ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆ ಗ್ರೂಪ್-ಸಿ ಯಿಂದ ಗ್ರೂಪ್-ಬಿ ಆಗಿ ಮಾರ್ಪಾಡು ಮಾಡಿ ಆದೇಶ-2025
ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆ ಗ್ರೂಪ್-ಸಿ ಯಿಂದ ಗ್ರೂಪ್-ಬಿ ಆಗಿ ಮಾರ್ಪಾಡು ಮಾಡಿ ಆದೇಶ-2025:
ಪ್ರಸ್ತಾವನೆ:-
ಸರ್ಕಾರದ ಆದೇಶ ಸಂಖ್ಯೆ: ಇಡಿ 36 ಮಾಹಿತಿ 2014 ದಿನಾಂಕ: 25/08/2015 ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಒಟ್ಟು 70 ಆಕೌಂಟ್ ಅಧೀಕ್ಷಕರ ಹುದ್ದೆಗಳನ್ನು ಹೊಸದಾಗಿ ಸೃಜಿಸಿ, ಈ ಹುದ್ದೆಗಳನ್ನು ಗ್ರೂಪ್-ಸಿ ಹುದ್ದೆಗಳೆಂದು ಉಲ್ಲೇಖಿಸಲಾಗಿದೆ. ಸದರಿ ಆದೇಶದಲ್ಲಿ, ಈ ಹುದ್ದೆಗಳನ್ನು ಗ್ರೂಪ್-ಸಿ ಎಂದು ನಮೂದಿಸಿರುವುದನ್ನು ಮಾರ್ಪಡಿಸಿ, ಗ್ರೂಪ್ ಬಿ ಹುದ್ದೆಯೆಂದು ಪರಿಗಣಿಸುವಂತೆ ಈ ಕೆಳಕಂಡ ಅಂಶಗಳೊಂದಿಗೆ ಮೇಲೆ ಓದಲಾದ ಪತ್ರದಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕಾಧೀಕ್ಷಕರ ಹುದ್ದೆಯ ಕುರಿತಂತೆ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಆರ್ಥಿಕ 219 ರಾಲಪ 94 ದಿನಾಂಕ:05/12/1994ರಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧೀಕ್ಷಕರ ಹುದ್ದೆಯು ಗ್ರೂಪ್ ‘ಬಿ’ ಅಥವಾ ‘ಸಿ’ ಎಂಬ ಬಗ್ಗೆ ಸ್ಪಷ್ಟಿಕರಣ ನೀಡುವಾಗ ಲೆಕ್ಕಾಧೀಕ್ಷಕರ ಹುದ್ದೆ ‘ಬಿ’ ಗುಂಪಿಗೆ ಬರುವುದೆಂದು ತಿಳಿಸಲಾಗಿದೆ.
ಕರ್ನಾಟಕ ಸಿವಿಲ್ ಸೇವಾ ನಿಯಮಗಳು(ತಿದ್ದುಪಡಿ) ನಿಯಮಗಳು 2018ರ ಕುರಿತಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 27 ಸೇಇವಿ 2018 ದಿನಾಂಕ:08/04/2019ರಲ್ಲಿ ಸಮೂಹ ಜಿ ಯು ರೂ 40900-78200ನ್ನು ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು ಎಂಬುದಾಗಿ ಇರುತ್ತದೆ. ಲೆಕ್ಕಾಧೀಕ್ಷಕ ಹುದ್ದೆಯ ವೇತನ ಶ್ರೇಣಿ ರೂ 40900-78200 ಆಗಿರುತ್ತದೆ.
ಶ್ರೀ ವಸಂತ ರಾವ್ ಲೆಕ್ಕಾಧೀಕ್ಷಕರು ಎಂಬುವವರ ಜಿಐಎಸ್ ಕಟಾವಣೆ ಬಗ್ಗೆ ಅವರ ಆಯುಕ್ತರು ಧಾರವಾಡ ರವರಿಗೆ ಹೊರಡಿಸಲಾಗಿರುವ ಸರ್ಕಾರದ ಪತ್ರ ಸಂಖ್ಯೆ ಇಡಿ 350 ಎಲ್‌ಐಜಿ 2011 ದಿನಾಂಕ 08/06/2011ರಲ್ಲಿ ಸದರಿಯವರನ್ನು ಬಿ ಗುಂಪಿನ ವೃಂದದಲ್ಲಿ ಪರಿಗಣಿಸಿ ಸಾಮೂಹಿಕ ವಿಮಾ ಯೋಜನೆ ವಂತಿಗೆ ರೂ 180/- ಕಟಾವಣೆ ಮಾಡಲು 23/05/2000ದ ಅಧಿಸೂಚನೆಯಂತೆ ಕ್ರಮ ವಹಿಸಲು ತಿಳಿಸಲಾಗಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ:FD 232 SAD 2013 ದಿನಾಂಕ: 27/06/2015 ರಲ್ಲಿ ರಾಜ್ಯ ಲೆಕ್ಕ ಪತ್ರ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಕಟಿಸಲಾಗಿದ್ದು, ಅದರಲ್ಲಿ ವೃಂದ ಸಂಖ್ಯೆ (7) ಲೆಕ್ಕಾಧೀಕ್ಷಕರ ಹುದ್ದೆಯನ್ನು ಗುಂಪು ‘ಬಿ’ ಎಂದು ಪ್ರಕಟಿಸಲಾಗಿರುತ್ತದೆ.
