ನೀಲಾಂಚಲ ಬೆಟ್ಟದಲ್ಲಿ ನೆಲೆಗೊಂಡ ಕಾಮಾಕ್ಯ ದೇವಿ

ನೀಲಾಂಚಲ ಬೆಟ್ಟದಲ್ಲಿ ನೆಲೆಗೊಂಡ ಕಾಮಾಕ್ಯ ದೇವಿ

ನೀಲಾಂಚಲ ಬೆಟ್ಟದಲ್ಲಿ ನೆಲೆಗೊಂಡ ಕಾಮಾಕ್ಯ ದೇವಿ: ಪ್ರವಾಸದ ಅನುಭವ

ಪುರಾಣಗಳ ಪ್ರಕಾರ ಪಾರ್ವತಿ ತಂದೆ ರಾಜ ದಕ್ಷ ಲೋಕಕಲ್ಯಾಣಕ್ಕಾಗಿ ಮಹಾಯಜ್ಞವನ್ನು ಆಯೋಜಿಸಿದ್ದು ದೇವಾನುದೇವತೆಗಳನ್ನು ಆಮಂತ್ರಿಸಿರುತ್ತಾರೆ. ಆದರೆ ಶಿವನನ್ನು ಆಹ್ವಾನಿಸಿರುವುದಿಲ್ಲ, ವಿಷಯ ತಿಳಿದ ಪಾರ್ವತಿಯು ಯಜ್ಞ ನಡೆಯುತ್ತಿದ್ದಂತಹ ಸ್ಥಳಕ್ಕೆ ಹೋಗಿ ತಂದೆಯನ್ನು ನನ್ನ ಪತಿ ಪರಮೇಶ್ವರನನ್ನು ಯಾಕೆ ಯಜ್ಞಕ್ಕೆ ಕರೆದಿಲ್ಲ ಎಂದು ಕೇಳಿದಾಗ, ನಿನ್ನ ಗಂಡನ ಬಳಿ ಏನಿದೆ ತ್ರಿಶೂಲ, ನಂದಿ, ಸ್ಮಶಾನದ ಬಸವೆಂದು ಹಿಯಾಳಿಸಿ ಮಾತನಾಡುತ್ತಾನೆ ರಾಜದಕ್ಷ. ತವರು ಮನೆಯಲ್ಲಿ ತನಗಾದ ಅವಮಾನ ಹಾಗೂ ದೇವಾನುದೇವತೆಗಳ ಮುಂದೆ ಪತಿ ಪರಮೇಶ್ವರನಿಗೆ ಆದ ಅವಮಾನವನ್ನು ಸಹಿಸಲಾಗದೆ ಯಜ್ಞಕುಂಡಕ್ಕೆ ಹಾರಿ ಅಗ್ನಿಗೆ ತನ್ನ ಜೀವವನ್ನು ಸಮರ್ಪಿಸುತ್ತಾಳೆ. ಪರಶಿವನಿಗೆ ಇದು ತಿಳಿದು ಅತ್ಯಂತ ಕೆಂಡಮಂಡಲವಾಗಿ ಯಜ್ಞ ನಡೆಯುವ ಸ್ಥಳಕ್ಕೆ ಬಂದು ಅಂಗೈಯಲ್ಲಿ ಪಾರ್ವತಿಯ ದೇಹವನ್ನು ಎತ್ತಿಕೊಂಡು ರುದ್ರ ತಾಂಡವ ನೃತ್ಯ ಪ್ರಾರಂಭಿಸುತ್ತಾನೆ. ಆಗ ಎಲ್ಲಾ ಲೋಕಗಳಲ್ಲೂ ಪ್ರಳಯದ ವಾತಾವರಣ ಸೃಷ್ಟಿಯಾಗುತ್ತೆ. ಮಹಾವಿಷ್ಣು ಒಂದು ಉಪಾಯವನ್ನು ಮಾಡುತ್ತಾನೆ, ಸುದರ್ಶನ ಚಕ್ರದಿಂದ ಪರಮೇಶ್ವರನ ಅಂಗೈಯಲ್ಲಿರುವ ಪಾರ್ವತಿಯ ಮೃತ ದೇಹವನ್ನು 51 ತುಂಡುಗಳಾಗಿ ಮಾಡುತ್ತಾನೆ. ಪಾರ್ವತಿಯ ಮೃತ ದೇಹದ ತುಂಡುಗಳು ಅಖಂಡ ಭಾರತದ 51 ಭಾಗಗಳಲ್ಲಿ ಬೀಳುತ್ತವೆ.

