Maurya Empire: ಮೌರ್ಯರ ಕಾಲದ ಸಾಮಾಜಿಕ ರೀತಿ-ನೀತಿಗಳು- ನೋಟ್ಸ್-01

Maurya Empire: ಮೌರ್ಯರ ಕಾಲದ ಸಾಮಾಜಿಕ ರೀತಿ.

Maurya Empire: ಮೌರ್ಯ ಅರಸರು ಸಾಮಾಜಿಕ ಜೀವನಶೈಲಿಯನ್ನು ಉತ್ತಮವಾಗಿ ನೋಡಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಬ್ರಾಹ್ಮಣರು ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದ್ದರು. ಪುರೋಹಿತರಿಗೆ ರಾಜಾಶ್ರಯ ನೀಡಲಾಗುತ್ತಿತ್ತು. ಆಯಾ ಉದ್ಯೋಗಗಳಿಗೆ ತಕ್ಕಂತೆ ಪ್ರಾಂತಾಧಿಕಾರಿಗಳಿಂದ, ಅರಸನಿಂದ ಪ್ರೋತ್ಸಾಹ ದೊರೆಯುತ್ತಿತ್ತು. ಮೌರ್ಯರ ಆಳ್ವಿಕೆಯಲ್ಲಿ ಹಿಂದೂ ಧರ್ಮದ ವರ್ಣಾಶ್ರಮ ಪದ್ಧತಿಗಳು ಗಡುಚಾಗಿಯೇ ಇದ್ದವು. ಅವುಗಳನ್ನು ಅವರು ಮೀರುವಂತೆಯೇ ಇರಲಿಲ್ಲ.

ವಂಶಪರಂಪರಾಗತವಾಗಿ ಆಯಾ ಉದ್ಯೋಗ ಕೆಲಸಗಳನ್ನು ಅವರೇ ಮಾಡಿಕೊಂಡು ಬರಲಾಗುತ್ತಿತ್ತು. ಉದಾ : ರೈತನು ಪೌರೋಹಿತ್ಯವನ್ನು ಮಾಡುವಂತೆಯೇ ಇಲ್ಲ. ಅದರಂತೆ, ಕೀಳುಜಾತಿಯವರು ಕೃಷಿಯನ್ನಾಗಲೀ, ವಾಣಿಜ್ಯ ಉದ್ಯಮಗಳನ್ನಾಗಲೀ ನಡೆಸಿಕೊಂಡು ಹೊಗುವಂತಿಲ್ಲ. ಆಯಾ ಉದ್ಯೋಗ, ಕೆಲಸಗಳನ್ನು ತಂದೆ, ಮಗ ಪರಂಪರೆಯಾಗಿ ಮುಂದುವರಿಸಿಕೊಂಡು ಹೋಗಬೇಕಾಗುತ್ತಿತ್ತು.

Maurya Empire: ಮೌರ್ಯರ ಆಳ್ವಿಕೆಯ ಅಂತಿಮ ಭಾಗದಲ್ಲಿ ವಿದೇಶೀಯರ ಸಂಪರ್ಕದಲ್ಲಿ ಈ ಪದ್ಧತಿಯನ್ನು ಆದಷ್ಟು ಕಡಿಮೆ ಮಾಡಲಾಯಿತು. ಕ್ರಮೇಣ ಹಿಂದೂ ಸಮಾಜದಲ್ಲಿ ಕೃಷಿಕರು, ಬೇಟೆಗಾರರು, ದನಗಾಹಿಗಳು, ಪುರೋಹಿತರು, ಕಾವಲುಗಾರರು, ಸಭಾಸದರು, ಸೈನಿಕರು ಹಾಗೂ ಕುಶಲ ಕಾರ್ಮಿಕರು ಇತ್ಯಾದಿ ಪ್ರಮುಖ ಜಾತಿ-ಪಂಗಡಗಳಾಗಿ ಹಂಚಿ ಹೋದರು.

ಬರಬರುತ್ತ ಶಾತವಾಹನರ ಕಾಲದಲ್ಲಿ ಈ ಬಂಧನಗಳು ಸ್ವಲ್ಪ ಸಡಿಲಗೊಂಡು ಅಂತರ್‌ಜಾತಿ ವಿವಾಹಗಳು ನಡೆಯತೊಡಗಿದವು. ಸ್ತ್ರೀಯರಿಗೆ ಸಮಾಜದಲ್ಲಿ ಗೌರವವಿತ್ತು. ಧಾರ್ಮಿಕ ಚಟುವಟಿಕೆಗಳಲ್ಲಿ ಅವರು ಸಮಾನವಾಗಿ ಭಾಗವಹಿಸುತ್ತಿದ್ದರು.

