Implementation of “Kalotsava” program for the year 2024-25

2024-25ನೇ ಸಾಲಿನ “ಕಲೋತ್ಸವ”( Kalotsava) ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು.

Kalotsava- ಕಲಾ ಉತ್ಸವ ಕಾರ್ಯಕ್ರಮ ಶಾಲಾ ಶಿಕ್ಷಣ ಇಲಾಖೆಯ ಒಂದು ಉಪಕ್ರಮವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯ, (MoE) ಭಾರತ ಸರ್ಕಾರ ಶಿಕ್ಷಣದಲ್ಲಿ ಕಲೆಗಳನ್ನು ಪೋಷಿಸಲು ಹಾಗೂ ಉತ್ತೇಜಿಸಲು ಕಲೋತ್ಸವ (Kalotsava) ಕಾರ್ಯಕ್ರಮವನ್ನು – 2015 ರಲ್ಲಿ ಪ್ರಾರಂಭಿಸಿ, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಅದರ ರೋಮಾಂಚಕ ವೈವಿಧ್ಯತೆಯ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲು, ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾ ಸೌಂದರ್ಯದ ಮಹತ್ವವನ್ನು ಗುರುತಿಸಿ, ಅವರಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಕಲೋತ್ಸವ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ಕಲೆ ಮತ್ತು ಸಂಸ್ಕೃತಿಯ ಪ್ರಚಾರಕ್ಕೆ ಹಚ್ಚು ಒತ್ತು ನೀಡುತ್ತದೆ.

ಕಲೋತ್ಸವ (Kalotsava) ಕಾರ್ಯಕ್ರಮದ ಉದ್ದೇಶಗಳು:-

ವಿದ್ಯಾರ್ಥಿಗಳು ತಮ್ಮ ಕಲಾತ್ಮಕತೆಯನ್ನು ಅನ್ವೇಷಿಸಲು, ಅರ್ಥ ಮಾಡಿಕೊಳ್ಳಲು ಮತ್ತು

ಪ್ರದರ್ಶಿಸಲು ಸಹಾಯ ಮಾಡುವುದು. ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಪ್ರತಿಭೆಯನ್ನು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬಳಸುವುದು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶ, ಉತ್ತಮ ವೇದಿಕ ಮತ್ತು ವಾತಾವರಣ ಒದಗಿಸುವುದು.

ವಿದ್ಯಾರ್ಥಿಗಳಲ್ಲಿ ಅರಿವಿನ ಹಾಗೂ ಸೃಜನ ಶೀಲ ಸಾಮರ್ಥ್ಯವನ್ನು ಹೆಚ್ಚಿಸುವುದು. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು.

ಪ್ರಸ್ತುತ ವರ್ಷದ ಕಲಾ ಪ್ರಕಾರಗಳು

ಎನ್.ಸಿ.ಇ.ಆ‌ರ್.ಟಿ ನವದೆಹಲಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರ್ಕಾರವು ಪ್ರಸ್ತುತ ಸಾಲಿನ ಕಲೋತ್ಸವದಲ್ಲಿ ಈ ಕೆಳಕಂಡ ಸಾಂಪ್ರದಾಯಿಕ/ಶಾಸ್ತ್ರೀಯ/ಜಾನಪದ ಶೈಲಿಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ.

1.ಗಾಯನ ಸಂಗೀತ

ಶಾಸ್ತ್ರೀಯ ವೈಯಕ್ತಿಕ/ ಜಾನಪದ ಅಥವಾ ಬುಡಕಟ್ಟು ವೈಯಕ್ತಿಕ/ ಭಕ್ತಿಪ್ರಧಾನ ವೈಯಕ್ತಿಕ ಅಥವಾ ಸಾಮೂಹಿಕ ಗುಂಪು(ಗರಿಷ್ಠ 5 ಜನ ವಿದ್ಯಾರ್ಥಿಗಳು)/ ಜಾನಪದ ಅಥವಾ ಬುಡಕಟ್ಟು ಗುಂಪು/ ಭಕ್ತಿಪ್ರಧಾನ ಗುಂಪು/ ದೇಶಭಕ್ತಿ ಗುಂಪು.

