2022-23-GPSTR ಶಿಕ್ಷಕರಿಗೆ ನೇಮಕಾತಿ ಆದೇಶ ಮತ್ತು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ.
2022-23-GPSTR ಶಿಕ್ಷಕರಿಗೆ ನೇಮಕಾತಿ ಆದೇಶ ಮತ್ತು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡುವ ಬಗ್ಗೆ- 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8 ನೇ ತರಗತಿ) ಹುದ್ದೆಗೆ ಆಯ್ಕೆಯಾಗಿ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಮತ್ತು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡುವ ಕುರಿತು
ಮೇಲ್ಕಂಡ ವಿಷಯದನ್ವಯ, 2022-23 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಪದವೀಧರ ಪ್ರಾಥಮಿಕ ಶಿಕ್ಷಕರು ( 6 ರಿಂದ 8 ನೇ ತರಗತಿ) ಹುದ್ದೆಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು.
ಉಲ್ಲೇಖ (14) ರ ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯದ RECORD OF PROCEEDINGS ದಿ:04.10.2024ರ ಆದೇಶಾನುಸಾರ ನೇಮಕಾತಿ ಆದೇಶ ನೀಡಲು ಬಾಕಿ ಉಳಿದಿರುವ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲು ಅನುಮತಿಸಿದೆ. ಪ್ರಯುಕ್ತ, ಈ ಹಿಂದೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ನೇಮಕಾತಿ ಆದೇಶಗಳನ್ನು ನೀಡದಿರುವ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅಂಕಪಟ್ಟಿ, ನೈಜತೆ ಪ್ರಮಾಣ ಪತ್ರ, ಪೋಲಿಸ್ ದೃಢೀಕರಣ, ಕನ್ನಡ ಮಾಧ್ಯಮ/ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಸಿಂಧುತ್ವ ಪ್ರಮಾಣ ಪತ್ರ ನೇಮಕಾತಿ ಪ್ರಾಧಿಕಾರಕ್ಕೆ, ಪೂರ್ಣ ಪ್ರಮಾಣದಲ್ಲಿ ಸ್ವೀಕೃತವಾಗಿರುವುದನ್ನು ನಿಯಮಾನುಸಾರ ಖಾತ್ರಿಪಡಿಸಿಕೊಂಡು ಅಭ್ಯರ್ಥಿಯು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಈಗಾಗಲೇ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗಲು ವಿಳಂಬಕ, ಅವಕಾಶ ನೀಡದಂತೆ ನಿಯಮಾನುಸಾರ ನೇಮಕಾತಿ ಆದೇಶ ನೀಡಲು ಸೂಚಿಸಿದ ಸದರಿ ನೇಮಕಾತಿ ಆದೇಶಗಳನ್ನು ನೀಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿದೆ.
- ಯುನಿಯನ್ ಬ್ಯಾಂಕ್ ನಲ್ಲಿ ನೇಮಕಾತಿ 2024: 1500 ಹುದ್ದೆಗಳಿಗೆ ಅರ್ಜಿ ಆಹ್ವಾನ.
- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ 344 ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
- CBSE: Sample Question Papers for Classes 10th & 12th -2024-2025
- 2024-25ನೇ ಸಾಲಿನ NMMS ಪರೀಕ್ಷೆಗೆ ಸಂಬಂಧಿಸಿದಂತೆ ಶುಲ್ಕವನ್ನು ಪಾವತಿಸುವ ಬಗ್ಗೆ.
ಮುಂದುವರೆದು ನೇಮಕಾತಿ ಪ್ರಾಧಿಕಾರಿಗಳು ನೀಡಿರುವ ಮಾಹಿತಿಯಂತೆ ಅಭ್ಯರ್ಥಿಗಳಿಗೆ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ದಿನಾಂಕ :29.10-2024 ರಂದು ಪೂರ್ವಾಹ್ನ 11.30 ಗಂಟೆಗೆ ಜಿಲ್ಲಾವಾರು ನಡೆಯುವ ಸ್ಥಳ ಆಯ್ಕೆಗೆ ಆಯಾ ಉಪನಿರ್ದೇಶಕರ ಕಛೇರಿಯಿಂದ ಈ ಹಿಂದಿನ ದಿನಾಂಕಗಳಲ್ಲಿ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ನಂತೆಯೇ ಪೂರ್ವ ತಯಾರಿಯೊಂದಿಗೆ ಅಗತ್ಯ ಕ್ರಮಗಳನ್ನು ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಯಾವುದೇ ಲೋಪವಿಲ್ಲದಂತೆ ಕೈಗೊಂಡು ಯಶಸ್ವಿಯಾಗಿ ಪೂರೈಸತಕ್ಕದ್ದು.
ಕೌನ್ಸಿಲಿಂಗ್ ಹಾಗೂ ನೇಮಕಾತಿ ಆದೇಶ ನೀಡುವ ಮೊದಲು ಅಭ್ಯರ್ಥಿಯ ಎಲ್ಲಾ ರೀತಿ ಅರ್ಹರಿರುವ ಬಗ್ಗೆ, ಖಚಿತಪಡಿಸಿಕೊಳ್ಳುವುದು. ಈ ಕುರಿತು ಯಾವುದೇ ಲೋಪವಾದಲ್ಲಿ ನೇಮಕಾತಿ ಪ್ರಾಧಿಕಾರಿಯವರಾದ ಸಂಬಂಧಿಸಿದ ಉಪನಿರ್ದೇಶಕರೇ ಪೂರ್ಣ ಜವಾಬ್ದಾರರಾಗಿದ್ದು, ಅತ್ಯಂತ ಜಾಗರೂಕತೆಯಿಂದ ಮತ್ತು ಪಾರದರ್ಶಕವಾಗಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಲು ಮತ್ತೊಮ್ಮೆ ಕಟ್ಟುನಿಟ್ಟಾಗಿ ಸೂಚಿಸಿದೆ. (ಮಾನ್ಯ ಆಯುಕ್ತರ ಆದೇಶದ ಮೇರೆಗೆ)ಹೊರಡಿಸಲಾದ ಜ್ಞಾಪನ.