ದಂತ ಭಾಗ್ಯ ಯೋಜನೆ:ದಂತ ಭಾಗ್ಯ ಯೋಜನೆ ಸಂಪೂರ್ಣ ದಂತಪಂಕ್ತಿಗಳ ದರ ಹೆಚ್ಚಳ ಮಾಡಿ ಆದೇಶ-2025
ದಂತ ಭಾಗ್ಯ ಯೋಜನೆ:ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಆದೇಶದಲ್ಲಿ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ಉದ್ದೇಶದಿಂದ ದಂತ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಅನುಷ್ಠಾನ ಮಾರ್ಗಸೂಚಿ ಹೊರಡಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ ದಂತ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ರಿಂದ 45 ವರ್ಷಕ್ಕೆ ಇಳಿಸಲಾಗಿದೆ. ಹಾಗೂ ಆಸ್ಪತ್ರೆ/ ಕಾಲೇಜಿಗೆ ಗುಣಮಟ್ಟದ ದಂತ ಪಂಕ್ತಿಯನ್ನು ನೀಡಲು ಪ್ರತಿ ರೋಗಿಗೆ ರೂ.500.00 ರಿಂದ ರೂ.750.00 ಹೆಚ್ಚಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಆದೇಶದಲ್ಲಿ ಪ್ರತಿ ಸಂಪೂರ್ಣ ದಂತೆ ಪಂಕ್ತಿಗೆ ರೂ.750.00 ರಿಂದ ರೂ.2000.00 ಗಳಿಗೆ ಹಾಗೂ ಭಾಗಶ: ದಂತ ಪಂಕ್ತಿಗೆ ರೂ 300.00 ರಿಂದ 1000.00 ರೂ ಗಳಿಗೆ ಹೆಚ್ಚಿಸುವುದರೊಂದಿಗೆ ಇನ್ನಿತರ ಮಾರ್ಪಡುಗಳೊಂದಿಗೆ ಆದೇಶ ಹೊರಡಿಸಲಾಗಿರುತ್ತದೆ.
ಮೇಲೆ ಓದಲಾದ (4) ರ ಎಂಡಿ ಎನ್‌ಹೆಚ್‌ಎಂ ಇವರ ಏಕಕಡತದಲ್ಲಿ ದಂತ ಭಾಗ್ಯ ಯೋಜನೆಯಲ್ಲಿ ದಂತ ಪಂಕ್ತಿಗಳನ್ನು ತಯಾರಿಸುವ ಸಾಮಾಗ್ರಿಗಳು, ಕನ್ಸೂಮಬಲ್ಸ್ ಮತ್ತು ಇತರೆ ತಯಾರಿಕ ವೆಚ್ಚಗಳು ಹೆಚ್ಚಾಲವಾಗುತ್ತಿರುವದರಿಂದ ಪ್ರಸ್ತುತ ದರಗಳನ್ನು ಪರಿಷ್ಕರಿಸಬೇಕಾಗುತ್ತದೆ.
ಆದುದರಿಂದ ದಂತಭಾಗ್ಯ ಯೋಜನೆಯಡಿ ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿರುವ ರೂ. 2000/- ಗಳನ್ನು ರೂ. 3000/- ಗಳಿಗೆ ಹೆಚ್ಚಿಸಲು ರೂ. 50 ಲಕ್ಷಗಳ ಹೆಚ್ಚುವರಿ ದಂತಭಾಗ್ಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೋರಲಾಗಿದೆ.
ಮೇಲೆ ಓದಲಾದ (5)ರ ಆರ್ಥಿಕ ಇಲಾಖೆ ಹಿಂಬರಹದಲ್ಲಿ ದಂತ ಭಾಗ್ಯ ಯೋಜನೆಯ ದಂತಪಂಕ್ತಿಗಳ ಯೂನಿಟ್ ದರಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಇಲಾಖೆಗೆ ಒದಗಿಸಲಾದ ಅನುದಾನಕ್ಕೆ ಸೀಮಿತಗೊಳಿಸಿ ವೆಚ್ಚ ಭರಿಸುವ ಷರತ್ತಿಗೊಳಪಟ್ಟು ಸಹಮತಿ ನೀಡಲಾಗಿದೆ.
ಆದೇಶದ ವಿವರ:
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಂಕ್ತಿಗದರವನ್ನು ರೂ. 2000/-ದಿಂದ ರೂ. 3000/-ಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಇಲಾಖೆಗೆ ಒದಗಿಸಲಾದ ಆಯವ್ಯಯದಲ್ಲಿ ಭರಿಸತಕ್ಕದ್ದು, ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 555 ವೆಚ್ಚ. 5/2025 ದಿನಾಂಕ:17.07.2025ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.