Study abroad-2024: ವಿದೇಶ ವ್ಯಾಸಂಗಕ್ಕೆ ರೆಕ್ಕೆ, ರಾಜ್ಯ ಸರ್ಕಾರದಿಂದಲೇ ಆರ್ಥಿಕ ನೆರವು ಸೌಲಭ್ಯ.

Study abroad: ವಿದೇಶ ವ್ಯಾಸಂಗಕ್ಕೆ ರೆಕ್ಕೆ, ರಾಜ್ಯ ಸರ್ಕಾರದಿಂದಲೇ ಆರ್ಥಿಕ ನೆರವು ಸೌಲಭ್ಯ.

 

ದೇಶದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ರಾಜ್ಯದಿಂದ ಸರ್ಕಾರಿ ನೆರವಿನ ಮೂಲಕ ವಿದೇಶಕ್ಕೆ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ. ಈ ವರ್ಷ ನವೆಂಬ‌ರ್ ವರೆಗೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಪಡೆದಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಯಾವುದೇ ರಾಜ್ಯದಲ್ಲಿ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಈವರೆಗೆ ವಿದೇಶ ವ್ಯಾಸಂಗಕ್ಕೆ ಆರ್ಥಿಕ ನೆರವು ಪಡೆದಿಲ್ಲ ಎಂದು ತಿಳಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ನವೆಂಬರ್‌ಗೆ ವಿದೇಶದಲ್ಲಿ ವ್ಯಾಸಂಗ ಹಾಗೂ ಪರೀಕ್ಷಾ ಪೂರ್ವ ತರಬೇತಿ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ಸರ್ಕಾರವು 200 ಕೋಟಿ ರೂ. ವೆಚ್ಚ ಮಾಡುತ್ತಿದೆ. ಕಳೆದ ವರ್ಷ ಈ ಮೊತ್ತ 150 ಕೋಟಿ ರೂ. ಆಗಿತ್ತು. ಎಂದು  ಅಂಕಿ ಅಂಶ ನೀಡಿದೆ.

ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ:

ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ (ಐಜಿಸಿಸಿಡಿ) ಈ ಕಾರ್ಯವನ್ನು ನಿರ್ವಹಿಸುತ್ತಿದೆ. ಜತೆಗೆ, ಇಡೀ ದೇಶದಲ್ಲಿಯೇ ಅತಿಹೆಚ್ಚು ಶಿಷ್ಯವೇತನ ಹಾಗೂ ತರಬೇತಿ ನೀಡಿದ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಿಂದೆ ಪರೀಕ್ಷಾ ಪೂರ್ವ ತರಬೇತಿ ಸಂಸ್ಥೆ ಎಂದು ಕರೆಯಲ್ಪಡುತ್ತಿದ್ದ ಈ ಕೇಂದ್ರಕ್ಕೆ ಪ್ರಸ್ತುತ ಇಂದಿರಾಗಾಂಧಿ ಹೆಸರಿಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವೃತ್ತಿಪರ ಹಾಗೂ ಪರೀಕ್ಷಾ ಪೂರ್ವ ತರಬೇತಿ ನೀಡುತ್ತಿದೆ. ಈ ಕೇಂದ್ರದಿಂದ 2015-16 ರಿಂದ ಒಟ್ಟು 810 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ 6000ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಫಲಾನುಭವಿಗಳಾಗಿದ್ದಾರೆ. ವರ್ಷಪೂರ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ವಿವಿಧ ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ ಎಂದು ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ. ಅಂಜುಂ ಹಫೀಸ್ ತಿಳಿಸಿದ್ದಾರೆ.

“ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು. ತರಬೇತಿ ಜತೆಗೆ ಊಟ, ವಸತಿ ಹಾಗೂ ಸ್ಟೆಪೆಂಡ್ ವ್ಯವಸ್ಥೆಯನ್ನು ನೀಡಲಾಗುತ್ತದೆ. ಸಫಾಯಿ ಕರ್ಮಾಚಾರಿಗಳ ಕುಟುಂಬಕ್ಕೂ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಈ ವರ್ಷ 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.”

| ಡಾ. ಅಂಜುಂ ಹಫೀಸ್ ಐಜಿಸಿಸಿಡಿ ಸಿಇಒ

ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಅಂತರಾಷ್ಟ್ರೀಯ ವಿದ್ಯಾರ್ಥಿವೇತನ

ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಬೇಕೆಂದುಕೊಂಡಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶಿಷ್ಯವೇತನ ನೀಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 200 ವಿದ್ಯಾರ್ಥಿಗಳು ಈ ಯೋಜನೆಯ ಅನುಕೂಲ ಪಡೆದು ವಿದೇಶದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿ ವೇತನಕ್ಕೆ ಡಾ.ಬಿ.ಆ‌ರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನ ಎಂದು ಹೆಸರಿಡಲಾಗಿದೆ.

ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನ:

2014-15 ರಲ್ಲಿ 21 ವಿದ್ಯಾರ್ಥಿಗಳಿಗೆ ಸುಮಾರು 4.7 ಕೋಟಿ ರೂ. ಅಂತಾರಾಷ್ಟ್ರೀಯ ವಿದ್ಯಾರ್ಥಿವೇತನ ನೀಡಲಾಗಿತ್ತು. 2023-24ರ ಹೊತ್ತಿಗೆ 70.10 ಕೋಟಿ ರೂ. ಹಣವನ್ನು 152 ವಿದ್ಯಾರ್ಥಿಗಳ ಓದಿಗೆ ನೀಡಲಾಗಿದೆ. ಕಳೆದ ವರ್ಷ ನೀಡಲಾಗಿದ್ದ 8.4 ಕೋಟಿ ರೂ.ಗಳಲ್ಲಿ ಅತಿ ಹೆಚ್ಚು ಮೊತ್ತವನ್ನು ಇದಕ್ಕೆ ನೀಡಲಾಗಿತ್ತು. ಈ ವರ್ಷ ಈಗಾಗಲೇ 50 ಕೋಟಿ ರೂ. ವಿತರಣೆಯಾಗಿದೆ. ತರಬೇತಿ ಸಂಸ್ಥೆಗೆ ಪ್ರಸಕ್ತ ವರ್ಷ 130 ಕೋಟಿ ರೂ. ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ:

ಯುಪಿಎಸ್ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ, ಆರ್‌ಆರ್‌ಬಿ, ಬ್ಯಾಂಕಿಂಗ್, ಸ್ಟೇಟ್ ಅಕೌಂಟ್ಸ್, ಕಾನೂನು ಹಾಗೂ ನ್ಯಾಯಾಂಗ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಗೆ ಈ ಕೇಂದ್ರ ಅನುಕೂಲ ಮಾಡಿಕೊಡುತ್ತದೆ. ದೆಹಲಿ, ಹೈದರಾಬಾದ್‌, ಬೆಂಗಳೂರು, ಧಾರವಾಡ ಮತ್ತಿತರೆಡೆಗಳಲ್ಲಿರುವ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ 3- 7 ತಿಂಗಳುಗಳ ವರೆಗೆ ತರಬೇತಿಗೆ ಅವಕಾಶ ನೀಡಲಾಗುತ್ತದೆ. 3 ವರ್ಷಗಳ ಸಮಗ್ರ ಪದವಿ ಜತೆಗೆ ತರಬೇತಿಗೆ ನೋಂದಾಯಿಸಿಕೊಡಲಾಗುತ್ತದೆ. ಸಾಮಾನ್ಯ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ ಹಲವು ವೃತ್ತಿಪರ ತರಬೇತಿಗಳನ್ನೂ ನೀಡಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ- CLICK HERE

_______

2024-25ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್.ಡಿ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡುವ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. Online ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05.12.2024 ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್ ಸೈಟ್ https://bcwd.karnataka.gov.in/ ಅನ್ನು ನೋಡಬಹುದು. ಸಹಾಯವಾಣಿ -8050770004

ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸೂಚನೆಗಳು.

1.ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು:-

1.ವಿದ್ಯಾರ್ಥಿಯು ಭಾರತ ದೇಶದ ಪ್ರಜೆಯಾಗಿದ್ದು, ನಿವಾಸಿಯಾಗಿರಬೇಕು. ಕರ್ನಾಟಕದ ఖాయం

2.ಕೇಂದ್ರ/ರಾಜ್ಯ ಸರ್ಕಾರದ ಅನುದಾನಿತ ಸಂಸ್ಥೆಗಳ/ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳಲ್ಲಿನ ನೌಕರರು ಸದರಿ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಮತ್ತು ವ್ಯಾಸಂಗ ವೇತನ ಪಡೆಯಲು ಅರ್ಹರಿರುವುದಿಲ್ಲ.

3.ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳು ಮಾತ್ರ Online ಮೂಲಕ ಅರ್ಜಿಗಳನ್ನು ಸಲ್ಲಿಸುವುದು.

4.ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಆನ್-ಲೈನ್ ಅರ್ಜಿಯೊಂದಿಗೆ ಅಪ್-ಲೋಡ್ ಮಾಡುವ ದಾಖಲೆಗಳ ಒಂದು ಸೆಟ್ ಧೃಢೀಕೃತ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲೆಗಳೊಂದಿಗೆ ಆಯುಕ್ತರ ಕಛೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇಲ್ಲಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳುವುದು ಹಾಗೂ ದಾಖಲೆಗಳ ಪರಿಶೀಲನೆಯ ನಂತರ ಮೂಲ ಪ್ರತಿಯನ್ನು ಹಿಂದಕ್ಕೆ ಪಡೆದುಕೊಳ್ಳುವುದು.

5.2024-25ನೇ ಸಾಲಿನ ಆರ್ಥಿಕ ವರ್ಷ (ಏಪ್ರಿಲ್ 1, 2024 ರಿಂದ ಮಾರ್ಚ್ 31, 2025) ದಲ್ಲಿ ವಿದೇಶದಲ್ಲಿ ಪ್ರಥಮ ವರ್ಷದ ವ್ಯಾಸಂಗ ಪ್ರಾರಂಭಿಸುವ ವಿದ್ಯಾರ್ಥಿಗಳು ಮಾತ್ರ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

6.ಸ್ನಾತಕೋತ್ತರ ಪದವಿ/ಪಿಹೆಚ್.ಡಿ ಮಾಡುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಪದವಿ/ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.70 ಅಂಕಗಳು ಅಥವಾ ಅದಕ್ಕೆ ಸಮಾನವಾದ ಗ್ರೇಡ್ ಪಡೆದಿರಬೇಕು (ಎಲ್ಲಾ ಶೈಕ್ಷಣಿಕ ವರ್ಷಗಳನ್ನು ಒಳಗೊಂಡಂತೆ ಸರಾಸರಿ ಅಂಕಗಳು/ಗ್ರೇಡ್ಅನ್ನು ಪರಿಗಣಿಸಲಾಗುವುದು).

7.ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:05.12.2024 ಕ್ಕೆ ಅನ್ವಯಿಸುವಂತೆ ಪಿಹೆಚ್.ಡಿ ಮಾಡುವ ವಿದ್ಯಾರ್ಥಿಗಳು 27 ವರ್ಷದ ವಯೋಮಿತಿಯೊಳಗಿರಬೇಕು ಹಾಗೂ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳು 25 ವರ್ಷದ ವಯೋಮಿತಿಯೊಳಗಿರಬೇಕು.

