2024-25ನೇ ಸಾಲಿನ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅವಶ್ಯಕ / ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಮರುಹೊಂದಾಣಿಕೆ ಮಾಡುವ ಕುರಿತು.

2024-25ನೇ ಸಾಲಿನ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅವಶ್ಯಕ / ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಮರುಹೊಂದಾಣಿಕೆ ಮಾಡುವ ಕುರಿತು. ಕೊಷ್ಟಕ ಇಲ್ಲಿದೆ ನೋಡಿ

2024-25ನೇ ಸಾಲಿನ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅವಶ್ಯಕ / ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಮರುಹೊಂದಾಣಿಕೆ ಮಾಡುವ ಕುರಿತು. ಕೊಷ್ಟಕ ಇಲ್ಲಿದೆ ನೋಡಿ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅವಶ್ಯಕ/ಹೆಚ್ಚುವರಿ ಹುದ್ದೆಗಳನ್ನು ಗುರುತಿಸಿ ಮರುಹೊಂದಾಣಿಕೆ ಮಾಡುವ ಕುರಿತು ಉಲ್ಲೇಖ (2) ರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 ಗಳ ನಿಯಮ (4) ರಂತೆ ಶಿಕ್ಷಕರ ಸಮರ್ಪಕ ಮರುಹಂಚಿಕೆ ಪ್ರಕ್ರಿಯೆ ಪರ್ಯಾಯ ವರ್ಷವೂ ಮಂಜೂರಾದ ಹುದ್ದೆಗಳು ಮತ್ತು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ರಾಜ್ಯ ಸರ್ಕಾರ ಕಾಲ-ಕಾಲಕ್ಕೆ ನಿಗದಿಪಡಿಸಿದ ಶಿಷ್ಯ-ಶಿಕ್ಷಕ ಅನುಪಾತದ ಅಧಾರದ ಮೇಲೆ ಸಮರ್ಪಕವಾಗಿ ಮರುಹಂಚಿಕೆ ಮಾಡಲು ಸೂಚಿಸಿರುತ್ತಾರೆ.

ಉಲ್ಲೇಖ (4) ರಲ್ಲಿ ಮಂಜೂರಾದ ಒಟ್ಟು ವೃಂದ ಬಲ 52360 ಹುದ್ದೆಗಳಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮಕ್ಕಳ ಹಾಗೂ ಶಿಕ್ಷಕರ ಅನುಪಾತಕ್ಕನುಗುಣವಾಗಿ ಎಸ್.ಎ.ಟಿ.ಎಸ್ ತಂತ್ರಾಂಶದ ಆಧಾರದ ಮೇಲೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ವೃಂದ ಬಲದ ಜಿಲ್ಲಾವಾರು ಹಂಚಿಕೆ ಮಾಡಬೇಕಾಗಿರುವ ನಿರ್ವಹಣೆಯ ಅಧಿಕಾರವನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಅಧಿಕಾರ ಪ್ರತ್ಯಾಯೋಜಿಸಿ ಆದೇಶಿಸಿರುತ್ತಾರೆ.

ಉಲ್ಲೇಖ (5) ರಸ್ತೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಸಾಧಿಸುವ ನಿಟ್ಟಿನಲ್ಲಿ ಹೆಚ್ಚುವರಿ ಇರುವ ಶಿಕ್ಷಕರ ಹುದ್ದೆಗಳನ್ನು ಗುರುತಿಸಿ ಶಿಕ್ಷಕರ ಹುದ್ದೆಗಳ ಕೊರತೆಯಿರುವ/ಅವಶ್ಯಕತೆ ಇರುವ ಶಾಲೆಗಳಿಗೆ ಸಿಬ್ಬಂದಿ ಸ್ವರ ವಿನ್ಯಾಸಕ Staff Pattern] ಅನುಗುಣವಾಗಿ ಶಿಕ್ಷಕರ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಒದಗಿಸಬೇಕಾಗಿರುತ್ತದೆ. ಅದರನ್ವಯ ಒಂದು ಪ್ರೌಢ ಶಾಲೆಗೆ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ 6-ಸಹ ಶಿಕ್ಷಕರನ್ನು ಹಾಗೂ 1 ದೈಹಿಕ ಶಿಕ್ಷಣ. ಶಿಕ್ಷಕರನ್ನು ಒದಗಿಸತಕ್ಕದ್ದು.