ದೊರೆಗಳೂ, ಶ್ರೀಮಂತರೂ ಹಲವಾರು ಜನ ಹೆಂಡತಿಯರನ್ನು ವರಿಸುತ್ತಿದ್ದರು. ವಿಧವೆಯರು ದೇವತಾರಾಧನೆ, ಮಕ್ಕಳ ಪರಿಪಾಲನೆಯಲ್ಲಿ ಕಾಲ ಕಳೆಯುತ್ತಿದ್ದರು. ಗುಪ್ತಚಾರರಂತೆ ಮಹಿಳೆಯರೂ ಕೆಲಸ ಮಾಡುತ್ತಿದ್ದರು. ದಾಸ್ಯತ್ವ ಅಥವಾ ಗುಲಾಮ ಪದ್ಧತಿಯು ಜಾರಿಯಲ್ಲಿತ್ತು.

ಕಮ್ಮಾರಿಕೆ ಮೊದಲಾದ ಉದ್ಯೋಗಗಳು ನಡೆಯುತ್ತಿದ್ದವು. ಕುಶಲ ಕರ್ಮಿಗಳು, ಒಕ್ಕಲುತನ ಉಪಕರಣಗಳನ್ನು, ಯುದ್ಧ – ಶಸ್ತ್ರ ಸಾಮಗ್ರಿಗಳನ್ನು ತಯಾರಿಸುತ್ತಿದ್ದರು. ನೇಕಾರಿಕೆಯು ದೊಡ್ಡ ಪ್ರಮಾಣದಿಂದ ನಡೆಯುತ್ತಿತ್ತು. ಬಂಗಾಲದ ಮಖಮಲ್ ಬಟ್ಟೆಗಳಿಗಾಗಿ ಪಶ್ಚಿಮದ ದೇಶಗಳಲ್ಲಿ ದೊಡ್ಡ ಬೇಡಿಕೆ ಇತ್ತು.

ಮೌರ್ಯರ ಕಾಲದಲ್ಲಿ ಧಾರ್ಮಿಕ ಜೀವನ :

ಗ್ರೀಕ್ ಹಾಗೂ ಲ್ಯಾಟಿನ್ ಗ್ರಂಥಗಳಿಂದಲೂ ಶಾಸನ ಹಾಗೂ ನಾಣ್ಯಗಳ ಮೇಲಿನ ಚಿತ್ರಗಳಿಂದಲೂ ತಿಳಿದು ಬರುವುದೇನೆಂದರೆ, ಮೌರ್ಯರ ಕಾಲದ ಜನರು ಇಂದ್ರ, ವರುಣ, ಅಗ್ನಿ, ಗಂಗಾ, ನದಿ, ಶಿವ, ಸ್ಕಂಧ, ವಸುದೇವ ಮುಂತಾದ ದೇವ-ದೇವತೆಗಳನ್ನು ಪೂಜಿಸುತ್ತಿದ್ದರು. ಈ ಕಾಲದಲ್ಲಿಯೂ ಪ್ರಾಣಿಬಲಿಯು ನಡೆಯುತ್ತಿತ್ತು. ಅಶೋಕನಂತಹ ಸಾಮ್ರಾಟರು ಪಶುಗಳನ್ನು ದೇವರಿಗಾಗಿ ಬಲಿ ಕೊಡುವುದನ್ನು ಪ್ರತಿಬಂಧಿಸಿದ್ದರೂ ಜನರು ಆ ಕಾರ್ಯವನ್ನು ಮುಂದುವರಿಸಿಕೊಂಡೇ ಬಂದರು.

ಮೌರ್ಯರ ಆಳ್ವಿಕೆಯಲ್ಲಿ ಜೈನ, ಬೌದ್ಧ, ವೈಷ್ಣವ ಧರ್ಮಗಳನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಎಲ್ಲ ಧರ್ಮದವರನ್ನು ಸಹಿಷ್ಣುತೆಯಿಂದ ಕಾಣುತ್ತಿದ್ದರೂ ಬೌದ್ಧಧರ್ಮಕ್ಕೆ ರಾಜಾಶ್ರಯವಿತ್ತು. ಆದ್ದರಿಂದ ಅದು ಹೆಚ್ಚು ಪ್ರೋತ್ಸಾಹ ಪಡೆಯಿತು.

