87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -2024: ನುಡಿ ಹಬ್ಬಕ್ಕೆ ಆನ್ ಲೈನ್ ಮೂಲಕ ನೊಂದಣಿ ಮಾಡಲು ನೇರ ಲಿಂಕ್ ಇಲ್ಲಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -2024: ನುಡಿ ಹಬ್ಬಕ್ಕೆ ಆನ್ ಲೈನ್ ಮೂಲಕ ನೊಂದಣಿ ಮಾಡಲು ನೇರ ಲಿಂಕ್ ಇಲ್ಲಿದೆ.

ದಿನಾಂಕ: ಡಿಸೆಂಬರ್ 20, 21 ಹಾಗೂ 22 ರ ವರೆಗೆ ನಡೆಯಲಿರುವ  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -2024: ನುಡಿ ಹಬ್ಬಕ್ಕೆ ಆನ್ ಲೈನ್ ಮೂಲಕ ನೊಂದಣಿ ಮಾಡಲು ನೇರ ಲಿಂಕ್ ಇಲ್ಲಿ ಒದಗಿಸಲಾಗಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೊಂದಣಿಯನ್ನು ಆಲ್ ಲೈನ್ ಮೂಲಕ ಮಾಡಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ನೊಂದಣಿ ಮಾಡಿಕೊಳ್ಳಬಹುದು.

ನೊಂದಣಿಗೆ 20 ದಿನಗಳ ಕಾಲ ಅವಕಾಶವಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸುಲಭವಾಗಿ ಪ್ರತಿನಿಧಿ ನೋಂದಣಿ ಮಾಡಲು ಅವಕಾಶವನ್ನು ಇದೀಗ ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ಪಡೆಯಲು ಅನುಕೂಲಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ನೊಂದಣಿ ಮಾಡಿಕೊಳ್ಳಬಹುದು.

ಪ್ರತಿನಿಧಿ ನೋಂದಣಿಗೆ ತಲಾ ₹600 ಶುಲ್ಕ ನಿಗದಿ ಪಡಿಸಲಾಗಿದೆ.ನೋಂದಣಿ ಮಾಡಿಕೊಳ್ಳುವವರಿಗೆ ವಸತಿಯ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಜಾಲತಾಣದಲ್ಲೇ ಫೋಟೋ ಸಹಿತ ಗುರುತಿನ ಚೀಟಿ ಒದಗಿಸಲಾಗುತ್ತದೆ.

ನೋಂದಣಿ ಮಾಡಲು ನೇರ ಲಿಂಕ್ ಬಳಸಬಹುದು https://kannadasahithyaparishattu.in/sammelana2024/?s=09

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2024 ರ ಡಿಸೆಂಬರ್ 20-22 ರಂದು ಮಂಡ್ಯದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಉಪನ್ಯಾಸಗಳು, ಕವಿಗೋಷ್ಠಿಗಳು, ಮತ್ತು ಪುಸ್ತಕ ಮೇಳವನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮವು ಕರ್ನಾಟಕ, ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಬಹುಸಂಖ್ಯೆಯಲ್ಲಿ ಭಾಗವಹಿಸುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2024 ರ ಡಿಸೆಂಬರ್ 20-22 ರಂದು ಕರ್ನಾಟಕದ ಮಂಡ್ಯದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಕಲಾ, ಸಂಸ್ಕೃತಿ ಮತ್ತು ಸಂಗೀತವನ್ನು ಉಳಿಸುವ ಮತ್ತು ಅಭಿವೃದ್ಧಿ ಮಾಡುವ ಉದ್ದೇಶದಿಂದ ಲೇಖಕರು, ಕವಿಗಳು ಮತ್ತು ಕನ್ನಡಿಗರ ಸಭೆಯಾಗಿದೆ.

“೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ವನ್ನು ಆಯೋಜಿಸುವ ಸಂಬಂಧ ‘ನೋಂದಣಿ ಸಮಿತಿ” ಯನ್ನು ರಚಿಸುವ ಬಗ್ಗೆ.

ಮಂಡ್ಯದಲ್ಲಿ “87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ” ವನ್ನು ದಿನಾಂಕ: 20.12.2024 ರಿಂದ 22.12.2024 ರವರೆಗೆ ಆಚರಿಸಲು ದಿನಾಂಕ: 25.06.2024 ರಂದು ಸನ್ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶ್ವಸಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಈ ಕೆಳಕಂಡಂತೆ ನೋಂದಣಿ ಸಮಿತಿಯನ್ನು ರಚಿಸಿ ಆದೇಶಿಸಿದೆ.

