ಲೋಕಾಯುಕ್ತ ಟ್ರ್ಯಾಪ್ ಹೇಗೆ ನಡೆಯುತ್ತದೆ?ಯಾವ ಪ್ರಕ್ರಿಯೆಗಳಿರುತ್ತದೆ? ಈ ಕುರಿತು ಒಂದಿಷ್ಟು ಮಾಹಿತಿ.-01

ಲೋಕಾಯುಕ್ತ ಟ್ರ್ಯಾಪ್ ಹೇಗೆ ನಡೆಯುತ್ತದೆ? ಯಾವ ಪ್ರಕ್ರಿಯೆಗಳಿರುತ್ತದೆ? ಈ ಕುರಿತು ಒಂದಿಷ್ಟು ಮಾಹಿತಿ.

1.ನೊಂದ ವ್ಯಕ್ತಿ ಎಂದರೆ, ಲಂಚ ಪಡೆಯುವ ಬೇಡಿಕೆ ಇಟ್ಟಿರುವ ವ್ಯಕ್ತಿಯ ವಿರುದ್ಧ ದೂರು ನೀಡಿದ ವ್ಯಕ್ತಿಯನ್ನು ಲೋಕಾಯುಕ್ತ ಕಾಯ್ದೆಯನ್ವಯ “ದೂರುದಾರ” ಎನ್ನಲಾಗುತ್ತದೆ.

2.ಪ್ರಕರಣದಲ್ಲಿ ಆರೋಪಿತ ನೌಕರರನ್ನು ಲೋಕಾಯುಕ್ತ ಕಾಯ್ದೆಯನ್ವಯ “ಎದುರುದಾರ” ಎಂದು ಕರೆಯಲಾಗುತ್ತದೆ.

3.ಪ್ರಕರಣವನ್ನು ತನಿಖೆ ಮಾಡುವವರನ್ನು ತನಿಖಾಧಿಕಾರಿ ಎಂದು ಕರೆಯಲಾಗುತ್ತದೆ. ಸದರಯವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಡಿ ಕರ್ತವ್ಯ ನಿರ್ವಹಿಸಲಾಗುತ್ತದೆ.

4.ಲಂಚದ ಹಣಕ್ಕೆ ಬೇಡಿಕೆ ಇಡುವುದು/ತೆಗೆದುಕೊಳ್ಳುವುದು ಭ್ರಷ್ಟಾಚಾರದ ವ್ಯಾಖ್ಯಾನಗಳಡಿ ಬರುತ್ತದೆ.

5.ಸಾಮಾನ್ಯವಾಗಿ ದೂರುದಾರ, ಎದುರುದಾರನ ವಿರುದ್ಧ ದಾಖಲೆ ಸಹಿತ (ವಾಯ್ಸ್ ರೆಕಾರ್ಡ್ ಅಥವಾ ಬ್ಯಾಂಕ್‌ಗೆ ಪಾವತಿ ಮಾಡಿದ ಹಣದ ಕುರಿತು) ಲೋಕಾಯುಕ್ತ ಕಛೇರಿಯಲ್ಲಿ ದೂರು ಸಲ್ಲಿಸಲಾಗುತ್ತದೆ.

6.ಸದರಿ ದೂರು ಅರ್ಜಿಯ ದಾಖಲೆಗಳನ್ವಯ ದೂರಿನ ಮೇರೆಗೆ ಮೊಕದ್ದಮೆಯನ್ನು ಪಿ.ಸಿ.ಕಾಯ್ದೆ 1988 ಕಲಂ 7 ರನ್ವಯ ಪ್ರಥಮ ವರ್ತಮಾನ ವರದಿ ದಾಖಲಾಗುತ್ತದೆ.

7.ತನಿಖಾಧಿಕಾರಿಗಳು ಪ್ರಕರಣಕ್ಕಾಗಿ ಪಂಚರನ್ನು ಬರಮಾಡಿಕೊಂಡು ದೂರುದಾರರನ್ನು ಪರಿಚಯಿಸಿ, ದೂರಿನ ವಿಚಾರವನ್ನು ತಿಳಿಸುತ್ತಾರೆ.

