HAL Recruitment-2024: Application invitation for recruitment of various posts from HAL

HAL Recruitment-2024

Application invitation for recruitment of various posts

 

ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ರಕ್ಷಣಾ ಕ್ಷೇತ್ರದ ಸಾಮಗ್ರಿಗಳನ್ನು ಮತ್ತು ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಡಿಪ್ಲೊಮಾ ತಂತ್ರಜ್ಞ, ಆಪರೇಟ‌ರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ವಿವರ:

ಡಿಪ್ಲೊಮಾ ತಂತ್ರಜ್ಞ 51 : ಮೆಕಾನಿಕಲ್ 8, ಮೆಕಾನಿಕಲ್ ಎಫ್‌ಎಸ್‌ಆರ್ 2, ಎಲೆಕ್ಟಿಕಲ್ 2,ಎಲೆಕ್ಟಿಕಲ್‌ ಎಫ್‌ಎಸ್‌ಆರ್ 3, ಎಲೆಕ್ಟ್ರಾನಿಕ್ಸ್ 21, ಎಲೆಕ್ಟ್ರಾನಿಕ್ಸ್ -ಎಫ್ ಎಸ್‌ಆರ್ 14, ರಾಸಾಯನಿಕ 1

ಆಪರೇಟರ್ 06 : ಎಲೆಕ್ಟ್ರಾನಿಕ್ ಮೆಕಾನಿಕ್ 2, ಫಿಟ್ಟರ್ 1,ಪೇಂಟರ್ 2, ಟರ್ನರ್ 1

ವಯೋಮಿತಿ ಎಷ್ಟು?

ಅಭ್ಯರ್ಥಿಯ ಗರಿಷ್ಠ ವಯಸ್ಸು ನ.24ಕ್ಕೆ ಅನ್ವಯವಾಗುವಂತೆ 28 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಅಂಗವಿಕಲ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ,

ವಯೋಮಿತಿ ಸಡಿಲಿಕೆ:

ಅಂಗವಿಕಲ ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ 15 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.

ವೇತನ ವಿವರ:

ಡಿಪ್ಲೊಮಾ ತಂತ್ರಜ್ಞ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 23,000 ರೂ., ಆಪರೇಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 22,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ವಿವರ:

ಎಸ್ಸಿ/ಎಸ್ಟಿ/ಅಂಗವಿಕಲ/ಎಚ್‌ಎಎಲ್‌ನ ಮಾಜಿ ಅಪ್ರೆಂಟೀಸ್‌ಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ. ಸಾಮಾನ್ಯ/ ಒಬಿಸಿ/ಒಬಿಸಿ-ಎನ್‌ಸಿಎಲ್/ ಇಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳು 200ರೂ. ಅರ್ಜಿ ಶುಲ್ಕವನ್ನು ಅನ್‌ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಎಚ್‌ಎಎಲ್ ವೆಬ್‌ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ನ.24ರೊಳಗೆ ಅರ್ಜಿ ಸಲ್ಲಿಸಬೆಕು. ಸಂವಹನ ಉದ್ದೇಶಕ್ಕಾಗಿ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ ಡೌನ್‌ಲೋಡ್ ಮಾಡಲು- CLICK HERE

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು- CLICK HERE

Leave a Comment