2.ವಾದ್ಯ ಸಂಗೀತ ಶಾಸ್ತ್ರೀಯ ವ್ಯಯಕ್ತಿಕ(ಮಲೋಡಿಕ್ ಮತ್ತು ತಾಳವಾದ್ಯ), ಆರ್ಕೆಸ್ಟ್ರಾ ಮೇಳ (ಜಾನಪದ ಅಥವಾ ಶಾಸ್ತ್ರೀಯ)

3.ನೃತ್ಯ ಶಾಸ್ತ್ರೀಯ ನೃತ್ಯ ವೈಯಕ್ತಿಕ, ಪ್ರಾದೇಶಿಕ ಜಾನಪದ/ಬುಡಕಟ್ಟು ಗುಂಪು, ಸಮಕಾಲಿನ ನೃತ್ಯ ಸಂಯೋಜನೆ ಗುಂಪು(ಚಲನ ಚಿತ್ತೇತರ)

4.ರಂಗಕಲೆ ಮೊನೂ ಆಕ್ಸಿಂಗ್/ಮಿಮಿಕ್ರಿ ಸೋಲೋ ಅಥವಾ ಮೈಮ್ ಗುಂಪು/ ನಾಟಕ ಗುಂಪು.

5.ದೃಶ್ಯಕಲೆಗಳು 2 ಆಯಾಮ ಅಥವಾ 3 ಆಯಾಮ ಸ್ಥಳೀಯ ಆಟಿಕೆಗಳು ಮತ್ತು ಆಟಗಳು ಅಥವಾ ಸ್ಥಳೀಯ ಕರಕುಶಲ ವಸ್ತುಗಳು.

6.ಸಾಂಪ್ರದಾಯಿಕ ಕಥೆ ಹೇಳುವಿಕೆ ಯಾವುದೇ ಸಾಂಪ್ರದಾಯಿಕ ಶೈಲಿ.

ಅರ್ಹತೆ ಏನು?

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 9ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಲಾ ಉತ್ಸವವು ‘ದಿವ್ಯಾಂಗ’ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಒಂದು ಕಲೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಫ್‌ಲೈನ್ ಮೂಲಕ ನಡೆಸಲಾಗುವುದು. ಹಿಂದಿನ ವರ್ಷಗಳಲ್ಲಿ ರಾಷ್ಟ್ರಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ,

ಕಾರ್ಯಕ್ರಮ ಅನುಷ್ಠಾನ ಪ್ರಕ್ರಿಯೆ ಹೇಗೆ?

ಶಾಲಾ ಹಂತ:

ಇದು ಕಲೋತ್ಸವದ ಪ್ರಥಮ ಹಂತವಾಗಿದೆ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಕಲೋತ್ಸವದ ಮಾರ್ಗಸೂಚಿಯಂತೆ ಮಾರ್ಗದರ್ಶನ ನೀಡುವುದು ಹಾಗೂ ವಿದ್ಯಾರ್ಥಿಗಳು ಸ್ಪರ್ಧೆಯ ನಿಯಮಗಳನ್ನು ತಿಳಿದುಕೊಂಡು ತಮ್ಮ ಕಲಾ ಪ್ರಕಾರವನ್ನು (ಪ್ರದರ್ಶನ ಮತ್ತು ರಚನೆ) 5 ನಿಮಿಷಗಳಿಗೆ ಮೀರದಂತೆ ಚಿತ್ರೀಕರಣ ಮಾಡಿ (30MB) https://sdcedn.karnataka.gov.in ವೆಬ್‌ಸೈಟ್‌ನಲ್ಲಿರುವ ಲಿಂಕ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಗುರುತಿನ (ಸ್ಯಾಟ್ಸ್) ಸಂಖ್ಯೆಯನ್ನು ನಮೂದಿಸಿ, ತಮ್ಮ ಪ್ರಸ್ತುತಿಯನ್ನು ಹಾಗೂ ಪ್ರಸ್ತುತಿಯ ಕುರಿತು ಸಾರಾಂಶವನ್ನು 100 ಪದಗಳಿಗೆ ಮೀರದಂತೆ ಕಂಪ್ಯೂಟರ್ ವರ್ಡ್ ಡಾಕ್ಯುಮೆಂಟ್ ರೂಪದಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಟೈಪ್ ಮಾಡಿ ಕೊಟ್ಟಿರುವ ಸೂಕ್ತ ಸ್ಥಳದಲ್ಲಿ ದಿನಾಂಕ:22.11.2024 ರೊಳಗೆ ಅಪ್‌ಲೋಡ್ ಮಾಡಲು ಕ್ರಮ ವಹಿಸುವುದು. (ಕಲೆಯ ಸ್ಥಳ, ಮೂಲ, ಅದರ ಅಭ್ಯಾಸದಲ್ಲಿ ತೊಡಗಿರುವ ಸಮುದಾಯಗಳು, ಯಾವ ವಿಶೇಷ ಸಂದರ್ಭಗಳಲ್ಲಿ ಕಲಾಪ್ರಕಾರವನ್ನು ತಯಾರಿಸಲಾಗುವುದು/ಪ್ರದರ್ಶಿಸಲಾಗುತ್ತದೆ. ವೇಷಭೂಷಣಗಳು, ಜೊತೆಯಲ್ಲಿರುವ ವಾದ್ಯಗಳು, ಪರಿಸರದೊಂದಿಗೆ ಅದರ ಸಂಪರ್ಕ, ಅದರ ಶೈಲಿ, ತಂತ್ರಗಳು, ಯಾವ ವಸ್ತುಗಳನ್ನು ಬಳಸಲಾಗುತ್ತದೆ. ಇತ್ಯಾದಿಗಳನ್ನೊಳಗೊಂಡ ಕಲಾ ಪ್ರಕಾರ ಕುರಿತು ಸಾರಾಂಶವನ್ನು ಛಾಯಚಿತ್ರದೊಂದಿಗೆ ಸಲ್ಲಿಸುವುದು) ಪ್ರಸ್ತುತಿಯನ್ನು ಅಪ್‌ಲೋಡ್ ಮಾಡಿದ ಕೂಡಲೇ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶ ತಲುಪುವುದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪ್ರಮಾಣಪತ್ರವನ್ನು ಪಡೆಯಲು ಸೂಚಿಸುವುದು.

ಗುಂಪಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಂಡದ ನಾಯಕನ ಮೂಲಕ ಪ್ರಸ್ತುತಿಯನ್ನು ಹಾಗೂ ತಂಡದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವುದು. ಬಹುಮಾನದ ಮೊತ್ತವನ್ನು ತಂಡದಲ್ಲಿ ಭಾಗವಹಿಸಿದವರೊಂದಿಗೆ ಹಂಚಿಕೊಳ್ಳುವುದು.

ರಾಜ್ಯ ಮಟ್ಟದ ಮೌಲ್ಯ ಮಾಪನ ಸಮಿತಿ.

ರಾಜ್ಯ ಹಂತದಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕರವರ ಅಧ್ಯಕ್ಷತೆಯಲ್ಲಿ ನಿರ್ದೇಶಕರು (ಗುಣಮಟ್ಟ) ಸಹನಿರ್ದೇಶಕರು (ಗುಣಮಟ್ಟ) ಹಿರಿಯ ಕಾರ್ಯಕ್ರಮಾಧಿಕಾರಿಗಳು(ಗುಣಮಟ್ಟ)ಕಲೋತ್ಸವ ನೋಡಲ್ ಅಧಿಕಾರಿ, ಸಂಗೀತ, ನೃತ್ಯ, ನಾಟಕ ಹಾಗೂ ಚಿತ್ರಕಲೆ ಶಿಕ್ಷಕರನ್ನೊಳಗೊಂಡ (ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರು) ಮೌಲ್ಯಮಾಪನ ಸಮಿತಿಯು ಇರುತ್ತದೆ.

ಈ ಸಮಿತಿಯು ಶಾಲಾ ಹಂತದಿಂದ ಜಿಲ್ಲಾ ಮಟ್ಟಕ್ಕೆ ಸ್ವೀಕರಿಸಿದ ನಮೂದುಗಳನ್ನು ಆನ್‌ಲೈನ್ ಮೂಲಕ ಪರಿಶೀಲಿಸಿ, ಪ್ರತಿ ಸ್ಪರ್ಧೆಯಲ್ಲಿ ಉತ್ತಮವಾದ/ಅರ್ಹವಾದ ಹಾಗೂ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯು ಆಯ್ಕೆಯ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ, ಮೌಲ್ಯಮಾಪನಗಾರರಿಗೆ ಮೌಲ್ಯಮಾಪನ ಮಾಡಲು Login id ಯನ್ನು ರಾಜ್ಯ ಕಛೇರಿಯಿಂದ ನೀಡಲಾಗುವುದು.

ಪ್ರತಿ ಕಲಾ ಪ್ರಕಾರದಿಂದ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಬೇಕಾದ ವಿಜೇತ ವಿದ್ಯಾರ್ಥಿಗಳ ಸಂಖ್ಯೆ.