ಮುಂದುವರೆದು, ಉಲ್ಲೇಖ (6), (7), (8) ಮತ್ತು (9) ರಲ್ಲಿನ ಮಾನದಂಡಗಳಂತೆ, ಉಲ್ಲೇಖ (10) ಮತ್ತು (11) ಸಭಾ ನಡವಳಿಗಳಂತೆ ಹಾಗೂ ಉಲ್ಲೇಖ (12) ರಲ್ಲಿನ ಅಂಶಗಳಂತೆ ಹುದ್ದೆಗಳನ್ನು ಮಂಜೂರು ಮಾಡುವ ಕುರಿತು ಹಾಗೂ ಹೆಚ್ಚುವರಿ ಹುದ್ದೆಗಳನ್ನು ಗುರುತಿಸಲು ನಿಗದಿಪಡಿರುವ ಮಾನದಂಡಗಳ ಆಧಾರದ ಮೇಲೆ ಈ ಕೆಳಕಂಡ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

1. ಹೆಚ್ಚುವರಿ ಹುದ್ದೆಗಳನ್ನು ಗುರುತಿಸುವ ಮಾನದಂಡಗಳು:-

1. ದಿನಾಂಕ:31.12.2024ರಲ್ಲಿ ಇದ್ದಂತೆ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿದ್ದಂತೆ ದಾಖಲಾತಿಗನುಸಾರ ಹಾಗೂ ಚಾಲ್ತಿ ಸಿಬ್ಬಂದಿ ಸ್ತರ ವಿನ್ಯಾಸಕ್ಕನುಗುಣವಾಗಿ ಶಾಲೆಗಳು ಹುದ್ದೆಗಳನ್ನು ಹೊಂದಿರತಕ್ಕದ್ದು.

2. ಅದಕ್ಕಾಗಿ, ಅವಶ್ಯಕ/ಹೆಚ್ಚುವರಿ ಹುದ್ದೆಗಳನ್ನು ಗುರುತಿಸಲು ಮುಂದಿನ ಹಂತವಾರು ಕ್ರಮಗಳನ್ನು ಅನುಸರಿಸುವುದು.

3. ಉಲ್ಲೇಖ (5) ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಿರುವಂತೆ ಪ್ರತಿ ತರಗತಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಕೆಳಗಿನಂತೆ ವಿಭಾಗಗಳನ್ನು ಗುರುತಿಸಬೇಕು.

4. ಅದೇ ಶಾಲೆಯಲ್ಲಿ 2 ಅಥವಾ ಹೆಚ್ಚು ಮಾಧ್ಯಮಗಳಿದ್ದಲ್ಲಿ ವಿಭಾಗಗಳನ್ನು ಮಾಧ್ಯಮವಾರು-ತರಗತಿವಾರು ಮಕ್ಕಳ ಸಂಖ್ಯೆಯನ್ನು ಆಧರಿಸಿ ಗುರುತಿಸಬೇಕು. ಪ್ರತಿ ಮಾಧ್ಯಮದಲ್ಲಿ ಪ್ರತಿ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ 70ರ ಮಿತಿಯಲ್ಲಿರತಕ್ಕದ್ದು ವಿದ್ಯಾರ್ಥಿಗಳ ಸಂಖ್ಯೆ 70ಕ್ಕಿಂತ ಹೆಚ್ಚಿದಲ್ಲಿ ಮತ್ತು 140ಕ್ಕಿಂತ ಕಡಿಮೆ ಇದ್ದಲ್ಲಿ 2 ವಿಭಾಗಗಳನ್ನಾಗಿ ಮಾಡುವುದು,

5. ಹೆಚ್ಚುವರಿ ವಿಭಾಗಗಳು ಮಂಜೂರಾಗಿರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗರಿಷ್ಠ 70ರ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವಲ್ಲಿ ಮೇಲಿನಂತೆ ವಿದ್ಯಾರ್ಥಿ ಸಂಖ್ಯೆಗನುಗುಣವಾಗಿ ವಿಭಾಗಗಳನ್ನು ಗುರುತಿಸುವುದು.

