ನಿಜವಾದ ಮಾತು – ಸುಂದರವಾದ ಕಥೆ-02

ಅಕ್ಟರ್ ಚಕ್ರವರ್ತಿಯ ಆಸ್ಥಾನದಲ್ಲಿ ಬೀರಬಲ್ಲನು ವಿದೂಷಕನಾಗಿಯೂ, ಅಂತರಂಗ ಸಚಿವನಾಗಿಯೂ ಇದ್ದನು. ತಾನಸೇನನು ಸಂಗೀತ ವಿದ್ವಾಂಸನಾಗಿದ್ದನು. ತಾನಸೇನನ ಸಂಗೀತವನ್ನು ಕೇಳಲು ದೇಶ ವಿದೇಶಗಳಿಂದ ಪ್ರಮುಖರು ಬಂದು, ಆತನ ವಿದ್ವತ್ತನ್ನು ಹೊಗಳುತ್ತಿದ್ದರು. ಈ ಪಾಂಡಿತ್ಯಕ್ಕೆ ತಾನಸೇನನೇನೂ ಗರ್ವ ಪಡುತ್ತಿರಲಿಲ್ಲ. ಆದರೆ ಉಳಿದ ಮಂತ್ರಿಗಳಿಗೆ ತಾನಸೇನನ ಸಮಾನರು ಪ್ರಪಂಚದಲ್ಲಿ ಮತ್ತೊಬ್ಬರಿಲ್ಲವೆಂದು ಹೆಮ್ಮೆ, ಬೀರಬಲ್ಲನನ್ನು ಸಚಿನ ಸ್ಥಾನದಿಂದ ಎತ್ತಿಹಾಕಿ, ಆ ಸ್ಮಳದಲ್ಲಿ ತಾನಸೇನನನ್ನು ನೇಮಿಸುವುದು ಯುಕ್ತವೆಂದು ಆಗಾಗ ಅಕ್ಷರನಿಗೆ ಸೂಚಿಸುತ್ತಿದ್ದರು. ಈ ಸೂಚನೆಯನ್ನು ಕೇಳಿದ ಅಕ್ಷರನು ಅಸಮಾಧಾನಗೊಂಡು “ನೀವು ಏನಾದರೂ ಹೇಳಿ. ಬೀರಬಲ್ಲನಂತಹ ಮೇಧಾವಿ ಸಿಕ್ಕುವುದು ಅಸಂಭವ’ ಎಂದು ಉತ್ತರ ಹೇಳುತ್ತಿದ್ದನು.

ಕೊಂಚದಿನಗಳಾದ ಮೇಲೆ ಎಲ್ಲ ಜನರು ಒಂದು ಸಭೆಯನ್ನು ಏರ್ಪಡಿಸಿದರು. ಆ ಸಭೆಗೆ ಚಕ್ರವರ್ತಿಯನ್ನೂ ಆಹ್ವಾನಿಸಿದ್ದರು. ಅಂದು ವಿಪರೀತ ಸೆಕೆ ಮತ್ತು ತಾಪವಿತ್ತು, ಹಣತೆಗಳಲ್ಲಿ ಎಣ್ಣೆ ಮತ್ತು ಬತ್ತಿಗಳು ಇದ್ದರೂ ಸಹ ಅವುಗಳನ್ನು ಹಚ್ಚಿಸಿರಲಿಲ್ಲ. ಕೋಣೆಯಲೆಲ್ಲಾ ಕತ್ತಲೆ ಆವರಿಸಿತ್ತು. ಆಗ ತಾನಸೇನನು ದೀಪಕರಾಗವನ್ನು ಹಾಡಿದ ದೀಪಗಳೆಲ್ಲವೂ ಅವಷ್ಟಕ್ಕೆ ಅವೇ ಹೊತ್ತಿಕೊಂಡವು. ಮೇಘ ಮಲ್ಲಾರೆ ರಾಗ ಹಾಡಿದ. ಕೂಡಲೇ ಸೆಖೆ ಕಡಿಮೆಯಾಗಿ, ಮಳೆ ಸುರಿಯಿತು. ಚಕ್ರವರ್ತಿಯು ವಿಸ್ಮಯಗೊಂಡುದನ್ನು ನೋಡಿ ಒಬ್ಬ ಮಂತ್ರಿಯು “ಪ್ರಭೂ, ಈಗಲಾದರೂ ತಿಳಿಯಿತೆ? ಬೀರಬಲ್ಲನಿಗೆ ಇಂತಹ ಪ್ರಜ್ಞೆಯಿದೆಯೇ? ಅದರಿಂದಲೇ ತಾನಸೇನನು ಮಂತ್ರಿ ಪದವಿಗೆ ಅರ್ಹನೆಂದು ಲೋಕವೇ ಸಾರಿ ಹೇಳುತ್ತಿದೆ” ಎಂದು ಮನವಿಮಾಡಿಕೊಂಡನು. ಆಗ ಆಕ್ಬರನು “ತಾನಸೇನನು ಮಹಾ ಪಂಡಿತನಾಗಿರಬಹುದು. ಆದರೆ ಬೀರಬಲ್ಲನನ್ನು ಸರಿಗಟ್ಟಲಾರನು. ಬೇಕಾದರೆ ಇದನ್ನು ಸಾದೃಶ್ಯ ಪಡಿಸುವೆನು” ಎಂದು ಖಚಿತವಾಗಿ ನುಡಿದ.

