ಮಾದರಿ ಪ್ರಶ್ನೆಪತ್ರಿಕೆ – 01 (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ)

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರವಾದ ಮಾದರಿ ಪ್ರಶ್ನೆ ಪತ್ರಿಕೆ ಒದಗಿಸಲಾಗಿದ್ದು, ಸ್ಪರ್ಧಾರ್ಥಿಗಳು ಉಪಯೋಗಿಸಿಕೊಳ್ಳಬಹದು.

 

1.ವಿದೇಶಿ ಸಂಘಟನಾ ಹೂಡಿಕೆದಾರ ಸಂಸ್ಥೆಗಳಿಗೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಭಾರತೀಯ ಭದ್ರತಾ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ವಿದೇಶಿ ಸಂಘಟನೆ ಹೂಡಿಕೆದಾರ ಸಂಸ್ಥೆಗಳಿಗೆ ಮೊಟ್ಟಮೊದಲ ಬಾರಿಗೆ 1994 ರಲ್ಲಿ ಕಲ್ಪಿಸಲಾಯಿತು.

2) ವಿದೇಶಿ ಸಂಘಟನಾ ಹೂಡಿಕೆದಾರ ಸಂಸ್ಥೆಗಳನ್ನು ನಿಯಂತ್ರಿಸಲು ಭಾರತೀಯ ಭದ್ರತಾ ವಿನಿಮಯ ಮಂಡಳಿ ಕಠಿಣ ನಿಯಮಾವಳಿಗಳನ್ನು 2004 ರಲ್ಲಿ ಜಾರಿಗೆ ತಂದಿತು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಸಿ

2.ಡಿಸೆಂಬರ್ 2022 ರಿಂದ ಜನವರಿ 2023 ರ ಅವಧಿಯಲ್ಲಿ ಕೆಳಗಿನ ಯಾವ ವಲಯದ ಹೂಡಿಕೆಯಲ್ಲಿ ಕಡಿಮೆಯಾಗಿದೆ?

ಎ. ಭಾಗವಹಿಸುವಿಕೆ ಪತ್ರಗಳ ಮೂಲಕ ಹೂಡಿಕೆ
ಬಿ. ವಿದೇಶಿ ನೇರ ಬಂಡವಾಳ ಹೂಡಿಕೆ
ಸಿ. ದೇಶಿಯ ಬಂಡವಾಳ ಹೂಡಿಕೆ
ಡಿ. ಕೈಗಾರಿಕಾ ವಲಯದ ಹೂಡಿಕೆ
ಉತ್ತರ: ಎ

3.ಪ್ರಸ್ತುತ ಪ್ರಸ್ತಾಪವಾಗಿರುವ ಕಾರ್ಯತಂತ್ರ ಸ್ವಾಯತ್ತತೆ ಸಿದ್ಧಾಂತಕ್ಕೆ ಅನುಗುಣವಾಗಿ ಸರಿ ಹೇಳಿಕೆಗಳನ್ನು ಗುರುತಿಸಿ..

1) ಭಾರತೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳಾದರೆ ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಮಾರ್ಪಾಡುಗಳಿಗೆ ಅವಕಾಶವಿರುವುದಿಲ್ಲ.

2) ಭಾರತೀಯ ಭದ್ರತೆಗೆ ಸಂಬಂಧಿಸದ ವಿಚಾರಗಳಾದರೆ ಭಾರತದ ವಿದೇಶಾಂಗ ನೀತಿಯಲ್ಲಿ ಅಲ ಪ್ರಮಾಣದ ಮಾರ್ಪಾಡುಗಳಿಗೆ ಅವಕಾಶವಿರುತ್ತದೆ.

ಕೋಡ್ ಬಳಸಿ ಸರಿ ಹೇಳಿಕೆಗಳನ್ನು ಗುರುತಿಸಿ.

ಎ. 1 ಮತ್ತು 2
ಬಿ. 1 ಮಾತ್ರ
ಸಿ. 2 ಮಾತ್ರ
ಡಿ. ಎರಡೂ ತಪ್ಪು
ಉತ್ತರ: ಎ

4.ಭಾರತ ಅಲಿಪ್ತ ನೀತಿ ಕೈಬಿಡಲು ಪ್ರಮುಖ ಕಾರಣವೇನು?

ಎ. ಭಾರತ ಮತ್ತು ಪಾಕಿಸ್ತಾನ ಯುದ್ಧ
ಬಿ. ಕೊಲ್ಲಿ ಯುದ್ಧ

ಸಿ. ಭಾರತದ ಮೇಲೆ ಚೀನಿಯರ ಆಕ್ರಮಣ

ಡಿ. ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆ’

ಉತ್ತರ: ಸಿ

5.ಕೆಳಗಿನ ಯಾವ ರಾಜ್ಯಗಳಲ್ಲಿ ಜಾತಿಯ ಆಧಾರದ ಮೇರೆಗೆ ಕಾರಾಗೃಹಗಳಲ್ಲಿ ತಾರತಮ್ಯತೆಯನ್ನು ಮುಂದುವರಿಸಲಾಗುತ್ತಿದೆ?

1) ಉತ್ತರ ಪ್ರದೇಶ .
2) ಕರ್ನಾಟಕ
3) ಪಶ್ಚಿಮ ಬಂಗಾಳ
4) ಮಧ್ಯಪ್ರದೇಶ

‘ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1, 3 ಮತ್ತು 4
ಬಿ. 1, 2, 3
ಸಿ. 3 ಮತ್ತು 4
ಡಿ. 2 ಮತ್ತು 4
ಉತ್ತರ: ಎ

6.ರಾಜಸ್ಥಾನದ ಯಾವ ನಿಯಮಾವಳಿಯ ಅನ್ವಯ ಬ್ರಾಹ್ಮಣರಿಗೆ ಅಡುಗೆ ಕಾರ್ಯವನ್ನು ಬಂದಿಖಾನೆಗಳಲ್ಲಿ ವಹಿಸಲಾಗುತ್ತಿದೆ?

ಎ. ರಾಜಸ್ಥಾನ ಬಂದಿಖಾನೆ ನಿಯಮಾವಳಿ-1984
ಬಿ. ರಾಜಸ್ಥಾನ ಬಂದಿಖಾನೆ ನಿಯಮಾವಳಿ-1980
ಸಿ. ರಾಜಸ್ಥಾನ ಬಂದಿಖಾನೆ ನಿಯಮಾವಳಿ-1951
ಡಿ. ರಾಜಸ್ಥಾನ ಬಂದಿಖಾನೆ ನಿಯಮಾವಳಿ-1977
ಉತ್ತರ: ಸಿ

7.ಬೇಸ್ ಎರೋಜನ್ ಅಂಡ್ ಪ್ರಾಫಿಟ್ ಶಿಫ್ಟಿಂಗ್ ಮಾರ್ಗ ಸೂಚಿಗಳಿಗೆ ಕೆಳಗಿನ ಯಾವ ಅಂತರರಾಷ್ಟ್ರೀಯ ಒಕ್ಕೂಟ ಅನುಮೋದನೆಯನ್ನು ನೀಡಿದೆ?

ಎ. ಸಾರ್ಕ್ ಒಕ್ಕೂಟ
ಬಿ. ನ್ಯಾಟೋ ಒಕ್ಕೂಟ
ಸಿ. ಜಿ 20 ಒಕ್ಕೂಟ
ಡಿ. ಜಿ 77 ಒಕ್ಕೂಟ
ಉತ್ತರ: ಸಿ

8.ಕೆಳಗಿನ ಯಾವ ರಾಷ್ಟ್ರಗಳನ್ನು ತೆರಿಗೆ ಸ್ವರ್ಗಗಳು ಎಂದು ಪರಿಗಣಿಸಬಹುದು?

1) ಬಹಮಾಸ್ ದ್ವೀಪಗಳು
2) ಕೆಮ್ಯಾನ್ ದ್ವೀಪಗಳು
3) ಪನಾಮ ದ್ವೀಪಗಳು
4) ಬಾಂಗ್ಲಾದೇಶ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1,2 ಮತ್ತು 3
ಬಿ. 1 ಮತ್ತು 2
ಸಿ. 1 ಮತ್ತು 3
ಡಿ. 2 ಮತ್ತು 4

ಉತ್ತರ: ಎ

9.ಭಾರತ ಮತ್ತು ಪೋರ್ಚುಗೀಸರ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಭಾರತ ಪೋರ್ಚುಗೀಸ್ ರಾಷ್ಟ್ರದೊಂದಿಗೆ – 1949 ರಲ್ಲಿ ಮೊಟ್ಟ ಮೊದಲ ಬಾರಿಗೆ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಿತು.
2) 1955 ರಲ್ಲಿ ಭಾರತ ಪೋರ್ಚುಗೀಸ್ ರಾಷ್ಟ್ರದೊಂದಿಗೆ ತನ್ನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿತು.

ಎ. 1 ಮಾತ್ರ
ಬಿ. 1 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಸಿ

10.ಕೆಳಗಿನ ಯಾವ ಕಾರ್ಯಾಚರಣೆಯ ಮೂಲಕ ಗೋವಾ ಪ್ರದೇಶವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಲಾಯಿತು?

ಎ. ಆಪರೇಷನ್ ವಿಜಯ್
ಬಿ. ಆಪರೇಷನ್ ರಾಹತ್
ಸಿ. ಅಪರೇಷನ್ ಬ್ಲೂ ಸ್ಟಾರ್
ಡಿ. ಆಪರೇಷನ್ ಗಂಗಾ
ಉತ್ತರ: ಎ

11.ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್ ಯೋಜನೆಯನ್ನು ಕೆಳಗಿನ ಯಾವ ವಲಯಗಳ ಅಭಿವೃದ್ಧಿಗೆ ಜಾರಿಗೆ ತರಲಾಗಿದೆ?

ಎ. ಕಲಾವಿದರು ಮತ್ತು ಕುಶಲಕರ್ಮಿಗಳು
ಬಿ. ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಸಿ. ವೃತ್ತಿ ಆಧರಿತ ತರಬೇತಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು
ಡಿ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು
ಉತ್ತರ: ಎ

12) ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳದಲ್ಲಿ ಏನೆಂದು ಕರೆಯುತ್ತಾರೆ?

