ಶೈಕ್ಷಣಿಕ ಸಹಾಯಧನ-2024: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ: ಅರ್ಜಿ ದಿನಾಂಕ ವಿಸ್ತರಣೆ.
ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, 2023-24 ಮತ್ತು 2024-25ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಮಕ್ಕಳ ಅರ್ಜಿಗಳನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಮೂಲಕ ಸಲ್ಲಿಸಲು ಡಿಸೆಂಬರ್ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ಇಲಾಖೆಯ ಜಾಲತಾಣ https://kbocwwb.karnataka.gov.in/register-id ನಲ್ಲಿ ರಿಜಿಸ್ಟರ್ ನಂಬರ್ ಹಾಗೂ ರೆಫರೆನ್ಸ್ ನಂಬರ್ ನಮೂದಿಸಿ ಕಡ್ಡಾಯವಾಗಿ ಡಿಸೆಂಬರ್ 31ರ ರೊಳಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲು ಸೂಚಿಸಿದೆ.
ಅಲ್ಲದೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಈ ಹಿಂದೆ ಪ್ರಿ-ಮೆಟ್ರಿಕ್ (1 ರಿಂದ 10ನೇ ತರಗತಿ) ತರಗತಿಗಳಲ್ಲಿ ಶೈಕ್ಷಣಿಕ ಧನಸಹಾಯಕ್ಕಾಗಿ ಎಸ್.ಎಸ್.ಪಿ ತಂತ್ರಾಂಶದ ಮೂಲಕ ಕರ್ನಾಟಕ ಸರ್ಕಾರದ ಯಾವುದಾದರೂ ಇಲಾಖೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ಮುಂದಿನ ವರ್ಷ ಸ್ವಯಂ ಚಾಲಿತ ನವೀಕರಣದ ಮೂಲಕ SSP ತಂತ್ರಾಂಶದಲ್ಲಿ ಸ್ವೀಕರಿಸುವುದರಿಂದ ಪುನಃ ಪ್ರೀ -ಮೆಟ್ರಿಕ್ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.!
ಹೆಚ್ಚಿನ ಮಾಹಿತಿಗಾಗಿ – CLICK HERE