8.ನಂತರ, ಎದುರುದಾರರು (ಆರೋಪಿತ ನೌಕರ)ನ ಬೇಡಿಕೆಯಂತೆ ಅವನಿಗೆ ಕೊಡುವ ಲಂಚ ಹಣವನ್ನು ದೂರುದಾರನಿಂದ ತನಿಖಾಧಿಕಾರಿಗಳು ಪಂಚರಿಂದ ನೋಟಿನ (ಮೌಲ್ಯ & ಸಂಖ್ಯೆ) ವಿವರಗಳನ್ನು ನಮೂಸಿಕೊಳ್ಳಲಾಗುತ್ತದೆ.

9.ನಂತರ ತನಿಖಾಧಿಕಾರಿಯ ಸೂಚನೆ ಮೇರೆಗೆ ಪಂಚರು, ಪೋಲೀಸ್ ಸಿಬ್ಬಂದಿಯಿಂದ ‘ಫಿನಾಪ್ರಿಲಿನ್ ಪೌಡರ್* ಸಿಂಪಡಿಸಿದ ಹಣವನ್ನು ಪರಿಶೀಲಿಸಿ ದೂರುದಾರರಿಗೆ ನೀಡುತ್ತಾರೆ.

10.ದೂರರ್ಜಿ ಪರಿಶೀಲಿಸಿದಾಗ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅದನ್ನು ಪಡೆದು, ದುರ್ನಡತೆ ತೋರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದರೆ

ಕರ್ನಾಟಕ ಲೋಕಾಯುಕ್ತ ಕಾಯ್ದೆ 1984, ಕಲಂ 7(2) ರನ್ವಯ ಗೌರವಾನ್ವಿತ ಉಪಲೋಕಾಯುಕ್ತರು ಸ್ವಯಂ ಪ್ರೇರಿತ ತನಿಖೆಯನ್ನು ಕೊಳ್ಳಬಹುದಾಗಿದೆ.

11.ನಂತರ ತನಿಖಾಧಿಕಾರಿ ದೂರುದಾರರಿಗೆ ಸೂಚನೆ ನೀಡಿ, ಎದುರುದಾರರು ಲಂಚದ ಹಣವನ್ನು ಕೇಳಿ ಪಡೆದರೆ ದೂರುದಾರರು ಮೊದಲೇ ನಿಗಧಿಯಾದಂತೆ ಒಂದು ಸನ್ನೆ ನೀಡುವಂತೆ ಹಾಗೂ ಪಂಚರಲ್ಲಿ ಒಬ್ಬರನ್ನು ದೂರುದಾರರವರ ಜೊತೆಯಿದ್ದು, ಘಟನೆಯನ್ನು ಗಮನಿಸಬೇಕೆಂದು ಸೂಚಿಸಿರುತ್ತಾರೆ.

12.ತನಿಖಾಧಿಕಾರಿಯವರು ದೂರುದಾರರಿಗೆ ಒಂದು ವಾಯ್ಸ್ ರೆಕಾರ್ಡನ್ನು ಕೊಟ್ಟು ಅದನ್ನು ಉಪಯೋಗಿಸುವ ವಿಧಾನವನ್ನು ತಿಳಿಸಿರುತ್ತಾರೆ.

13.ಈ ಸಂಬಂಧವಾಗಿ ತನಿಖಾಧಿಕಾರಿಯು ಒಂದು ದಿನ ಪ್ರಾಯೋಗಿಕ ಪಂಚನಾಮೆ ಪ್ರಕ್ರಿಯೆ ಜರುಗಿಸಿರುತ್ತಾರೆ.

14.ತನಿಖಾಧಿಕಾರಿಯವರು ಪಂಚರನ್ನು, ದೂರುದಾರರನ್ನು ಹಾಗೂ ಸಿಬ್ಬಂದಿಯವರನ್ನು ಕಾರ್ಯಾಚರಣೆಗಾಗಿ ಇಲಾಖಾ ವಾಹನದಲ್ಲಿ ಕರೆದುಕೊಂಡು ಎದುರುದಾರರ ಬಳಿಗೆ ದೂರುದಾರರನ್ನು ಹಾಗೂ (ನೆರಳು ನಾಕ್ರಿ) ಪಂಚರ ಎದುರುದಾರರನ್ನು ಭೇಟಿಮಾಡಲು ಮತ್ತೊಮ್ಮೆ ಸೂಚನೆಯನ್ನು ನೀಡಿ ಕಳುಹಿಸಿರುತ್ತಾರೆ.

