EEDS: ಶಿಕ್ಷಕರ ವಿದ್ಯಾರ್ಹತೆ ಮಾಹಿತಿಗಳನ್ನು EEDS ನಲ್ಲಿ ಇಂದೀಕರಣ ಮಾಡುವ ಬಗ್ಗೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಸಮಿತಿ ಸಭೆ, ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸುವ ಬಗ್ಗೆ.

 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸರ್ಕಾರವು ದಿನಾಂಕ: 23-09-2024 ರ ಆದೇಶದಲ್ಲಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ದಿನಾಂಕ: 16-10-2024 ರಂದು ಸಮಿತಿಯ ಅಧ್ಯಕ್ಷರಾದ ಮಾನ್ಯ ಆಯುಕ್ತರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೇಡಿಕೆಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿರುತ್ತಾರೆ. ಸದರಿ ಸಂದರ್ಭದಲ್ಲಿ 2017ಕ್ಕಿಂತ ಹಿಂದೆ ನೇಮಕವಾದ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಮಾಹಿತಿಗಳನ್ನು ಮತ್ತು ಸಂಬಂಧಿತ ಅಂಕಿ ಅಂಶಗಳನ್ನು ಮುಂದಿನ ಸಭೆಯಲ್ಲಿ ಚರ್ಚೆಗೆ ಪ್ರಸ್ತುತ ಪಡಿಸಲು ಸೂಚನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವಿದ್ಯಾರ್ಹತೆ ಕುರಿತಾದ ಪೂರ್ಣ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸಲು ಎಲ್ಲಾ ಶಿಕ್ಷಕರಿಗೆ ಸೂಚಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು, ಪದವಿ ವಿದ್ಯಾರ್ಹತೆ ಹೊಂದಿದ್ದಲ್ಲಿ ಆ ಬಗ್ಗೆ ಪೂರ್ಣ ವಿವರಗಳನ್ನು ಅಂದರೆ, ಯಾವ ಪದವಿ, ಪದವಿಯ ಅವಧಿ, ಪದವಿ ವಡೆದ ವರ್ಷ, ಯಾವ ವಿಶ್ವವಿದ್ಯಾಲಯದಿಂದ ವಡೆದಿದೆ. ಅಭ್ಯಾಸಿಸಿರುವ ವಿಷಯದ ಮಾಹಿತಿ, ಇತ್ಯಾದಿ ಸಂಪೂರ್ಣ ಮಾಹಿತಿಗಳನ್ನು ಇ.ಇ.ಡಿ.ಎಸ್ ನಲ್ಲಿ ಇಂದೀಕರಿಸತಕ್ಕದ್ದು. ಹಾಗೆಯೇ ಸದರಿ ಪದವಿಯ ಕುರಿತಾದ ದಾಖಲೆಗಳನ್ನು ಸಹ ಅಪ್ಲೋಡ್ ಮಾಡತಕ್ಕದ್ದು. ಇದಕ್ಕಾಗಿ ದಿನಾಂಕ: 30-10-2024 ರವರೆಗೆ ಅವಧಿಯನ್ನು ನಿಗದಿಪಡಿಸಿದೆ. ಆಯಾ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮೇಲಿನಂತೆ ವಿವರಗಳನ್ನು ಇ.ಇ.ಡಿ.ಎಸ್ ನಲ್ಲಿ ಎಲ್ಲಾ ಶಿಕ್ಷಕರು ಇಂದೀಕರಿಸಿರುವ ಬಗ್ಗೆ ಮೇಲುಸ್ತುವಾರಿ ವಹಿಸತಕ್ಕದ್ದು.

ದಿನಾಂಕ: 02-11-2024 ರ ಒಳಗಾಗಿ ಉಪನಿರ್ದೇಶಕರುಗಳು ವ್ಯಾಪ್ತಿಯ ಎಲ್ಲಾ ಶಿಕ್ಷಕರು ಇ.ಇ.ಡಿ.ಎಸ್ ನಲ್ಲಿ ವಿದ್ಯಾರ್ಹತೆ ವಿವರಗಳನ್ನು ಇಂದೀಕರಿಸಿರುವ ಬಗ್ಗೆ ವ್ಯಾಪ್ತಿಯ ಬಿ.ಇ.ಓ ಕಛೇರಿಗಳಿಂದ ವರದಿ ಮಾಹಿತಿಗಳನ್ನು ಪಡೆದು ದೃಡೀಕರಣವನ್ನು ಒದಗಿಸುವ ಜೊತೆಗೆ ಕಳಗಿನ ಮಾಹಿತಿಗಳನ್ನು ಸಹ ದೃಡೀಕರಿಸಿ. ಸಲ್ಲಿಸತಕ್ಕದ್ದು.

  1. ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟಾರೆ ಇರುವ ಜಿ.ಪಿ.ಟಿ ಹುದ್ದೆಗಳ ಸಂಖ್ಯೆ ವಿಷಯವಾರು.
  2. ಜಿಲ್ಲೆಯಲ್ಲಿ ಒಟ್ಟಾರೆ ಜಿ.ಪಿ.ಟಿ ಖಾಲಿ ಹುದ್ದೆಗಳ ಸಂಖ್ಯೆ/ವಿಷಯವಾರು.
  3. ಪಿ.ಎಸ್.ಟಿ ವೃಂದದಿಂದ ಜಿ.ಪಿ.ಟಿ ವೃಂದಕ್ಕೆ ಬಡ್ತಿ ಕೋಟಾದಲ್ಲಿರುವ ವಿಷಯವಾರು ಖಾಲಿ ಹುದ್ದೆಗಳ ಮಾಹಿತಿ ಅಂಕಿ ಅಂಶ
  4. ಹಾಗೆಯೇ, ಪ್ರಸ್ತುತ ಪದವೀಧರ ಶಿಕ್ಷಕರ ನೇಮಕಾತಿಗೆ ಇರುವ ವಿಷಯವಾರು ಖಾಲಿ ಹುದ್ದೆಗಳ ಮಾಹಿತಿ.

 

CLICK HERE – MORE INFORMATION

10 thoughts on “EEDS: ಶಿಕ್ಷಕರ ವಿದ್ಯಾರ್ಹತೆ ಮಾಹಿತಿಗಳನ್ನು EEDS ನಲ್ಲಿ ಇಂದೀಕರಣ ಮಾಡುವ ಬಗ್ಗೆ.”

Leave a Comment