 

ಜಿಲ್ಲಾ ಹಂತದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಸ್ನಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ನಗದು ಬಹುಮಾನ ನೀಡಲಾಗುವುದು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಮೌಲ್ಯಮಾಪಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಪ್ರಸ್ತುತಿಯನ್ನು ಉತ್ತಮ ಪಡಿಸಿಕೊಳ್ಳಲು ಬೇಕಾದ ಅಂಶಗಳನ್ನು ಗುರುತಿಸಿ, ನಿಗದಿಪಡಿಸಿದ ಮೌಲ್ಯಮಾಪನ ಸ್ಥಳದಲ್ಲಿ ದಾಖಲಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನಿರಂತರವಾಗಿ ನೀಡುವುದು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಪ್ರಸ್ತುತಿಯನ್ನು ಪುನ: ನಿಗದಿತ ದಿನಾಂಕದೊಳಗೆ ಆಫ್ಲೋಡ್ ಮಾಡುವುದು.

ರಾಜ್ಯ ಮಟ್ಟದಲ್ಲಿ ಕಲೋತ್ಸವ:

ರಾಜ್ಯ ಮಟ್ಟದಲ್ಲಿ ಪ್ರತಿ ಕಲಾ ಪ್ರಕಾರದಲ್ಲಿ ಪ್ರಥಮ, ಸ್ನಾನ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರಾಷ್ಟ್ರ ಮಟ್ಟಕ್ಕೆ ಸಲ್ಲಿಸುವುದು.

ರಾಷ್ಟ್ರಮಟ್ಟದಲ್ಲಿ ಕಲೋತ್ಸವ:

ಇದು ಕಲೋತ್ಸವದ ಅಂತಿಮ ಹಂತವಾಗಿದ್ದು, ರಾಜ್ಯ ಮಟ್ಟದಲ್ಲಿ ಪ್ರತಿ ಕಲಾ ಪ್ರಕಾರಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಡಿಸೆಂಬರ್-2024ರ ಮೊದಲನೆ ವಾರದಲ್ಲಿ ನಡೆಸಲಾಗುವುದು.

ರಾಷ್ಟ್ರಮಟ್ಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರದೊಂದಿಗೆ ನಗದು ಬಹುಮಾನವನ್ನು ನೀಡಲಾಗುವುದು..

ಸ್ಪರ್ಧೆಗಳ ವಿವರ ಈ ಕೆಳಗಿನಂತೆ ನೀಡಲಾಗಿದೆ.

 

ಮೇಲಿನ 6 ಕಲಾಪ್ರಕಾರಗಳಲ್ಲಿನ ಉಪ ವರ್ಗಗಳಲ್ಲಿ ಯಾವುದಾದರು 1 ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಗುಂಪು ಅಥವಾ ಏಕವ್ಯಕ್ತಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಸ್ಪರ್ಧೆಯ ನಿಯಮಗಳು ಹಾಗೂ ಮೌಲ್ಯಮಾಪನದಲ್ಲಿ ಅನುಸರಿಸಬೇಕಾದ ಮಾನದಂಡಗಳು ಈ ಕೆಳಗಿನಂತಿವೆ.

1.ಗಾಯನ ಸಂಗೀತ

ಯಾವುದೇ ಒಂದು ನಿರ್ದಿಷ್ಟ ಶೈಲಿ ಅಥವಾ ಗಾಯನ ಸಂಗೀತದ ಉಪ-ವರ್ಗದಲ್ಲಿನ ಯಾವುದಾದರೂ ಒಂದು ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳುವುದು.

1.ಶಾಸ್ತ್ರೀಯ ಸಂಗೀತ (ಸೋಲೋ)

2.ಸಾಂಪ್ರದಾಯಿಕ ಜಾನಪದ/ಬುಡಕಟ್ಟು (ಸೋಲೋ)

3.ಭಕ್ತಿ ಪ್ರಧಾನ(ಸೋಲೋ)

4.ಸಮೂಹ ಗಾಯನ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

5.ಜಾನಪದ/ಬುಡಕಟ್ಟು (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

6.ಭಕ್ತಿ ಪ್ರಧಾನ( ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

7.ದೇಶಭಕ್ತಿ ಗೀತೆಗಳು (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

 ಸ್ಪರ್ಧೆಯ ಮಾರ್ಗಸೂಚಿ

ಪ್ರದರ್ಶನದ ಅವಧಿ 4-6 ನಿಮಿಷಗಳು.

ಉಡುಪುಗಳು, ವೇದಿಕೆಗಳು, ರಂಗಪರಿಕರಗಳು ಮತ್ತು ಗುಣಲಕ್ಷಣಗಳು ಪ್ರಸ್ತುತಿಗೆ ಸಂಬಂಧಿಸಿರಬೇಕು.

