ಗಣಿತ ಗಣಕ: ವಿನೂತನ ಪ್ರಯೋಗ, ಶಾಲೆ ಬಿಟ್ಟ ಮೇಲೆ ಒಂದು ಗಂಟೆ ತರಗತಿ, 17 ಜಿಲ್ಲೆ, 93 ತಾಲೂಕು ಸರ್ಕಾರಿ ಶಾಲೆಗಳಲ್ಲಿ ಜಾರಿ.

ಮೊಬೈಲ್‌ನಲ್ಲಿ ಮಕ್ಕಳಿಗೆ ಗಣಿತ ಪಾಠ! ಶಾಲೆ ಬಿಟ್ಟ ಮೇಲೆ ಒಂದು ಗಂಟೆ ತರಗತಿ, 17 ಜಿಲ್ಲೆ, 93 ತಾಲೂಕು ಸರ್ಕಾರಿ ಶಾಲೆಗಳಲ್ಲಿ ಜಾರಿ.7ರಿಂದ 8 ಲಕ್ಷ ಮಕ್ಕಳಿಗೆ ‘ಗಣಿತ ಗಣಕ’ ಪ್ರಯೋಜನ

ಕಲಿಕೆಯಲ್ಲಿ ಹಿಂದುಳಿದ ಅದರಲ್ಲೂ ವಿಶೇಷವಾಗಿ ಗಣಿತ ವಿಷಯ ಕಲಿಕೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಮಕ್ಕಳಿಗೆ ಇನ್ನು ಮುಂದೆ ಮೊಬೈಲ್ ಮೂಲಕ ಪಾಠ ಬೋಧನೆ ಮಾಡಲಾಗುತ್ತದೆ! ಶಾಲೆ ಬಿಟ್ಟ ಮೇಲೆ ಪಾಲಕರು ಜತೆಯಲ್ಲಿರುವಾಗಲೇ ಮಕ್ಕಳು ಶಿಕ್ಷಕರಿಗೆ ಮೊಬೈಲ್

ಕಲಿಕೆಯಲ್ಲಿ ಹಿಂದುಳಿದ ಅದರಲ್ಲೂ ವಿಶೇಷವಾಗಿ ಗಣಿತ ವಿಷಯ ಕಲಿಕೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಮಕ್ಕಳಿಗೆ ಇನ್ನು ಮುಂದೆ ಮೊಬೈಲ್ ಮೂಲಕ ಪಾಠ ಬೋಧನೆ ಮಾಡಲಾಗುತ್ತದೆ! ಶಾಲೆ ಬಿಟ್ಟ ಮೇಲೆ ಪಾಲಕರು ಜತೆಯಲ್ಲಿರುವಾಗಲೇ ನಲ್ಲಿ ಗಣಿತ ಪಾಠ ಮಾಡುತ್ತಾರೆ. ರಾಜ್ಯದಲ್ಲಿ ಇದೊಂದು ವಿಶೇಷ ಪ್ರಯತ್ನವಾಗಿದೆ. ರಾಜ್ಯದ 17 ಆಕಾಂಕ್ಷಿ ಜಿಲ್ಲೆಗಳ 93 ತಾಲೂಕುಗಳ ಸರ್ಕಾರಿ ಶಾಲೆಗಳ 3 ರಿಂದ 5ನೇ ತರಗತಿಯ ಸುಮಾರು 7 ರಿಂದ 8 ಲಕ್ಷ ಮಕ್ಕಳಿಗೆ ಈ ಪಾಠ ಬೋಧನೆ ಸೌಲಭ್ಯ ದೊರೆಯಲಿದೆ. ಗಣಿತ ಎಂದರೆ ಅನೇಕ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿದೆ. ಗಣಿತ ವಿಷಯ ಕಲಿಕೆಯಲ್ಲಿ ಹೆಚ್ಚು ಮಕ್ಕಳು ಹಿಂದುಳಿದಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಹಾಗಾಗಿ ಮಕ್ಕಳಿಗೆ ಗಣಿತ ಇಷ್ಟದ ವಿಷಯವಾಗುವಂತೆ ಮಾಡಿ ಅವರನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಲು ಪೂರಕವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ನವೆಂಬರ್ ಎರಡನೇ ವಾರದಿಂದ ರಾಜ್ಯಾದ್ಯಂತ ಈ ಕಾರ್ಯಕ್ರಮ ಜಾರಿಗೆ ಬರಲಿದೆ.