8. ಆದಾಯ ಮಿತಿ – ವಿದ್ಯಾರ್ಥಿಯ ಹಾಗೂ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.8.00 ಲಕ್ಷದ ಮಿತಿಯೊಳಗಿರಬೇಕು.

9. ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಪಡೆದಿರಬೇಕು ಹಾಗೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರವು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿರಬೇಕು. ದಿನಾಂಕ:01-04-2024ರ ನಂತರದ ದಿನಾಂಕದಲ್ಲಿ ಪಡೆದಿರುವ ಆದಾಯ ಪ್ರಮಾಣ ಪತ್ರವನ್ನು ಮಾತ್ರ ಅರ್ಜಿ ಸಲ್ಲಿಸುವಾಗ ಅಪ್-ಲೋಡ್ ಮಾಡಬೇಕು. ಇದಕ್ಕೂ ಹಿಂದಿನ ದಿನಾಂಕದಲ್ಲಿ ಪಡೆದಿರುವ ಆದಾಯ ಪ್ರಮಾಣ ಪತ್ರವನ್ನು ಸದರಿ ಕಾರ್ಯಕ್ರಮದಡಿ ಪರಿಗಣಿಸಲಾಗುವುದಿಲ್ಲ.

10.2024-25ನೇ ಸಾಲಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಯು Top Two hundred world university ranking ಒಳಗೆ ಸ್ನಾನ ಪಡೆದಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಮಾತ್ರ ಪ್ರವೇಶ ಪಡೆದಿರಬೇಕು ಹಾಗೂ ಸಂಬಂಧಿಸಿದ ವಿಶ್ವವಿದ್ಯಾಲಯ ನೀಡಿರುವ Offer letter/I-20 ಹೊಂದಿರಬೇಕು (ವಿದೇಶಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ).

11.ಒಂದು ಕುಟುಂಬದ ಒಬ್ಬ ವಿದ್ಯಾರ್ಥಿಗೆ (ತಂದೆ-ತಾಯಿ/ಪೋಷಕರ ಒಂದು ಸಂತಾನಕ್ಕೆ) ಒಂದು ಬಾರಿ ಮಾತ್ರ ಈ ವ್ಯಾಸಂಗ ವೇತನವನ್ನು ನೀಡಲಾಗುವುದು)

12.ವ್ಯಾಸಂಗ ವೇತನದ ಮೊತ್ತ-ವಾರ್ಷಿಕವಾಗಿ ಗರಿಷ್ಠ ರೂ.10.00 ಲಕ್ಷ ಅಥವಾ ವಾಸ್ತವಿಕ ವೆಚ್ಚ ಇದರಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.

||. ಧನ ಸಹಾಯದ ಅವಧಿ:-

a. ಸ್ನಾತಕೋತ್ತರ ಪದವಿ- ಗರಿಷ್ಠ 2 ವರ್ಷ ಅಥವಾ ಕೋರ್ಸ್ ಮುಕ್ತಾಯದ ಅವಧಿಯಲ್ಲಿ ಯಾವುದು ಮೊದಲೋ ಆ ಅವಧಿಯನ್ನು ಪರಿಗಣಿಸಲಾಗುವುದು.

b. ಪಿಹೆಚ್.ಡಿ- ಗರಿಷ್ಠ 3 ವರ್ಷ ಅಥವಾ ಕೋರ್ಸ್ ಮುಕ್ತಾಯದ ಅವಧಿಯಲ್ಲಿ ಯಾವುದು ಮೊದಲೋ ಆ ಅವಧಿಯನ್ನು ಪರಿಗಣಿಸಲಾಗುವುದು.