ನೋಂದಣಿ ಸಮಿತಿ

ಮೇಲ್ಕಂಡ ಸಮಿತಿಯು ಯಾವುದೇ ಲೋಪದೋಷವಾಗದಂತೆ ಶಿಸ್ತುಬದ್ಧವಾಗಿ ಹಾಗೂ ಉಸ್ತುವಾರಿ ಸಮಿತಿಯೊಂದಿಗೆ ಸಮನ್ವಯ ಸಾಧಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸತಕ್ಕದ್ದು. ಒಂದು ವೇಳೆ ಯಾವುದೇ ಲೋಪವಾದಲ್ಲಿ ಸಮಿತಿಯವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಸಮಿತಿಯು ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಸಭೆಗಳ ನಡಾವಳಿಗಳನ್ನು ಸಲ್ಲಿಸುವುದು. ಮುಂದುವರೆದು ಸಮಿತಿಯಿಂದ ಭರಿಸಲ್ಪಡುವ ವೆಚ್ಚವನ್ನು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಭರಿಸುವ ದೃಷ್ಟಿಯಿಂದ ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕರ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-2000 ಹಾಗೂ ನಂತರದ ತಿದ್ದುಪಡಿಗಳಿಗನುಗುಣವಾಗಿ ಮಾರ್ಗಸೂಚಿಗಳನ್ವಯ ಕ್ರಮವಹಿಸುವುದು ಹಾಗೂ ಸದರಿ ವೆಚ್ಚಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹಣಕಾಸು ಸಮಿತಿಗೆ ತಪ್ಪದೇ ಸಲ್ಲಿಸತಕ್ಕದ್ದು.

*ಈ ಸಮಿತಿಯಲ್ಲಿ ಕೇಂದ್ರ ಪರಿಷತ್ತಿನ ಅನುಮೋದಿತ ತಿದ್ದುಪಡಿ 4(ಅ)ರನ್ವಯ 87 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಡಾ.ಮೀರಾಶಿವಲಿಂಗಯ್ಯ ರವರನ್ನು ಸಮಿತಿಯ ಸದಸ್ಯರನ್ನಾಗಿ ಆಹ್ವಾನಿಸಲಾಗಿದೆ.

ಸಮಿತಿಯ ಕರ್ತವ್ಯ ಮತ್ತು ಜವಾಬ್ದಾರಿಗಳು:-

1.ಮುಖ್ಯ ಸಮಿತಿಯ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿಯ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸುವುದು.

2.ನೋಂದಣಿ ಕಾರ್ಯಕ್ಕೆ ಅಗತ್ಯವಿರುವ ಕೌಂಟರ್‌ಗಳನ್ನು ಸಿದ್ಧಪಡಿಸಿಕೊಳ್ಳುವುದು, ಹಾಗೂ ಹಿರಿಯ ನಾಗರೀಕರಿಗೆ ಮತ್ತು ಮಹಿಳೆಯರಿಗೆ ವಿಶೇಷ ಕೌಂಟರ್‌ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು.

3.ಏಕಕಾಲಕ್ಕೆ ನೂಕುನುಗ್ಗಲು ಉಂಟಾಗದಂತೆ ಹಾಗೂ ಜನದಟ್ಟಣೆಯಿಂದ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವುದು.

4.ನೋಂದಣಿ ಕಾರ್ಯಕ್ಕೆ ಸಂಬಂಧಿಸಿದ ರಶೀದಿ ಪುಸ್ತಕ, ಹಣಕಾಸು ನಿರ್ವಹಣಾ ವಹಿ ಹಾಗೂ ನೆನಪಿನ

ಕಾಣಿಕೆಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.

5.ನೋಂದಣಿ ಕಾರ್ಯಕ್ಕೆ ಸಂಬಂಧಿಸಿದ ಖರ್ಚು-ವೆಚ್ಚಗಳ ಕುರಿತು ಆಯವ್ಯಯವನ್ನು ಸಿದ್ಧಪಡಿಸಿಕೊಂಡು ಸೂಕ್ತ ದಾಖಲೆಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು.

6.ಸಮಿತಿಯ ಎಲ್ಲಾ ಸದಸ್ಯರೊಂದಿಗೆ ಸಮನ್ವಯ ಸಾಧಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವುದು.

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ `ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಶೀರ್ಷಿಕೆಯಡಿ ನಾಡು-ನುಡಿಗೆ ಸಂಬಂಧಿಸಿದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಮ್ಮ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ ೨೦, ೨೧ ಹಾಗೂ ೨೨ ರಂದು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಆಹ್ವಾನಿಸುವ ಪ್ರಚಾರ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ ಅವರು ಚಾಲನೆ ನೀಡಿದರು.

ಈ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮೂರನೇ ಬಾರಿ ಆಯೋಜಿಸಲಾಗುತ್ತಿದೆ, ಇದು ಸಾಹಿತ್ಯದ ಹೆಸರು ಮತ್ತು ಅದಕ್ಕೆ ಅನುಬಂಧ ಹೊಂದಿದೆ.

ಡಿಸೆಂಬರ್ 20, 21 ಹಾಗೂ 22 ರಂದು ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ.

ಹೆಚ್ಚಿನ ಮಾಹಿತಿಗಾಗಿ- CLICK HERE

2 thoughts on “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -2024: ನುಡಿ ಹಬ್ಬಕ್ಕೆ ಆನ್ ಲೈನ್ ಮೂಲಕ ನೊಂದಣಿ ಮಾಡಲು ನೇರ ಲಿಂಕ್ ಇಲ್ಲಿದೆ.”

Leave a Comment