ಸುಜ್ಞಾನನಿಧಿ ಶಿಷ್ಯವೇತನ ಬೇಗನೆ ಅರ್ಜಿ ಸಲ್ಲಿಕೆ ಮಾಡಿ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ ಯೋಜನೆಯ ಪಾಲುದಾರ ಕುಟುಂಬಗಳ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ 2007ರಲ್ಲಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಶ್ರೀ ಹೆಗ್ಗಡೆಯವರು ಆರಂಭಿಸಿದರು. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮಾಸಿಕ ರೂ. 400 ರಿಂದ 1,000 ದವರೆಗೆ ಸುಜ್ಞಾನನಿಧಿ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಇದುವರೆಗೆ 97 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರೂ. 114.50 ಕೋಟಿಗೂ ಅಧಿಕ ಮೊತ್ತದ ಶಿಷ್ಯವೇತನವನ್ನು ವಿತರಿಸಲಾಗಿದೆ. ಇದೀಗ 2024 – 2025ರ ಸಾಲಿನ ಶಿಷ್ಯವೇತನಕ್ಕೆ ಅರ್ಜಿಯನ್ನು ವಿದ್ಯಾರ್ಥಿಗಳಿಂದ ಆಹ್ವಾನಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
# ವಿದ್ಯಾರ್ಥಿಗಳ ತಂದೆ/ತಾಯಿ ಯೋಜನೆಯ ಸಂಘದಲ್ಲಿರಬೇಕು.
# 30.06.2023 ಮೊದಲು ಪ್ರಾರಂಭಿಸಲಾದ ಕ್ರಿಯಾಶೀಲ ಸಂಘದಲ್ಲಿದ್ದು ಸಂಘ ‘ಎಸ್’, ‘ಎ ಪ್ಲಸ್’, ‘ಎ’, ‘ಬಿ’ ಶ್ರೇಣಿಯಲ್ಲಿರಬೇಕು.
# ಬಿ.ಪಿ.ಎಲ್. ಪಡಿತರ ಹೊಂದಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
# 01.04.2024ರ ನಂತರ ಕಾಲೇಜಿಗೆ ದಾಖಲಾದ ಮೊದಲ ಸೆಮಿಸ್ಟರ್ನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. (ಈ ಬಗ್ಗೆ ಕಾಲೇಜು ದೃಢೀಕರಣದಲ್ಲಿ ದಾಖಲಾತಿಯ ಬಗ್ಗೆ ಸರಿಯಾದ ಮಾಹಿತಿಯ ವಿವರಗಳನ್ನು ತುಂಬಿ ಕಾಲೇಜು ಮುಖ್ಯಸ್ಥರ ಸಹಿ ಮತ್ತು ಸ್ಪಷ್ಟವಾದ ಮೊಹರನ್ನು ಹಾಕಿಸಬೇಕು.)
# ಮೊದಲನೇ ವ್ಯಾಸಂಗ ವರ್ಷದ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸದೇ ಇದ್ದರೆ ಎರಡನೇ ವರ್ಷಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅವಶ್ಯಕ ದಾಖಲಾತಿಗಳು:
# ಸುಜ್ಞಾನನಿಧಿ ಶಿಷ್ಯವೇತನ ಮನವಿ ಪತ್ರ (ನಮೂನೆ 1)
# ವಿದ್ಯಾರ್ಥಿಯು ಪ್ರಸ್ತುತ ವರ್ಷ ಆಯ್ಕೆ ಮಾಡಿರುವ ಕಾಲೇಜಿನ ದೃಢೀಕರಣ ಹಾಗೂ ಶುಲ್ಕ ಪಾವತಿ ರಶೀದಿ. (ನಮೂನೆ 2)
# ಎಸ್ಸೆಸ್ಸೆಲ್ಸಿ ಅಂಕಪಟ್ಟಿ.
# ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್.
# ವಿದ್ಯಾರ್ಥಿಯ ಆಧಾರ್ ಕಾರ್ಡ್.
#ವಿದ್ಯಾರ್ಥಿಯ ಕುಟುಂಬದ ಬಿ.ಪಿ.ಎಲ್. ಪಡಿತರ ಚೀಟಿ.
# ಪೋಷಕರ ಸಂಘದ ನಿರ್ಣಯ ಪುಸ್ತಕ.
# ಪ್ರಸ್ತುತ ಕೋರ್ಸ್‌ಗೆ ಅರ್ಹತೆ ಪಡೆದ ಹಿಂದಿನ ವರ್ಷದ ಅಧ್ಯಯನದ ಅಂಕಪಟ್ಟಿ.
ಶಿಷ್ಯವೇತನ: ನವೀಕರಣಕ್ಕೆ ಬೇಕಾದ ಅವಶ್ಯಕ ದಾಖಲಾತಿಗಳು
# ಸುಜ್ಞಾನನಿಧಿ ಶಿಷ್ಯವೇತನ ಮನವಿ ಪತ್ರ (ನಮೂನೆ 1)
# ಪ್ರಸ್ತುತ ವರ್ಷದ ಕಾಲೇಜಿನ ದೃಢೀಕರಣ ಹಾಗೂ ಶುಲ್ಕ ಪಾವತಿ ರಶೀದಿ. (ನಮೂನೆ 2)
# ಎಸ್ಸೆಸೆಲ್ಸಿ ಅಂಕಪಟ್ಟಿ,
# ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್.
# ವಿದ್ಯಾರ್ಥಿಯ ಆಧಾರ್ ಕಾರ್ಡ್.
# ವಿದ್ಯಾರ್ಥಿಯ ಕುಟುಂಬದ ಪಡಿತರ ಚೀಟಿ.
# ಪೋಷಕರ ಸಂಘದ ನಿರ್ಣಯ ಪುಸ್ತಕ.
# ಹಿಂದಿನ ವರ್ಷ ವ್ಯಾಸಂಗ ನಡೆಸಿದ ಕೋರ್ಸಿನ ಅಂಕಪಟ್ಟಿ.
ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವುದು ಎಲ್ಲಿ?
ತಮ್ಮ ತಾಲೂಕಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯನ್ನು ಸಂಪರ್ಕಿಸಿ ಅಲ್ಲಿಯೇ ಅರ್ಜಿ ಸಲ್ಲಿಸಬೇಕು.
ಸುಜ್ಞಾನನಿಧಿ ಶಿಷ್ಯವೇತನಕ್ಕೆ ನವೀಕರಣ ಅರ್ಜಿ:
ವಿದ್ಯಾರ್ಥಿಯು 2023 24ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಕೋರ್ಸಿನ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಮಾತ್ರ ನವೀಕರಣ ಅರ್ಜಿ ಸಲ್ಲಿಸಲು ಅವಕಾಶವಿದೆ.
ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
▶ಸುಜ್ಞಾನನಿಧಿ ಶಿಷ್ಯವೇತನದ ಮನವಿ ಪತ್ರ (ನಮೂನೆ 1)- CLICK HERE
▶ಶಿಕ್ಷಣ ಸಂಸ್ಥೆಯ ದೃಢೀಕರಣ (ನಮೂನೆ 2)ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ- CLICK HERE
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ:03.10.2024
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:31.03.2025