ಕೆಲವು ದಿನಗಳಾದಮೇಲೆ ಆಕ್ಷರನು ಆವಾ ದೇಶದ ರಾಜನಿಗೆ ಕಾಗದವೊಂದನ್ನು ಬರೆದನು. ಆ ಕಾಗದಕ್ಕೆ ರಾಜಮುದ್ರೆಯನ್ನು ಹಾಕಿ, ಬೀರಬಲ್ಲ, ತಾನಸೇನರನ್ನು ಕರೆದು “ನೀವಿಬ್ಬರೂ ಈ ಕಾಗದವನ್ನು ತೆಗೆದುಕೊಂಡು ಹೋಗಿ ಅವಾ ದೇಶದ ರಾಜನಿಗೆ ಕೊಡಬೇಕು. ಇದು ಅತ್ಯಂತ ಗೋಪ್ಯವಾದ ಕಾರ್ಯ” ಎಂದು ಒಂದು ಲಕೋಟೆಯನ್ನು ಕೊಟ್ಟನು.

ಅವರಿಬ್ಬರೂ ಆವಾದೇಶಕ್ಕೆ ಹೊರಟಿರು. ತಾನಸೇನನು ಮನಸ್ಸಿನಲ್ಲಿ “ಇದು ಯಾವುದೋ ಅತ್ಯಂತ ಮುಖ್ಯವಾದ ಕಾರ್ಯವಾಗಿರಬೇಕು. ಅಂತೂ ನನ್ನ ಸಂಗೀತ ಪಾಂಡಿತ್ಯವನ್ನು ಆ ರಾಜನಿಗೆ ತೋರಿಸಿ, ಆತನಿಂದ ಬಹುಮಾನ ಪಡೆಯುವೆನು’ ಎಂದು ಸಂತೋಷ ಚಿತ್ತನಾದನು.

ಆದರೆ ಬೀರಬಲ್ಲನು “ಇವರಲ್ಲೇನೋ ರಹಸ್ಯ ವಿರಲೇಬೇಕು” ಎಂದು ಯೋಚನಾಮಗ್ನನಾದನು. ಅವರಿಬ್ಬರೂ ಆನೇಕ ಅರಣ್ಯಗಳನ್ನು ದಾಟಿ ಆವಾ ರಾಜನನ್ನು ಸಂದರ್ಶಿಸಿದರು.

ಕಾಗದ ಓದಿಕೊಂಡ ರಾಜ, ಅದರಲ್ಲಿ ಹೀಗಿತ್ತು: ‘ನನ್ನ ಸೇವಕರಿಬ್ಬರು ನಿಮ್ಮ ದರ್ಶನ ಪಡೆಯಲು ಈ ಕಾಗದ ತೆಗೆದುಕೊಂಡು ಬರುತ್ತಾರೆ. ಒಂದು ಮಹಾಪರಾಧ ಮಾಡಿದರಾದುದ ರಿಂದ ಅವರನ್ನು ದಂಡಿಸಬೇಕಾಗಿದೆ. ಗುಪ್ತವಾಗಿ ನೆರವೇರಬೇಕಾದ ಕಾರ್ಯವಾದುದರಿಂದ ಇಲ್ಲಿ ಅದನ್ನು ಸಾಧಿಸಲು ಅವಕಾಶವಿಲ್ಲದೆ ನಿಮ್ಮ ಬಳಿಗೆ ಕಳುಹಿಸಿ ಕೊಟ್ಟಿರುವೆನು. ನೀವು ಅವರಿಗೆ ಮರಣದಂಡನೆ ವಿಧಿಸಬೇಕು.’