ಎ. ಸಾಗರಮಾತ
ಬಿ. ಚೋಮೋಲುಂಗ್ಟ
ಸಿ. ಅಕ್ಷಯ ಚಿನ್
ಡಿ. ನುಬ್ರಾ ಪರ್ವತ
ಉತ್ತರ: ಎ

13.ಪ್ರಸಿದ್ಧ ಸಿಹಿ ನೀರಿನ ಸರೋವರಗಳಾದಂತಹ ವುಲಾರ್ ಮತ್ತು ದಾಲ್ ಸರೋವರಗಳನ್ನು ಯಾವ ಹಿಮಾಲಯದ ಶ್ರೇಣಿಯಲ್ಲಿ ಕಾಣಬಹುದಾಗಿದೆ?

ಎ. ಕಿರಿಯ ಹಿಮಾಲಯ ಶ್ರೇಣಿ
ಬಿ. ಶಿವಾಲಿಕ್ ಶ್ರೇಣಿಗಳು
ಸಿ. ಗಡಿಯಾಚೆಗಿನ ಹಿಮಾಲಯ
ಡಿ. ಮಹಾ ಹಿಮಾಲಯ ಮತ್ತು ಪೀರ್ ಪಂಜಲ್ ಶ್ರೇಣಿಯ ನಡುವಿನ ಪ್ರದೇಶ.
ಉತ್ತರ: ಡಿ

14.ರಾಜ್ಯಸಭೆಯಲ್ಲಿ ಅನುಮೋದನೆ ಆಗಿರುವ ಚುನಾವಣಾ ಆಯೋಗ ಸಂಬಂಧಿತ ಮಸೂದೆಯ ಪ್ರಮುಖ ಅಂಶಗಳನ್ನು ಗುರುತಿಸಿ.

1) ಪ್ರಧಾನ ಮಂತ್ರಿ, ಕೇಂದ್ರ ಸಂಪುಟ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ಆಯ್ಕೆ ಸಮಿತಿಯನ್ನು ಸ್ಥಾಪಿಸಲಾಗುತ್ತದೆ.
2) ಆಯ್ಕೆ ಸಮಿತಿಯ ಶಿಫಾರಸ್ಸುಗಳನ್ನು ಮಾನ್ಯಗೊಳಿಸಲು ಮೂರು ಸದಸ್ಯರು ಕಾರ್ಯನಿ- ರ್ವಹಿಸುತ್ತಿರಬೇಕು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಎ

15.ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಅನ್ವಯ ಚುನಾವಣಾ ಆಯುಕ್ತರ ಹುದ್ದೆಗೆ ಅಭ್ಯರ್ಥಿಗಳ ‘ಪಟ್ಟಿಯನ್ನು ಯಾವ ಸಚಿವರು ಕಳುಹಿಸುತ್ತಾರೆ?

ಎ. ಗೃಹ ಸಚಿವ
ಬಿ. ಕಾನೂನು ಸಚಿವ
ಸಿ. ಕೃಷಿ ಸಚಿವ
ಡಿ. ಸಾಮಾಜಿಕ ನ್ಯಾಯ ಸಚಿವ
ಉತ್ತರ: ಬಿ

16.ಮಹಿಳೆಯರ ಮೇಲಿನ ಎಲ್ಲಾ ಸ್ವರೂಪದ ತಾರತಮ್ಯತೆಯನ್ನು ನಿಷೇಧಿಸುವ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಭಾರತ ಯಾವ ವರ್ಷದಲ್ಲಿ ಅನುಮೋದಿಸಿತು?

ಎ. 1993
ಬಿ. 1998
ಸಿ. 1996
ಡಿ. 2002
ಉತ್ತರ: ಎ

17.ಇಂಟರ್‌ಪೋಲ್ ಸಂಸ್ಥೆ ಮಾನವ ಕಳ್ಳ ಸಾಗಾಣಿಕೆಯ ಪ್ರಕರಣಗಳನ್ನು ಬಯಲಿಗೆಳೆಯಲು ಕೆಳಗಿನ ಯಾವ ಕಾರ್ಯಾಚರಣೆಯನ್ನು ಹಮ್ಮಿಕೊಂಡಿತು?.

ಎ. ಅಪರೇಷನ್‌ ಹೂಮನ್ ಟ್ರಾಫಿಕಿಂಗ್
ಬಿ. ಆಪರೇಷನ್ ಸ್ಟಾರ್ಮ್ ಮೇಕರ್ಸ್-2
ಸಿ. ಆಪರೇಷನ್ ಕ್ವಿಕ್ ಆಕ್ಷನ್
ಡಿ. ಆಪರೇಷನ್ ಅನಕೊಂಡ
ಉತ್ತರ: ಬಿ

18.ಜಾಗತಿಕ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಜಾಗತಿಕ ಮಟ್ಟದ ಒಳನಾಡು ಮೀನು ಉತ್ಪಾದನೆಯಲ್ಲಿ ಚೀನಾ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದಾರೆ, ಭಾರತ ಎರಡನೇ ಸ್ಥಾನದಲ್ಲಿದೆ.
2) ಜಾಗತಿಕ ಮಟ್ಟದ ಒಳನಾಡು ಮೀನುಗಾರಿ- ಕೆಯಲ್ಲಿ ಉಗಾಂಡ ಏಕೈಕ ಆಫ್ರಿಕಾ ರಾಷ್ಟ್ರವಾಗಿ ಮೊದಲ 10 ಸ್ಥಾನದಲ್ಲಿದೆ.
3) ಚೀನಾ ಮತ್ತು ಭಾರತವನ್ನು ಹೊರತು ಪಡಿಸಿದರೆ ಒಳನಾಡು ಮೀನುಗಾರಿಕೆಯಲ್ಲಿ ಬಾಂಗ್ಲಾದೇಶ ಮೂರನೇ ಸ್ಥಾನದಲ್ಲಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ.1, 2 ಮತ್ತು 3
ಬಿ.1 ಮಾತ್ರ
ಸಿ. 1 ಮತ್ತು 3
ಡಿ. 3 ಮಾತ್ರ
ಉತ್ತರ: ಎ

19.ಭಾರತದ ಮೀನುಗಾರಿಕೆ ವಲಯಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಜಾಗತಿಕ ಮಟ್ಟದ ಮೀನು ಉತ್ಪಾದನೆಯಲ್ಲಿ ಭಾರತದ ಕೊಡುಗೆ ಶೇ 7.7. ರಷ್ಟು
2) ಜಾಗತಿಕ ಮಟ್ಟದ ಮೀನು ಉತ್ಪನ್ನಗಳ ರಫ್ಟಿನಲ್ಲಿ ಭಾರತ 4ನೇ ಸ್ಥಾನ ಅಲಂಕರಿಸಿದೆ
3.ಜಾಗತಿಕ ಮಟ್ಟದಲ್ಲಿ ಭಾರತ ಎರಡನೇ ಅತಿ ದೊಡ್ಡ ಜಲಚರ ರಾಷ್ಟ್ರವಾಗಿ ಹೊರಹೊಮ್ಮಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಸಿ. 1,2 ಮತ್ತು 3
ಡಿ. 3 ಮಾತ್ರ
ಉತ್ತರ: ಬಿ

20.ಆಧುನಿಕ ಯುಗದಲ್ಲಿ ತೈವಾನ್ ಯಾವ ಐರೋಪ್ಯ ರಾಷ್ಟ್ರದ ವಸಾಹತುಶಾಹಿ ಆಡಳಿತಕ್ಕೆ ಸಿಲುಕಿತ್ತು?

ಎ. ನೆದರ್ ಲ್ಯಾಂಡ್ಸ್
ಬಿ. ಫ್ರಾನ್ಸ್
ಸಿ. ಯುಕೆ
ಡಿ. ಪೋರ್ಚುಗೀಸ್
ಉತ್ತರ: ಎ

21.ತೈವಾನ್ ವಿಚಾರದಲ್ಲಿ ಚೀನಾ ಕೆಳಗಿನ ಯಾವ ಸಿದ್ಧಾಂತವನ್ನು ಪರಿಪಾಲಿಸುತ್ತಿದೆ?

ಎ. ಒಂದು ರಾಷ್ಟ್ರ ಒಂದು ವ್ಯವಸ್ಥೆ
ಬಿ. ಒಂದು ರಾಷ್ಟ್ರ ಎರಡು ವ್ಯವಸ್ಥೆ
ಸಿ. ಎರಡು ರಾಷ್ಟ್ರ ಒಂದು ವ್ಯವಸ್ಥೆ
ಡಿ. ಎರಡು ರಾಷ್ಟ್ರ ಎರಡು ವ್ಯವಸ್ಥೆ
ಉತ್ತರ: ಬಿ

22.ಮೌಲಾನ ಅಬುಲ್ ಕಲಾಂ ಆಜಾದ್ ಟ್ರೋಫಿಯನ್ನು ಕೆಳಗಿನ ಯಾವ ವರ್ಗಕ್ಕೆ ನೀಡಲಾಗುತ್ತದೆ?

ಎ. ವಿಶ್ವವಿದ್ಯಾಲಯಗಳು & ಶೈಕ್ಷಣಿಕ ಸಂಸ್ಥೆಗಳು
ಬಿ. ವಿಶ್ವವಿದ್ಯಾಲಯಗಳು ಮಾತ್ರ
ಸಿ. ಶೈಕ್ಷಣಿಕ ಸಂಸ್ಥೆಗಳು ಮಾತ್ರ
ಡಿ. ವಾಣಿಜ್ಯೋದ್ಯಮ ಸಂಸ್ಥೆಗಳಿಗೆ
ಉತ್ತರ: ಎ

23.ಸಾಹಸ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಕೆಳಗಿನ ಯಾವ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುತ್ತದೆ?

ಎ. ಕುಂಜುರಾಣಿ ದೇವಿ ರಾಷ್ಟ್ರೀಯ ಸಾಹಸ ಪ್ರಶಸ್ತಿ
ಬಿ. ಭೀಷ್ಮಾಚಾರ್ಯ ರಾಷ್ಟ್ರೀಯ ಸಾಹಸ ಪ್ರಶಸ್ತಿ
ಸಿ. ತೇನ್ಸಿಂಗ್ ನಾರ್ವೆ ರಾಷ್ಟ್ರೀಯ ಸಾಹಸ ಪ್ರಶಸ್ತಿ
ಡಿ. ಎಡ್ಮಂಡ್‌ ಹಿಲರಿ ರಾಷ್ಟ್ರೀಯ ಸಾಹಸ ಪ್ರಶಸ್ತಿ
ಉತ್ತರ: ಸಿ

24, ಜಾಗತಿಕ ಪ್ರಾಮುಖ್ಯತೆ ಹೊಂದಿರುವ ಕೃಷಿ ಪಾರಂಪರಿಕ ವ್ಯವಸ್ಥೆಯ ಸ್ಥಾನಮಾನವನ್ನು . ಕೆಳಗಿನ ಯಾವ ಸಂಸ್ಥೆಗಳು ನೀಡುತ್ತದೆ?

