ನ.7, 10ರಂದು ಬೆಳಗಾವಿಯಲ್ಲಿ ಸೇನಾ ರ್‍ಯಾಲಿ,ಟೆರಿಟೋರಿಯಲ್ ಆರ್ಮಿಯಲ್ಲಿ ಸೈನಿಕರ ಹುದ್ದೆಗಳ ಭರ್ತಿಗೆ ಕ್ರಮ
ಟೆರಿಟೋರಿಯಲ್ ಆರ್ಮಿ ನೇಮಕಾತಿಗೆ ಆ ಸಿದ್ಧತೆ ನಡೆಸಿದೆ. ದೇಶದಾದ್ಯಂತ 2024 ರ ನವೆಂಬರ್‌ನಲ್ಲಿ ನೇಮಕ ಪ್ರಕ್ರಿಯೆ ಕೈಗೊಂಡಿದ್ದು, ನವೆಂಬರ್.7 ಮತ್ತು ನವೆಂಬರ್.10ರಂದು ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕ ಪ್ರಕ್ರಿಯೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.
ಟೆರಿಟೋರಿಯಲ್ ಆರ್ಮಿ ಸೇನಾ ಮೀಸಲು ಪಡೆಯಾಗಿದ್ದು, ಇದರಲ್ಲಿನ ಸಿಬ್ಬಂದಿ ಭಾರತೀಯ ಸೇನೆಗೆ ಬೆಂಬಲವಾಗಿ ಅರೆಕಾಲಿಕ ಸ್ವಯಂ ಸೇವಕರಂತೆ ಕಾರ್ಯನಿರ್ವಹಿಸುತ್ತಾರೆ. ಆಸಕ್ತರು ನಿಗದಿತ ದಿನಾಂಕದಂದು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಜನರಲ್ ಡ್ಯೂಟಿ, ಹೇರ್ ಡ್ರೆಸ್ಸರ್, ಕುಕ್ ಮೆಸ್, ಇಆರ್. ಆರ್ಟಿಸನ್,ಮೆಟಲರ್ಜಿ, ಮಸಾಲ್ಚಿ, ವಾಶರ್‌ಮನ್,ಶೆಫ್,ಕ್ಲರ್ಕ್, ಶೆಫ್ ಸ್ಪೇಷಲ್,ಸ್ಟಿವಾರ್ಡ್,ಆರ್ಟಿಸನ್ ವುಡ್ ವರ್ಕ್ ಮತ್ತು ಹೌಸ್ ಕೀಪರ್, ವಿಭಾಗದಲ್ಲಿ 1900ಕ್ಕೂ ಹೆಚ್ಚು ಸೈನಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿವಿಧ ಸೇನಾ ಬೆಟಾಲಿಯನ್‌ಗಳು ಸಂದರ್ಶನ ನಡೆಸಿ ಅರ್ಹರನ್ನು ನೇಮಕ ಮಾಡಿಕೊಳ್ಳಲಿವೆ.
ಅರ್ಹತೆಗಳೇನು?
ಜನರಲ್ ಡ್ಯೂಟಿ ವಿಭಾಗದ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ ಶೇಕಡಾ 45 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು, ಪ್ರತಿ ವಿಷಯದಲ್ಲಿಯೂ ಶೇ.33ರಷ್ಟು ಅಂಕ ಪಡೆದಿರುವುದು ಕಡ್ಡಾಯ. ಕ್ಲರ್ಕ್ ವಿಭಾಗದ ಸೈನಿಕ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 60 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದವರು ಪ್ರಯತ್ನಿಸಬಹುದು. ಹೌಸ್ ಕೀಪರ್ ಮತ್ತು ಮೆಸ್‌ಕೀಪರ್ ಸೋಲ್ಜರ್ ಟ್ರೇಡ್ಸ್ ಮನ್ ಹುದ್ದೆಗಳಿಗೆ ಎಂಟನೇ ತರಗತಿ ಹಾಗೂ ಉಳಿದ ಎಲ್ಲಾ ಟ್ರೇಡ್ಸ್‌ಮನ್ ಸೋಲ್ಜರ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಅರ್ಹತೆ ಉಳ್ಳವರು ಪ್ರಯತ್ನಿಸಬಹುದು.
ದೇಹ ದಾರ್ಡ್ಯತೆ
18 ರಿಂದ 42 ವರ್ಷದೊಳಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳ ಎತ್ತರ 160 ಸೆಂ. ಮೀ. ಹಾಗೂ ಎದೆಯ ಸುತ್ತಳತೆ 82 ಸೆಂ.ಮೀ. ಹೊಂದಿರಬೇಕು.
ಸೋಲ್ಟರ್ (ಜನರಲ್ ಡ್ಯೂಟಿ/ ಟ್ರೇಡ್ಸ್‌ನ್ / ಕ್ಲರ್ಕ್) ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಪ್ರಯತ್ನಿಸುವುದಾದರೆ ನ.7ರಂದು ಮತ್ತು ನ.10ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
ಸಂದರ್ಶನ ನಡೆಯುವ ಸ್ಥಳ: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಮೈದಾನ, ಬೆಳಗಾವಿ
ನ.7: ಭಾಗವಹಿಸಬಹುದಾದ ಜಿಲ್ಲೆಗಳು:
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ
ನ.10: ಭಾಗವಹಿಸಬಹುದಾದ ಜಿಲ್ಲೆಗಳು:
ಬಾಗಲಕೋಟೆ, ಧಾರವಾಡ, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ; ಬಳ್ಳಾರಿ, ಬೀದರ್, ವಿಜಯಪುರ, ವಿಜಯನಗರ, ದ.ಕನ್ನಡ, ಉ. ಕನ್ನಡ, ಉಡುಪಿ ಹಾಗೂ ಯಾದಗಿರಿ
ನೇಮಕ ಪ್ರಕ್ರಿಯೆ ಹೇಗಿರುತ್ತದೆ?
ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅದರಲ್ಲಿ ಅರ್ಹತೆ ಪಡೆದವರು ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ.
ಜನರಲ್ ನಾಲೆಜ್‌ಗೆ ಸಂಬಂಧಿಸಿದಂತೆ 20 ಪ್ರಶ್ನೆಗಳು (ತಲಾ ಎರಡು ಅಂಕಗಳು), ಜನರಲ್ ಸೈನ್ಸ್ ಗೆ ಸಂಬಂಧಿಸಿದಂತೆ 15 ಪ್ರಶ್ನೆಗಳು (ತಲಾ 2 ಅಂಕಗಳು) ಹಾಗೂ ಎಲಿಮೆಂಟರಿ ಮ್ಯಾಥ್‌ಗೆ ಸಂಬಂಧಿಸಿದಂತೆ ತಲಾ 15 ಪ್ರಶ್ನೆಗಳು (ತಲಾ 2 ಅಂಕಗಳು) ನೀಡಲಾಗುತ್ತದೆ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳಿರುವುದಿಲ್ಲ. ಒಟ್ಟು 100 ಅಂಕಗಳ 50 ಪ್ರಶ್ನೆಗಳನ್ನು ನೀಡಲಾಗುತ್ತದೆ. ಸಂಪೂರ್ಣ ವಿವರಗಳಿಗೆ: https://territorialarmy.in
CLICK HERE TO MORE INFORMATION
Sir tell me about this