38 ಸಾವಿರ ಶಿಕ್ಷಕರಿಗೆ ತರಬೇತಿ ಬಾಕಿ

ಈಗಾಗಲೇ ಕಾರ್ಯಕ್ರಮ ಕುರಿತು ಮಂಡ್ಯದಲ್ಲಿ ಮಾಸ್ಟರ್ ಟ್ರೈ ನರ್‌ ಗಳಿಗೆ ತರಬೇತಿ ನೀಡಲಾಗಿದೆ. ಈ ತರಬೇತುದಾರರು ಸಿಆರ್‌ಪಿ ಹಂತದಲ್ಲಿ ತರಬೇತಿ ನೀಡಿದ್ದು, ಮೂರನೇ ಹಂತದಲ್ಲಿ ಸುಮಾರು 38 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವುದು ಬಾಕಿ ಇದೆ. ಶಿಕ್ಷಕರಿಗೆ ಹ್ಯಾಂಡ್ ಬುಕ್, ಮಕ್ಕಳಿಗೆ ಕಲಿಕಾ ಕೈಪಿಡಿಯನ್ನು ಸರ್ಕಾರವೇ ಪೂರೈಸುತ್ತದೆ. ಜತೆಗೆ ಶಿಕ್ಷಕರಿಗೆ 3 ತಿಂಗಳ ಪ್ಯಾಕೇಜ್ ರೂಪದ ಮೊಬೈಲ್ ರೀಚಾರ್ಜ್(ಫೋನ್ ಕರೆಗಳಿಗೆ ಮಾತ್ರ)ಗೆ 600 ರೂ. ಗಳನ್ನು ಸರ್ಕಾರ ನೀಡುತ್ತದೆ.

“ಗಣಿತ ಗಣಕ’ ವಿನೂತನ ಪ್ರಯೋಗ. ಮಕ್ಕಳು ಗಣಿತ – ಕಲಿಕೆಯನ್ನು ಇಷ್ಟಪಡುವಂತೆ ಮಾಡಲು – ಇದು ಪೂರಕ. ಕಲಿಕೆಯಲ್ಲಿ ಹಿಂದುಳಿದ – ಮಕ್ಕಳನ್ನು ಗುರುತಿಸಿ ಅವರಿಗೆ ಫೋನ್ ಮೂಲಕ ಟ್ಯೂಟರಿಂಗ್ ಮಾಡಲಾಗುತ್ತದೆ. ಇದು ಪ್ರಾಯೋಗಿಕವಾಗಿ ಯಶಸ್ಸು ಕಂಡಿದೆ. ಹಾಗಾಗಿ ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು.”

ಮಾರುತಿ, ನಿರ್ದೇಶಕರು, ಡಿಎಸ್‌ಇಆರ್‌ಟಿ.

“ಈಗಾಗಲೇ ಎರಡು ಹಂತದ ತರಬೇತಿ ಪೂರ್ಣಗೊಂಡಿದೆ. ಗಣಿತ ಕಲಿಕೆಯಲ್ಲಿ ಸುಧಾರಣೆ ತರುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳು ಮತ್ತು ಪಾಲಕರು ಫೋನ್ ಟ್ಯೂಟರಿಂಗ್‌ನಲ್ಲಿ ಭಾಗವಹಿಸುವುದರಿಂದ ಕಲಿಕೆಯಲ್ಲಿ ಪ್ರಗತಿ ಸಾಧ್ಯವಾಗುತ್ತದೆ.”

ಸೋಮಶೇಖರ ಮುಂಡರಗಿಮಠ,ಬಿ.ಆ‌ರ್.ಸಿ.ರಾಯಚೂರು.

ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿದೆ

ಶಿಕ್ಷಕರು ಪ್ರತಿ ತಿಂಗಳಲ್ಲಿ ಗಣಿತದ ಮೂಲಕ್ರಿಯೆಯಲ್ಲಿ ಕಷ್ಟಪಡುತ್ತಿರುವ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅವರಿಗೆ ಹೆಚ್ಚಿನ ಬೆಂಬಲ ನೀಡಲು ಗಣಿತ ಗಣಕ ಕಾರ್ಯಕ್ರಮದಲ್ಲಿ ಅವರನ್ನು ತೊಡಗಿಸಿಕೊಳ್ಳುತ್ತಾರೆ. ಪ್ರತಿವಾರ 1 ಕರೆ ಮಾಡಲಾಗುತ್ತದೆ. ಪ್ರತಿ ಕರೆ 40 ನಿಮಿಷದಿಂದ 1 ಗಂಟೆ ಇರುತ್ತದೆ. ಪ್ರತಿ ವಿದ್ಯಾರ್ಥಿಗೆ ಪ್ರತಿ ವಾರ 1 ಕರೆಯಂತೆ ಒಂದು ತಿಂಗಳಲ್ಲಿ 4 ಕರೆ ಮಾಡಲಾಗುತ್ತದೆ.

ಕಲಿಕೆ ಪ್ರಕ್ರಿಯೆ ಹೇಗೆ?

ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋದ ಮೇಲೆ ಸಂಜೆ 6 ರಿಂದ 7.30ರ ಒಳಗಿನ ಅವಧಿಯಲ್ಲಿ ಪಾಲಕರ ಪೋನ್‌ಗೆ ಸಂಪರ್ಕಿಸಿ ಪಾಠ ಮಾಡಲಾಗುತ್ತದೆ. ಶಿಕ್ಷಕರ ಜತೆಗೆ ಪಾಲಕರೂ ಕೂಡ ಮಗುವಿಗೆ ಕಲಿಕೆಯಲ್ಲಿ ಸಣ್ಣಪುಟ್ಟ ಸಹಾಯ ಮಾಡಲು ಅನುಕೂಲವಾಗುತ್ತದೆ. ಒಂದು ತಿಂಗಳಿಗೆ ಒಂದು ಮಗುವಿಗೆ 4 ಅವಧಿ ತರಗತಿ ತೆಗೆದುಕೊಳ್ಳಲಾಗುತ್ತದೆ. ನಾಲ್ಕು ವಾರ ಮುಗಿದ ಬಳಿಕ ಬೇಸ್ ಲೈನ್ ಮತ್ತು ಎಂಡ್ ಡೈನ್ ಸಮೀಕ್ಷೆ ಮಾಡಿ ಮಗುವಿನ ಕಲಿಕಾ ಸಾಮರ್ಥ್ಯ ವೃದ್ಧಿಯಾಗಿದ್ದರೆ ಫೋನ್ ಟ್ಯೂಟರಿಂಗ್ ನಿಲ್ಲಿಸಲಾಗುತ್ತದೆ.

ಜೆ-ಪಾಲ್ ಜತೆ ಒಡಂಬಡಿಕೆ

ಕಲಿಕಾ ಅಂತರವನ್ನು ಸುಧಾರಿಸುವ ಉದ್ದೇಶದಿಂದ ಜೆ-ಪಾಲ್‌ ಸೌತ್ ಏಷ್ಯಾದೊಂದಿಗೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಮಕ್ಕಳ ಉಜ್ವಲ್‌ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಕಾರ್ಯಕ್ರಮವಾಗಿದೆ. ಜೆ-ಪಾಲ್ ಸಂಸ್ಥೆ ತಾಂತ್ರಿಕ ಹಾಗೂ ಸಾಂಖ್ಯಿಕ ನೆರವನ್ನು ನೀಡುತ್ತದೆ. ತಮ್ಮದೇ ಆದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಶೈಕ್ಷಣಿಕ ಸಹಾಯ ನೀಡುತ್ತದೆ. ಜೆ-ಪಾಲ್ ಸಂಸ್ಥೆ ಈಗಾಗಲೇ ಫಿನ್‌ ಲ್ಯಾಂಡ್, ಕೀನ್ಯ, ಉಗಾಂಡ ಹಾಗೂ ಭಾರತದ ತೆಲಂಗಾಣ, ಒಡಿಶಾಗಳಲ್ಲಿ ನಡೆಸಿದ ಪ್ರಯೋಗ ಯಶಸ್ಸು ಕಂಡಿದೆ. ಹಾಗಾಗಿ ರಾಜ್ಯದಲ್ಲಿ ‘ಗಣಿತ ಗಣಕ’ ಕಾರ್ಯಕ್ರಮಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ವಿನೂತನ ಮಾದರಿ ಕಲಿಕೆ