ಆದರೆ, ಶಾಲಾ ಶಿಕ್ಷಣ ಇಲಾಖೆಯ ವೃಂದ ನಿಯಮಗಳಲ್ಲಿ ಯಾವುದೇ ಹುದ್ದೆಗೆ ಸಂಬಂಧಪಟ್ಟಂತೆಯೂ ವರ್ಗೀಕರಣ ನಮೂದಾಗಿರುವುದಿಲ್ಲ. ಅಲ್ಲದೇ ಪೂರ್ವದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ಮತ್ತು ರಾಜ್ಯ ಲೆಕ್ಕಪತ್ರ ಇಲಾಖೆ ಲೆಕ್ಕಾಧೀಕ್ಷಕರ ಹುದ್ದೆಗೆ ಬೇರೆ ಬೇರೆ ವೇತನ ಶ್ರೇಣಿಗಳಿದ್ದು 2000 ನೇ ವರ್ಷದಲ್ಲಿ, ಸರ್ಕಾರದ ಆದೇಶ ಸಂಖ್ಯೆ:ಎಫ್‌ಡಿ SRP 2000 ದಿನಾಂಕ:02-03-2000 ರಲ್ಲಿ ಸಮಾನಾಂತರ ವೇತನ ಶ್ರೇಣಿಯನ್ನು ನೀಡಲಾಗಿದೆ.
ಈಗಾಗಲೇ ವೇತನ ಶ್ರೇಣಿ ರೂ 40,900- 78,200 ಬಿ- ವೃಂದಕ್ಕೆ ಒಳಪಟ್ಟಿರುವುದಾಗಿ ವರದಿ ನೀಡಿಲಾಗಿರುತ್ತದೆ. ಲೆಕ್ಕಾದೀಕ್ಷಕರ ಹುದ್ದೆಯ ವೇತನ ಶ್ರೇಣಿಯು ರೂ. 40,900-78.200 ಇದ್ದು, 40,900-78,200 ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳು ಗ್ರೂಪ್ – ಬಿ ವೇತನ ಶೇಣಿಗಳಾಗಿವೆ.
ಮೇಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರದ ಆದೇಶ ಸಂಖ್ಯೆ: ಇಡಿ 36 ಮಾಹಿತಿ 2014 ದಿನಾಂಕ: 25/08/2015 ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಯನ್ನು ಗ್ರೂಪ್-ಸಿ ಎಂದು ನಮೂದಿಸಿರುವುದನ್ನು ಮಾರ್ಪಡಿಸಿ, ಗ್ರೂಪ್ ಬಿ ಹುದ್ದೆಯೆಂದು(ಹಿಂದಿನ ವೇತನ ಶ್ರೇಣಿ ರೂ 40,900- 78,200)(ಪ್ರಸ್ತುತ ವೇತನ ಶ್ರೇಣಿ ರೂ65,950-1,24,900) ಎಂದು ಆದೇಶಿಸಲು ನಿರ್ಣಯಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಇಪಿ 110 ಡಿಪಿಐ 2023 ಬೆಂಗಳೂರು, ದಿನಾಂಕ: 17/04/2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಇಡಿ 36 ಮಾಹಿತಿ 2014 ದಿನಾಂಕ: 25/08/2015 ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಯನ್ನು “ಗ್ರೂಪ್-ಸಿ” ಎಂದು ನಮೂದಿಸಿರುವುದನ್ನು ಮಾರ್ಪಡಿಸಿ, ಗ್ರೂಪ್ – ಬಿ” ಹುದ್ದೆಯೆಂದು(ಪ್ರಸ್ತುತ ವೇತನ ಶ್ರೇಣಿ ರೂ65,950-1,24,900) ಎಂದು ಆದೇಶಿಸಿದೆ.
ಈ ಆದೇಶವನ್ನು ಸಂದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಟಿಪ್ಪಣಿ ಸಂಖ್ಯೆ:ಸಂವ್ಯಶಾಇ 66 ಅಶಾರ 2024 ದಿನಾಂಕ: 16/03/2024 ರಲ್ಲಿ, ದಿನಾಂಕ:15/03/2024ರಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಟಿಪ್ಪಣಿ ಸಂಖ್ಯೆ:DPAR/98/SRD/2024 ದಿನಾಂಕ: 27/05/2024ರಲ್ಲಿ ಮತ್ತು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ:ಆಇ 264 ವೆಚ್ಚ-8 2024 ದಿನಾಂಕ:09/01/2025 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.