ವೃತ್ತಿಪರ ಮತ್ತು ವಾಣಿಜ್ಯ ಟ್ರ್ಯಾಕ್‌ಗಳನ್ನು ಅನುಮತಿಸಲಾಗುವುದಿಲ್ಲ.(ಹಿನ್ನೆಲೆ ಸಂಗೀತ ಮತ್ತು ಧ್ವನಿ ಮುದ್ರಿತ)

ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಸಂಘಟಕರು ಸ್ಪರ್ಧೆಗೆ ಬೇಕಾದ ಪರಿಕರಗಳನ್ನು ಒದಗಿಸುತ್ತಾರೆ. ಉದಾ: ತಬಲಾ, ಧೋಲಕ್, ದೋಲ್, ನಾಲ್, ಹಾರ್ಮೋನಿಯಂ, ಕೀಬೋರ್ಡ್.

ಗಾಯನ ಸಂಗೀತ – (ಎಲ್ಲಾ ವರ್ಗಗಳು)

2.ವಾದ್ಯ ಸಂಗೀತ

ಯಾವುದೇ ಒಂದು ನಿರ್ದಿಷ್ಟ ಶೈಲಿ ಅಥವಾ ವಾದ್ಯ ಸಂಗೀತದ ಉಪ-ವರ್ಗದಲ್ಲಿನ ಯಾವುದಾದರೂ ಒಂದು ಕಲಾಪ್ರಕಾರವನ್ನು ಆಯ್ಕೆ ಮಾಡಕೊಳ್ಳುವುದು.

1.ಶಾಸ್ತ್ರೀಯ – ತಾಳವಾದ್ಯ (ಸೋಲೋ)

2.ಶಾಸ್ತ್ರೀಯ – ಸುಮಧುರ ವಾದ್ಯ (ಸೋಲೋ)

3.ಆರ್ಕೆಸ್ಟ್ರಾ – ಇನ್ಸು ಮೆಂಟಲ್ ಎನ್ಸೆಂಬಲ್, ಜಾನಪದ/ಶಾಸ್ತ್ರೀಯ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

ಸ್ಪರ್ಧೆಯ ಮಾರ್ಗಸೂಚಿ

ವಾದ್ಯ ಸಂಗೀತ ತಾಳ ವಾದ್ಯವು ಭಾರತೀಯ ಸಂಗೀತವನ್ನು ಒಳಗೊಂಡಿದೆ. ವಾದ್ಯಗಳು-ಮೃದಂಗ, ಎಡಕ್ಕ, ತಬಲಾ, ಧೋಲ್, ನಾಲ್ ಇತ್ಯಾದಿ ವಾದ್ಯಗಳು.

ಸುಮಧುರ ವಾದ್ಯ ಸಂಗೀತವು(ಯಾವುದೇ ಸ್ಟ್ರಿಂಗ್ ಅಥವಾ ಏರೋಫೋನ್) ವಾದ್ಯಗಳು ವಯಲಿನ್ ನಂತಹ ಭಾರತೀಯ ಇಂಪಾದ ವಾದ್ಯಗಳನ್ನು ಒಳಗೊಂಡಿದೆ. ಉದಾ: ಸಿತಾರ್, ಕೊಳಲು, ಸರೋದ್, ವೀಣೆ, ಶಹನಾಯಿ,ಸಂತೂರ್ ಇತ್ಯಾದಿ.

ಪ್ರದರ್ಶನದ ಅವಧಿ 4-6 ನಿಮಿಷಗಳು.

ಉಡುಪುಗಳು, ವೇದಿಕೆಗಳು, ರಂಗಪರಿಕರಗಳು ಮತ್ತು ಗುಣಲಕ್ಷಣಗಳು ಪ್ರಸ್ತುತಿಗೆ ಸಂಬಂಧಿಸಿರಬೇಕು.

ಸ್ವದೇಶಿ ಸಂಗೀತ ವಾದ್ಯಗಳನ್ನು ಮಾತ್ರ ಅನುಮತಿಸಲಾಗುವುದು.

ಎಲೆಕ್ಟ್ರಾನಿಕ್ ಅಥವಾ ಪ್ರೋಗ್ರಾಮ್ ಮಾಡಲಾದ ಸಂಗೀತ ಉಪಕರಣವನ್ನು ಅನುಮತಿಸಲಾಗುವುದಿಲ್ಲ.

 

3. ನೃತ್ಯ:

ಯಾವುದೇ ಒಂದು ನಿರ್ದಿಷ್ಟ ಶೈಲಿ ಅಥವಾ ನೃತ್ಯದ ಉಪ-ವರ್ಗದಲ್ಲಿನ ಯಾವುದಾದರೂ ಒಂದು ಕಲಾಪ್ರಕಾರವನ್ನು ಆಯ್ಕೆ ಮಾಡಕೊಳ್ಳುವುದು.