ರಾಜನು ಓದಿ ಮುಗಿಸಿ, ಆ ಕಾಗದವನ್ನು ಮಂತ್ರಿಯ ಕೈಗೆ ಕೊಟ್ಟನು. ಆತನಿಗೆ ಇದರಲ್ಲಿ ಏನೋ ರಹಸ್ಯವಿರಬೇಕೆಂದು ತೋರಿತು.

“ಮಹಾಪ್ರಭೂ, ಇವರನ್ನು ಒಂದು ವಾರ ಸೆರೆಯಲ್ಲಿಡಿಸಿ, ಆ ತರುವಾಯ ಯುಕ್ತವಾದ ಶಿಕ್ಷೆ ವಿಧಿಸೋಣ” ಎಂದು ಸಲಹೆ ಕೊಟ್ಟ. ಆ ಪ್ರಕಾರ ಅವರ ಕೈಗಳಿಗೆ ಸಂಕೋಲೆಗಳನ್ನು ತೊಡಿಸಿ ಕಾರಾಗೃಹಕ್ಕೆ ಕರೆದೊಯ್ದರು.

ತಾನಸೇನನಿಗೆ ಹುಚ್ಚು ಹಿಡಿದಂತಾಯಿತು.ಬೀರಬಲ್ಲನ ಕಡೆ ದೈನ್ಯದಿಂದ ಈಗೇನು ಉಪಾಯ?” ಎಂಬಂತೆ ನೋಡಿದ. ಆಗ ಬೀರ ಬಲ್ಲನು ಆತನ ಕಿವಿಯಲ್ಲಿ ಏನೋ ಉಸಿರಿದನು. ಮನಸ್ಸಿನಲ್ಲಿ ಬೇಗುದಿಗೊಂಡಿದ್ದರೂ ಬೀರಬಲ್ಲನ ಮಾತನ್ನು ಕೇಳಿ ತಾನಸೇನನು ಹೊರಗೆ ಧೈರ್ಯವನ್ನು ತೋರಿಸುತ್ತಿದ್ದನು. ಹೀಗೆಯೇ ಒಂದು ವಾರದ ಅವಧಿ ಮುಗಿಯಿತು. ಬಳಿಕ ತಳವಾರರು ಅವರಿಬ್ಬರನ್ನೂ ಬಲಿವೇದಿಕೆ ಬಳಿಗೆ ಕರೆದುಕೊಂಡು ಹೋದರು. ಅಲ್ಲಿ ಬೀರಬಲ್ಲ ಮತ್ತು ತಾನಸೇನರು “ನನ್ನನ್ನು ಮೊದಲು ಸಾಯಿಸಿ” “ನನ್ನನ್ನು ಮೊದಲು ಸಾಯಿಸಿ” ಎಂದು ಜಗಳವಾಡಲು ಪ್ರಾರಂಭಿಸಿದರು. ತಳವಾರರು ಇದನ್ನು ಕಂಡು ಬೆರಗಾಗಿ ರಾಜನ ಬಳಿಗೆ ಹೋಗಿ ” ಪ್ರಭೂ, ಇವರಿಬ್ಬರೂ ಹುಚ್ಚರಿದ್ದಾರೆ” ಎಂದು ಮನವಿ ಮಾಡಿಕೊಂಡರು.

ಆಗ ರಾಜನು ಬೀರಬಲ್ಲ ತಾನಸೇನರನ್ನು ಆಸ್ಥಾನಕ್ಕೆ ಬರಮಾಡಿಕೊಂಡು “ನೀವು ಜಗಳವಾಡಲು ಕಾರಣವೇನು?” ಎಂದು ಕೇಳಿದನು.

“ಮಹಾರಾಜ, ಹೇಳಿದರೆ ನಮಗೆ ತುಂಬಾ ಅನ್ಯಾಯವಾಗುವುದು. ಆದಕಾರಣ ನಾವು ಹೇಳ ಲಿಷ್ಟಪಡುವುದಿಲ್ಲ” ಎಂದ ಬೀರಬಲ್.