ಅಶೋಕನು ಬೌದ್ಧ ಧರ್ಮವು ಹೊರಜಗತ್ತಿನಲ್ಲಿಯೂ ಪ್ರಖ್ಯಾತವಾಗಲು ಬಹಳೇ ಪ್ರಯತ್ನಪಟ್ಟನು. ಬುದ್ಧನ ಮೂತ್ರಿ ಪೂಜೆಯು ನಡೆಯುತ್ತಿತ್ತು. ಬುದ್ಧನು ಪುನರ್‌ಜನ್ಮಗಳನ್ನು ಪಡೆದು ಜಗತ್ತಿನ ಸಂಕಟಗಳನ್ನೂ, ಪರಂಪರೆಗಳನ್ನೂ ನಿವಾರಿಸುತ್ತಾನೆಂದು ನಂಬಲಾಗುತ್ತಿತ್ತು. ಮೌರ್ಯರ ಕಾಲದಲ್ಲಿ ಬೌದ್ಧ ಧರ್ಮವು ಚೀನಾ, ಕೋಸಲ, ವಂಗ, ಗಾಂಧಾರ, ವನವಾಸಿ, ಯವನ ಹಾಗೂ ಸಿಲೋನ್ ದೇಶಗಳಲ್ಲಿಯೂ ಹಬ್ಬಿತ್ತು.

ಕಲೆ ಮತ್ತು ಸಾಹಿತ್ಯ :

ಕೌಟಿಲ್ಯನ ಅರ್ಥಶಾಸ್ತ್ರ, ಭದಬಾಹುವಿನ ಕಲ್ಪಸೂತ್ರ, ಬುದ್ಧನ ಜಾತಕ ಕಥೆಗಳು ಮುಂತಾದ ಶ್ರೇಷ್ಠ ಗ್ರಂಥಗಳು ಮೌರ್ಯರ ಕಾಲದಲ್ಲಿಯೇ ರಚಿತವಾಗಿದ್ದವು. ಪುಷ್ಯಮಿತ್ರನ ಕಾಲದಲ್ಲಿ ‘ಪತಂಜಲಿ’ ಎಂಬ ಮಹಾ ಪಂಡಿತನೂ, ಗ್ರಂಥಕರ್ತನೂ ಆಗಿಹೋದನು. ಅವನು ಮಹಾಭಾಷ್ಯ ಎಂಬ ಪ್ರಸಿದ್ಧ ವ್ಯಾಕರಣ ಗ್ರಂಥವನ್ನು ಬರೆದನು.

ಅಲ್ಲದೆ ರಾಮಾಯಣ ಹಾಗೂ ಮಹಾಭಾರತಗಳನ್ನು ಪುನಃ ಪರಿಷ್ಕರಿಸಿ, ಈ ಕಾಲದಲ್ಲಿ ಪ್ರಕಟಿಸಲಾಯಿತೆಂದು ಹೇಳುತ್ತಾರೆ. ಮಾನವ ಧರ್ಮಶಾಸ್ತ್ರ, ಬೃಹತ್ ಕಥಾಮಂಜರಿ ಈ ಕಾಲದಲ್ಲಿಯೇ ರಚಿತವಾದವುಗಳು. ನಾಗಾರ್ಜುನ, ಚರಕ, ಸುಶ್ರತ ಮುಂತಾದ ಇತರ ಶ್ರೇಷ್ಠ ವೈಜ್ಞಾನಿಕರು ಮಿಲಾಂದಪಾನೋ, ದಿವ್ಯವದನ, ಸದ್ಧಮತಾದಂತರರ ಮರತಾದ ಕೃತಿಗಳೂ ಈ ಯುಗದ ಪ್ರಖ್ಯಾತ ಹೆಸರುಗಳು.