15.ಈ ಸಂದರ್ಭದಲ್ಲಿ ಎದುರುದಾರ (ಆರೋಪಿತರು) ದೂರುದಾರರಿಂದ ಫಿನಾಪ್ತಿಲೀನ ಲೇಪಿತ ಲಂಚದ ಹಣವನ್ನು ಲಂಚದ ಪಡೆದುಕೊಂಡು, ಯಾವುದೋ ವಸ್ತುವಿನಲ್ಲೋ ಅಥವಾ ಬೇರೆ ಕಡೆ ಭದ್ರಪಡಿಸಿದಾಗ,

16.ತಕ್ಷಣ ದೂರುದಾರರು ತನಿಖಾಧಿಕಾರಿಗೆ ನಿಗದಿತ ಸೂಚನೆಯನ್ನು ಕೊಟ್ಟಾಗ, ಸೂಚನೆಯನ್ನು ಅನುಸರಿಸಿ ತನಿಖಾಧಿಕಾರಿಯವರು ಸ್ಥಳಕ್ಕೆ ಬರುತ್ತಾರೆ.

17.ದೂರುದಾರರು ಎದುರುದಾರರನ್ನು ತೋರಿಸಿಕೊಡುತ್ತಾರೆ.

18.ತನಿಖಾಧಿಕಾರಿಯು ಎದುರುದಾರರಿಗೆ ತನ್ನನ್ನು ಪರಿಚಯಿಸಿಕೊಂಡು, ಅವರ ವಿರುದ್ಧ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಸಿ, ತನಿಖೆಯನ್ನು ಪ್ರಾರಂಭಿಸಿರುತ್ತಾರೆ.

19.ತನಿಖಾಧಿಕಾರಿಯ ಸೂಚನೆ ಮೇರೆಗೆ, ಸಿಬ್ಬಂದಿಯು ಎದುರುದಾರರ (ಅರೋಪಿತರ) ಎರಡೂ ಕೈ ಬೆರಳುಗಳನ್ನು ಪ್ರತ್ಯೇಕವಾಗಿ ಸೋಡಿಯಂ ಕಾರ್ಬೊನೇಟ್ ದ್ರಾವಣದಿಂದ ತೊಳೆಯಲಾಗುತ್ತದೆ. ಹೀಗೆ ತೊಳೆದಾಗ ಆ ದ್ರಾವಣವು ತಿಳಿ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ.

20.ತನಿಖಾಧಿಕಾರಿಯವರ ಸೂಚನೆ ಮೇರೆಗೆ, ಸದರಿ ಹಣವನ್ನು ಪಂಚರುಗಳು ಪರಿಶೀಲಿಸಿ, ಹಣದ ಮೌಲ್ಯ ಮತ್ತು ನಂಬರುಗಳನ್ನು ಪ್ರಾಯೋಗಿಕ ವಂಚನಾಮೆ ವೇಳೆಯಲ್ಲಿ ನಮೂದು ಮಾಡಿದ್ದ ನೋಟುಗಳ ಮೌಲ್ಯ ಮತ್ತು ನಂಬರುಗಳಿಗೆ ತಾಳೆ ಮಾಡಿ ಖಾತ್ರಿಪಡಿಸಿದ ನಂತರ ತನಿಖಾಧಿಕಾರಿಯು ಸದರಿ ಹಣವನ್ನು ಅಮಾನತ್ತುಪಡಿಸಿಕೊಳ್ಳುತ್ತಾರೆ.

21.ನಂತರ ತನಿಖಾಧಿಕಾರಿಯ ಸೂಚನೆ ಮೇರೆಗೆ, ಸಿಬ್ಬಂದಿಯು ಸದರಿ ಲಂಚದ ಹಣವನ್ನು ಭದ್ರಪಡಿಸಿದ ವಸ್ತುವಿನ ಜಾಗವನ್ನು ಹತ್ತಿಯಿಂದ ಒರೆಸಿ, ಸದರಿ ಹತ್ತಿಯನ್ನು ನೋಡಿಯಂ ಕಾರ್ಬೋನೇಟ್ ದ್ರಾವಣದಿಂದ ತೊಳೆಸಲಾಗುತ್ತದೆ. ಆ ದ್ರಾವಣವು ತಿಳಿ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ.

