ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಸಭೆ ನಡಾವಳಿ ಅಂಶಗಳು ಏನೇನು? ಇಲ್ಲಿದೆ ಮಾಹಿತಿ.
ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಸಭೆ ನಡಾವಳಿ ಅಂಶಗಳು ಏನೇನು? ಇಲ್ಲಿದೆ ಮಾಹಿತಿ.:
ದಿನಾಂಕ: ದಿನಾಂಕ:09.06.2025 ಮಧ್ಯಾಹ್ನ 3:00 ಗಂಟೆಗೆ ಮಾನ್ಯ ನಿರ್ದೇಶಕರು (ಪ್ರೌಢಶಿಕ್ಷಣ) ಮತ್ತು ಉಪನಿರ್ದೇಶಕರು (ಪ್ರೌಢಶಿಕ್ಷಣ) ಇವರ ಅಧ್ಯಕ್ಷತೆಯಲ್ಲಿ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚನೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳೊಂದಿಗೆ ಆಯುಕ್ತರ ಕಛೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದ ಕರೆಯಲಾಗಿತ್ತು. ಸಭೆಯಲ್ಲಿ ಈ ಕೆಳಕಂಡ ಅಂಶಗಳನ್ನು ಚರ್ಚಿಸಲಾಯಿತು.
ಸರ್ಕಾರದ ಆದೇಶ ಸಂಖ್ಯೆ: ಇಪಿ 11ಎಸ್ ಎಲ್ ಬಿ 2025 ಬೆಂಗಳೂರು ದಿನಾಂಕ: 13.01.2025 ರ ಪತ್ರದಂತೆ ಈಗಾಗಲೇ ಕೆಲವು ಜಿಲ್ಲೆಗಳ ಉಪನಿರ್ದೇಶಕರು 16 ಸದಸ್ಯರ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಆದೇಶವು ಪ್ರಸ್ತುತ ಚಾಲ್ತಿಯಲ್ಲಿ ಇರುವುದಿಲ್ಲವಾದ್ದರಿಂದ ದಿನಾಂಕ:21.02.2025 ರ ಆದೇಶದಂತೆ ಕ್ರಮವಹಿಸಲು ಸೂಚಿಸಿದ್ದ ಈ ಕಛೇರಿ ಪತ್ರ ಸಂಖ್ಯೆ :ಸಿ4(4)ವಿ.ಸ.ಮ.ಸಿ.ಸು/1653125/04/2025-26, ದಿನಾಂಕ: 20.05.2025 ರಂತೆ ಕ್ರಮವಹಿಸಿದ ಬಗ್ಗೆ ಮಾಹಿತಿಯನ್ನು ನೀಡಲು ಮತ್ತೊಮ್ಮೆ ಸೂಚಿಸಲಾಯಿತು.
ಸರ್ಕಾರದ ಆದೇಶ ಸಂಖ್ಯೆ: ಇಪಿ 11ಎಸ್.ಎಲ್.ಬಿ 2025, ಬೆಂಗಳೂರು ದಿನಾಂಕ: 21.02.2025 ರ ಪತ್ರದಲ್ಲಿನ ನಮೂನೆಯಲ್ಲಿ ವಿವಸಿರುವಂತೆ ವಿಧಾನಸಭಾ ಮತ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಶಿಕ್ಷಣ ಸುಧಾರಣ ಸಮಿತಿಗೆ ಕ್ರಮಸಂಖ್ಯೆ 1 ರಿಂದ 18 ರವರೆಗೆ ಒಟ್ಟು 18 ಸದಸ್ಯರಿರುತ್ತಾರೆ.
ದಿನಾಂಕ:21.02.2025 ರ ಸರ್ಕಾರಿ ಆದೇಶದಂತೆ 18 ಸದಸ್ಯರಲ್ಲಿ ಒಟ್ಟು 05 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. (ಕ್ರಮಸಂಖ್ಯೆ 14 8ರಿಂದ18)
ಸದರಿ ಪತ್ರದಲ್ಲಿನ ನಮೂನೆಯಲ್ಲಿನ ಕ್ರಮಸಂಖ್ಯೆ 16 ಮತ್ತು 17 ರಲ್ಲಿ ಸಾಮಾನ್ಯ ಗುಂಪಿನ OBC ಸದಸ್ಯರು ಇಬ್ಬರು ಮಾತ್ರ [ ಕ್ರಮವಾಗಿ (01)&(02).