1.ಶಾಸ್ತ್ರೀಯ ನೃತ್ಯ (ಸೋಲೋ)

2.ಪ್ರಾದೇಶಿಕ ಜಾನಪದ ಅಥವಾ ಬುಡಕಟ್ಟು ನೃತ್ಯ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

3.ಚಲನಚಿತ್ರವಲ್ಲದ ಸಮಕಾಲೀನ ನೃತ್ಯ ಸಂಯೋಜನೆ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

ಸ್ಪರ್ಧೆಯ ಮಾರ್ಗಸೂಚಿ ಈ ಕೆಳಗಿನಂತೆ ನೀಡಲಾಗಿದೆ.

ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಭರತನಾಟ್ಯ, ಕಥಕ್, ಸತ್ರಿಯಾ, ಕೂಚಿಪುಡಿ,ಮೋಹಿನಿಯಾಟ್ಟಂ, ಕಥಕ್ಕಳಿ ಸೆರ್ರೈಕೆಲ್ಲ ಛೌ ಮತ್ತು ಮಣಿಪುರಿ.

ಸಾಂಪ್ರದಾಯಿಕ ಜಾನಪದ ನೃತ್ಯವು ಯಾವುದೇ ರಾಜ್ಯದ/ಪ್ರದೇಶದ ಸಾಂಪ್ರದಾಯಿಕ ಜಾನಪದವಾಗಿರಬಹುದು.

ಗುಂಪು ನೃತ್ಯಗಳು ಸಾಂಪ್ರದಾಯಿಕ ಜಾನಪದ ರೂಪಗಳಲ್ಲಿರಬಹುದು.

ಸಮಕಾಲೀನ ವಿಷಯಾಧಾರಿತ ಆಧರಿಸಿರಬೇಕು ಪ್ರಸ್ತುತಿಯು ಚಲನಚಿತ್ರವಲ್ಲದ ಸಂಗೀತವನ್ನು

ಪ್ರದರ್ಶನ ಅವಧಿ 4-6 ನಿಮಿಷಗಳು.

ಸಂಗೀತವನ್ನು ರೆಕಾರ್ಡ್ ಮಾಡಬಹುದು ಅಥವಾ ಲೈವ್ ಆಗಿ ಪ್ಲೇ ಮಾಡಬಹುದು. ಹೆಚ್ಚಿನ ವಿದ್ಯಾರ್ಥಿಗಳು ಲೈವ್ ಸಂಗೀತಕ್ಕಾಗಿ ಅನುಮತಿಸಲಾಗುವುದು.

ಉಡುಪುಗಳು, ಸರಳ ಮೇಕಪ್, ಅಧಿಕೃತ ವಿಷಯಾಧಾರಿತವಾಗಿರಬೇಕು ಪ್ರಸ್ತುತಿಗೆ ಸಂಬಂಧಿಸಿರಬೇಕು. ಹಾಗೂ ತಂಡಗಳು ಅತ್ಯಂತ ಸರಳ ಮತ್ತು ಕನಿಷ್ಠ ಸೆಟ್‌ಗಳು, ವೇಷಭೂಷಣಗಳು ಇತ್ಯಾದಿಗಳನ್ನು ಹೊಂದಿರತಕ್ಕದ್ದು.

 

4.ನಾಟಕ

ಯಾವುದೇ ಒಂದು ನಿರ್ದಿಷ್ಟ ಶೈಲಿ ಅಥವಾ ನಾಟಕದ ಉಪ-ವರ್ಗದಲ್ಲಿನ ಯಾವುದಾದರೂ ಒಂದು ಕಲಾಪ್ರಕಾರವನ್ನು ಆಯ್ಕೆ ಮಾಡಕೊಳ್ಳುವುದು.

1.ಮೊನೊ ಆಕ್ಟ್

2.ಮಿಮಿಕ್ರಿ (ಸೋಲೋ)

3.ಮೈಮ್ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

4.ನಾಟಕ (ಗರಿಷ್ಠ 5 ವಿದ್ಯಾರ್ಥಿಗಳ ಗುಂಪು)