III. ಧನ ಸಹಾಯ ಪಾವತಿ ವಿಧಾನ:-

a. ಆಯ್ಕೆಯಾದ ವಿದ್ಯಾರ್ಥಿಯು ಮೊದಲನೇ ವರ್ಷದ ವ್ಯಾಸಂಗ ವೇತನವನ್ನು ಪಡೆಯಲು ವೀಸಾ, ಪಾಸ್‌ಪೋರ್ಟ್ ಪ್ರತಿ ಮತ್ತು ಸಂಬಂಧಿತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ಬಗ್ಗೆ, ದಾಖಲೆ ಹಾಗೂ ಇಲಾಖೆ ಕೋರುವ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

b. ಎರಡು/ಮೂರನೇ ವರ್ಷದ ವ್ಯಾಸಂಗ ವೇತನವನ್ನು ನಿಯಮಾನುಸಾರ ಪಡೆಯಲು ಸಂಬಂಧಿತ ವಿಶ್ವವಿದ್ಯಾಲಯಗಳಿಂದ ಪ್ರಗತಿ ವರದಿಯನ್ನು, ವೆಚ್ಚದ ವಿವರಗಳನ್ನು ಹಾಗೂ ಇಲಾಖೆ ಕೋರುವ ಇತರೆ ದಾಖಲೆಗಳನ್ನು ಸಲ್ಲಿಸುವುದು.

C. ಅಂತಿಮ ವರ್ಷದ ವ್ಯಾಸಂಗ ಅವಧಿಯು ಆರು ತಿಂಗಳಿಗಿಂತ ಕಡಿಮೆಯಾಗಿದ್ದಲ್ಲಿ ಶೇ.50 ರಷ್ಟು ಮೊತ್ತವನ್ನು ಅಥವಾ ವಾಸ್ತವಿಕ ವೆಚ್ಚ ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಆ ವರ್ಷಕ್ಕೆ ನೀಡಲಾಗುವುದು.

IV. ಆಯ್ಕೆ ವಿಧಾನ – ಎರಡು ಹಂತಗಳನ್ನು ಒಳಗೊಂಡಿರುತ್ತದೆ.

ವಿದ್ಯಾರ್ಥಿಯಿಂದ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಕೆ.

ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಕಛೇರಿಯಿಂದ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು.

ನಿಗದಿಪಡಿಸಿರುವ ಮೀಸಲಾತಿ:-

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು.

  • ಎಸ್.ಎಸ್.ಎಲ್.ಸಿ ಅಂಕ ಪಟ್ಟಿ.
  • ಜಾತಿ ಮತ್ತು ಆದಾಯ ದೃಢೀಕರಣ ಪತ್ರ (ತಹಶೀಲ್ದಾರರಿಂದ ಪಡೆದಿರಬೇಕು ಹಾಗೂ ಪ್ರಮಾಣ ಪತ್ರವು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿಯೇ ಇರಬೇಕು)
  • ಪದವಿ/ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು,
  • ಪಾಸ್ ಪೋರ್ಟ್.
  • ವೀಸಾ (ಲಭ್ಯವಿದ್ದಲ್ಲಿ)
  • ಸಂಬಂಧಪಟ್ಟ ವಿದೇಶಿ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ವಿಶ್ವವಿದ್ಯಾಲಯದಿಂದ ನೀಡಿರುವ Offer Letter/I-20 ದಾಖಲೆ.
  • ಕೋರ್ಸ್ ಅವಧಿಗೆ ತಗಲುವ ವೆಚ್ಚದ ವಿವರ.
  • ಘಟಿಕೋತ್ಸವ ಪ್ರಮಾಣಪತ್ರ / (Provisional Degree/Master Degree Certificate)
  • ಪದವಿ/ಸ್ನಾತಕೋತ್ತರ ಪದವಿಯಲ್ಲಿ ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಗ್ರೇಡ್ ಅನ್ನು ಅಂಕಗಳಿಗೆ ಪರಿವರ್ತಿಸಲು ಇರುವ Formula sheet/ ನಿಯಮಗಳ ಮಾಹಿತಿಯನ್ನು ಸಂಬಂಧಿಸಿದ ವಿಶ್ವವಿದ್ಯಾಲಯ/ಕಾಲೇಜಿನಿಂದ ವಿದ್ಯಾರ್ಥಿಗಳೇ ಪಡೆದು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು. Formula sheet/ನಿಯಮಗಳ ಮಾಹಿತಿಯನ್ನು ಸಲ್ಲಿಸದ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಇತರೆ ಷರತ್ತುಗಳು:

a.ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ಪಡೆಯುವುದು, ವೀಸಾ ಪಡೆಯುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ.