6. 4 ವಿಭಾಗಗಳವರಗಿನ ಏಕ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಸಿಬ್ಬಂದಿ ಸ್ವರ ವಿನ್ಯಾಸದ ಪ್ರಕಾರ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ 7 ಹುದ್ದೆಗಳಿರಬೇಕು: ಪ್ರಥಮ ಭಾಷೆ-1 ದ್ವಿತೀಯ ಭಾಷೆ-1, ತೃತೀಯ ಭಾಷೆ-1, ಕಲಾ-1, ಗಣಿತ(ಪಿ.ಸಿ.ಎಂ)-1, ವಿಜ್ಞಾನ(ಸಿ.ಬಿ.ಝಡ್)-1, ದೈಹಿಕ ಶಿಕ್ಷಣ ಶಿಕ್ಷಕರ (ಗ್ರೇಡ್-1 ಹುದ್ದೆ-1 ರಂತೆ ನಿಗಧಿಪಡಿಸಿದೆ.

7. ಏಕ ಮಾಧ್ಯಮ ಇರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ 5 ಅಥವಾ 5 ಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಪ್ರತಿ ವಿಭಾಗಕ್ಕೆ 1.5 ಶಿಕ್ಷಕರನ್ನು ನೀಡಲಾಗುವುದು ಅವಶ್ಯಕವಿರುವ/ಹೆಚ್ಚುವರಿ ಹುದ್ದೆಗಳನ್ನು ಈ ಕೆಳಕಂಡ ಕೋಷಕ (ಆ)ದಲ್ಲಿ ನೀಡಲಾಗಿರುವಂತೆ ಗುರುತಿಸುವುದು.

8. ದಿನಾಂಕ:31.12.2024 ರ ಹಿಂದಿನಿಂದಲೇ ಸಂಸ್ಕೃತ ಪಥಮ ಅಥವಾ ತೃತೀಯ ಭಾಷೆ ಇರುವ ಶಾಲೆಗಳಲ್ಲಿ ಸಂಸ್ಕೃತ ಭಾಷೆ ಕಲಿಯುವ ವಿದ್ಯಾರ್ಥಿಗಳು ಇದ್ದಲ್ಲಿ ಇತರೆ ಮೂರು ಭಾಷಾ ಶಿಕ್ಷಕರ ಹುದ್ದೆಯ ಜೊತೆಗೆ ಸಂಸ್ಕೃತ ಭಾಷಾ ಶಿಕ್ಷಕರ ಹುದ್ದೆ ಇರತಕ್ಕದ್ದು.

9. ಉರ್ದು, ತೆಲುಗು, ತಮಿಳು, ಮರಾಠಿ ಮುಂತಾದ ಅಲ್ಪಸಂಖ್ಯಾತ ಭಾಷಾ ಮಾಧ್ಯಮವಿರುವ ಶಾಲೆಗಳಲ್ಲಿ 03 ಭಾಷಾ ಶಿಕ್ಷಕರಾದ ಆಂಗ್ಲ, ಕನ್ನಡ ಹಾಗೂ ಆಯಾ ಮಾಧ್ಯಮದ ಭಾಷಾ ಶಿಕ್ಷಕರ ಹುದ್ದೆ ಇರತಕ್ಕದ್ದು, ಜೊತೆಗೆ ಆಯಾ ಮಾಧ್ಯಮದ ಗಣಿತ(ಪಿ.ಸಿ.ಎಂ), ವಿಜ್ಞಾನ (ಸಿ.ಬಿ.ಜೆಡ್), ಕಲಾ ವಿಷಯದ ಶಿಕ್ಷಕರಿರತಕ್ಕದ್ದು.

10. ಕನ್ನಡ ಭಾಷಾ ಮಾಧ್ಯಮವಿರುವ ಶಾಲೆಗಳಲ್ಲಿ ಅಲ್ಪಸಂಖ್ಯಾತ ಭಾಷೆಗಳನ್ನು ಕಲಿಯುವ ವಿದ್ಯಾರ್ಥಿಗಳು ಇದ್ದಲ್ಲಿ ಇತರ ಮೂರು ಭಾಷಾ ಶಿಕ್ಷಕರ ಹುದ್ದೆಯ ಜೊತೆಗೆ ಅಲ್ಪ ಸಂಖ್ಯಾತ ಭಾಷಾ ಶಿಕ್ಷಕರ ಹುದ್ದೆ ಇರತಕ್ಕದ್ದು.