ಸ್ಪರ್ಧೆಯ ಮಾರ್ಗಸೂಚಿ

ಗುಂಪು ನಾಟಕದಲ್ಲಿ, ಗರಿಷ್ಠ 5 ಜನ ವಿದ್ಯಾರ್ಥಿಗಳು ಭಾಗವಹಿಸಬಹುದು. ನಾಟಕವು ಆಧುನಿಕ ರಂಗಭೂಮಿಯ ಯಾವುದೇ ಪ್ರಾದೇಶಿಕ ರೂಪದಲ್ಲಿರಬಹುದು, ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಜೀವನದ ಗ್ಲಿಂಪ್ಸಸ್ ಅನ್ನು ಸಂಯೋಜಿಸುವುದು, ಅಂದರೆ, ಪ್ರಖ್ಯಾತ ಸಮಾಜ ಸುಧಾರಕ, ಕಲಾವಿದ, ರಾಜ್ಯದ ಉತ್ತಮ ಬರಹಗಾರ, ಕವಿ, ವಿಜ್ಞಾನಿ ಅಥವಾ ಸ್ವಾತಂತ್ರ ಹೋರಾಟಗಾರ,

ಪ್ರದರ್ಶನದ ಅವಧಿ 6-8 ನಿಮಿಷಗಳು

ವೇದಿಕೆಯ ಸಿದ್ಧತೆಗೆ(ತಾಂತ್ರಿಕ ಸಿದ್ಧತೆ) 5 ನಿಮಿಷಗಳು ಹಾಗೂ ವೇದಿಕೆಯನ್ನು ತೆರವುಗೊಳಿಸಲು 5 ನಿಮಿಷಗಳ ಅವಕಾಶವಿರುತ್ತದೆ.

ಪ್ರದರ್ಶನವು ಯಾವುದೇ ಪ್ರಾದೇಶಿಕ ಭಾಷೆ ಅಥವಾ ಉಪ ಭಾಷೆಯಲ್ಲಿರಬಹುದು.

ವೇಷಭೂಷಣಗಳು, ವೇದಿಕೆ-ಸಜ್ಜಿಕೆ, ರಂಗ ಪರಿಕರಗಳು ಇತ್ಯಾದಿಗಳನ್ನು ವಿದ್ಯಾರ್ಥಿಗಳೇ ಒದಗಿಸಿಕೊಳ್ಳುವುದು.

ಹಿನ್ನೆಲೆ ಸಂಗೀತಕ್ಕಾಗಿ ಟ್ರಾಕ್‌ಗಳು ಅಥವಾ ರೆಕಾರ್ಡ್ ಮಾಡಿದ ಸಂಗೀತವನ್ನು ಬಳಸಬಹುದು.

 

5.ದೃಶ್ಯ ಕಲೆಗಳು

ಯಾವುದೇ ಒಂದು ನಿರ್ದಿಷ್ಟ ಶೈಲಿ ಅಥವಾ ದೃಶ್ಯ ಕಲೆಯ ಉಪ-ವರ್ಗದಲ್ಲಿನ ಯಾವುದಾದರೂ ಒಂದು ಕಲಾಪ್ರಕಾರವನ್ನು ಆಯ್ಕೆ ಮಾಡಕೊಳ್ಳುವುದು.

1.2 ಆಯಾಮದ ದೃಶ್ಯ ಕಲೆಗಳು- ಚಿತ್ರಕಲೆ, ಪೇಂಟಿಂಗ್, ಮುದ್ರಣ, ಕಾರ್ಟೂನ್ ಮತ್ತು ವ್ಯಂಗ್ಯಚಿತ್ರ.

2.3 ಆಯಾಮದ ದೃಶ್ಯ ಕಲೆಗಳು- ಶಿಲ್ಪಕಲೆ

3.ಸ್ಥಳೀಯ ಆಟಿಕೆಗಳು ಮತ್ತು ಆಟಗಳು.

4.ಸ್ಥಳೀಯ ಕರಕುಶಲ ವಸ್ತುಗಳು.

ಸ್ಪರ್ಧೆಯ ಮಾರ್ಗಸೂಚಿ

2023-24ನೇ ಸಾಲಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಲಾಕೃತಿಗಳನ್ನು ಅನುಮತಿಸಲಾಗುವುದಿಲ್ಲ.

2D ಕಲಾಕೃತಿಯು 2 x 3 ಅಡಿಗಳಿಗಿಂತ ದೊಡ್ಡದಿರಬಾರದು. 3D ಕಲಾಕೃತಿಯು 2 x 2 x 2 ಅಡಿಗಳಿಗಿಂತ ದೊಡ್ಡದಿರಬಾರದು. ಸ್ಥಳೀಯ ಆಟಿಕೆಗಳು ಮತ್ತು ಆಟಗಳಿಗೆ ಗರಿಷ್ಠ ಸಂಖ್ಯೆಯ ಆಟಿಕೆಗಳು ನಾಲ್ಕು ಮಾತ್ರ. ವಸ್ತು ಮತ್ತು ಮಾಧ್ಯಮದ ಆಯ್ಕೆಯು ವಿದ್ಯಾರ್ಥಿಯ ಆಯ್ಕೆಯಾಗಿರುತ್ತದೆ.