ಎ. ಆಹಾರ ಮತ್ತು ಕೃಷಿ ಸಂಘಟನೆ
ಬಿ. ಸಾಮಾನ್ಯ ಸಭೆ.
ಸಿ. ಯುನೆಸ್ಕೋ
ಡಿ. ಅಂತರರಾಷ್ಟ್ರೀಯ ಕೃಷಿ ಪಾರಂಪರಿಕ ವ್ಯವಸ್ಥೆ ಸಂರಕ್ಷಣಾ ಸಂಸ್ಥೆ
ಉತ್ತರ: ಎ

25.ಕೇಸರಿ ಬೇಸಾಯಕ್ಕೆ ಅವಶ್ಯಕವಿರುವ ಭೌಗೋಳಿಕ ಸ್ಥಿತಿಗತಿಗಳನ್ನು ಗುರುತಿಸಿ.

1) ಕೇಸರಿ ಬೇಸಾಯಕ್ಕೆ 12 ಗಂಟೆಗಳ ಸೂರ್ಯನ ಕಿರಣಗಳ ಅವಶ್ಯಕತೆ ಇರುತ್ತದೆ.
2) ಸಮುದ್ರ ಮಟ್ಟದಿಂದ 2000 ಮೀಟರ್ ಎತ್ತರದಲ್ಲಿ ಕೇಸರಿ ಬೇಸಾಯವನ್ನು ಕೈಗೊಳ್ಳಲು ಸೂಕ್ತವಾಗಿರುತ್ತದೆ.
3) ಪ್ರತಿವರ್ಷ 1 ಸಾವಿರ ಮಿ.ಮೀ 1500 ಮಿ.ಮೀ. ನಷ್ಟು ಮಳೆಯ ಅವಶ್ಯಕತೆ ಇರುತ್ತದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1ಮತ್ತು 3
ಡಿ. 1,2 ಮತ್ತು 3
ಉತ್ತರ: ಡಿ

26.ಇತ್ತೀಚೆಗೆ ಬ್ರಿಕ್ಸ್ ನೂತನ ಅಭಿವೃದ್ಧಿ ಬ್ಯಾಂಕಿನ ಸದಸ್ಯತ್ವವನ್ನು ಯಾವ ರಾಷ್ಟ್ರಗಳು ಪಡೆದುಕೊಂಡಿವೆ?

ಎ. ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಉರುಗೈ
ಬಿ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ
ಸಿ. ಉರುಗೈ, ಪೆರುಗೈ ಮತ್ತು ಚಿಲಿ
ಡಿ. ಬಾಂಗ್ಲಾದೇಶ, ಮಯನ್ಮಾ‌ರ್, ವಿಯೆಟ್ನಾಂ
ಉತ್ತರ: ಎ

27.ಬ್ರಿಕ್ಸ್ ನೂತನ ಅಭಿವೃದ್ಧಿ ಬ್ಯಾಂಕನ್ನು ಎಷ್ಟನೇ ಬ್ರಿಕ್ಸ್ ಸಮ್ಮೇಳನದಲ್ಲಿ ಸ್ಥಾಪಿಸಲಾಯಿತು?

ಎ. 2ನೇ ಸಮ್ಮೇಳನ
ಬಿ. 4ನೇ ಸಮ್ಮೇಳನ
ಸಿ. 6ನೇ ಸಮ್ಮೇಳನ
ಡಿ. 7ನೇ ಸಮ್ಮೇಳನ
ಉತ್ತರ: ಸಿ

28.ಕೆಳಗಿನ ಯಾವ ರಾಷ್ಟ್ರ ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧ ಪ್ರಕರಣವನ್ನು ದಾಖಲಿಸಿದೆ?

ಎ. ದಕ್ಷಿಣ ಆಫ್ರಿಕಾ
ಬಿ. ಫ್ರಾನ್ಸ್
ಸಿ. ಚೀನಾ
ಡಿ. ದಕ್ಷಿಣ ಅಮೇರಿಕ
ಉತ್ತರ: ಎ

29.ಜೈಲಿನಿಂದ ಕುಖ್ಯಾತ ಅಪರಾಧಿ : ತಪ್ಪಿಸಿಕೊಂಡ ಕಾರಣದಿಂದ ಕೆಳಗಿನ ಯಾವ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಯಿತು?

ಎ.ಚಿಲಿ
ಬಿ. ಅರ್ಜೆಂಟೀನಾ
ಸಿ. ಈಕ್ವೆಡಾರ್
ಡಿ. ಉರುಗ್ವೆ
ಉತ್ತರ: ಸಿ

30.ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಕೆಳಗಿನ ಯಾವ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು?

1) ಪರಿಸರ ಸಂರಕ್ಷಣೆ
2) ಜೈವಿಕ ವೈವಿಧ್ಯತೆ ಸಂರಕ್ಷಣೆ
3.ಜಾನುವಾರುಗಳ ವೈವಿಧ್ಯತೆ ಸಂರಕ್ಷಣೆ
4.ವೈವಿಧ್ಯಮಯ ಬೆಳೆಗಳ ಸಂರಕ್ಷಣೆ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 1, 2, 3 ಮತ್ತು 4
ಸಿ. 3 ಮತ್ತು 4
ಡಿ. 2 ಮತ್ತು 4
ಉತ್ತರ: ಬಿ

31.ಕೆಳಗಿನ ಯಾವ ಅಂಶಗಳನ್ನು ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಉದ್ದೇಶಗಳು ಎಂದು ಪರಿಗಣಿಸಬಹುದು?

1) ಸಾವಯವ ಬೇಸಾಯ
2) ರಸಗೊಬ್ಬರ ಮತ್ತು ರಾಸಾಯನಿಕಗಳ ಮೇಲಿನ ಅವಲಂಬನೆ ತಗ್ಗಿಸುವುದು
3) ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು
4) ರೈತರಿಗೆ ಸಹಾಯಧನ ನೀಡುವುದು

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1,2 ಮತ್ತು 3
ಬಿ. 1 ಮತ್ತು 4
ಸಿ. 2 ಮತ್ತು 4
ಡಿ. 3 ಮತ್ತು 4
ಉತ್ತರ: ಎ

32.ಬಂಧಿತರನ್ನು ವರ್ಗಾಯಿಸುವ ಒಪ್ಪಂದವನ್ನು ಭಾರತ ಸರ್ಕಾರ ಕೆಳಗಿನ ಯಾವ ರಾಷ್ಟ್ರಗಳೊಂದಿಗೆ ಸಹಿ ಹಾಕಿರುತ್ತದೆ?

1) ಆಸ್ಟ್ರೇಲಿಯಾ
2) ಫ್ರಾನ್ಸ್
3) ಯುಕೆ
4) ಇರಾನ್

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1, 2, 3 ಮತ್ತು 4
ಬಿ. 2 ಮತ್ತು 3
ಸಿ. 1 ಮತ್ತು 2
ಡಿ. 3 ಮತ್ತು 4
ಉತ್ತರ: ಎ

33.ವಿದೇಶದಲ್ಲಿ ಭಾರತೀಯರು ಬಂಧಿತರಾದರೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅವರಿಗೆ ಯಾವ ಸವಲತ್ತುಗಳನ್ನು ಒದಗಿಸುತ್ತದೆ?

1) ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕವನ್ನು ಪಡೆದುಕೊಳ್ಳುವ ಅವಕಾಶ.
2) ಕಾನೂನು ಸಹಕಾರವನ್ನು ಒದಗಿಸುತ್ತದೆ.
3.ಕಾರಾಗೃಹಗಳಲ್ಲಿ ವಿಶೇಷ ಸವಲತ್ತನ್ನು ಪಡೆಯಲು ಹಣಕಾಸಿನ ನೆರವನ್ನು ನೀಡುತ್ತದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮಾತ್ರ
ಬಿ. 1 ಮತ್ತು 2
ಸಿ. 1 ಮತ್ತು 3
ಡಿ. 2 ಮತ್ತು 3

ಉತ್ತರ: ಬಿ

34.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಯಾವ ಸ್ವರೂಪದ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ?

ಎ. ಸಂವಿಧಾನಾತ್ಮಕ ಸಂಸ್ಥೆ
ಬಿ. ಶಾಸನೀಯ ಸಂಸ್ಥೆ
ಸಿ. ಶಾಸನೇತರ ಸಂಸ್ಥೆ
ಡಿ. ಕಾರ್ಯಾಂಗಿಯ ಆದೇಶದ ಮೇರೆಗೆ ಸ್ಥಾಪನೆ ಆಗಿರುವ ಸಂಸ್ಥೆ
ಉತ್ತರ: ಬಿ

35) ಭಾರತ ಮಾಲ ಪರಿಯೋಜನೆಯ ಮೊದಲನೇ ಹಂತದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಎಲ್ಲಿಯವರೆಗೂ ವಿಸ್ತರಿಸಿದೆ?

ಎ. 2027-28 ರ ವರೆಗೆ
ಬಿ. 2028-29 ರ ವರೆಗೆ
ಸಿ. 2029-30 ರ ವರೆಗೆ
ಡಿ. 2030-31 ರ ವರೆಗೆ
ಉತ್ತರ: ಎ

36.’ಇ ಸಾಕ್ಷ’ ಆಪ್ ಅನ್ನು ಕೆಳಗಿನ ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆ?

1) ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಪರಿವೀಕ್ಷಿಸಲು
2) ಸಂಸತ್ ಸದಸ್ಯರ ಜನಸ್ನೇಹಿ ಚಟುವಟಿಕೆಗಳನ್ನು ಪರಿವೀಕ್ಷಿಸಲು
3) ಸಂಸತ್ ಸದಸ್ಯರ ಭ್ರಷ್ಟಾಚಾರದ ಪ್ರಕಾರಗಳನ್ನು ಪರಿವೀಕ್ಷಿಸಲು

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 2 ಮತ್ತು 3
ಉತ್ತರ: ಎ

37.’ಅಮೃತ್‌ ಕಾರ್ಯಾಚರಣೆ’ ಯನ್ನು ಕೆಳಗಿನ ಯಾವ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ?

ಎ. ಮಧ್ಯ ಪ್ರದೇಶ
ಬಿ. ಉತ್ತರ ಪ್ರದೇಶ
ಸಿ. ಆಂಧ್ರಪ್ರದೇಶ
ಡಿ. ಕೇರಳ
ಉತ್ತರ: ಡಿ

38.2023 ರ ಜಾಗತಿಕ ಬಹು ಆಯಾಮ ಬಡತನ ಸೂಚ್ಯಂಕ ಸಿದ್ಧಪಡಿಸುವಲ್ಲಿ ಕೆಳಗಿನ ಯಾವ ಸಂಸ್ಥೆ ಸಕ್ರಿಯವಾಗಿ ಭಾಗವಹಿಸಿತ್ತು?

