ESIC Recuritment-2025,Senior Resident, Professor posts.
ESIC: ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಾ(ಇಎಸ್‌ಐಸಿ) ಬೆಂಗಳೂರು ಮತ್ತು ಕಲಬುರಗಿಯ ಇಎಸ್‌ಐಸಿ ಕಾಲೇಜು/ ಆಸ್ಪತ್ರೆ ಗಳಲ್ಲಿ ಸೀನಿಯರ್ ರೆಸಿಡೆಂಟ್ ಮತ್ತು ಪ್ರೊಫೆಸರ್ ಹುದ್ದೆಗಳಿಗೆ ನೇಮಕ ಮಾಡಿಕೊ ಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಫೆ.27, 28 ಮತ್ತು ಮಾರ್ಚ್ 4, 5ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
ಕಲಬುರಗಿಯಲ್ಲಿ 57 ಸೀನಿಯರ್ ರೆಸಿಡೆಂಟ್ ಹುದ್ದೆಗಳು ಖಾಲಿ ಇವೆ. ಹಾಗೂ 6 ಪ್ರೊಫೆಸರ್, 14 ಅಸೋಸಿ ಯೇಟ್ ಪ್ರೊಫೆಸರ್ ಮತ್ತು 12 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇಮಕ ನಡೆಯಲಿದೆ. ಇವುಗಳಿಗೆ ಫೆ.27ರಂದು ದಾಖಲೆ ಪರಿಶೀಲನೆ ಮತ್ತು ಫೆ.28ರಂದು ಸಂದರ್ಶನ ನಡೆಯಲಿದೆ ಎಂದು ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರಿನ ಪೀಣ್ಯ ಇಎಸ್‌ಐಸಿ ಕಾಲೇಜಿನಲ್ಲಿ 16 ಹುದ್ದೆಗಳು ಖಾಲಿ ಇವೆ. ಮಾ.4 ಮತ್ತು 5ರಂದು ಸಂದರ್ಶನ ನಡೆಯಲಿದೆ.
ಬಯೋಕೆಮಿಸ್ಟ್ರಿ, ಫೊರೆನ್ಸಿಕ್ ಮೆಡಿಸಿನ್, ಡರ್ಮಟಾಲಜಿ, ರೇಡಿಯೋ ಡಯಾಗ್ನಾಸಿಸ್, ಸೈಕಿಯಾಟ್ರಿ, ಅನಸ್ತೇಷಿಯಾ, ಪೀಡಿಯಾಟ್ರಿಕ್, ಎಮರ್ಜೆನ್ಸಿ ಮೆಡಿಸಿನ್ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಅರ್ಹತೆಗಳೇನು?:
ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ (ಎಂಡಿ/ಎಂಎಸ್/ಡಿಎನ್‌ಬಿ) ಪಡೆದ 44 ವರ್ಷದೊಳಗಿನವರು ಮಾತ್ರ ಸೀನಿಯರ್ ರೆಸಿಡೆಂಟ್ ಹುದ್ದೆಗಳ ಸಂದರ್ಶನದಲ್ಲಿ (ಕಲಬುರಗಿ ನೇಮಕಾತಿ) ಭಾಗವಹಿಸಬಹುದು.
ಬೆಂಗಳೂರಿನಲ್ಲಿ ಮೂರು ವರ್ಷಗಳ ಅವಧಿಗೆ ಸೀನಿಯರ್ ರೆಸಿಡೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗು ತಿದ್ದು, ಎಂಬಿಬಿಎಸ್ ಜತೆಗೆ ಸ್ನಾತಕೋತ್ತರ ಪದವಿ/ ಸಂಬಂಧಿಸಿದ ವಿಭಾಗಗಳಲ್ಲಿ ವೈದ್ಯಕೀಯ ಡಿಪ್ಲೊಮಾ ಪಡೆದಿರುವ 45 ವರ್ಷದ ಒಳಗಿನವರಿಗೆ ಅವಕಾಶ. ಇನ್ನು ಪ್ರಾಧ್ಯಾಪಕರ ಹುದ್ದೆಗಳಿಗೆ ಎನ್‌ಎಂಸಿ ಪ್ರಕಾರ, ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, 69 ವರ್ಷದೊಳಗಿನವರಿಗೆ ಅವಕಾಶ ನೀಡಲಾಗಿದೆ.
ಅರ್ಜಿ ಶುಲ್ಕದ ವಿವರ:
ಬೆಂಗಳೂರಿನ ಸೀನಿಯರ್ ರೆಸಿಡೆಂಟ್ ನೇಮಕಾತಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಕಲಬುರಗಿಯ ಸಂದರ್ಶನದಲ್ಲಿ ಭಾಗವಹಿಸುವ ಎಸ್‌ಸಿ /ಎಸ್‌ಟಿ/ ಮಹಿಳೆಯರು ಹೊರತುಪಡಿಸಿ ಉಳಿದವರು 300 ಶುಲ್ಕ ಪಾವತಿಸಬೇಕು.’ಇಎಸ್‌ಐ, ಕಾರ್ಪೊರೇಷನ್, ಕಲಬುರಗಿ’ ಹೆಸರಿನಲ್ಲಿ ಡಿಡಿ ಪಡೆದು ಪಾವತಿಸಬೇಕು.
ನೇಮಕ ಪ್ರಕ್ರಿಯೆ ನಡೆಯುವುದು ಎಲ್ಲಿ?
ಬೆಂಗಳೂರು: ಆಫೀಸ್ ಆಫ್ ದಿ ಮೆಡಿಕಲ್ ಸೂಪರಿಂಟೆಂಡೆಂಟ್, ಇಎಸ್ ಐಸಿ ಆಸ್ಪತ್ರೆ ಪೀಣ್ಯ, ಯಶವಂತಪುರ, ಬೆಂಗಳೂರು
ಕಲಬುರಗಿ: ಇಎಸ್‌ಐಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸೇಡಂ ರಸ್ತೆ, ಕಲಬುರಗಿ
ಸಂದರ್ಶನ ದಿನಾಂಕಗಳು:
ಫೆ.27, 28 ಮತ್ತು ಮಾರ್ಚ್ 4, 5ರಂದು ಸಂದರ್ಶನ
ಹೆಚ್ಚಿನ ವಿವರಗಳಿಗಾಗಿ – CLICK HERE