ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (2ನೇ ತಿದ್ದುಪಡಿ) ನಿಯಮಗಳು 2024- ಕರಡು ನಿಯಮಗಳ ಅಧಿಸೂಚನೆ ಪ್ರಕಟ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣವನ್ನು ಓದಿಕೊಂಡು, 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಿರುವಂತೆ, ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು, 2024ರ ಕರಡನ್ನು ಅಧಿಸೂಚನೆ ಸಂಖ್ಯೆ: ಇಡಿ 240 ಡಿಸಿಇ 2024 (ಇ), ದಿನಾಂಕ: 28.08.2024ರಲ್ಲಿ, ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ-IV ಎ, ಸಂಖ್ಯೆ: 417, ದಿನಾಂಕ: 29.08.2024ರಲ್ಲಿ ಪ್ರಕಟಿಸಲಾಗಿದ್ದು ಅಧಿಕೃತ ರಾಜ್ಯ ಪತ್ರದಲ್ಲಿ ಅದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ.

ಮತ್ತು ಸದರಿ ರಾಜ್ಯ ಪತ್ರವನ್ನು 29.08.2024ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ,

ಮತ್ತು ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿರುವುದರಿಂದ,

ಆದ್ದರಿಂದ, ಪ್ರಸ್ತುತ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣವನ್ನು ಓದಿಕೊಂಡು, 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ :-

ನಿಯಮಗಳು

  1. ಶೀರ್ಷಿಕೆ ಮತ್ತು ಆರಂಭ – (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (2ನೇ ತಿದ್ದುಪಡಿ) ನಿಯಮಗಳು 2024 ಎಂದು ಕರೆಯತಕ್ಕದ್ದು.
  2. ನಿಯಮ 4(4)(ಬಿ) ಯ ತಿದ್ದುಪಡಿ: ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2021ರ ನಿಯಮ 4(4)(ಬಿ) ನಂತರದಲ್ಲಿ ಈ ಕೆಳಕಂಡಂತೆ ಸೇರಿಸತಕ್ಕದ್ದು. ಏನೆಂದರೆ-

“(ಸಿ) ಪರಂತು ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಬೋಧಕರು ಅಂಗವೈಕಲ್ಯತೆಯನ್ನು ಹೊಂದಿದ್ದರೆ ಮತ್ತು ಅವರ ಅವಲಂಬಿತ ಮಕ್ಕಳು, ಪತಿ/ ಪತ್ನಿ, ತಂದೆ, ತಾಯಿ ಇವರುಗಳು ಸಹಾ ಅಂಗವೈಕಲ್ಯತೆಯನ್ನು ಹೊಂದಿದ್ದರೆ ಇವರನ್ನು ವರ್ಗಾವಣೆ ಮಾಡತಕ್ಕದ್ದಲ್ಲ, ಇದೇ ನಿಯಮಾವಳಿಯ ನಿಯಮ 4(1)ರಲ್ಲಿ ನಿಗಧಿಪಡಿಸಲಾದ ಕನಿಷ್ಠ ಸೇವಾವಧಿಯನ್ನು ಪೂರೈಸಿದ್ದಲ್ಲಿ, ಅವರ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡತಕ್ಕದ್ದು.”

  1. ನಿಯಮ 9(2)(ಎ), (ಬಿ), (ಸಿ) ಮತ್ತು (ಡಿ)ಗೆ ತಿದ್ದುಪಡಿ: ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2021ರ ನಿಯಮ 9(2) (ಎ), (ಬಿ), (ಸಿ) ಮತ್ತು (ಡಿ) ನಂತರದಲ್ಲಿ ಈ ಕೆಳಕಂಡ ಅಂಶವನ್ನು ಕೈಬಿಡತಕ್ಕದ್ದು. ಏನೆಂದರೆ-

“ಅಂತಹ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿ”.

ಸಂಪೂರ್ಣ ಮಾಹಿತಿಗಾಗಿ- CLICK HERE

Leave a Comment