ಎ. ಆಕ್ಸರ್ಡ್ ಪಾವರ್ಟಿ ಅಂಡ್ ಡ್ಯೂಮನ್ ಡೆವಲಪ್ಟೆಂಟ್ ಇನಿಶಿಯೇಟಿವ್
ಬಿ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
ಸಿ. ಹಾರ್ವರ್ಡ್ ವಿಶ್ವವಿದ್ಯಾಲಯ
ಡಿ. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ
ಉತ್ತರ: ಎ

39.ಕೆಳಗಿನ ಯಾವ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳು ಎಂದು ಪರಿಗಣಿಸಬಹುದು?

1) ಉಜ್ವಲ ಯೋಜನೆ
2) ಮಹಿಳಾ ಪೊಲೀಸ್ ಸ್ವಯಂಸೇವಕರು
3.ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ
4.ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1, 2 ಮತ್ತು 3
ಬಿ. 2 ಮತ್ತು 3
ಸಿ. 1 ಮತ್ತು 2
ಡಿ. 2 ಮಾತ್ರ
ಉತ್ತರ: ಸಿ

41) ಭಾರತ ದೇಶ ಮತ್ತು ಅಮೆರಿಕದ ನಡುವೆ ಕೆಳಗಿನ ಯಾವ ವಿಚಾರದಲ್ಲಿ ಘರ್ಷಣೆ ಉಂಟಾಗಿದೆ?

ಎ. ಭಾರತದಿಂದ ರಫ್ತಾಗುತ್ತಿರುವ ಉತ್ಪನ್ನಗಳು
ಬಿ. ಭಾರತದಿಂದ ರಫ್ತಾಗುತ್ತಿರುವ ಸೇವೆಗಳು
ಸಿ. ಖಾಲಿಸ್ತಾನ್ ಪ್ರತ್ಯೇಕದವಾದಿಗಳ ಹತ್ಯೆ ವಿಚಾರ
ಡಿ. ಅಮೆರಿಕದಿಂದ ರಫ್ತಾಗುತ್ತಿರುವ ಉತ್ಪನ್ನಗಳು
ಉತ್ತರ: ಸಿ

42.ಪರಮಾಣು ಸ್ಥಾವರ ಮತ್ತು ಸವಲತ್ತುಗಳ ಮೇಲೆ ದಾಳಿ ನಿರ್ಬಂಧ ಒಪ್ಪಂದವನ್ನು ಭಾರತದ ಯಾವ ಪ್ರಧಾನಮಂತ್ರಿಗಳು ಸಹಿ ಹಾಕಿದ್ದರು?

ಎ. ವೀರೇಂದ್ರ ಪ್ರತಾಪ್ ಸಿಂಗ್
ಬಿ. ದೇವೇಗೌಡ
ಸಿ. ಐ.ಕೆ. ಗುಜರಾಲ್
ಡಿ. ರಾಜೀವ್ ಗಾಂಧಿ
ಉತ್ತರ: ಡಿ

43.ಅಪರೇಷನ್ ಬ್ರಾಸ್ ಟ್ಯಾಕ್ಸ್ ಎನ್ನುವ ಮಿಲಿಟರಿ ಸಮರಾಭ್ಯಾಸವನ್ನು ಭಾರತದ ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?

ಎ. ಗುಜರಾತ್
ಬಿ. ರಾಜಸ್ಥಾನ
ಸಿ. ಪಂಜಾಬ್
ಡಿ. ಹರಿಯಾಣ
ಉತ್ತರ: ಬಿ

44.ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಕೆಳಗಿನ ಯಾವ ಗುಹೆಗಳನ್ನು ಕಾಣಬಹುದಾಗಿದೆ?

ಎ. ಕನ್ಹೆರಿ
ಬಿ. ಅಜಂತ
ಸಿ. ಎಲ್ಲೋರಾ
ಡಿ. ರಾಯಲಸೀಮಾ
ಉತ್ತರ: ಎ

45.ಕನ್ಹೆರಿ ಗುಹೆಗಳಲ್ಲಿನ ವಿಹಾರಗಳನ್ನು ಯಾವ ಸ್ಥಳವೆಂದು ಪರಿಗಣಿಸಬಹುದು?

ಎ. ಪ್ರವಚನ ಮಾಡುವ ಸ್ಥಳಗಳು
ಬಿ. ಬೌದ್ಧ ಧರ್ಮಕ್ಕೆ ಸಂಬಂಧಪಟ್ಟ ಅಧ್ಯಯನ
ಮಾಡುವ ಸ್ಥಳಗಳು
ಸಿ. ಆರಾಧನೆ ಮಾಡುವ ಸ್ಥಳಗಳು
ಡಿ. ಪವಿತ್ರ ಸ್ನಾನದ ಸ್ಥಳಗಳು
ಉತ್ತರ: ಸಿ

46.ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್ ಸಂಸ್ಥೆಯನ್ನು ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ಥಾಪಿಸಲಾಯಿತು?

ಎ, ಸ‌ರ್ ಎಂ. ವಿಶೇಶದಯ ಸಮಿತಿ
ಬಿ. ಕ್ಯಾಪ್ಟನ್ ಮಿಲ್ಲರ್ ಸಮಿತಿ
ಸಿ. ಜನರಲ್ ರಾಬರ್ಟ್ ಸಮಿತಿ
ಡಿ. ಸರ್ದಾರ್ ವಲ್ಲಭಾಯಿ ಸಮಿತಿ
ಉತ್ತರ: ಎ

47.ಕರ್ನಾಟಕದ ಯಾವ ಜಿಲ್ಲೆಯನ್ನು ‘ಭಾರತದ ಬ್ಯಾಂಕಿಂಗ್ ತೊಟ್ಟಿಲು’ ಎಂದು ಕರೆಯಲಾಗುತ್ತದೆ?

ಎ. ಉತ್ತರ ಕನ್ನಡ ಜಿಲ್ಲೆ
ಬಿ. ದಕ್ಷಿಣ ಕನ್ನಡ ಜಿಲ್ಲೆ
ಸಿ. ಮಂಗಳೂರು ಜಿಲ್ಲೆ
ಡಿ. ಮೈಸೂರು ಜಿಲ್ಲೆ
ಉತ್ತರ: ಸಿ

48.ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದ ನಂತರ ಕೆಳಗಿನ ಯಾವ ಸ್ವರೂಪದ ದಿಗ್ವಂಧನೆಗಳನ್ನು ಅಮೆರಿಕ ಹೇರುವ ಅಧಿಕಾರವನ್ನು ಹೊಂದಿರುತ್ತದೆ?

1) ಅಮೆರಿಕದ ವಿದೇಶಿ ಹಣಕಾಸು ಸಹಕಾರದ ಮೇಲೆ ದಿಗ್ಭಂದನ
2) ರಕ್ಷಣಾವಲಯದ ಉತ್ಪನ್ನಗಳು ಮತ್ತು ಮಾರಾಟದ ಮೇಲೆ ದಿಗ್ಭಂದನ
3) ಇತರೆ ಸ್ವರೂಪದ ಹಣಕಾಸಿನ ಮತ್ತು ಹಣಕಾಸೇತರ ದಿಗ್ಭಂದನಗಳನ್ನು ಅಮೆರಿಕ ಸರ್ಕಾರ ಹೇರುವ ಅಧಿಕಾರವನ್ನು ಹೊಂದಿರುತ್ತದೆ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1,2 ಮತ್ತು 3
ಡಿ. 2 ಮತ್ತು 3
ಉತ್ತರ: ಸಿ

49.ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಅಮೆರಿಕದ ಕೆಳಗಿನ ಯಾವ ಹುದ್ದೆಗಳಿಗೆ/ ಸಂಘಟನೆಗಳಿಗೆ ಅಧಿಕಾರವಿರುತ್ತದೆ?

ಎ. ಅಮೆರಿಕದ ವಿದೇಶಾಂಗ ರಾಜ್ಯ ಕಾರ್ಯದರ್ಶಿ
ಬಿ. ಅಮೆರಿಕದ ಸೆನೆಟ್ ಗೆ ಅಧಿಕಾರವಿರುತ್ತದೆ
ಸಿ. ಅಮೆರಿಕದ ಅಧ್ಯಕ್ಷರಿಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುತ್ತದೆ
ಡಿ. ಅಮೇರಿಕದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ಅಧಿಕಾರವಿರುತ್ತದೆ
ಉತ್ತರ: ಎ

50.ಜಪಾನ್ ರಾಜತಾಂತ್ರಿಕ ನೀಲಿ ಪುಸ್ತಕದಲ್ಲಿ ಯಾವ ದ್ವೀಪ ಸಮೂಹಗಳ ಬಗ್ಗೆ ಉಲ್ಲೇಖಿಸಿದೆ?

ಎ. ಕುರಿಲ್ ದ್ವೀಪಗಳು
ಬಿ. ದಕ್ಷಿಣ ಚೀನಾ ದ್ವೀಪಗಳು
ಸಿ. ಪೆಸಿಫಿಕ್ ಸಮುದ್ರದ ಮಟುವ ದ್ವೀಪ
ಡಿ. ಹಬೊಮೈ ದ್ವೀಪಗಳು
ಉತ್ತರ: ಎ

51.ಕುರಿಲ್ ದ್ವೀಪಗಳ ಪ್ರಾಮುಖ್ಯತೆಗೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಕುರಿಲ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶ ಮೀನುಗಾರಿಕೆಗೆ ಹೆಚ್ಚು ಪ್ರಶಸ್ತವಾಗಿದೆ.
2) ಕುರಿಲ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶ ಮೀನುಗಾರಿಕೆಗೆ ಅಲ್ಲದೆ ತೈಲ ಮತ್ತು ನೈಸರ್ಗಿಕ ಅನಿಲ ಸಂಪನ್ಮೂಲಗಳನ್ನು ಹೊಂದಿದೆ.
3) ರಷ್ಯಾ ಕುರಿಲ್ ದ್ವೀಪಗಳಲ್ಲಿ ಜಲಾಂತರ್ಗಾಮಿ ಯನ್ನು ನಿಯೋಜಿಸಲು ಯೋಚಿಸುತ್ತಿದೆ ಹಾಗೂ ಈಗಾಗಲೇ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮಾತ್ರ
ಬಿ. 1,2 ಮತ್ತು 3
ಸಿ. 1 ಮತ್ತು 3
ಡಿ. 2 ಮತ್ತು 3
ಉತ್ತರ: ಬಿ

52.ಆರ್ಮಿ ಸ್ಟೈಸ್ ಒಪ್ಪಂದವನ್ನು ಕೆಳಗಿನ ಯಾವ ರಾಷ್ಟ್ರಗಳು ಸಹಿ ಹಾಕಿದ್ದವು?