ಮೌರ್ಯರು ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಅವರು ಭವ್ಯ ಕಟ್ಟಡಗಳ ನಿರ್ಮಾಪಕರೂ ಆಗಿದ್ದರು. ಪಾಟಲಿಪುತ್ರದಂತಹ ವಿಶಾಲ ನಗರವನ್ನೇ ಅವರು ಕಟ್ಟಿದರು. ಅಲ್ಲಿ ಸುಂದರ ಸ್ತೂಪಗಳನ್ನೂ, ಚೈತ್ಯಾಲಯಗಳನ್ನೂ, ವಿಹಾರಗಳನ್ನೂ ನಿರೂಪಿಸಿದ್ದಲ್ಲದೆ, ಸ್ತಂಭಗಳಲ್ಲಿ ಅವರು ಕೊರೆದ ಶಾಸನಗಳು ಇವೆಲ್ಲವುಗಳ ಬಗ್ಗೆ ಚೆನ್ನಾಗಿ ವಿವರಣೆ ನೀಡುತ್ತವೆ. ಕಟ್ಟಡಗಳನ್ನು ಕಲ್ಲು ಹಾಗೂ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು.

ಸಭೆ-ಸಮಾರಂಭಗಳಲ್ಲಿ ಕಲಾಕಾರರನ್ನು, ಶಿಲ್ಪಿಗಳನ್ನೂ ಸತ್ಕರಿಸಲಾಗುತ್ತಿತ್ತು. ಪರ್ಶಿಯನ್ನರೂ, ಗ್ರೀಕರೂ ಮೌರ್ಯರ ವಾಸ್ತುಶಿಲ್ಪದಿಂದ ಬಹಳ ಪ್ರಭಾವಿತರಾಗಿದ್ದರು. ಅಶೋಕನು ನಿಲ್ಲಿಸಿದ ಸಾರನಾಥದ ಸ್ತೂಪ ಮತ್ತು ಕಾಂಚಿಯ ಶಿಲಾಸ್ತಂಭಗಳು ಮೌರ್ಯರ ಕಾಲದ ಕಲೆ ಹಾಗೂ ಕಲಾ ಸೌಂದರ್ಯವನ್ನು ಎತ್ತಿ ತೋರಿಸುವವು. ನೃತ್ಯ, ಗಾಯನಗಳು ಮೌರ್ಯರ ಕಾಲದಲ್ಲಿ ವಿಶೇಷ ವಿಕಾಸ ಹೊಂದಿದವು. ರಥವನ್ನೋಡಿಸುವ ಸ್ಪರ್ಧೆ, ಪ್ರಾಣಿಗಳ ಕಾದಾಟ, ಕುಸ್ತಿ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಕೆಲವು ಸಲ ಹುಲಿ-ಸಿಂಹ ಮುಂತಾದ ಕಾಡುಪ್ರಾಣಿಗಳೊಡನೆ ಹೋರಾಟ ನಡೆಸುವ ಪ್ರದರ್ಶನವನ್ನು ತೋರಿಸಲಾಗುತ್ತಿತ್ತು. ಚದುರಂಗ ಆಟವು ಸಾಮಾನ್ಯ ಆಟವಾಗಿತ್ತು. ಆಟ-ನೋಟ-ನಾಟಕಗಳೂ ನೆರವೇರಿಸಲ್ಪಡುತ್ತಿದ್ದವು.

ಮೌರ್ಯರು ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಅವರು ಭವ್ಯ ಕಟ್ಟಡಗಳ ನಿರ್ಮಾಪಕರೂ ಆಗಿದ್ದರು. ಪಾಟಲಿಪುತ್ರದಂತಹ ವಿಶಾಲ ನಗರವನ್ನೇ ಅವರು ಕಟ್ಟಿದರು. ಅಲ್ಲಿ ಸುಂದರ ಸ್ತೂಪಗಳನ್ನೂ, ಚೈತ್ಯಾಲಯಗಳನ್ನೂ, ವಿಹಾರಗಳನ್ನೂ ನಿರೂಪಿಸಿದ್ದಲ್ಲದೆ, ಸ್ತಂಭಗಳಲ್ಲಿ ಅವರು ಕೊರೆದ ಶಾಸನಗಳು ಇವೆಲ್ಲವುಗಳ ಬಗ್ಗೆ ಚೆನ್ನಾಗಿ ವಿವರಣೆ ನೀಡುತ್ತವೆ. ಕಟ್ಟಡಗಳನ್ನು ಕಲ್ಲು ಹಾಗೂ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು.