b. ವಿದ್ಯಾರ್ಥಿಯು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಪ್ರಾರಂಭವಾಗುವ ದಿನಾಂಕ ವಿದ್ಯಾರ್ಥಿಯು ವಿದೇಶಕ್ಕೆ ತೆರಳಿರುವ/ ತೆರಳುವ ದಿನಾಂಕ ಹಾಗೂ ಮುಕ್ತಾಯವಾಗುವ ಅಂದಾಜು ದಿನಾಂಕದ ವಿವರಗಳನ್ನು ನೀಡುವುದು.

c. ವಿದೇಶಿ ವ್ಯಾಸಂಗ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಂಬಂಧಿತ ವಿಶ್ವವಿದ್ಯಾಲಯ/ಸಂಸ್ಥೆಗೆ ಪ್ರವೇಶ ಪಡೆದಿರಬೇಕು ಹಾಗೂ 2024-25ರ ಅರ್ಥಿಕ ವರ್ಷದಲ್ಲಿ ಕೋರ್ಸ್ ಪ್ರಾರಂಭಿಸಬೇಕು.

d. ವಿದ್ಯಾರ್ಥಿಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಧಿಸುವ ಷರತ್ತುಗಳಿಗೆ ಬದ್ಧರಾಗಿರುವ ಬಗ್ಗೆ ಈ ಹಿಂದೆ ತನ್ನ ಕುಟುಂಬದಿಂದ ಯಾವುದೇ ವ್ಯಕ್ತಿಯು ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಕಾರ್ಯಕ್ರಮದಡಿ ಸೌಲಭ್ಯ ಪಡೆದಿರುವುದಿಲ್ಲ ಎಂಬ ಬಗ್ಗೆ ಹಾಗೂ ಆನ್‌ಲೈನ್ ನಲ್ಲಿ ಸಲ್ಲಿಸಿರುವ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂಬ ಬಗ್ಗೆ ಮುಚ್ಚಳಿಕೆ ಪತ್ರವನ್ನು ನೀಡುವುದು (First party are second party-Commissioner, BCWD, Bengaluru)

e. ಒಂದು ವೇಳೆ ವಿದೇಶದಲ್ಲಿನ ವ್ಯಾಸಂಗಕ್ಕೆ ವಿದ್ಯಾರ್ಥಿಗೆ ತಗಲಿರುವ ವಾಸ್ತವ ವೆಚ್ಚಕಿಂತ ಇಲಾಖೆಯಿಂದ ಪಡೆದ ವ್ಯಾಸಂಗ ವೇತನದ ಮೊತ್ತವು ಹೆಚ್ಚಾಗಿದ್ದಲ್ಲಿ, ಆ ಮೊತ್ತವನ್ನು ಸಂಬಂಧಪಟ್ಟ ವಿದ್ಯಾರ್ಥಿಯು ಸರ್ಕಾರಕ್ಕೆ ಮರು ಪಾವತಿಸಲು ಬದ್ಧವಾಗಿರತಕ್ಕದ್ದು.

f. ನವೀಕರಣ ವಿದ್ಯಾರ್ಥಿಗಳು ಪ್ರತಿ ವರ್ಷದ ಪ್ರಗತಿ ವರದಿಯನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದು, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸಬೇಕಾಗಿರುತ್ತದೆ.