1) ಇಸ್ರೇಲ್
2) ಈಜಿಪ್ಟ್
3) ಜಾರ್ಡನ್
4) ಲೆಬನನ್
5) ಸಿರಿಯ
6) ಪ್ಯಾಲಿಸ್ತಿನ್
ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1,2,3,4 ಮತ್ತು 5
ಬಿ. 2 ಮತ್ತು 5
ಸಿ. 1,2 ಮತ್ತು 6
ಡಿ. 3,4 ಮತ್ತು 5
ಉತ್ತರ: ಎ

53.ಅರಬ್-ಇಸ್ರೇಲ್ ಯುದ್ಧವನ್ನು ಕೆಳಗಿನ ಯಾವ ಹೆಸರುಗಳಿಂದ ಕರೆಯಲಾಗುತ್ತದೆ?

1) 6 ದಿನಗಳ ಯುದ್ಧ
2) 3ನೇ ಅರಬ್ ಇಸ್ರೇಲ್ ಯುದ್ಧ
3) ಜೂನ್ ಯುದ್ಧ
4) ಜುಲೈ ಯುದ್ಧ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 2 ಮತ್ತು 4
ಬಿ. 1,2 ಮತ್ತು 3
ಸಿ. 1,2 ಮತ್ತು 4
ಡಿ. 3 ಮತ್ತು 4
ಉತ್ತರ:ಬಿ

54.MIST ಅಂತರರಾಷ್ಟ್ರೀಯ ಸಬ್ ಮರೈನ್ ಕೇಬಲ್‌ ವ್ಯವಸ್ಥೆಯ ಅಡಿಯಲ್ಲಿ ಭಾರತ ಕೆಳಗಿನ ಯಾವ ರಾಷ್ಟ್ರಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಕಾರ್ಯ ಪ್ರವೃತ್ತವಾಗಿದೆ?

1) ಮಲೇಶಿಯಾ
2) ಸಿಂಗಾಪೂರ್
3) ಮಯನ್ಮಾರ್
4) ಥೈಲ್ಯಾಂಡ್
5) ಮಾಲ್ಡೀವ್ಸ್

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮಾತ್ರ
ಬಿ. 2 ಮಾತ್ರ
ಸಿ. 3 ಮಾತ್ರ
ಡಿ. 1,2,3 ಮತ್ತು 4
ಉತ್ತರ: ಎ

55.SEAMEWE-6 ಯೋಜನೆಯನ್ನು ಕೆಳಗಿನ ಯಾವ ಸಂಸ್ಥೆ ಜಾರಿಗೆ ತರುತ್ತಿದೆ?

ಎ. ಭಾರತದಲ್ಲಿ ದೂರ ಸಂಪರ್ಕ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಸಂಸ್ಥೆಗಳ ಒಕ್ಕೂಟ
ಬಿ. ರಿಲಿಯನ್ಸ್ ಜಿಯೋ ಸಂಸ್ಥೆ
ಸಿ. ವೊಡಾಫೋನ್ ಇಂಡಿಯಾ ಲಿಮಿಟೆಡ್
ಡಿ. ಏರ್ಟೆಲ್ ಇಂಡಿಯಾ ಲಿಮಿಟೆಡ್
ಉತ್ತರ: ಎ

56.ಪರಿಶಿಷ್ಟ ಪಂಗಡ ಎಂದು ಪರಿಗಣಿಸಲು ಕೆಳಗಿನ ಯಾವ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ?

1) ಭೌಗೋಳಿಕವಾಗಿ ಮುಖ್ಯವಾಹಿನಿಯಿಂದ ಹೊರಗಿರುವ ಸಮುದಾಯ
2) ಪ್ರತ್ಯೇಕ ಸಂಸ್ಕೃತಿ ಹೊಂದಿರುವ ಸಮುದಾಯ
3) ಪ್ರತ್ಯೇಕ ವಸ್ತ್ರಗಳನ್ನು ಧರಿಸುವ ಸಮುದಾಯ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ.1 ಮತ್ತು 2
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 3 ಮಾತ್ರ
ಉತ್ತರ: ಎ

57.ಕೆಳಗಿನ ಯಾವ ರಾಜ್ಯಗಳನ್ನು ಪರಿಶಿಷ್ಟ, ಪಂಗಡಗಳ ಜನಸಂಖ್ಯೆ ಹೊಂದಿರದ ರಾಜ್ಯಗಳು ಎಂದು ಪರಿಗಣಿಸಬಹುದು?

1) ಉತ್ತರ ಪ್ರದೇಶ
2) ಪಂಜಾಬ್
3) ಹರಿಯಾಣ
4) ಓಡಿಸಾ

‘ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮತ್ತು 2
ಬಿ. 1 ಮತ್ತು 3
ಸಿ. 2 ಮತ್ತು 3
ಡಿ. 3 ಮತ್ತು 4
ಉತ್ತರ: ಸಿ

58.ಕೆಳಗಿನ ಯಾವ ಭಾರತದ ರಾಜ್ಯಗಳಲ್ಲಿ ಸಾಂಸ್ಥಿಕ ಹೆರಿಗೆಯ ಪ್ರಮಾಣ ಕಡಿಮೆ ಇದ್ದು ಕಳೆದ 15 ವರ್ಷಗಳಲ್ಲಿ ಪ್ರಗತಿ ಕಂಡಿದೆ?

1) ಮಧ್ಯಪ್ರದೇಶ
2) ಉತ್ತರ ಪ್ರದೇಶ
3) ಓಡಿಸಾ
4) ರಾಜಸ್ಥಾನ
5) ಬಿಹಾರ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1,2,3 ಮತ್ತು 4
ಬಿ. 1,2,4 ಮತ್ತು 5
ಸಿ. 3 ಮತ್ತು 5
ಡಿ. 4 ಮತ್ತು 5
ಉತ್ತರ: ಎ

59.ಜನನಿ ಸುರಕ್ಷಾ ಯೋಜನೆಗೆ ಸಂಬಂಧಿಸಿದ ಸರಿ ಹೇಳಿಕೆಗಳನ್ನು ಗುರುತಿಸಿ.

1) ಈ ಯೋಜನೆಯನ್ನು ಕೇಂದ್ರ ಸರ್ಕಾರ 2005 ರಿಂದ ಜಾರಿಗೆ ತರುತ್ತಿದೆ.
2) ಜನನಿ ಸುರಕ್ಷಾ ಯೋಜನೆ ಶೇ 100 ರಷ್ಟು ರಾಜ್ಯ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.
3) ಈ ಯೋಜನೆಯ ಶೇ 100 ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 3
ಡಿ. 1 ಮತ್ತು 2
ಉತ್ತರ: ಸಿ

60.ಮುಂಗಡಪತ್ರಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ..

1) ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ 92 ವರ್ಷ ಪ್ರತ್ಯೇಕವಾಗಿ ಮಂಡನೆ ಆಗುತ್ತಿತ್ತು.
2) ಇಂದಿರಾ ಗಾಂಧಿಯವರು ಭಾರತದ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಸಿ

61.ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ಮೊಟ್ಟಮೊದಲ ಬಜೆಟ್ ಮಂಡಿಸಿದ ಬ್ರಿಟಿಷ್ ಅಧಿಕಾರಿ ಯಾರು?

ಎ. ಜೇಮ್ಸ್ ವಿಲ್ಸನ್
ಬಿ. ಲಾರ್ಡ್ ವಿಲಿಯಂ ಬೆಂಟಿಕ್
ಸಿ. ಲಾರ್ಡ್ ಮೌಂಟ್ ಬ್ಯಾಟನ್
ಡಿ. ಸಿ. ರಾಜಗೋಪಾಲಚಾರಿ
ಉತ್ತರ: ಎ

62.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿ ಕೆಳಗಿನ ಯಾವ ಅಂಶಗಳನ್ನು ಸಂವಿಧಾನಾತ್ಮಕವಾಗಿ ಪಾಲಿಸಬೇಕಾದ ಕಡ್ಡಾಯ ಅಂಶಗಳು ಎಂದು ಪರಿಗಣಿಸಬಹುದು?

1) ಗ್ರಾಮ ಸಭೆಗಳ ಸಂಘಟನೆ
2) ಸಂಸತ್ ಸದಸ್ಯರಿಗೆ ಮತ್ತು ರಾಜ್ಯದ ವಿಧಾನ ಮಂಡಲದ ಸದಸ್ಯರಿಗೆ ಮತದಾನದ ಹಕ್ಕುಗಳನ್ನು ಕಲ್ಪಿಸುವುದು
3) ಪ್ರತಿ ರಾಜ್ಯದಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸುವುದು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1 ಮತ್ತು 3
ಬಿ. 2 ಮತ್ತು 3
ಸಿ. 1 ಮತ್ತು 2
ಡಿ. 3 ಮಾತ್ರ
ಉತ್ತರ: ಎ

63.ನಗರ ಪ್ರದೇಶಗಳಲ್ಲಿ ಕೆಳಗಿನ ಯಾವ ಸ್ವರೂಪದ ಸ್ಥಳೀಯ ಸರ್ಕಾರಗಳನ್ನು ಸಂವಿಧಾನಾತ್ಮಕವಾಗಿ ಸ್ಥಾಪಿಸಬಹುದಾಗಿದೆ?

1) ಮಹಾನಗರ ಪಾಲಿಕೆ
2) ಅಧಿಸೂಚಿತ ಪ್ರದೇಶ ಸಮಿತಿ
3) ಪಟ್ಟಣ ಪ್ರದೇಶ ಸಮಿತಿ
4) ಕಂಟೋನ್ಮಂಟ್ ಮಂಡಳಿ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1,2,3 ಮತ್ತು 4
ಡಿ. 2 ಮತ್ತು 4
ಉತ್ತರ: ಸಿ

64.ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿ ಕೆಳಗಿನ ಯಾವ ಅಂಶಗಳನ್ನು ಸಂವಿಧಾನಾತ್ಮಕವಾಗಿ ಪಾಲಿಸಬೇಕಾದ ಕಡ್ಡಾಯ ಅಂಶಗಳು ಎಂದು ಪರಿಗಣಿಸಬಹುದು?