11. 1-10ನೇ ತರಗತಿಗಳಿರುವ ಆರ್.ಎಂ.ಎಸ್.ಎ ಶಾಲೆಗಳಲ್ಲಿ (ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊರತುಪಡಿಸಿ) 9-10ನೇ ತರಗತಿ ದಾಖಲಾತಿಯನ್ನು ಪ್ರತಿ ವಿಭಾಗಕ್ಕೆ 70 ವಿದ್ಯಾರ್ಥಿಗಳಂತೆ ವಿಭಾಗಗಳ ಲೆಕ್ಕ ಹಾಕಲು ಪರಿಗಣಿಸುವುದು ಹಾಗೂ ಈ ಶಾಲೆಗಳಲ್ಲಿ 9-10ನೇ ತರಗತಿಗಳಿಗೆ 6+1 ಹುದ್ದೆಗಳನ್ನು ನೀಡುವುದು.

12. ಉಲ್ಲೇಖ(6)ರನ್ವಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪ್ರೌಢ ಶಾಲೆಗಳಲ್ಲಿ 8-10 ನೇ ತರಗತಿ ದಾಖಲಾತಿಯನ್ನು ಪರಿಗಣಿಸಿ, 40 ವಿದ್ಯಾರ್ಥಿಗಳಿಗೆ ಒಂದು ವಿಭಾಗದಂತೆ ವಿಭಾಗಗಳ ಸಂಖ್ಯೆಯನ್ನು ಗುರುತಿಸುವುದು ಹಾಗೂ ಈ ಶಾಲೆಗಳಲ್ಲಿ ಕ್ರಮ ಸಂಖ್ಯೆ 7 ರಲ್ಲಿ ಕೋಷ್ಮಕ (ಆ) ರಂತೆ ಹುದ್ದೆಗಳನ್ನು ನೀಡುವುದು.

13. ಉಲ್ಲೇಖ(7) ಮತ್ತು (8)ರನ್ವಯ ಆದರ್ಶ ವಿದ್ಯಾಲಯ ಶಾಲೆಗಳಲ್ಲಿ 6 10ನೇ ತರಗತಿಯ ದಾಖಲಾತಿಯನ್ನು ಪರಿಗಣಿಸುವುದು ಹಾಗೂ ಸದರಿ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಂದು ವಿಭಾಗದಂತೆ ವಿಭಾಗಗಳ ಸಂಖ್ಯೆಯನ್ನು ಗುರುತಿಸುವುದು, ಸದರಿ ಶಾಲೆಯಲ್ಲಿ ದಿನಾಂಕ:31.12.2024 ರಲ್ಲಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಗರಿಷ್ಠ 12 ವಿಭಾಗಗಳಿಗೆ ಅವಕಾಶ ಇದೆ. ಈ ಶಾಲೆಗಳಿಗೆ ಕ್ರಮ ಸಂಖ್ಯೆ 7 ರಲ್ಲಿನ ಕೋಷ್ಟಕ (ಆ) ರಂತೆ 19 ಹುದ್ದೆಗಳನ್ನು ನೀಡುವುದು ಹಾಗೂ ಭಾಷಾ ವಿಷಯಗಳನ್ನು ಹೊರತುಪಡಿಸಿ ಕೋರ್ ವಿಷಯದ ಹುದ್ದೆಗಳನ್ನು ಆಂಗ್ಲ ಮಾಧ್ಯಮದಲ್ಲಿ ನೀಡುವುದು.