 

ಭಾರತದ ಪೂರ್ವೋತ್ತರದಲ್ಲಿರುವ ಅಸ್ಸಾಂ ರಾಜಧಾನಿ ಗುಜ್ಜಾತಿಗೆ ಹೊಂದಿಕೊಂಡಂತಿರುವ ನೀಲಾಂಚಲ ಬೆಟ್ಟದದಲ್ಲಿ ಪಾರ್ವತಿಯ ಯೋನಿ ಭಾಗವು ಬಿದ್ದಿದ್ದು ಕಾಮಾಕ್ಯಾವಾಗಿದೆ. ಜಗದ್ಮಾತೆಯ 51 ಶಕ್ತಿ ಪೀಠಗಳಲ್ಲಿ ಅತ್ಯಂತ ಶಕ್ತಿಶಾಲಿ ಕಾಮಾಕ್ಯ ಪೀಠ, ಕಾಮಾಕ್ಯಾ ಕಾಮೇಶ್ವರಿಯನ್ನು ಇಷ್ಟಾರ್ಥ ಸಿದ್ದಿ ದೇವಿ ಎಂದು ಕರೆಯುತ್ತಾರೆ. ಮಾಟ, ಮಂತ್ರ, ತಪ, ಜಪ, ವಶೀಕರಣ, ಮಾರಣಹೋಮ ನಿಗೂಢ ಹಠಯೋಗಿಗಳ ಕೇಂದ್ರ ಸ್ಥಾನ. ಕರ್ನಾಟಕದಲ್ಲಿ ಕೊಳ್ಳೇಗಾಲ ಎಷ್ಟು ಪ್ರಸಿದ್ಧಿಯೋ ಮಾಟ ಮಂತ್ರ ತಂತ್ರಗಳಲ್ಲಿ ಕಾಮಾಕ್ಯ ಮಂದಿರದ ಸಾಧಕರು ಸಾವಿರಪಟ್ಟು ಅಧಿಕ ಶಕ್ತಿಶಾಲಿಗಳು.

ದೇವಸ್ಥಾನದಲ್ಲಿ ಯಾವುದೇ ಮೂರ್ತಿ ಇಲ್ಲ, ಯೋನಿ ಆಕಾರದ ದೊಡ್ಡ ಕಲ್ಲಿದ್ದು ಸದಾ ನೀರು ಜಿನಿಗುತ್ತಿರುತ್ತದೆ. ಈ ನೀರನ್ನು ಭಕ್ತರು ಗಂಗಾಜಲಕ್ಕಿಂತ ಶ್ರೇಷ್ಠವಾದ ನೀರು ಎಂದು ಭಾವಿಸುತ್ತಾರೆ.

ದೇವಸ್ಥಾನದ ಗರ್ಭಗುಡಿ ತೆರೆಯುವುದಕ್ಕಿಂತ ಮೊದಲು ಬಲಿ ಕೊಡಲಾಗುತ್ತೆ ಮಧ್ಯಾಹ್ನ ಒಂದು ಬಲಿ ಹಾಗೂ ಸಂಜೆ ಗರ್ಭಗುಡಿಯ ಬಾಗಿಲು ಮುಚ್ಚುವುದಕ್ಕಿಂತ ಮೊದಲು ಒಂದು ಬಲಿ ಕೊಡಲಾಗುತ್ತದೆ ಎನ್ನಲಾಗಿದೆ. ದೇವಸ್ಥಾನದ ಆವರಣದಲ್ಲಿ 10 ದೇವಿಯ ಮಂದಿರಗಳಿವೆ ಹಾಗೂ ಐದು ಶಿವನ ಮಂದಿರಗಳಿವೆ. ಜಗದ್ಮಾತೆಯ 10 ದೇವಾಲಯಗಳ ಹೆಸರು ಬೈರವಿ ಭುವನೇಶ್ವರಿ, ಕಾಳಿ, ಚಿನ್ನಮಸ್ತ, ತ್ರಿಪುರ ಸುಂದರಿ, ಬಗಲಮುಖಿ, ಮಾತಂಗಿ, ತಾರಾ, ಕಾಮತ್ ಮಿಕ, ದುಮವತಿ.