1) ಗ್ರಾಮ ಸಭೆಗಳ ಸಂಘಟನೆ
2) ಸಂಸತ್ ಸದಸ್ಯರಿಗೆ, ವಿಧಾನ ಮಂಡಲದ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸುವುದು.
3) ಪ್ರತಿ ರಾಜ್ಯದಲ್ಲಿ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸುವುದು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮತ್ತು 3
ಬಿ. 2 ಮತ್ತು 3
ಸಿ. 1 ಮತ್ತು 2
ಡಿ. 3 ಮಾತ್ರ
ಉತ್ತರ: ಎ

65.ನಗರ ಪ್ರದೇಶಗಳಲ್ಲಿ ಕೆಳಗಿನ ಯಾವ ಸ್ವರೂಪದ ಸ್ಥಳೀಯ ಸರ್ಕಾರಗಳನ್ನು ಸಂವಿಧಾನಾತ್ಮಕವಾಗಿ ಸ್ಥಾಪಿಸಬಹುದಾಗಿದೆ?

1) ಮಹಾನಗರ ಪಾಲಿಕೆ
2) ಅಧಿಸೂಚಿತ ಪ್ರದೇಶ ಸಮಿತಿ
3) ಪಟ್ಟಣ ಪ್ರದೇಶ ಸಮಿತಿ
4) ಕಂಟೋನ್ಮಂಟ್ ಮಂಡಳಿ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1,2,3 ಮತ್ತು 4
ಡಿ. 2 ಮತ್ತು 4
ಉತ್ತರ: ಸಿ

66.ವಾತ್ಸಲ್ಯ ಅಭಿಯಾನದ ಅನುದಾನಗಳನ್ನು ‘ಯಾವ ಸಂಸ್ಥೆಯ ಅನುಮೋದನೆ ನಂತರ ಬಿಡುಗಡೆ ಮಾಡಲಾಗುತ್ತದೆ?

ಎ. ವಾತ್ಸಲ್ಯ ಯೋಜನೆ ಅನುಮೋದನಾ ಮಂಡಳಿ
ಬಿ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿ
ಸಿ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ
ಡಿ. ಪ್ರಧಾನ ಮಂತ್ರಿ ಕಾರ್ಯಾಲಯ
ಉತ್ತರ: ಎ

67.ವಾತ್ಸಲ್ಯ ಯೋಜನೆ ಅನುಮೋದನಾ ಮಂಡಳಿಯ ಅಧ್ಯಕ್ಷತೆಯನ್ನು ಕೆಳಗಿನ ಯಾವ ವ್ಯಕ್ತಿಗಳು ವಹಿಸುತ್ತಾರೆ?

ಎ. ಕೇಂದ್ರ ಮಹಿಳಾ-ಮಕ್ಕಳ ಅಭಿವೃದ್ಧಿ ಸಚಿವ
ಬಿ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಕಾರ್ಯದರ್ಶಿಗಳ ಜಂಟಿ ಅಧ್ಯಕ್ಷತೆ
ಸಿ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ
ಡಿ. ಲೋಕಸಭಾ ಸಭಾಪತಿ
ಉತ್ತರ: ಸಿ

68.ರೋಗಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

ಎ. ಪ್ಯಾಥಾಲಜಿ
ಬಿ. ನೆಫ್ರಾಲಾಜಿ
ಸಿ. ನ್ಯೂರಾಲಾಜಿ
ಡಿ. ಆಂಜಿಯಾಲಾಜಿ
ಉತ್ತರ: ಎ

69.ಮುರ್ರಾ ಇದು ಯಾವ ಪ್ರಾಣಿಯ ತಳಿ?

ಎ. ಆಕಳು
ಬಿ. ಎಮ್ಮೆ
ಸಿ.ಕುರಿ
ಡಿ.ಆಡು
ಉತ್ತರ: ಬಿ

  1. ಯಾವ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಆಡಳಿತಾತ್ಮಕ ನ್ಯಾಯಾಧಿಕರಣ ಸ್ಥಾಪಿಸಲಾಗಿದೆ?

1) ಕರ್ನಾಟಕ, ಆಂಧ್ರಪ್ರದೇಶ

2) ಕೇರಳ, ಹಿಮಾಚಲ ಪ್ರದೇಶ, ಒಡಿಶಾ

3) ಮಹಾರಾಷ್ಟ್ರ ಪಶ್ಚಿಮ ಬಂಗಾಳ

4) ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1. 2 ಮತ್ತು 3
ಬಿ. 1 ಮತ್ತು 3
ಸಿ. 2 ಮತ್ತು 3
ಡಿ. 3 ಮಾತ್ರ
ಉತ್ತರ: ಎ

71.ನ್ಯಾಯಾಧಿಕರಣಗಳ ಸ್ಥಾಪನೆಗೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ನ್ಯಾಯಾಧಿಕರಣಗಳ ಬಗ್ಗೆ ಮೂಲ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿರಲಿಲ್ಲ.
2) ನ್ಯಾಯಾಧಿಕರಣಗಳ ಸ್ಥಾಪನೆಗೆ ಸಂಬಂಧಿಸಿ 1976 ರಲ್ಲಿ ಸಂವಿಧಾನಾತ್ಮಕ ತಿದ್ದುಪಡಿಯನ್ನು ಜಾರಿಗೆ ತರಲಾಯಿತು.
3) ಸಂವಿಧಾನಾತ್ಮಕ ತಿದ್ದುಪಡಿಯ ನಂತರ 1990 ರಲ್ಲಿ ಆಡಳಿತಾತ್ಮಕ ನ್ಯಾಯಾಧಿಕರಣಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 1 ಮತ್ತು 3
ಉತ್ತರ: ಸಿ

72.ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಗೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಾಡಲಾಯಿತು.
2) 1976 ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಶಾಸನೀಯ ಸ್ಥಾನಮಾನವನ್ನು ಕಲ್ಪಿಸಲಾಯಿತು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಸಿ

73.ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಗಳಿಗೆ ಸಂಬಂಧಿಸಿ ಸೂಕ್ತ ಹೇಳಿಕೆಗಳನ್ನು ಗುರುತಿಸಿ.

1) ಮೊದಲ ಹಂತದ ಸುಧಾರಣೆಯಾಗಿ ಇಂಪೀರಿಯಲ್ ಬ್ಯಾಂಕ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಪರಿವರ್ತಿಸಲಾಯಿತು.
2) ಎರಡನೇ ಹಂತದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಸಹವರ್ತಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಗೊಳಿಸಲಾಯಿತು.
3) ಇತ್ತೀಚಿನ ವರ್ಷಗಳಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ಕೊಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.

ಎ. 1 ಮತ್ತು 3
ಬಿ. 2 ಮತ್ತು 3
ಸಿ. 3 ಮತ್ತು 4
ಡಿ. 1, 2 ಮತ್ತು 3
ಉತ್ತರ: ಡಿ

74.ಸ್ವತಂತ್ರ ಪೂರ್ವದಲ್ಲಿ ಬಡ ಶಾಲಾ ಮಕ್ಕಳಿಗೆ ಉಚಿತ ಆಹಾರವನ್ನು ಕೆಳಗಿನ ಯಾವ ಸಂಸ್ಥೆಗಳು ಮೊದಲು ನೀಡಲು ಪ್ರಾರಂಭಿಸಿದವು?

ಎ. ಮದ್ರಾಸ್ ಮುನ್ಸಿಪಲ್ ಕಾರ್ಪೊರೇಷನ್
ಬಿ. ಕಲ್ಕತ್ತಾ ಮುನಿಸಿಪಲ್ ಕಾರ್ಪೋರೇಷನ್
ಸಿ. ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್
ಡಿ. ಪಂಜಾಬ್ ಮುನ್ಸಿಪಲ್ ಕಾರ್ಪೋರೇಷನ್
ಉತ್ತರ: ಎ

75.ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಬಂಧಿಸಿ ತಪ್ಪಾದ ಹೇಳಿಕೆಗಳನ್ನು ಗುರುತಿಸಿ.

1) ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ 1 ರಿಂದ 5 ನೇ ತರಗತಿ ಮಕ್ಕಳಿಗೆ 1990 ರಲ್ಲಿ ಕೇಂದ್ರ ಪ್ರಾರಂಭಿಸಿತು.
2) 2007 ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಎಂಟನೇ ತರಗತಿಯವರೆಗಿನ ಮಕ್ಕಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿತು.

ಕೋಡ್ ಬಳಸಿ ತಪ್ಪಾದ ಹೇಳಿಕೆ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಎ

  1. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿರುವ ಪ್ರಮುಖ ಭಾರತೀಯರನ್ನು ಗುರುತಿಸಿ.

1) ದಲ್ಲೀರ್ ಭಂಡಾರಿ

2) ನಾಗೇಂದ್ರ ಸಿಂಗ್

3) ಸರ್ ಬೆನೆಗಲ್ ರಾವ್

4) ಆರ್.ಎಸ್.ಪಾಠಕ್

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ.1, 2, 3 ಮತ್ತು 4
ಬಿ. 1 ಮತ್ತು 2
ಸಿ. 2 ಮತ್ತು 3
ಡಿ. 3 ಮತ್ತು 4
ಉತ್ತರ: ಎ

77.ಕೇಂದ್ರ ಸಂಸ್ಕೃತಿ ಸಚಿವಾಲಯ 2024 ರ ಗಣರಾಜ್ಯೋತ್ಸವದ ದಿನದಂದು ಯಾವ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿತು?

ಎ. ಭಾರತ-ಪ್ರಜಾಪ್ರಭುತ್ವದ ತಾಯಿ
ಬಿ. ಭಾರತ-ಸಾಂಸ್ಕೃತಿಕ ತವರು
ಸಿ. ಭಾರತ-ವೈವಿಧ್ಯತೆಯ ಮಾತೃಭೂಮಿ
ಡಿ. ಭಾರತ-ಪ್ರಜಾಪ್ರಭುತ್ವದ ಬೆನ್ನೆಲುಬು
ಉತ್ತರ: ಎ

78.ಕೆಳಗಿನ ಯಾವ ರಾಷ್ಟ್ರದ ಮಿಲಿಟರಿ ತುಕಡಿ 75 ನೇ ಗಣರಾಜ್ಯೋತ್ಸವದಂದು ಭಾಗವಹಿಸಿತು?