14. ದಿ ಭಾಷಾ ಮಾಧ್ಯಮವಿರುವ ಪ್ರೌಢಶಾಲೆಗಳಲ್ಲಿ ಅಂದರೆ, ಕನ್ನಡ ಮಾಧ್ಯಮದ ಜೊತೆಗೆ ಅಂಗ. ಮಾಧ್ಯಮ/ಉರ್ದು ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ/ಮರಾಠಿ ಮಾಧ್ಯಮ ಜೊತೆಗೆ ಅಂಗ್ಲ ಮಾಧ್ಯಮ/ತೆಲುಗು ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ಮುಂತಾದವುಗಳು ಇರುವಂತಹ ಪ್ರೌಢ ಶಾಲೆಗಳಲ್ಲಿ ಕೋರ್ ವಿಷಯಗಳಿಗೆ ಅದೇ ಶಿಕ್ಷಕರು ಎರಡೂ ಮಾಧ್ಯಮದಲ್ಲಿ ಬೋಧನೆ ಮಾಡಬೇಕು. ಈ ಶಾಲೆಗಳಲ್ಲಿ ಕೇವಲ 6 ವಿಭಾಗಗಳಿದ್ದಲ್ಲಿ, ಕೋಷಕ (ಅ)ರಲ್ಲಿ 6 ವಿಭಾಗಗಳಿಗೆ ನಿಗಧಿಪಡಿಸಿರುವಂತೆ ಪಿ.ಸಿ.ಎಂ ಹಾಗೂ ಕಲಾ ವಿಷಯಗಳಿಗೆ ತಲಾ ಇಬ್ಬರು ಶಿಕ್ಷಕರು, ಉಳಿದ ವಿಷಯಗಳಿಗೆ ಹಾಗೂ ಭಾಷೆಗಳಿಗೆ ತಲಾ ಒಂದರಂತೆ ಒಟ್ಟು 10 ಶಿಕ್ಷಕರನ್ನು ನಿಗದಿಪಡಿಸುವುದು. ನಂತರದ ಹೆಚ್ಚುವರಿ ವಿಭಾಗಗಳಿದ್ದಲ್ಲಿ ಮೇಲಿನ ಕೋಷ್ಟಕದಲ್ಲಿರುವಂತೆ ಶಿಕ್ಷಕರನ್ನು ನಿಗದಿಪಡಿಸುವುದು.

15. AM_PCM KANNADA ಹುದ್ದೆಗಳನ್ನು AM_PCM_ENGLISH ಹುದ್ದೆಗಳಿಗೆ ಹಾಗೂ AM PCM_ENGLISHಹುದ್ದೆಗಳನ್ನು AM_PCM_KANNADA ಹುದ್ದೆಗಳಿಗೆ MAP ಮಾಡಲಾಗಿದೆ.

16. ಉಲ್ಲೇಖ (9) ಕನ್ನಡ ಭಾಷಾ ಕಲಿಕೆ ಅಧಿನಿಯಮ-2015 ರಂತೆ ಕನ್ನಡ ಭಾಷೆಯ ಹುದ್ದೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ನಿಗದಿಪಡಿಸಿದೆ.

17. ಸ್ವತಂತ್ರವಾಗಿ ಇರುವ ಒಂದು ಮಾಧ್ಯಮದ ಪ್ರೌಢ ಶಾಲೆಯಲ್ಲಿ ಬೇರೆ ಮಾಧ್ಯಮದ ಕೋರ್ ವಿಷಯಗಳ ಹುದ್ದೆಯು ಇದ್ದಲ್ಲಿ ಆ ಹುದ್ದೆಯನ್ನು ಹೆಚ್ಚುವರಿಯೆಂದು ಗುರುತಿಸಿ ಸ್ಥಳಾಂತರಿಸಲಾಗುವುದು (ಉದಾ: ಉರ್ದು ಮಾಧ್ಯಮದ ಶಾಲೆಯಲ್ಲಿ ಕನ್ನಡ ಮಾಧ್ಯಮದ ಕೋರ್ ವಿಷಯದ ಹುದ್ದೆಗಳನ್ನು ಹೆಚ್ಚುವರಿ ಎಂದು ಪರಿಗಣಿಸುವುದು).

18. ಆಂಗ್ಲ ಮಾಧ್ಯಮ ಹೊರತುಪಡಿಸಿ ಇತರ ಮಾಧ್ಯಮ/ಬಹು ಮಾಧ್ಯಮವಿರುವ ಪ್ರೌಢ ಶಾಲೆಗಳಿದ್ದಲ್ಲಿ (ಅಂದರೆ ಕನ್ನಡ+ಮರಾಠಿ, ಕನ್ನಡ+ತೆಲುಗು, ಕನ್ನಡ+ತಮಿಳು, ಕನ್ನಡ+ಉರ್ದು+ತೆಲುಗು) ಆಯಾ ಮಾಧ್ಯಮದ ಭಾಷಾ ಶಿಕ್ಷಕರ ಜೊತೆಗೆ, ಆಯಾ ಮಾಧ್ಯಮದ ಗಣಿತ(ಪಿ.ಸಿ.ಎಂ), ವಿಜ್ಞಾನ (ಸಿ.ಬಿ.ಜೆಡ್), ಕಲಾ ವಿಷಯದ ಶಿಕ್ಷಕರಿರತಕ್ಕದ್ದು. ಇತರೆ ಹುದ್ದೆಗಳನ್ನು ಮೇಲಿನ ಕೋಷಕ(ಆ)ದಂತೆ ಒದಗಿಸುವುದು.