22.ನಂತರ ತನಿಖಾಧಿಕಾರಿಯು ಎದುರುದಾರರನ್ನು ದೂರುದಾರರಿಂದ ಪಡೆದ ಲಂಚದ ಹಣದ ಬಗ್ಗೆ ಸಮಜಾಯಿಷಿಕೆಯನ್ನು ಕೇಳಲಾಗುತ್ತದೆ.

23.ಎದುರುದಾರರು ತನ್ನ ಸಮಜಾಯಿಷಿಕೆಯಲ್ಲಿ ತನ್ನ ಅಭಿಪ್ರಾಯವನ್ನು ನೀಡಬೇಕಾಗುತ್ತದೆ.

24.ತನಿಖಾಧಿಕಾರಿಯು ಎದುರುದಾರರ ಸಮಜಾಯಿಷಿಕೆಯ ಬಗ್ಗೆ ದೂರುದಾರರ ಅಭಿಪ್ರಾಯ ಕೇಳಿದಾಗ, ಎದುರುದಾರರು ಈ ದಿನ ಲಂಚದ ಹಣವನ್ನು ಕೇಳಿ ಪಡೆದರು ಎಂದು ದೂರುದಾರರು ಹೇಳಿರುತ್ತಾರೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಘಟನಾವಳಿಗಳನ್ನು ಚಿತ್ರೀಕರಿಸಿರುತ್ತಾರೆ ಹಾಗೂ ಎದುರುದಾರರನ್ನು ಅಂದೇ ದಸ್ತಗಿರಿ ಮಾಡಲಾಗುತ್ತದೆ.

25.ಈ ಸಂಬಂಧವಾಗಿ ತನಿಖಾಧಿಕಾರಿಯವರು ಟ್ರಾಪ್ ಪಂಚನಾಮೆಯನ್ನು ದಿನಾಂಕ ಮತ್ತು ಸಮಯ ಸಹಿತವಾಗಿ ಬರೆಯಲಾಗುತ್ತದೆ.

26.ಸಿಡಿಗಳಲ್ಲಿ ದಾಖಲಾದ ಸಂಭಾಷಣೆ ದೂರುದಾರರ ಹಾಗೂ ಎದುರುದಾರರ ಹಾಗೂ ಅವರ ಮಾದರಿ ಧ್ವನಿಗೆ, ಹೋಲಿಕೆ ಇರುವ ಬಗ್ಗೆ, ವರದಿಯನ್ನು ಕೋರಿ ತನಿಖಾಧಿಕಾರಿಯವರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

27.ರಾಸಾಯನಿಕ ತಜ್ಞರ ಪರೀಕ್ಷಾ ವರದಿಯಲ್ಲಿ ಎದುರುದಾರರಿಂದ ತನಿಖಾಧಿಕಾರಿಗಳು ಸಂಗ್ರಹಿಸಿದ ಮುದ್ದೆ ಮಾಲುಗಳಲ್ಲಿ ಫಿನಾಪ್ತಿಲೀನ್ ಅಂಶ ಇರುವುದು ಧೃಡಪಡಿಸಿಕೊಳ್ಳಲಾಗುತ್ತದೆ.

28.ನಂತರ ತನಿಖೆಯ ಸಂದರ್ಭದಲ್ಲಿ ಎದುರುದಾರರು ನೀಡುವ ಸಮಜಾಯಿಷಿಕೆಯನ್ನು ಈ ಹಂತದಲ್ಲಿ ಪರಿಗಣಿಸಬಹುದೇ ಅಥವಾ ಇಲ್ಲವೇ ಎಂದು ಪರಿಶೀಲಿಸಲಾಗುತ್ತದೆ.