g.ವಿದ್ಯಾರ್ಥಿಯು ಅರ್ಜಿ ಸಲ್ಲಿಸುವಾಗ ನೀಡಿದ ಮಾಹಿತಿಯಂತೆಯೇ ನಿಗದಿತ ವಿದೇಶಿ ವಿಶ್ವವಿದ್ಯಾಲಯ ಮತ್ತು ವಿಷಯ/ಕೋರ್ಸ್ ನಲ್ಲಿಯೇ ತನ್ನ ಸ್ನಾತಕೋತ್ತರ ಪದವಿ ಅಥವಾ ಪಿಹೆಚ್.ಡಿ ಯನ್ನು ಪೂರ್ಣಗೊಳಿಸವುದು. ಬದಲಿಗೆ ವಿದ್ಯಾರ್ಥಿಯು ತನ್ನ ಕೋರ್ಸ್ ಅವಧಿಯಲ್ಲಿ ಯಾವುದೇ ಕಾರಣದಿಂದ ವಿಶ್ವವಿದ್ಯಾಲಯ ಅಥವಾ ವಿಷಯ/ ಕೋರ್ಸ್ ಅನ್ನು ಬದಲಾಯಿಸಿಕೊಂಡಲ್ಲಿ ಅಂತಹ ವಿದ್ಯಾರ್ಥಿಯು ತನಗೆ ಮಂಜೂರಾದ ವ್ಯಾಸಂಗ ವೇತನದ ಮೊತ್ತವನ್ನು ಶೇ.15 ರ ವಾರ್ಷಿಕ ಬಡ್ಡಿಯೊಂದಿಗೆ ಸರ್ಕಾರಕ್ಕೆ ಹಿಂದಿರುಗಿಸುವುದು.

h. ವಿದ್ಯಾರ್ಥಿಯು ತನ್ನ ವ್ಯಾಸಂಗವು ಮುಕ್ತಾಯಗೊಂಡ ಬಗ್ಗೆ ಮುಕ್ತಾಯಗೊಂಡ ವರದಿಯನ್ನು ಬಳಿಕ ಕೋರ್ಸ್ ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಗಳಿಂದ ಪಡೆದು ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸುವುದು.

i. ವಿದ್ಯಾರ್ಥಿಗಳು ತಮಗೆ ಉದ್ಯೋಗ ದೊರೆತ ಬಳಿಕ ಮಾಹಿತಿಯನ್ನು ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸುವುದು.

j. ಸದರಿ ವ್ಯಾಸಂಗ ವೇತನ ಪಡೆಯಲಿಚ್ಛಿಸುವ ವಿದ್ಯಾರ್ಥಿಯು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳಿಗೆ ಒಪ್ಪಿರುವ ಬಗ್ಗೆ ಹಾಗೂ ವಿದ್ಯಾರ್ಥಿಯು ಯಾವುದೇ ಕಾರಣದಿಂದ ವಿದೇಶದಲ್ಲಿನ ವ್ಯಾಸಂಗವನ್ನು ಮೊಟಕುಗೊಳಿಸಿದಲ್ಲಿ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ತಪ್ಪು ಮಾಹಿತಿ ನೀಡಿ ವ್ಯಾಸಂಗ ವೇತನ ಪಡೆದಿರುವುದು ಯಾವುದೇ ಸಮಯದಲ್ಲಿ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿ/ಪೋಷಕರು ಇಲಾಖೆಯಿಂದ ಪಡೆದ ವ್ಯಾಸಂಗ ವೇತನವನ್ನು ಶೇ.15 ರ ವಾರ್ಷಿಕ ಬಡ್ಡಿಯೊಂದಿಗೆ ಸರ್ಕಾರಕ್ಕೆ ಹಿಂದಿರುಗಿಸುವ ಬಗ್ಗೆಯೂ ಸಹ ಒಪ್ಪಿ, ಮುಚ್ಚಳಿಕೆ ಪತ್ರವನ್ನು ನೀಡುವುದು.