ಸಭೆ-ಸಮಾರಂಭಗಳಲ್ಲಿ ಕಲಾಕಾರರನ್ನು, ಶಿಲ್ಪಿಗಳನ್ನೂ ಸತ್ಕರಿಸಲಾಗುತ್ತಿತ್ತು. ಪರ್ಶಿಯನ್ನರೂ, ಗ್ರೀಕರೂ ಮೌರ್ಯರ ವಾಸ್ತುಶಿಲ್ಪದಿಂದ ಬಹಳ ಪ್ರಭಾವಿತರಾಗಿದ್ದರು. ಅಶೋಕನು ನಿಲ್ಲಿಸಿದ ಸಾರನಾಥದ ಸ್ತೂಪ ಮತ್ತು ಕಾಂಚಿಯ ಶಿಲಾಸ್ತಂಭಗಳು ಮೌರ್ಯರ ಕಾಲದ ಕಲೆ ಹಾಗೂ ಕಲಾ ಸೌಂದರ್ಯವನ್ನು ಎತ್ತಿ ತೋರಿಸುವವು. ನೃತ್ಯ, ಗಾಯನಗಳು ಮೌರ್ಯರ ಕಾಲದಲ್ಲಿ ವಿಶೇಷ ವಿಕಾಸ ಹೊಂದಿದವು. ರಥವನ್ನೋಡಿಸುವ ಸ್ಪರ್ಧೆ, ಪ್ರಾಣಿಗಳ ಕಾದಾಟ, ಕುಸ್ತಿ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಕೆಲವು ಸಲ ಹುಲಿ-ಸಿಂಹ ಮುಂತಾದ ಕಾಡುಪ್ರಾಣಿಗಳೊಡನೆ ಹೋರಾಟ ನಡೆಸುವ ಪ್ರದರ್ಶನವನ್ನು ತೋರಿಸಲಾಗುತ್ತಿತ್ತು. ಚದುರಂಗ ಆಟವು ಸಾಮಾನ್ಯ ಆಟವಾಗಿತ್ತು. ಆಟ-ನೋಟ-ನಾಟಕಗಳೂ ನೆರವೇರಿಸಲ್ಪಡುತ್ತಿದ್ದವು.

ಮೌರ್ಯರ ಕಾಲದಲ್ಲಿ ವಿದೇಶಿ ಪ್ರಭಾವ : ಮೌರ್ಯರ ಕಾಲದಲ್ಲಿ ಗ್ರೀಕ್ ಹಾಗೂ ರೋಮನ್ನರೊಡನೆ ಭಾರತೀಯರ ಉತ್ತಮ ಸಂಬಂಧವು ವಿಶೇಷವಾಗಿ ಉಂಟಾಯಿತು. ಭಾರತೀಯ ವ್ಯಾಪಾರಸ್ಥರು, ತತ್ವಜ್ಞಾನಿಗಳು, ಅಥೆನ್ಸ್ ಹಾಗೂ ಅಲೆಕ್ಸಾಂಡ್ರಿಯಾ ಮುಂತಾದ ನಗರಗಳಲ್ಲಿ ಕಾಣತೊಡಗಿದರು. ಅನೇಕ ವಿದೇಶಿ ದೊರೆಗಳೊಡನೆ ಭಾರತದ ರಾಯಭಾರಿಸಂಬಂಧಗಳು ಬೆಳೆದು ಬಂದವು.

ಮೌರ್ಯರ ಆಡಳಿತದ ವ್ಯವಸ್ಥೆಯಲ್ಲಿ ಅನೇಕ ಗ್ರೀಕರು ಪ್ರಮುಖ ಹುದ್ದೆಗಳಲ್ಲಿ ನೇಮಕಗೊಂಡಿದ್ದರು. ಭಾರತೀಯ ನಾಣ್ಯಗಳನ್ನು ಗ್ರೀಕರು ಬಹಳವಾಗಿ ಮೆಚ್ಚಿಕೊಂಡಿದ್ದರು. ಗ್ರೀಕರ ಸಾಹಿತ್ಯ ಹಾಗೂ ಭಾರತೀಯ ಸಾಹಿತ್ಯ ದಲ್ಲಿ ಪರಸ್ಪರ ಪ್ರಭಾವ ಕಂಡುಬಂದವು.

