ಭಾರತೀಯ ಭಾಷಾ ಉತ್ಸವ “ಕಾರ್ಯಕ್ರಮ ಅನುಷ್ಠಾನ ಕುರಿತು-2024

ಭಾಷಾ ಉತ್ಸವ ಕಾರ್ಯಕ್ರಮ

‘ಭಾರತೀಯ ಭಾಷಾ ಉತ್ಸವ’ವನ್ನು ಸ್ವಾತಂತ್ರ್ಯ ಹೋರಾಟಗಾರ, ಪೂಜ್ಯ ಮಹಾಕವಿ ಸುಬ್ರಮಣ್ಯ ಭಾರತೀ ರವರ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ: 04.12.2024 ರಿಂದ ದಿನಾಂಕ: 11.12. 2024 ರವರೆಗೆ ಶಾಲಾ ಹಂತದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು “ಭಾಷೆಗಳ ಮೂಲಕ ಏಕತೆ “ ಎಂಬ ಥೀಮ್ ನೊಂದಿಗೆ ಶಾಲಾ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಿ, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳಸಲು ವಿವಿಧ ಭಾಷಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚಿಸಿದೆ.

ಉದ್ದೇಶಗಳು:

1.ಭಾಷೆಗಳ ಮೂಲಕ ನಮ್ಮ ಸಮಾಜವನ್ನು ಶ್ರೀಮಂತಗೊಳಿಸುವುದು.

2.ನಮ್ಮ ನಾಗರಿಕರಲ್ಲಿ, ಶಾಲೆಯ ವಿದ್ಯಾರ್ಥಿಗಳಲ್ಲಿ ಭಾರತೀಯ ಭಾಷೆಗಳು ಮತ್ತು ಸಾಹಿತ್ಯದ ಬಗ್ಗೆ ಆಳವಾದ ಮೆಚ್ಚುಗೆಯನ್ನು ಬೆಳೆಸುವುದು.

ನಮ್ಮ ದೇಶದ ಭಾಷಾ ಪರಂಪರೆಯನ್ನು ಸಂರಕ್ಷಿಸಿ, ಅದರ ಬಗ್ಗೆ, ಹೆಮ್ಮೆಯ ಭಾವನ ಮೆಚ್ಚುಗೆಯನ್ನು ಬೆಳೆಸುವುದು.

4.ಹೊಸ ಪೀಳಿಗೆಯ ಭಾಷಾಭಿಮಾನಿಗಳಿಗೆ ಸ್ಫೂರ್ತಿ ನೀಡುವುದು.

ಶಾಲಾ ಹಂತದಲ್ಲಿ ಶಿಕ್ಷಕರು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:

1) 04.12.2024,ಬುಧವಾರ- ವಿವಿಧ ಭಾಷೆಗಳ ಸ್ವರೂಪ ಮತ್ತು ಸಾಮರಸ್ಯದ ಬಗ್ಗೆ ತಿಳಿಸುವುದು

2) 05.12.2024-ಗುರುವಾರ- ತಂತ್ರ ಜ್ಞಾನ ಮತ್ತು ಭಾಷೆಗಳ ಸಂಮಿಳಿತ- ಡಿಜಿಟಲ್ ಯುಗದಲ್ಲಿ ಪದ ಸಂಪತ್ತಿನ ಶಕ್ತಿ- ಪ್ರಾಮುಖ್ಯತೆ

3) 06.12.2024.-ಶುಕ್ರವಾರ- ಭಾಷೆ ಮತ್ತು ಸಾಹಿತ್ಯ -ಅಂತರ ಸಂಬಂಧ”

4)07.12.2024-ಶನಿವಾರ-
ಭಾಷಾ ಹಬ್ಬ

5) 09.12.2024- ಸೋಮವಾರ- ನಿರರ್ಗಳ ಅಭಿವ್ಯಕ್ತಿ-ವಾಗ್ಮಿ ಕೌಶಲ್ಯ ಚಟುವಟಿಕೆಗಳು.

6) 10.12.2024-ಮಂಗಳವಾರಭಾಷೆ ಮತ್ತು ಸಮುದಾಯ

7) 11.12.2024-ಬುಧವಾರ-
ಭಾಷೆ, ಸಂಸ್ಕೃತಿ ಮತ್ತು ನಾವು: ಪ್ರಾದೇಶಿಕ ಉತ್ಸವ

ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ರವರು ತಮ್ಮ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿರವರು ಸೂಚಿಸಿರುವ ಚಟುವಟಿಕೆಗಳನ್ನು ಹಮ್ಮಿಕೊಂಡು ಎಲ್ಲಾ ಶಾಲೆಗಳಲ್ಲಿ “ಭಾರತೀಯ ಭಾಷಾ ಉತ್ಸವ “ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು. ಕಾರ್ಯಕ್ರಮ ಅನುಷ್ಠಾನಗೊಳಿಸಿದ ಬಗ್ಗೆ ಮಾಹಿತಿಯನ್ನು ನೀಡಿರುವ spread sheet ನಲ್ಲಿ ಒದಗಿಸುವುದು.ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ – CLICK HERE

1 thought on “ಭಾರತೀಯ ಭಾಷಾ ಉತ್ಸವ “ಕಾರ್ಯಕ್ರಮ ಅನುಷ್ಠಾನ ಕುರಿತು-2024”

Leave a Comment