ಅಂದರೆ SC/ST ಗುಂಪಿಗೆ ಸೇರಿದ ಒಬ್ಬರು, ಮಹಿಳಾ ಸದಸ್ಯರು ಒಬ್ಬರು, ಸಾಮಾನ್ಯ ಗುಂಪಿನ OBC ಸದಸ್ಯರು ಇಬ್ಬರು (ಕ್ರ.ಸಂ.16 & 17), OBC ಗುಂಪಿನ ಸದಸ್ಯರು ಒಬ್ಬರು. ಕ್ರಮಸಂಖ್ಯೆ 14 ರಿಂದ 18 ರವರೆಗೆ ಒಟ್ಟು 05 ಸದಸ್ಯರು ಮಾತ್ರ ಇದ್ದು, ಐದು ಸದಸ್ಯರಲ್ಲಿ ಯಾರಾದರೊಬ್ಬರು ಪದವೀಧರರಾಗಿರಬೇಕು.
ಜಿಲ್ಲೆಗಳ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರುಗಳನ್ನು ಸಂಪರ್ಕಿಸಿ ಸದರಿಯವರ ಅಧ್ಯಕ್ಷತೆಯಲ್ಲಿ ಸದರಿ ಸಮಿತಿಗಳನ್ನು ರಚಿಸಿ, ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆ ಪಡೆದು ದಿನಾಂಕ:13.06.2025 ರೊಳಗೆ ಸಲ್ಲಿಸಲು ಸೂಚಿಸಲಾಯಿತು..
ಆದ್ದರಿಂದ; ಅ) ಸರ್ಕಾರದ ಆದೇಶ ಸಂಖ್ಯೆ: ಇಪಿ 11ಎಸ್.ಎಲ್.ಬಿ 2025, ಬೆಂಗಳೂರು ದಿನಾಂಕ: 21.02.2025 ರ ಪತ್ರದಲ್ಲಿನ ಆದೇಶದಂತೆ ಹಾಗೂ ನಮೂನೆಯಂತೆ ಮಾಹಿತಿಯನ್ನು ಸಲ್ಲಿಸುವುದು. ಈಗಾಗಲೇ 16 ಸದಸ್ಯರ ಪಟ್ಟಿಯನ್ನು ಸಲ್ಲಿಸಿರುವ ಉಪನಿರ್ದೇಶಕರುಗಳು ಸಹ 18 ಸದಸ್ಯರನ್ನೊಳಗೊಂಡ ಪರಿಷ್ಕೃತ ನಮೂನೆಯಲ್ಲಿ ಮಾಹಿತಿಯನ್ನು ಸಲ್ಲಿಸಲು ಸೂಚಿಸಲಾಯಿತು.
ಆ) ಈಗಾಗಲೇ ಮಾನ್ಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಅನುಮೋದನೆ ಪಡೆದು ಪಟ್ಟಿಯನ್ನು ಸಲ್ಲಿಸಿದ್ದಲ್ಲಿ, ದಿನಾಂಕ:21.02.2025 ರಲ್ಲಿನ ಸರ್ಕಾರಿ ಆದೇಶದಲ್ಲಿನ ನಮೂನೆಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರುಗಳು ದೃಢೀಕರಿಸಿ ಸಲ್ಲಿಸುವುದು.
ನಮೂನೆಯಲ್ಲಿನ ಕ್ರಮ ಸಂಖ್ಯೆ: 14 ರಿಂದ 18 ರವರೆಗಿನ ನಾಮ ನಿರ್ದೇಶಿತ ಸದಸ್ಯರ ವಿದ್ಯಾರ್ಹತೆ ಮತ್ತು ಜಾತಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಅಗತ್ಯವಿದ್ದು, ಸದರಿ ಪ್ರಮಾಣ ಪತ್ರಗಳ ಪ್ರತಿಗಳನ್ನು ಪಡೆದು ಪರಿಶೀಲಿಸಿ ನಮೂನೆಯೊಂದಿಗೆ ಲಗತ್ತಿಸಿ ಸಲ್ಲಿಸಲು ಸೂಚಿಸಲಾಯಿತು.