k. ಇಲಾಖೆಯಿಂದ ವಿದ್ಯಾರ್ಥಿಗೆ ಮಂಜೂರಾಗುವ ವ್ಯಾಸಂಗ ವೇತನಕ್ಕೆ ಅನುಗುಣವಾಗಿ ಸಂಬಂಧಪಟ್ಟ ವಿದ್ಯಾರ್ಥಿಯು ಯಾವುದಾದರೂ ಇಬ್ಬರು ಸರ್ಕಾರಿ ನೌಕರರು ಅಥವಾ ಒಬ್ಬರು ಭೂಹಿಡುವಳಿದಾರರಿಂದ ಇಲಾಖೆಗೆ ಷ್ಯೂರಿಟಿ ಕೊಡಿಸುವುದು. ವಿದ್ಯಾರ್ಥಿಯು
ಯಾವುದೇ ಕಾರಣದಿಂದ ವಿದೇಶದಲ್ಲಿನ ವ್ಯಾಸಂಗವನ್ನು ಮೊಟಕುಗೊಳಿಸಿದಲ್ಲಿ, ತಾನು ವಿದೇಶದಲ್ಲಿನ ವಿಶ್ವವಿದ್ಯಾಲಯ ಅಥವಾ ಕೋರ್ಸ್ ಅನ್ನು ಬದಲಾಯಿಸಿದಲ್ಲಿ ವಿದ್ಯಾರ್ಥಿಯು ತಪ್ಪು ಮಾಹಿತಿ ನೀಡಿ ವ್ಯಾಸಂಗ ವೇತನ ಪಡೆದಿರುವುದು ಯಾವುದೇ ಸಮಯದಲ್ಲಿ ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗೆ ಇಲಾಖೆಯಿಂದ ಮಂಜೂರಾದ ವ್ಯಾಸಂಗ ವೇತನದ ಮೊತ್ತವನ್ನು ಶೇ.15 ರ ವಾರ್ಷಿಕ ಬಡ್ಡಿಯೊಂದಿಗೆ ಸಂಬಂಧಪಟ್ಟ ವಿದ್ಯಾರ್ಥಿ, ಕುಟುಂಬಸ್ಥರು ಹಾಗೂ ಷ್ಯೂರಿಟಿದಾರರು ಸರ್ಕಾರಕ್ಕೆ ಮರು ಪಾವತಿಸುವುದು. ತಪ್ಪಿದಲ್ಲಿ ಷ್ಯೂರಿಟಿದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನಿಯಮಾನುಸಾರ ಕ್ರಮವಹಿಸಲಾಗುವುದು.

l.The Guarantor or Guardian Shall give the immovable property for collateral purpose to avail the Scholarship amount and the Said immovable property on which the guarantor or the guardian intends to raise the Scholarship Shall execute a deed of Simple Registered/Equitable Mortgage Deed of their property to avail the Scholarship amount.

m. 2024-25ನೇ ಸಾಲಿನ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಭೌತಿಕ ಗುರಿಯನ್ನು ಅನುದಾನದ ಲಭ್ಯತೆಗೆ ಅನುಗುಣವಾಗಿ ನಿಗದಿಪಡಿಸಲಾಗುವುದು.

n. ಆನ್-ಲೈನ್ ಅರ್ಜಿ ಸಲ್ಲಿಸಿದ ನಂತರ Edit and Delete Option ಗೆ ಅವಕಾಶ ಇರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳಿಗೆ ನೀಡಿರುವ ಸೂಚನೆಗಳನ್ನು ಮತ್ತು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು.

o.ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05.12.2024 ಸಹಾಯವಾಣಿ ಸಂಖ್ಯೆ: 8050770004

ಮತ್ತಷ್ಟು ಮಾಹಿತಿಗಾಗಿ- CLICK HERE

 

 

Leave a Comment