ನಿಗೂಢ ಭಯಾನಕ ಮಾಯಾಪುರ:

ಮಾತೆ ಕಾಮಾಕ್ಯಾ ಬೆಟ್ಟದಿಂದ 40 ಕಿ.ಮೀ ದೂರದಲ್ಲಿ ಒಂದು ಊರಿದೆ. ಆ ಊರಿನ ಹೆಸರು ಮಯಂಗ್ ( ಮಾಯಾಪುರ ) ಆ ಊರಿಗೆ ಸಾಮಾನ್ಯ ಜನರು ಹೋಗುವುದು ನಿಷೇಧ, ತುಂಬಾ ಭಯಾನಕವಾದ ಊರು ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಇಂದ್ರಜಾಲ, ಮಹೇಂದ್ರಜಾಲ, ಜಾದು ಮಂತ್ರ ತಂತ್ರದಲ್ಲಿ ನಿಪುಣರು. ಒಮ್ಮೆ ಈ ಊರಿನ ಮೇಲೆ ಮುಸ್ಲಿಂ ರಾಜರು ಆಕ್ರಮಣ ಮಾಡಲು ಮುಂದಾದರು. ಆ ಸಮಯದಲ್ಲಿ ಈ ಊರಿನ ಜನರು ತಾಂತ್ರಿಕರ ಮೊರೆ ಹೋದರು. ತಾಂತ್ರಿಕ ವಿದ್ಯೆಯನ್ನು ಬೆಳೆಸಿ ಶತ್ರುವಿನ ಎಲ್ಲಾ ಸೈನಿಕರನ್ನು ಕ್ಷಣಾರ್ಧದಲ್ಲಿ ಯಮಲೋಕಕ್ಕೆ ಕಳುಹಿಸಿದರು, ಆ ಊರಿನಲ್ಲಿ ಇಂದಿಗೂ ಕಾಮಾಕ್ಯಾ ದೇವಿಗೆ ನರಬಲಿ ನೀಡುತ್ತಾರೆಂದು ನಂಬಿಕೆ. ನಿಗೂಢ ಭಯಾನಕ ಆ ಊರಿನ ಹೆಸರನ್ನು ಕೇಳಿದರೆ ಸುತ್ತಮುತ್ತಲಿನ ಜನರು ಗಡಗಡನೆ ನಡುಗುತ್ತಾರೆ.

 

ಅಂಬುಬಾಚಿ ಮೇಳ

ವರ್ಷಕ್ಕೆ ಮೂರು ದಿನ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಯಾಕೆಂದರೆ ತಾಯಿಗೆ ಋತುಚಕ್ರ ( ಮಾಸಿಕ ಧರ್ಮ ) ಋತುಚಕ್ರ ವರ್ಷದ ಬೇಸಿಗೆ ಕಾಲದಲ್ಲಿ ಅಂದರೆ → ಜೂನ್ 22 ರಿಂದ 24 ವರಗೆ ಇರುತ್ತದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಪಂಡಿತರುಗಳು. ತಾಯಿಯ ಯೋನಿ ಭಾಗದ ಮೇಲೆ ಬಿಳಿಯ ಬಟ್ಟೆಯನ್ನು ಹೊದಿಸುತ್ತಾರೆ ಮೂರು ದಿನಗಳಲ್ಲಿ ಈ ಬಿಳಿಯ ಬಟ್ಟೆ ಸ್ರವಿಕೆಯಿಂದಾಗಿ ಕೆಂಪು ವಸ್ತ್ರವಾಗುತ್ತೆ, ಈ ಕೆಂಪು ಬಟ್ಟೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಕೊಡುತ್ತಾರೆ, ಈ ವಸ್ತಗಳಿಂದ ದೇವಸ್ಥಾನದ ಮಂಡಳಿಗೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತದೆ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಅಂಬುಬಾಚಿ ಮೇಳ ನಡೆಯುತ್ತದೆ. ಲಕ್ಷಾಂತರ ಜನ ಸಾಧು ಸಂತರು ಅಘೋರಿಗಳು ಮಾಟ ಮಂತ್ರ ಮಾಡುವ ಪಂಡಿತರುಗಳು ಸಾಧಕರು ಅತ್ಯಂತ ವಿಜೃಂಭಣೆಯಿಂದ ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.

ಜಗದ್ ಮಾತೆ ಕಾಮಾಕ್ಯಾ ದೇವಿಯ ಋತುಚಕ್ರ ಸಂದರ್ಭದಲ್ಲಿ ಐದು ದೇಶಗಳ ಮೂಲಕ ಹಾದು ಹೋಗುವ ಬ್ರಹ್ಮಪುತ್ರ ನದಿಯ ನೀರು ಕೂಡ ಕೆಂಪಾಗುತ್ತೆ, ಕಾಮಾಕ್ಯ ಬೆಟ್ಟದ ಸುತ್ತಮುತ್ತ ಹರಿಯುವ ಉಪನದಿಗಳ ನೀರು ಸಹ ಕೆಂಪಾಗಿರುತ್ತೆ ಹಾಗೂ ದೇವಸ್ಥಾನದ ಪೂರ್ತಿ ಪರಿಸರವೆಲ್ಲ ಕೆಂಪಾಗುವುದು ವಿಶೇಷ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!