ನಿಜ ಹೇಳದಿದ್ದರೆ ಯಾವಜ್ಜೀವ ಹಾಕಿಸುವೆನು” ಎಂದ ರಾಜ. ಬೇರೇನೂ ಗತ್ಯಂತರವಿಲ್ಲವೆಂಬಂತೆ ಬೀರಬಲ್ಲನು ಮೆಲುದನಿಯಲ್ಲಿ ಹೀಗೆಂದು ಹೇಳಿದೆ: “ರಾಜನೇ, ಬಹಳ ದಿನಗಳಿಂದ ಆವಾ ರಾಜ್ಯವನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳ ಬೇಕೆಂದು ನಮ್ಮ ಪ್ರಭುಗಳು ಆಶಿಸುತ್ತಿರುವರು. ಆದರೆ ತಾವು ತುಂಬಾ ಬಲಶಾಲಿಗಳೆಂದು ಹೆದರುತ್ತಿರುವರು. ಒಂದು ದಿನ ಭಾರಿ ಜ್ಯೋತಿಷಿಯೊಬ್ಬನು ಆಸ್ಥಾನಕ್ಕೆ ಬಂದು ‘ಮಹಾಪ್ರಭೂ, ಚಿಂತಿಸುವಿರೇಕೆ? ನಿಮ್ಮ ಪ್ರಜೆಗಳಲ್ಲಿ ಯಾರಾದರಿಬ್ಬರನ್ನು ಆವಾ ರಾಜನ ಹತ್ತಿರಕ್ಕೆ ಯಾವ ನೆಪದಿಂದ ಅವರನ್ನು ಆ ರಾಜನೇನಾದರೂ ಕೊಂದನೋ, ಮೊದಲು ಸತ್ತಾತ ಆ ದೇಶದ ರಾಜನಾಗುವನು, ತರುವಾಯ ಮರಣಿಸಿದಾತನೇ ಮಂತ್ರಿಯಾಗುವನು. ಆಗ ಅವರು ನಿಮಗೆ ಸಾಮಂತರಾಗಿರುವರು. ಈ ರೀತಿ ನಿನಗೆ ಆ ರಾಜ್ಯವು ಸಿಗಬೇಕು. ಯುದ್ಧ ಮಾಡಿ ಗೆಲ್ಲುವುದು ನಿನ್ನಿಂದ ಆಗದ ಮಾತು’ ಎಂದು ಹೇಳಿದ. ಈ ಕಾರಣದಿಂದಲೇ ನಮ್ಮಿಬ್ಬ ರನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ. ಈ ವಿಷಯ ಬಯಲು ಮಾಡಿದುದಕ್ಕೆ ನಮ್ಮ ಪ್ರಭುಗಳು ನಮ್ಮನ್ನು ಗಲ್ಲಿಗೇರಿಸುವುದು ಖಂಡಿತ. ಆದುದರಿಂದ ನಾವು ಮತ್ತೆ ಹಿಂತಿರುಗದಂತೆ ನಮ್ಮನ್ನು ನೀವೇ ಗಲ್ಲಿಗೇರಿಸಿಬಿಡಿ.”

ಆಗ ಮಂತ್ರಿ ‘ರಾಜನ ಕಿವಿಯಲ್ಲಿ “ಮಹಾ ಪ್ರಭೂ, ಇವರಿಬ್ಬರ ಜಗಳದಿಂದ ನಮಗೆ ರಹಸ್ಯವೆಲ್ಲಾ ತಿಳಿಯಿತು. ಇವರನ್ನು ಸಾಯಿಸಿದರೆ ನಮ್ಮ ರಾಜ್ಯ ನಮ್ಮ ಕೈಬಿಡುವುದು ಖಂಡಿತ. ಆದುದರಿಂದ ಇವರನ್ನು ಇವರ ದೇಶಕ್ಕೇ ಸಾಗ ಹಾಕುವುದು ಉತ್ತಮ” ಎಂದ. ಆ ಮಾತಿನಂತೆ ರಾಜನು ಬೀರಬಲ್ಲನೊಂದಿಗೆ “ಆಯ್ತಾ, ನಿಮ್ಮನ್ನು ಕೊಲ್ಲುವಂತೆ ನಿಮ್ಮ ರಾಜರು ನಮಗೆ ಕಾಗದ ಬರೆದಿರುವರು. ನಾವೇನೂ ಅವರ ಸೇವಕರಲ್ಲ. ನಿರ್ದೋಷಿಗಳನ್ನು ಕೊಂದ ಪಾಪ ನಮಗೆ ಅಂಟಿಕೊಳ್ಳುವುದು ಬೇಡ. ನೀನೇ ಈ ಮರಣದಂಡನೆ ವಿಧಿಸಿ, ಎಂದು ನಾವು ಹೇಳಿದಂತೆ ನಿಮ್ಮ ಪ್ರಭುಗಳಿಗೆ ಹೇಳಿ. ಸರಿ, ಇನ್ನು ನೀವು ಇಲ್ಲಿಂದ ಹೊರಡಬಹುದು” ಎಂದ.