ಎ. ಅಮೆರಿಕದ ಮಿಲಿಟರಿ ತುಕಡಿ
ಬಿ. ಬ್ರಿಟನ್ ಮಿಲಿಟರಿ ತುಕಡಿ
ಸಿ. ಫ್ರಾನ್ಸ್ ಮಿಲಿಟರಿ ತುಕಡಿ
ಡಿ. ಶ್ರೀಲಂಕಾ ಮಿಲಿಟರಿ ತುಕಡಿ
ಉತ್ತರ: ಸಿ

80.ಏಷ್ಯಾದ ಕಾಡು ನಾಯಿಗಳಿಗೆ ಸಂಬಂಧಿಸಿ ಅವುಗಳ ಸಂರಕ್ಷಣಾ ಸ್ಥಾನಮಾನ ಗುರುತಿಸಿ.

1) IUCN ಪಟ್ಟಿಯಲ್ಲಿ ಏಷ್ಯಾದ ಕಾಡು ನಾಯಿಗಳಿಗೆ ಅಪಾಯದ ಅಂಚಿನಲ್ಲಿರುವ

1) ವನ್ಯಜೀವಿಗಳು ಸ್ಥಾನಮಾನವನ್ನು ಕಲ್ಪಿಸಲಾಗಿದೆ.
2) CITES ಒಪ್ಪಂದದ ಪ್ರಕಾರ ಏಷ್ಯಾದ ಕಾಡು ನಾಯಿಗಳಿಗೆ ಎರಡನೇ ಅನುಸೂಚಿಯಲ್ಲಿ ಸ್ಥಾನ- ಮಾನವನ್ನು ಕಲ್ಪಿಸಲಾಗಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ.1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಸಿ

81.ರಾಷ್ಟ್ರೀಯ ಚಂಬಲ್ ವನ್ಯಜೀವಿಧಾಮ ಕೆಳಗಿನ ಯಾವ ರಾಜ್ಯಗಳೊಂದಿಗೆ ತನ್ನ ಗಡಿ ಭಾಗವನ್ನು ಹಂಚಿಕೊಂಡಿದೆ.

ಎ. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ
ಬಿ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್
ಸಿ. ರಾಜಸ್ಥಾನ, ಪಂಜಾಬ್ ಮತ್ತು ಉತ್ತರಪ್ರದೇಶ
ಡಿ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್
ಉತ್ತರ: ಎ.

82.ಕೇವಲಾದೇವ್ ರಾಷ್ಟ್ರೀಯ ಉದ್ಯಾನಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ್ನು 250 ವರ್ಷದ ಹಿಂದೆ ಭರತಪುರವನ್ನು ಆಳುತ್ತಿದ್ದ ಅರಸರು ಬೇಟೆ ತಾಣವಾಗಿ ಅಭಿವೃದ್ಧಿಪಡಿಸಿದರು
2) ತಗ್ಗು ಪ್ರದೇಶವಾಗಿದ್ದ ಭರತಪುರವನ್ನು ನೆರೆಯಿಂದ ರಕ್ಷಿಸಲು ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಲು ಕೇವಲಾದೇವ್ ರಾಷ್ಟ್ರೀಯ ಉದ್ಯಾನ ನಿರ್ಮಿಸಲಾಯಿತು
3) ಗ್ರೇ ಲ್ಯಾಗ್ ಎನ್ನುವ ಹೆಸರಿನ ಹೆಬ್ಬಾತು ಕೋಳಿಯನ್ನು ಕೇವಲಾದೇವ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಬಹುದು

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ.2 ಮಾತ್ರ
ಸಿ. 3 ಮಾತ್ರ
ಡಿ. 1, 2 ಮತ್ತು 3
ಉತ್ತರ: ಡಿ

83.22 ನೇ ಕಾನೂನು ಆಯೋಗದ ಅಧ್ಯಕ್ಷತೆ ವಹಿಸಿದ ನ್ಯಾಯಮೂರ್ತಿ ಯಾರು?

ಎ. ನಿ.ನ್ಯಾಯಮೂರ್ತಿ ರಿತುರಾಜ್ ಅವಾಸ್ತಿ
ಬಿ. ನಿ.ನ್ಯಾಯಮೂರ್ತಿ ಸಂತೋಷ್ ಹೆಗಡೆ
ಸಿ. ನಿ.ನ್ಯಾಯಮೂರ್ತಿ ವೆಂಕಟಾಚಲ
ಡಿ. ನಿ.ನ್ಯಾಯಮೂರ್ತಿ ಬಲ್ಬೀರ್ ಸಿಂಗ್ ಚೌಹಾಣ್
ಉತ್ತರ: ಎ

84.ಭಾರತದ ಯಾವ ರಾಜ್ಯಗಳಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರಲಾಗಿದೆ?

1) ಉತ್ತರ ಪ್ರದೇಶ
2) ಕೇರಳ
3) ಗೋವಾ
4) ನಾಗಾಲ್ಯಾಂಡ್

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ.1 ಮಾತ್ರ
ಸಿ. 1, 2 ಮತ್ತು 3
ಸಿ. 3 ಮಾತ್ರ
ಡಿ. 4 ಮಾತ್ರ
ಉತ್ತರ: ಸಿ

85.ಕೇಂದ್ರ ಹಣಕಾಸು ಸಚಿವರು ಬಜೆಟ್ ಅನ್ನು ಯಾರ ಹೆಸರಿನಲ್ಲಿ ಮಂಡಿಸುತ್ತಾರೆ?

ಎ. ಭಾರತದ ರಾಷ್ಟ್ರಪತಿಗಳು
ಬಿ. ಭಾರತದ ಪ್ರಧಾನ ಮಂತ್ರಿ
ಸಿ. ಲೋಕಸಭಾ ಸ್ಪೀಕ‌ರ್
ಡಿ. ರಾಜ್ಯಸಭಾ ಸಭಾಪತಿ
ಉತ್ತರ: ಎ

86.ಬಜೆಟ್ ಮಂಡಿಸುವಾಗ ಯಾವ ದಾಖಲೆ ಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ?

1) ಮುಂದಿನ ಹಣಕಾಸು ವರ್ಷದ ಒಟ್ಟು ಅಂದಾಜು ಸ್ವೀಕೃತಿ ಮತ್ತು ವೆಚ್ಚ
2) ಮುಂದಿನ ವರ್ಷದ ಕಂದಾಯ ಸ್ವೀಕೃತಿ
3) ಮುಂದಿನ ವರ್ಷದ ಆರ್ಥಿಕ ನೀತಿ
4) ಮುಂದಿನ ಹಣಕಾಸು ವರ್ಷದ ಕಂದಾಯ ಮತ್ತು ಬಂಡವಾಳ ವೆಚ್ಚ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮತ್ತು 2
ಬಿ. 1. 2. 3 ಮತ್ತು 4
ಸಿ. 3 ಮತ್ತು 4
ಡಿ. 2 ಮತ್ತು 3
ಉತ್ತರ: ಬಿ

87.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆವಿಷ್ಕಾರ ಯೋಜನೆಗೆ ಸಂಬಂಧಿಸಿದ ಘಟಕಾಂಶಗಳನ್ನು ಗುರುತಿಸಿ.

1) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳ ಆವಿಷ್ಕಾರ ಮತ್ತು ನೂತನ ಚಿಂತನೆಗಳಿಗೆ ಉತ್ತೇಜನ ನೀಡಲಾಗುತ್ತದೆ
2) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯದಲ್ಲಿ ಉತ್ಪಾದನೆಯಾಗುತ್ತಿರುವ
ಉತ್ಪನ್ನಗಳ ವಿನ್ಯಾಸಕ್ಕೆ ಸಂಬಂಧಿಸಿ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ
3) ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಸೂಕ್ತ ಅರಿವನ್ನು ಯೋಜನೆಯಡಿ ಮೂಡಿಸಲಾಗುತ್ತದೆ ಕೋಡ್ ಬಳಸಿ ಸರಿ ಉತ್ತರ ಗುರುತಿಸಿ,

ಎ. 1 ಮಾತ್ರ
ಬಿ. 1, 2 ಮತ್ತು 3
ಸಿ. 2 ಮತ್ತು 3
ಡಿ. 1 ಮತ್ತು 2
ಉತ್ತರ: ಬಿ

88.ಕೆಳಗಿನ ಯಾವ ಯೋಜನೆಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳ ಯೋಜನೆಗಳು ಎಂದು ಪರಿಗಣಿಸಬಹುದು?

1) ಖಾದಿ ಉದ್ದಿಮೆ, ಗ್ರಾಮೋದ್ಯಮ ಮತ್ತು ಇತರೆ ಕೆಳಹಂತದ ಕೈಗಾರಿಕೆಗಳಿಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯದ ಕ್ರಮಗಳು
2) ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
3) ಸಾಂಪ್ರದಾಯಿಕ ಕೈಗಾರಿಕೆ ಪುನಶ್ಚೇತನ ನಿಧಿ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1, 2 ಮತ್ತು 3
ಬಿ. 1 ಮತ್ತು 2
ಸಿ. 1 ಮತ್ತು 3
ಡಿ. 2 ಮತ್ತು 3
ಉತ್ತರ: ಎ

89.ಮಾರ್ತಾಂಡ ಸೂರ್ಯ ದೇವಾಲಯಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಮಾರ್ತಾಂಡ ಸೂರ್ಯ ದೇವಾಲಯವನ್ನು
8 ನೇ ಶತಮಾನದಲ್ಲಿ ಕಾರ್ಕೋಟಕ ಸಾಮ್ರಾಜ್ಯದ ದೊರೆ ನಿರ್ಮಿಸಿದನು
2) ಸಂಸ್ಕೃತದಲ್ಲಿ ಸೂರ್ಯನಿಗಿರುವ ಮತ್ತೊಂದು ಹೆಸರು ಮಾರ್ತಾಂಡ
3) ಮಾರ್ತಾಂಡ ಸೂರ್ಯ ದೇವಾಲಯವನ್ನು ಲಲಿತಾದಿತ್ಯ ಮುಕ್ತ ಪೀಡ ನಿರ್ಮಿಸಿದನು

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1, 2 ಮತ್ತು 3
ಬಿ.1 ಮತ್ತು 3
ಸಿ. 2 ಮತ್ತು 3
ಡಿ. 2 ಮಾತ್ರ
ಉತ್ತರ: ಎ

90.ಕಾರ್ಕೋಟಕ ಸಾಮ್ರಾಜ್ಯಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಕಾರ್ಕೋಟಕ ಸಾಮ್ರಾಜ್ಯವನ್ನು ದುರ್ಲಭ ವರ್ಧನ ಸ್ಥಾಪಿಸಿದನು
2) ಲಲಿತಾದಿತ್ಯ ಮುಕ್ತ ಪೀಡ ಕಾರ್ಕೋಟಕ ಸಾಮ್ರಾಜ್ಯದ ಮೂರನೇ ದೊರೆಯಾಗಿ ಅಧಿಕಾರವನ್ನು ಸ್ವೀಕರಿಸಿದನು
3) ಪರಿಹಾಸಪುರ ಕಾರ್ಕೋಟಕ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 3 ಮಾತ್ರ
ಡಿ. 1, 2 ಮತ್ತು 3
ಉತ್ತರ: ಡಿ

91.ಕೆಳಗಿನ ಯಾವ ಸಂಸ್ಥೆಗಳು ಮಾರುಕಟ್ಟೆ ಮೂಲಭೂತ ಸೌಕರ್ಯ ಸಂಸ್ಥೆಗಳ ಸ್ಥಾನಮಾನವನ್ನು ಪಡೆದಿವೆ?