ಅನೇಕ ಭಾರತೀಯರು ಗ್ರೀಕ್ ಭಾಷೆಯನ್ನು ಕಲಿತು ಅಲ್ಲಿನ ಧರ್ಮ, ಕಾವ್ಯ, ಕಲೆಗಳ ಅಧ್ಯಯನ ಮಾಡಿದರು. ಅದರಂತೆ, ಇಂಡೊ- ಗ್ರೀಕ್ ವಿದ್ವಾಂಸರು ಸಹಿತ ಭಾರತೀಯ ತತ್ವಜ್ಞಾನ ಹಾಗೂ ವಿದ್ವಾಂಸರನ್ನು ಮೆಚ್ಚಿಕೊಂಡಿದ್ದರು. ಇಂಡೊ-ಗ್ರೀಕ್ ದೊರೆಯಾದ ಮನಾಂಡ ಬೌದ್ಧ ಧರ್ಮದ ತತ್ವಗಳಿಗೆ ಪ್ರಭಾವಿತನಾಗಿದ್ದನೆಂದು ಹೇಳಲಾಗಿದೆ.

ಗ್ರೀಕರು ಭಾರತದಲ್ಲಿ ದಾಸ್ಯತ್ವವನ್ನು ಹೊಂದಿದ ಜನರಿರುತ್ತಾರೆಂದು ಬರೆದಿದ್ದಾರೆ. ಶಾರೀರಿಕ ಶ್ರಮದ ಕೆಲಸಗಳಿಗಾಗಿ ಜೀತದಾಳುಗಳನ್ನು ಉಪಯೋಗಿ ಸಲಾಗುತ್ತಿತ್ತು. ಅಲ್ಲದೇ, ಸ್ತ್ರೀಯರನ್ನೂ ಸಹ ಪೇಟೆಗೆ ತಂದು ಮಾರುತ್ತಿದ್ದರಂತೆ. ಅವರಿಗೂ ವಿಶೇಷ ಶ್ರಮದ ಕೆಲಸ ಹಚ್ಚಲಾಗುತ್ತಿತ್ತು. ವಿದೇಶೀಯರು ಹೇಳುವಂತೆ, ಭಾರತೀಯರು ಸುಖವಾಗಿದ್ದರು. ಅವರು ದಯಾಳುಗಳೂ, ಮೃದು ಭಾಷಿಗಳೂ ಆಗಿದ್ದರು. ಕಳುವು-ಮೋಸಗಳು ಆಗುತ್ತಿರಲಿಲ್ಲ. ರಾಜರು ಪ್ರಜೆಗಳ ನಿತ್ಯದ ಜೀವನದಲ್ಲಿ ಅನಗತ್ಯವಾಗಿ ಭಾಗವಹಿಸುತ್ತಿರಲಿಲ್ಲ. ಜನರ ಸಾಮಾನ್ಯ ಆಹಾರವು ಗೋಧಿ, ಅಕ್ಕಿ ಆಗಿತ್ತು. ಸಮಾರಂಭಗಳ ಸಂಬಂಧಗಳಲ್ಲಿ ಮಾತ್ರ ಮದ್ಯಪಾನ ಮಾಡುತ್ತಿದ್ದರು. ಸಾಮಾನ್ಯವಾಗಿ ಜನರು ನಿರಕ್ಷರಿಗಳು ಇರುತ್ತಿದ್ದರಿಂದ ನೆನಪಿನ ಮೇಲೆಯೇ ಎಲ್ಲ ವ್ಯವಹಾರಗಳನ್ನು ಸಾಗಿಸುತ್ತಿದ್ದರು. ಕೆಲಸಗಳು ಇಲ್ಲದಾಗ ಸಾಮಾನ್ಯವಾಗಿ ಜನರು ಆಲಸಿಗಳೂ, ನಿರುದ್ಯೋಗಿಗಳೂ ಆಗಿರುತ್ತಿದ್ದರೆಂದು ಸ್ಟ್ರಾಬೋ ಎಂಬ ವಿದೇಶೀ ಸಂದರ್ಶಕನು ಬರೆದಿರುವನು.