ಆಗ ಬೀರಬಲ್ಲನು “ಮಹಾರಾಜ, ಇದು ತಮಗೆ ನ್ಯಾಯವಲ್ಲ. ನಾನು ಮೊದಲೇ ಮನವಿ ಮಾಡಿಕೊಳ್ಳಲಿಲ್ಲವೇ, ನಮ್ಮ ರಹಸ್ಯ ಬಯಲು ಮಾಡಿದರೆ ನಮಗೆ ಹಾನಿಯಾಗುವುದೆಂದು? ನೆನೆಸಿದ್ದಂತೆಯೇ ಆಯಿತು” ಎಂದ. ” ಅದೆಲ್ಲಾ ನಮಗೆ ತಿಳಿಯದು. ತಿಳಿದೂ ತಿಳಿದು ಯಾರು ವಿಷವನ್ನು ತಿನ್ನುತ್ತಾರೆ. ಹೋಗಿ ಗಲಾಟೆ ಮಾಡಿದರೆ ಕತ್ತು ಹಿಡಿದು ನೂಕಿಸಿಯೇನು”ಎಂದು ಗದರಿಸಿದ ರಾಜ ತೋರಿಕೆಯ ಭಯವನ್ನು ನಟಿಸುತ್ತಾ “ಪ್ರಭು, ಅಪ್ಪಣೆ, ಅಪ್ಪಣೆ” ಎಂದು ಬೀರಬಲ್ಲ ತಾನಸೇನನನ್ನು ಸಂಗಡ ಕರೆದುಕೊಂಡು ಆಸ್ಥಾನ ದಿಂದ ಹೊರಬಿದ್ದನು. ಇಬ್ಬರೂ ಮತ್ತೆ ಡೆಲ್ಲಿ ನಗರವನ್ನು ಸೇರಿಕೊಂಡರು. ತಾನಸೇನನು ಅಕ್ಷರನನ್ನು ಕಂಡಕೂಡಲೇ “ಪ್ರಭು, ಬೀರಬಲ್ಲನು ಇಲ್ಲದಿದ್ದ ಪಕ್ಷಕ್ಕೆ ನಾವು ಮತ್ತೆ ತಮ್ಮ ದರ್ಶನ ಪಡೆಯುವ ಭಾಗ್ಯವೇ ಇರುತ್ತಿರಲಿಲ್ಲ. ಈತನ ಬುದ್ಧಿ ಕುಶಲತೆಯೇ ನಮ್ಮಿಬ್ಬರನ್ನೂ ಕಾಪಾಡಿತು” ಎಂದು ನಡೆದ ವಿಷಯವನ್ನೆಲ್ಲಾ ತಿಳಿಸಿದನು.

ಆಗ ಚಕ್ರವರ್ತಿ ತಾನಸೇನನ ಪಕ್ಷ ವಹಿಸಿ ಮಾತನಾಡಿದ ಜನರನ್ನೆಲ್ಲಾ ಬರಮಾಡಿ ಕೊಂಡು ಬೀರಬಲ್ಲನ ಚಾತುರ್ಯವನ್ನು ವಿವರಿಸಿದನು. ಅಂದಿನಿಂದ ಅವರಿಗೆ ಬೀರಬಲ್ಲನ ಮೇಲಿನ ಆಸೂಯೆ ಮಾಯನಾಗಿ, ಗೌರವ ಭಾವ ಉಂಟಾಯಿತು.


 

Leave a Comment