ಫೋನ್ ಕರೆ ಮಾಡುವ ಶಿಕ್ಷಕರು ಆರಂಭದ ನಾಲೈದು ನಿಮಿಷ ಪಾಲಕರು ಮತ್ತು ಮಗುವಿನ ಯೋಗಕ್ಷೇಮ ವಿಚಾರಣೆ ಮಾಡಿ, ಸಣ್ಣಪುಟ್ಟ ಲೆಕ್ಕಗಳನ್ನು ನೀಡಿ ಮಾರ್ಗದರ್ಶನ ಮಾಡುತ್ತಾರೆ.

ಮುಖ್ಯಾಂಶಗಳು

ರಾಯಚೂರು, ಸೊರಬ ತಾಲೂಕುಗಳಲ್ಲಿ ಪ್ರಾಯೋಗಿಕ ಕಲಿಕೆ ಯಶಸ್ವಿ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಠ ಬೋಧನೆ. ಗಣಿತದ ಮೂಲ ಕೌಶಲಗಳನ್ನು ಸುಧಾರಿಸಲು ವೈಯಕ್ತಿಕ ಮಾದರಿಯಲ್ಲಿ ಶಿಕ್ಷಣ.

ಮಕ್ಕಳು ಗಣಿತ ಕಲಿಯಲು ಮತ್ತು ಇಷ್ಟಪಡುವಂತೆ ಮಾಡುವುದು.

ತಮ್ಮ ಮಕ್ಕಳ ಶಿಕ್ಷಣದಲ್ಲಿ ಸಹಾಯ ಮಾಡಲು ಪಾಲಕರನ್ನು ತೊಡಗಿಸಿಕೊಳ್ಳುವುದು.

ಫೋಕಸ್

ಗಣಿತದ ಮೂಲ ಕೌಶಲಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಗಕಾರ ಕಲಿಕೆಗೆ ಒತ್ತು.

ಮಕ್ಕಳ ಕಲಿಕೆ ಪ್ರಕ್ರಿಯೆಯಲ್ಲಿ ಪಾಲಕರನ್ನು ಪ್ರಮುಖ ಭಾಗವಾಗಿ ಸೇರಿಸುವುದು.

ಪ್ರಾಯೋಗಿಕ ಜಾರಿ, ಯಶಸ್ಸಿಗೆ ರಹದಾರಿ

ರಾಯಚೂರು ಮತ್ತು ಸೊರಬ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಪರಿಣಾಮ ಕಂಡು ಬಂದಿದೆ. ಪಾಲಕರೂ ಕಲಿಕೆಯಲ್ಲಿ ಭಾಗವಹಿಸಿ ಉತ್ಸುಕತೆ ತೋರಿರು ವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪೋನ್ ಟ್ಯೂಟರಿಂಗ್‌ನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

 

1 thought on “ಗಣಿತ ಗಣಕ: ವಿನೂತನ ಪ್ರಯೋಗ, ಶಾಲೆ ಬಿಟ್ಟ ಮೇಲೆ ಒಂದು ಗಂಟೆ ತರಗತಿ, 17 ಜಿಲ್ಲೆ, 93 ತಾಲೂಕು ಸರ್ಕಾರಿ ಶಾಲೆಗಳಲ್ಲಿ ಜಾರಿ.”

  1. I am teacher of service 32 years. Shall I give classes in maths. So many our friends tell me you teach maths very well.

    Reply

Leave a Comment