1) ಬಾಂಬೆ ಭದ್ರತಾ ವಿನಿಮಯ ಕೇಂದ್ರ
2) ರಾಷ್ಟ್ರೀಯ ಭದ್ರತಾ ವಿನಿಮಯ ಕೇಂದ್ರ
3) ನ್ಯಾಷನಲ್ ಸೆಕ್ಯುರಿಟೀಸ್‌ ಡಿಪಾಸಿಟರಿ ಲಿ.
4) ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ ಕ್ಲಿಯರಿಂಗ್ ಕಾರ್ಪೊರೇಷನ್

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1, 2, 3 ಮತ್ತು 4
ಬಿ. 1 ಮತ್ತು 3
ಸಿ. 2 ಮತ್ತು 3
ಡಿ. 3 ಮತ್ತು 4
ಉತ್ತರ: ಎ

92.ರಾಷ್ಟ್ರೀಯ ಭದ್ರತಾ ವಿನಿಮಯ ಕೇಂದ್ರಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ರಾಷ್ಟ್ರೀಯ ಭದ್ರತಾ ವಿನಿಮಯ ಕೇಂದ್ರವನ್ನು 1992 ರಲ್ಲಿ ಸ್ಥಾಪಿಸಲಾಯಿತು.
2) ರಾಷ್ಟ್ರೀಯ ಭದ್ರತಾ ವಿನಿಮಯ ಕೇಂದ್ರ, ಭಾರತದ ಮೊಟ್ಟಮೊದಲ ಸ್ವಯಂ ಚಾಲಿತ ವಿದ್ಯುನ್ಮಾನ ಆಧಾರಿತ ಭದ್ರತಾ ವಿನಿಮಯ ಕೇಂದ್ರವೆಂದು ಪರಿಗಣಿಸಬಹುದು.
3) ರಾಷ್ಟ್ರೀಯ ಭದ್ರತಾ ವಿನಿಮಯ ಕೇಂದ್ರದ ಪ್ರಮುಖ ಸೂಚ್ಯಂಕ ನಿಫ್ಟಿ-50 ಎನ್ನಬಹುದು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 3 ಮಾತ್ರ
ಡಿ. 1, 2 ಮತ್ತು 3
ಉತ್ತರ: ಡಿ

93.’ವೈಶಾಖಿ’ ಹಬ್ಬಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ವೈಶಾಖಿ ಹಬ್ಬದ ಇನ್ನೊಂದು ಹೆಸರು ಬೈಸಾಕಿ.
2) ಬೈಸಾಕಿ ಹಬ್ಬವನ್ನು ಹಿಂದೂ ಧರ್ಮದವರು ಮತ್ತು ಸಿಖ್ ಧರ್ಮದವರು ಆಚರಿಸುತ್ತಾರೆ.
3) ಬೈಸಾಕಿ ದಿನದಂದು ಸಿಖ್ ಧರ್ಮ ಗುರು ಗೋವಿಂದ ಸಿಂಗ್ ಕಳಸ ಪಂಥ ಆರಂಭಿಸಿದರು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 3 ಮಾತ್ರ
ಡಿ. 1, 2 ಮತ್ತು 3
ಉತ್ತರ: ಡಿ

94.ಯಾವ ಹಬ್ಬಗಳನ್ನು ಭಾರತದಲ್ಲಿ ಆಚರಿಸುವ ಹೊಸ ವರ್ಷದ ಹಬ್ಬಗಳು ಎನ್ನಬಹುದು?

ಎ. ವೈಶಾಖಿ, ವಿಶು, ಚೈತ್ರ ಶುಕ್ಲದಿ, ನಬಬರ್ಷ
ಬಿ. ಸಂಕ್ರಾಂತಿ, ಶಿವರಾತ್ರಿ, ಬೈಸಾಕಿ, ನಬಬರ್ಷ್
ಸಿ. ಬೈಸಾಕಿ, ವಿಶು, ಚೈತ್ರ ಶುಕ್ಲದಿ, ಬುದ್ಧ ಜಯಂತಿ
ಡಿ. ರಕ್ಷಾಬಂಧನ, ಜನ್ಮಾಷ್ಟಮಿ, ಓಣಂ
ಉತ್ತರ: ಎ

95.ನೇರಳೆ ಕ್ರಾಂತಿ ಅಥವಾ ನಸು ಕೆನ್ನೀಲಿ ಬಣ್ಣದ ಅಭಿಯಾನವನ್ನು ಯಾವ ಸಂಸ್ಥೆಗಳು ಅನುಷ್ಠಾನಕ್ಕೆ ತಂದಿದೆ?

ಎ. ವೈಜ್ಞಾನಿಕ-ಕೈಗಾರಿಕಾ ಸಂಶೋಧನಾ ಮಂಡಳಿ
ಬಿ. ವೈಜ್ಞಾನಿಕ-ತಾಂತ್ರಿಕ ಸಂಶೋಧನಾ ಮಂಡಳಿ
ಸಿ. ತಾಂತ್ರಿಕ ಉದ್ಯಮ ಸಂಶೋಧನೆ ಮಂಡಳಿ
ಡಿ. ತಾಂತ್ರಿಕೇತರ ಸಂಶೋಧನಾ ಮಂಡಳಿ
ಉತ್ತರ:ಎ

96.ಸುವಾಸನೆ ಅಭಿಯಾನಕ್ಕೆ ಸಂಬಂಧಿಸಿ ಸರಿ ಹೇಳಿಕೆಗಳನ್ನು ಗುರುತಿಸಿ.

1) ಸುವಾಸನೆ ಅಭಿಯಾನವನ್ನು ಕೇಂದ್ರ ಸರ್ಕಾರ ಎರಡು ಹಂತಗಳಲ್ಲಿ ಜಾರಿಗೆ ತಂದಿದೆ
2) 1ನೇ ಹಂತದ ಅಭಿಯಾನದಲ್ಲಿ ಯೋಜನೆಯನ್ನು 46 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳ- ಲಾಗಿದ್ದು, 6,000 ಹೆಕ್ಟೇರ್ ಭೂ ಪ್ರದೇಶವನ್ನು ಸುವಾಸನೆ ಅಭಿಯಾನದಡಿ ತರಲಾಯಿತು
3) 2ನೇ ಹಂತದ ಸುವಾಸನೆ ಅಭಿಯಾನವನ್ನು ಫೆಬ್ರುವರಿ 2021 ರಂದು ಜಾರಿಗೆ ತರಲಾಯಿತು.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ.

ಎ. 1, 2 ಮತ್ತು 3
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. 2 ಮತ್ತು 3
ಉತ್ತರ: ಎ

97.ಯಾವ ನಗರಗಳು ನವೋದ್ಯಮ ವಲಯದ ಪ್ರಮುಖ ನಗರಗಳಾಗಿ ಹೊರಹೊಮ್ಮುತ್ತಿದೆ?

1) ಬೆಂಗಳೂರು
2) ಮುಂಬೈ
3) ದೆಹಲಿ
4) ಚೆನ್ನೈ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1, 2 ಮತ್ತು 3
ಬಿ. 2 ಮತ್ತು 3
ಸಿ. 3 ಮತ್ತು 4
ಡಿ. 2 ಮತ್ತು 4
ಉತ್ತರ: ಎ

98) ಕರ್ನಾಟಕ ಸರ್ಕಾರ ನೂತನ ನವೋದ್ಯಮ ನೀತಿಯನ್ನು ಯಾವ ಅವಧಿಗೆ ಜಾರಿಗೆ ತಂದಿದೆ?

ಎ. 2023-2028
ಬಿ. 2022-2027
ಸಿ. 2024-2029
ಡಿ. 2021-2030
ಉತ್ತರ:ಬಿ

99.ಕೆಳಗಿನ ಯಾವ ಸ್ವರೂಪದ ಅನುದಾನಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ?

1) ಶಾಸನೀಯ ಅನುದಾನ
2) ಶಾಸನೇತರ ಅನುದಾನ
3) ವಿವೇಚನ ಅನುದಾನ
4) ಬಡತನ ಮುಕ್ತ ಅನುದಾನ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮತ್ತು 3
ಬಿ. 1 ಮತ್ತು 4
ಸಿ. 3 ಮತ್ತು 4
ಡಿ. 4 ಮಾತ್ರ
ಉತ್ತರ: ಎ

100.ಕೇಂದ್ರ ಮತ್ತು ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರಕ್ಕೆ ಸಂಬಂಧಿಸಿ ಸರಿ ಹೇಳಿಕೆ ಗುರುತಿಸಿ.

1) ಕೇಂದ್ರ ಪಟ್ಟಿಯಲ್ಲಿ ಉಲ್ಲೇಖಿಸಿರುವ 15 ವಿಷಯಗಳ ಮೇಲೆ ಸಂಸತ್ತಿಗೆ ತೆರಿಗೆ ವಿಧಿಸುವ ಅಧಿಕಾರವನ್ನು ನೀಡಲಾಗಿದೆ.
2) ರಾಜ್ಯ ಪಟ್ಟಿಯಲ್ಲಿ ಉಲ್ಲೇಖಿಸಿರುವ 13 ವಿಷಯಗಳ ಮೇಲೆ ರಾಜ್ಯದ ವಿಧಾನ ಮಂಡಲಕ್ಕೆ ತೆರಿಗೆ ವಿಧಿಸುವ ಅಧಿಕಾರವನ್ನು ನೀಡಲಾಗಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಡಿ


ನಾಳೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ ಮಾಡಲಾಗುವುದು. ತಪ್ಪದೇ mastermitra.in ವೆಬ್‌ಸೈಟ್‌ ಗೆ ಭೇಟಿ ನೀಡಿ

1 thought on “ಮಾದರಿ ಪ್ರಶ್ನೆಪತ್ರಿಕೆ – 01 (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ)”

Leave a Comment