19. ಕನ್ನಡ/ಉರ್ದು/ಮರಾಠಿ/ತೆಲುಗು/ತಮಿಳು ಮಾಧ್ಯಮದ ಜೊತೆಗೆ ಅಂಗ. ಮಾಧ್ಯಮವಿರುವ ಬಹುಮಾಧ್ಯಮ ಪ್ರೌಢಶಾಲೆಗಳಿದ್ದಲ್ಲಿ (ಅಂದರೆ ಕನ್ನಡ+ಮರಾಠಿ+ಆಂಗ್ಲ, ಕನ್ನಡ+ತೆಲುಗು+ಆಂಗ್ಲ, ಕನ್ನಡ+ಮರಾಠಿ+ಅಂಗ್ಲ ಕನ್ನಡ+ಉರ್ದು + ತೆಲುಗು+ಅಂಗ್ಲ) ಆಯಾ ಮೂಲ ಮಾಧ್ಯಮದ ಭಾಷಾ ಶಿಕ್ಷಕರ ಜೊತೆಗೆ, ಆಯಾ ಮೂಲ ಮಾಧ್ಯಮದ ಗಣಿತ (ಪಿ.ಸಿ.ಎಂ), ವಿಜ್ಞಾನ (ಸಿ.ಬಿ.ಜೆಡ್), ಕಲಾ ವಿಷಯದ ಶಿಕ್ಷಕರಿರತಕ್ಕದ್ದು. ಈ ಕೋರ್ ವಿಷಯಗಳಿಗೆ ಅಂಗ್ಲ ಮಾಧ್ಯಮದ ವಿಭಾಗಗಳಿಗೆ ಈ ಮೂಲ ಮಾಧ್ಯಮದ ಶಿಕ್ಷಕರ ಬೋಧನೆ ಮಾಡಬೇಕು. ಆಂಗ್ಲ ಮಾಧ್ಯಮದ ವಿಭಾಗಗಳಿಗೆ ಹೆಚ್ಚಿನ ಹುದ್ದೆಗಳ ಮಂಜೂರಾತಿ ಇರುವುದಿಲ್ಲ. ಹಾಗೂ ಈ ಪ್ರೌಢಶಾಲೆಗಳಿಗೆ ಭಾಷಾ ಶಿಕ್ಷಕರ ಹುದ್ದೆಗಳನ್ನು ಬೋಧನಾ ಅವಧಿಗಳ ಅಧಾರದ ಮೇಲೆ ಮಂಜೂರು ಮಾಡಲಾಗಿದೆ.

20. 6 ಅಥವಾ 6 ಕ್ಕಿಂತ ಹೆಚ್ಚಿನ ವಿಭಾಗಗಳು ಇದ್ದಲ್ಲಿ ಮಾತ್ರ ವಿಶೇಷ ಶಿಕ್ಷಕರ ಹುದ್ದೆಗಳನ್ನು ಕ್ರಮ ಸಂಖ್ಯೆ 7 ರಲ್ಲಿ ಕೋಷ್ಟಕ (ಆ) ರಂತೆ ಹುದ್ದೆಗಳನ್ನು ನೀಡುವುದು.

21. ಡಾ||ವೈದ್ಯನಾಥನ್ ಸಮಿತಿಯನ್ನಯ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ತಾಲ್ಲೂಕುಗಳಲ್ಲಿ 500 ಕ್ಕಿಂತ ಹೆಚ್ಚು, ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಮಂಜೂರಾಗಿರುವ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸುವಂತಿಲ್ಲ. ಇಂತಹ ಶಾಲೆಗಳಲ್ಲಿ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರು ಸೇವೆಯಲ್ಲಿ ಮುಂದುವರೆಯಬೇಕು.

22. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಿ.ಜಿ.ಟಿ ಶಿಕ್ಷಕರನ್ನು ಕಾರ್ಯನಿರತ ಶಾಲೆಗಳಲ್ಲಿ 08ನೇ ತರಗತಿಗಳಲ್ಲಿ ಶೂನ್ಯ ದಾಖಲಾತಿ ಇದ್ದಲ್ಲಿ ಹೆಚ್ಚುವರಿ ಎಂದು ಗುರುತಿಸಿದೆ. ಸದರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪ್ರೌಢ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುವುದು.

23. ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರತರಾದ GHMಗಳನ್ನು ಕಾರ್ಯನಿರತ ಶಾಲೆಗಳಲ್ಲಿ SRHM ಹುದ್ದೆ ಮಂಜೂರಾದಲ್ಲಿ ಮ್ಯಾಪ್ ಮಾಡಲಾಗಿದೆ. ಕಾರ್ಯನಿರತ GHM ಶಾಲೆಗಳಲ್ಲಿ SRHM ಮಂಜೂರಾಗದಿದ್ದಲ್ಲಿ ಸದರಿ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ ಜಿಲ್ಲೆಯೊಳಗೆ ಪ್ರೌಢ ಶಾಲೆಗಳಲ್ಲಿ ಆಯಾ ವಿಷಯದ ಹುದ್ದೆಗೆ ಕೌನ್ಸಿಲಿಂಗ್‌ ಮೂಲಕ ಸ್ಮಳ ನಿಯುಕ್ತಿ ಮಾಡಲಾಗುವುದು,

ಕ್ರಮ ಸಂಖ್ಯೆ:19 ರಲ್ಲಿ ವಿಶೇಷ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿರುವಂತೆ, ಹೆಚ್ಚುವರಿಯಾಗಿರುವ 624 ವಿಶೇಷ ಶಿಕ್ಷಕರ ಹುದ್ದೆಗಳನ್ನು ಉಲ್ಲೇಖ(3) ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020 ರ ನಿಯಮಗಳ ನಿಯಮ 14(5) ರಂತೆ ಅದೇ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯುಳ್ಳ ಶಾಲೆಯಿಂದ ಪ್ರಾರಂಭಿಸಿ ಇಳಿಕೆ ಕ್ರಮದಲ್ಲಿ ವಿಶೇಷ ಶಿಕ್ಷಕರ ಹುದ್ದೆಗಳನ್ನು ಪ್ರೌಢ ಶಾಲೆಗಳಿಗೆ ಮಂಜೂರು ಮಾಡಲಾಗಿದೆ.

ಈ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಹೆಚ್ಚುವರಿಯಾಗುವ ಸಹ ಶಿಕ್ಷಕರನ್ನು ಅದೇ ಜಿಲ್ಲೆಯಲ್ಲಿ ಖಾಲಿ ಹುದ್ದೆಗಳ ಲಭ್ಯತೆಯಿಲ್ಲದೆ ಇದ್ದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯುಳ್ಳ ಶಾಲೆಯಿಂದ ಪ್ರಾರಂಭಿಸಿ ಇಳಿಕೆ ಕ್ರಮದಲ್ಲಿ ಗುರುತಿಸುವ ಶಾಲೆಗಳಿಗೆ ನಿಯಮಾನುಸಾರ ಪಿಟಿಆರ್‌ನಂತೆ ಹುದ್ದೆಗಳನ್ನು ಮಂಜೂರು ಮಾಡಿ ನಿಗದಿಪಡಿಸಿದೆ.

ಉಲ್ಲೇಖ (4) ರ ಸರ್ಕಾರದ ಆದೇಶದನ್ವಯ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ವೃಂದ ಬಲದ ಜಿಲ್ಲಾವಾರು ಹಂಚಿಕೆ ಮಾಡಬೇಕಾಗಿರುವ ನಿರ್ವಹಣೆಯ ಪ್ರಾಧಿಕಾರವನ್ನು ಪ್ರತ್ಯಾಯೋಜಿಸಿ ನೀಡಿರುವ ಅಧಿಕಾರವನ್ನು ಚಲಾಯಿಸಿ ಈ ಮೇಲಿನ ಮಾನದಂಡಗಳನ್ನು ಅನುಸರಿಸಿ ದಿನಾಂಕ:31/12/2024 ರ ವಿದ್ಯಾರ್ಥಿಗಳ ದಾಖಲಾತಿ ಅನುಗುಣವಾಗಿ (ಪಿ.ಟಿ.ಆರ್ ನಂತೆ) ಲೆಕ್ಕಾಚಾರ ಮಾಡಿ 2024-25 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಕ್ರಮ ಸಂಖ್ಯೆ:7 ರ ಕೋಷ್ಟಕ (ಆ) ರಂತೆ ನಿಗದಿಪಡಿಸಿ ಮಂಜೂರು ಮಾಡಲಾಗಿದೆ.

