2024-25ನೇ ಸಾಲಿನ ಬಿ.ಇಡಿ ಕೋರ್ಸಿಗೆ ದಾಖಲಾತಿ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ದಾಖಲಾತಿಗೆ ಸಂಬಂಧಪಟ್ಟಂತೆ ಸರ್ಕಾರಿ ಕೋಟಾದ ಸೀಟುಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಭರ್ತಿ ಮಾಡುವ ಸಂಬಂಧ ದಿನಾಂಕ:15/10/2024 ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಬಿ.ಇಡಿ ಕೋರ್ಸಿಗೆ ದಾಖಲಾತಿಗಾಗಿ ಆನ್‌ಲೈನ್ ಮೂಲಕ ಅಭ್ಯರ್ಥಿಗಳಿಂದ ಸ್ವೀಕರಿಸಲಾಗುತ್ತಿದ್ದು, ಅಭ್ಯರ್ಥಿಗಳ ಮೂಲದಾಖಲಾತಿಗಳ ಪರಿಶೀಲನೆ, ಮಾಹಿತಿಗಳನ್ನು ಇಂದೀಕರಿಸುವುದು, ಶುಲ್ಕ ಪಾವತಿ, ಪ್ರವೇಶಾತಿ ಪತ್ರ ವಿತರಣೆ ಇತ್ಯಾದಿ ದಾಖಲಾತಿ ಪ್ರಕ್ರಿಯೆ ತಮ್ಮ ಹಂತದಲ್ಲಿಯೇ ಆಗಬೇಕಾಗಿರುವುದರಿಂದ, ಇದಕ್ಕೆ ಅವಶ್ಯವಿರುವ ಗಣಕಯಂತ್ರ ಮತ್ತು ಅಂತರ್ಜಾಲ ಸೌಲಭ್ಯ ಹಾಗೂ ಪೂರಕವಾದ ಎಲ್ಲ ವ್ಯವಸ್ಥೆಯನ್ನು ತಮ್ಮ ಹಂತದಲ್ಲಿ ಮಾಡಿಕೊಳ್ಳಬೇಕಾಗಿರುತ್ತದೆ.
ಆದ್ದರಿಂದ ಈ ಎಲ್ಲ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಲು ಒಬ್ಬ ಅನುಭವವುಳ್ಳ ಹಿರಿಯ ಉಪನ್ಯಾಸಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅವರ ಹೆಸರು ಹಾಗೂ ಅವರೊಂದಿಗೆ ಸಹಕರಿಸಲು ಗ್ರೂಪ್ ‘ಬಿ’ ಗಿಂತ ಕಡಿಮೆ ಶ್ರೇಣಿ ಇಲ್ಲದ ನಾಲ್ಕು ಅಧಿಕಾರಿಗಳ ತಂಡ ರಚಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಹಾಗೂ ಒಬ್ಬ ಲಿಪಿಕ ಸಿಬ್ಬಂದಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ದಿನಾಂಕ:01/10/2024 ರೊಳಗೆ ಸಿ.ಎ.ಸಿಗೆ ಕಳುಹಿಸಲು ತಿಳಿಸಿದ ಬಗ್ಗೆ.
ಹೆಚ್ಚಿನ ಮಾಹಿತಿಗಾಗಿ- CLICK HERE