 Maurya Empire: ಕೃಷಿ ಚಟುವಟಿಕೆ :

ರೈತರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಸೈನ್ಯದಲ್ಲಿ ಸೇರಲು ಅವರಿಗೆ ಕಡ್ಡಾಯವಿದ್ದಿರಲಿಲ್ಲ. ಸಾರ್ವಜನಿಕ ಕಾರ್ಯ ಮಾಡಬೇಕಾಗಿರಲಿಲ್ಲ. ರೈತರು ತಮ್ಮ ಉತ್ಪಾದನೆಯಲ್ಲಿ 1/6ದಷ್ಟನ್ನು ಅರಸರಿಗೆ ಕಾಣಿಕೆಯಾಗಿ ಕೊಡುತ್ತಿದ್ದರು. ಅವರ ತೊಂದರೆಗಳಲ್ಲಿ ರಾಜರು ಸಹಾಯ ಮಾಡುತ್ತಿದ್ದರು. ಆಕಾಲ ಬಿದ್ದರೆ ಅವರಿಗೆ ಪುಕ್ಕಟೆಯಾಗಿ ಬೀಜದ ಕಾಳು ಇತ್ಯಾದಿಗಳು ಕೊಡಲಾಗುತ್ತಿತ್ತು. ಕರಗಳನ್ನು ಬಿಟ್ಟು ಅನ್ನಾಹಾರಗಳನ್ನು ಕೊಡಲಾಗುತ್ತಿತ್ತು. ಮಹಾಪೂರ, ಬೆಂಕಿ, ಕಾಡುಪ್ರಾಣಿಗಳು ರೈತರ ಶತ್ರುಗಳಾಗಿದ್ದವು. ಬೇಟೆಗಾರರು ಹಾಗೂ ದನಗಾಹಿಗಳು ಪಶುಗಳನ್ನು ಹಿಂಸಿಸಿ, ಕೊಲ್ಲುತ್ತಿದ್ದರು. ಪ್ರತಿಯೊಂದು ಸಂದರ್ಭಗಳಿಗೂ ಮುಹೂರ್ತಗಳಿಗಾಗಿ ಬ್ರಾಹ್ಮಣರನ್ನು ಕೇಳುತ್ತಿದ್ದರು.

ಇದನ್ನೂ ನೋಡಿ….KEA VAO EXAM-2024 ಕಡ್ಡಾಯ ಕನ್ನಡ ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ.

ವ್ಯಾಪಾರೋದ್ಯಮ :

ಮೌರ್ಯಸಾಮ್ರಾಜ್ಯಕ್ಕೆ ವ್ಯಾಪಾರ ವಾಣಿಜ್ಯ ತೆರಿಗೆ ಒಂದು ದೊಡ್ಡ ಉತ್ಪನ್ನದ ಮಾರ್ಗವಾಗಿತ್ತು. ಭಾರತಕ್ಕೆ ಪಾಶ್ಚಿಮಾತ್ಮ ದೇಶಗಳಾದ ಗ್ರೀಕ್ ಮೊದಲಾದವುಗಳೊಡನೆ ವ್ಯಾಪಾರ ಸಂಬಂಧವೇರ್ಪಟ್ಟಿತು. ನಾಗಾರ್ಜುನಕೊಂಡ ಹಾಗೂ ನಿಲಿನೋವಾನ್ನೋ ಶಾಸನಗಳು ವಚೀನಾ, ಸಿಲೋನ್, ಈಜಿಪ್ ಮೊದಲಾದ ದೇಶಗಳೊಡನೆ ಇದ್ದ ಭಾರತದ ವಾಣಿಜ್ಯ ಸಂಬಂಧಗಳನ್ನು ತಿಳಿಸುವವು. ಸರಾಯಿ, ಒಣಗಿದ ಹಣ್ಣುಗಳು, ಬೆಳ್ಳಿ ಪಾತ್ರ ಮುಂತಾದವುಗಳು ವಿದೇಶಗಳಿಂದಲೂ ಬರುತ್ತಿದ್ದವು. ಮಖಮಲ್ ಬಟ್ಟೆ, ಉಣ್ಣೆಯ ಬಟ್ಟೆ, ಬಂಗಾರ, ಬಣ್ಣಗಳು ಹೊರದೇಶಕ್ಕೆ ಹೋಗುತ್ತಿದ್ದವು.

ಪಾಟಲೀಪುತ್ರದ ನಗರಸಭೆಯು ವ್ಯಾಪಾರ ವಾಣಿಜ್ಯಗಳ ಮೇಲೆ ನಿಯಂತ್ರಣವಿಟ್ಟಿತ್ತೆಂದು ತಿಳಿದು ಬರುವದು. ನೇಕಾರಿಕೆ, ಕೈಕೆಲಸ, ಹಡಗು ಕಟ್ಟುವುದು,

Leave a Comment