ದೃಶ್ಯ ಕಲೆಗಳ ಉಪ-ವರ್ಗಗಳಿಗೆ ಬಳಸುವ ಎಲ್ಲಾ ವಸ್ತುಗಳು ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯವಾಗಿರಬೇಕು.

ಸ್ವದೇಶಿ ಆಟಿಕೆಗಳಲ್ಲಿ ತಯಾರಿಕೆಯು ಮೂಲ ವಿನ್ಯಾಸವು ಕ್ರಿಯಾತ್ಮಕ ನಿಖರತೆಯನ್ನು ಹೊಂದಿರತಕ್ಕದ್ದು.

 

6.ಸಾಂಪ್ರದಾಯಿಕ ಕಥೆ ಹೇಳುವಿಕೆ

ಸಾಂಪ್ರದಾಯಿಕ ಕಥೆ ಹೇಳುವಿಕೆಯು ನೃತ್ಯ, ನಾಟಕ, ಸಂಗೀತ ಅಥವಾ ದೃಶ್ಯ ಕಲೆಗಳು ಅಥವಾ ಒಂದಕ್ಕಿಂತ ಹೆಚ್ಚು ಕಲಾ ಪ್ರಕಾರಗಳನ್ನು ಸಂಯೋಜಿಸುವಂತಿರಬೇಕು.

ಸ್ಪರ್ಧೆಯ ಮಾರ್ಗಸೂಚಿ:

ಒಬ್ಬ ಅಥವಾ ಇಬ್ಬರು ವಿದ್ಯಾರ್ಥಿಗಳು ಸೇರಿ ಕಥೆಯನ್ನು ಹೇಳಬಹುದು.

ವೇಷಭೂಷಣಗಳು, ಮೇಕ್‌ಅಪ್, ರಂಗಪರಿಕರಗಳು ಮತ್ತು ಸಂಗೀತದ ಆಯ್ಕೆಯು ವಿದ್ಯಾರ್ಥಿಗಳಿಗೆ ಸಂಬಂಧಿಸಿರುತ್ತದೆ.

ನಿರೂಪಣೆಯು 5 ನಿಮಿಷಗಳನ್ನು ಮೀರಬಾರದು.

ಪ್ರದರ್ಶನವು ಯಾವುದೇ ಉಪಭಾಷೆ ಅಥವಾ ಭಾಷೆಯಲ್ಲಿರಬಹುದು.

ಸಾಂಪ್ರದಾಯಿಕ ಕಥೆ ಹೇಳುವಿಕೆ:

 

ಬಹುಮಾನದ ವಿವರ ಈ ಕೆಳಗೆ ನೀಡಲಾಗಿದೆ.

 

ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ರವರು ಶಾಲಾ/ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ನೀಡಿ, ವೈಯಕ್ತಿಕ ಗಮನ ಹರಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ತಮ್ಮ ಕಛೇರಿಯ ಒಬ್ಬ ಅಧಿಕಾರಿಯನ್ನು ಕಲೋತ್ಸವ ನೋಡಲ್ ಅಧಿಕಾರಿಯನ್ನಾಗಿ ನೇಮಿಸುವುದು. ಪ್ರಸ್ತುತಿಯನ್ನು ಅಫ್ ಲೋಡ್, ಮಾಡುವ, ಮೌಲ್ಯಮಾಪನ ಕಾರ್ಯ, ವಿಜೇತ ವಿದ್ಯಾರ್ಥಿಗಳ ಪಟ್ಟಿ ಪ್ರಕಟಣೆ ಇತ್ಯಾದಿ ಮಾಹಿತಿಗಾಗಿ ವಿದ್ಯಾವಾಹಿನಿ ವೆಬ್‌ಸೈಟ್‌ನ್ನು ಗಮನಿಸುವುದು.ಹೆಚ್ಚಿನ ಮಾಹಿತಿಗಾಗಿ ಸುತ್ತೋಲೆಯೊಂದಿಗೆ ಶಾಲಾ ಶಿಕ್ಷಣ ಸಚಿವಾಲಯದ ಕಲೋತ್ಸವ-2024ರ ಮಾರ್ಗಸೂಚಿಯನ್ನು ಲಗತ್ತಿಸಿದೆ.

 

CLICK HERE TO MORE INFORMATION

1 thought on “Implementation of “Kalotsava” program for the year 2024-25”

Leave a Comment