖ್ಯೆ | ಯಾವ ಸಾಲಿನ ಹುದ್ದೆಗಳು |
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) | 2000 | 2023-24 |
ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್(SRPC) (KSRP) |
1500 | 2023-24 |
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ | 300 | 2022-23 |
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ | 300 | 2023-24 |
ಡೆಪ್ಯುಟಿ ಸಬ್ ಇನ್ಸ್‌ಪೆಕ್ಟರ್ | 15 | 2024-25 |
ವಯೋಮಿತಿ ಏನು?
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್/ ‘ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ. ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ, ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷದ ವರೆಗೆ ಅರ್ಜಿಗೆ ಅವಕಾಶ ಇರುತ್ತದೆ.