ಆಯಾ ಶಾಲಾವಾರು ಮಂಜೂರಾದ ಹುದ್ದೆಗಳನ್ನು Teacher Transfer ತಂತ್ರಾಂಶದಲ್ಲಿ ಮುಖ್ಯ ಶಿಕ್ಷಕರ ಲಾಗ್‌ ಇನ್ ನಲ್ಲಿ “Sanctioned Post Menu ನಲ್ಲಿ “B-register” ಪ್ರತಿಯನ್ನು ಅಳವಡಿಸಲಾಗಿದೆ. ಈ ಪ್ರೌಢಶಾಲೆಗಳ ಮಂಜೂರಾದ ಹುದ್ದೆಗಳ ಮಾಹಿತಿಯನ್ನು ಶಾಲೆಯ ಡೈಸ್‌ಡ್ ಅನ್ನು ಬಳಸಿ ಲಾಗಿನ್ನಲ್ಲಿ ಪಡೆದುಕೊಳ್ಳಲು ತಿಳಿಸಿದೆ.

ಮೇಲೆ ವಿವರಿಸಿದ ಹುದ್ದೆಗಳ ಭಾಷಾವಾರು/ ವಿಷಯವಾರು/ ಶಾಲಾವಾರು/ ತಾಲ್ಲೂಕುವಾರು/ ಜಿಲ್ಲಾವಾರು ಮಂಜೂರಾದ ಮಾಹಿತಿಯನ್ನು Teacher Transfer ತಂತ್ರಾಂಶದ ಉಪನಿರ್ದೇಶಕರು(ಆಡಳಿತ)/ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗ್‌ಇನ್ನಲ್ಲಿ REPORT(ವರದಿ) ನಲ್ಲಿ ಲಭ್ಯವಿರುತ್ತದೆ. ಪ್ರಯುಕ್ತ ತಾಲ್ಲೂಕುವಾರು/ ಜಿಲ್ಲಾವಾರು/ ವೃಂದವಾರು ಹುದ್ದೆಗಳ ವಿವರವನ್ನು ಆಯಾ ಅನುಷ್ಠಾನಾಧಿಕಾರಿಗಳು ತಮ್ಮ ಲಾಗ್‌ಇನ್ನಲ್ಲಿ ಗಮನಿಸತಕ್ಕದ್ದು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರುಗಳು ಶಾಲಾವಾರು ಮಂಜೂರಾತಿ ಪ್ರತಿಯನ್ನು ಆಯಾ ಶಾಲಾ ಮುಖ್ಯಸ್ಥರು ಶಾಲಾವಾರು ಖಾಯಂ ದಾಖಲೆಯನ್ನಾಗಿ ಹುದ್ದೆ ಮಂಜೂರಾತಿ ವಹಿಯಲ್ಲಿ ನಮೂದಿಸಿ ಶಾಲೆಯಲ್ಲಿ ಅಭಿರಕ್ಷಣೆಯಲ್ಲಿಟ್ಟು ಸದರಿ ಮಾಹಿತಿಯನ್ನು ಶಾಲೆಯ ಮಾಹಿತಿ ಫಲಕದಲ್ಲಿ ಬರೆಸುವುದು ಹಾಗೂ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ತಿಳಿಸಿದೆ.

2024-25 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರ ಮಂಜೂರಾದ ಹುದ್ದೆಗಳ ಭಾಷಾವಾರು/ವಿಷಯವಾರು/ಜಿಲ್ಲಾವಾರು/ವಿಭಾಗವಾರು ಮಾಹಿತಿಯು ಪತ್ರದ ಪುಟ ಸಂಖ್ಯೆ-5ರಲ್ಲಿ ಅನುಬಂಧ-1 ಅನ್ನು ಲಗತ್ತಿಸಿದೆ.

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!