29.ಎದುರುದಾರರನ್ನು ವಿಚಾರಣೆ ಮಾಡದೇ ಇರಲು ಸೂಕ್ತ ಕಾರಣಗಳು ಕಂಡು ಬಂದಿರಲಿಲ್ಲವೆಂದರೆ, ಹಾಗೂ ಯಾವುದೇ ದಾಖಲೆಗಳನ್ನು ಹಾಜರುಪಡಿಸಿರಲಿಲ್ಲವೆಂದರೆ,

30.ಸಾಕ್ಷಿದಾರರ ಹೇಳಿಕೆಗಳು, ದೂರು ಅರ್ಜಿ ಹಾಗೂ ತನಿಖಾಧಿಕಾರಗಳು ಸಂಗ್ರಹಿಸಿದ ದಾಖಲೆ ಮತ್ತು ಇತರೆ ಅಂಶಗಳು ಮೇಲ್ನೋಟಕ್ಕೆ ಕಂಡುಬಂದರೆ

31.ಆರೋಪಿತ ಅಧಿಕಾರಿಯ ವಿರುದ್ಧ ನಡವಳಿಯನ್ನು ಕೈಬಿಡಲು ಸೂಕ್ತ ಸಮಂಜನ / ಸಮಾಧಾನಕರ ಕಾರಣ ಇಲ್ಲವೆಂದು ಅಭಿಪ್ರಾಯ ಬಂದರೆ.

32.ಸರ್ಕಾರಿ/ಸಾರ್ವಜನಿಕ ನೌಕರರಾಗಿ ಪರಿಪೂರ್ಣ ಪ್ರಾಮಾಣಿಕತೆ, ಸಂಪೂರ್ಣ ಕರ್ತವ್ಯ ನಿಷ್ಠೆ ತೋರಿಸದೆ, ಸರ್ಕಾರಿ ಸೇವಕರಿಗೆ ತರವಲ್ಲದ

ರೀತಿಯಲ್ಲಿ ನಡೆದುಕೊಂಡು ದುರ್ವತನೆ / ದುರ್ನಡತೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಕರ್ನಾಟಕ ಲೋಕಾಯುಕ್ತ ಕಾಯಿದೆ ಕಲಂ

12(3) ರ ಅಡಿ ಪ್ರದತ್ತವಾದ ಅಧಿಕಾರದಡಿ ಆರೋಪಿತ ಅಧಿಕಾರಿ (ಎದುರುದಾರ) ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘನೆಗಾಗಿ ಶಿಸ್ತು ಕ್ರಮ ಕೈಗೊಳ್ಳಲು ಸಕ್ರಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ.

33.ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ಕಲಂ 12(4) ರ ಪ್ರಕಾರ ಅವಾದಿತ ನೌಕರನ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿಯ ಮೇಲೆ

ವರದಿಯ ಮೇಲೆ ಏನು ಕ್ರಮ ಕೈಗೊಂಡಿದೆ ಅಥವಾ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡವಂತೆ ಕೋರಲಾಗುತ್ತದೆ.

34.ಆರೋಪಿತ ಅಧಿಕಾರಿ (ಎದುರುದಾರ) ವಿರುದ್ಧ ಇಲಾಖಾ ವಿಚಾರಣೆ ಮಾಡಲು, ಕರ್ನಾಟಕ ನಾಗರೀಕ ಸೇವಾ (ಪರ್ಗೀಕರಣ, ನಿಯಂತ್ರಣ ಮತ್ತು

ಮೇಲ್ಮನವಿ) ನಿಯಮಾವಳಿ 1957 ರ ನಿಯಮ 14(ಎ) ರಡಿ ಉಪಲೋಕಾಯುಕ್ತರಿಗೆ ವಹಿಸಬೇಕೆಂದು ಕೋರಲಾಗುತ್ತದೆ.

35.ನಂತರ ಸಕ್ಷಮ ಪ್ರಾಧಿಕಾರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ನಿಯಮ 14(ಎ)ರಡಿ ಉಪಲೋಕಾಯುಕ್ತರಿಗೆ ಪ್ರಕರಣವನ್ನು ತನಿಖೆಗಾಗಿ ವಹಿಸಲಾಗುತ್ತದೆ.

ಕೃಪೆ:ಶಶಿಕುಮಾರ್ ಸಿ.ಎಂ. ಸಚಿವಾಲಯ

____,,,,,,,____

Leave a Comment