Draft Rules-2024
Draft Rules: ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 1990 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಅಧಿನಿಯಮದ 3ನೇ ಪ್ರಕರಣದ 2(ಎ) ಉಪ ಪ್ರಕರಣದಲ್ಲಿ ಅಗತ್ಯಪಡಿಸಲಾದಂತೆ, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2)ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು, 2024ರ ಕರಡನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: RDPR/80/GPK/2021 (E), ದಿನಾಂಕ: 05-07-2024 ರ ಮೂಲಕ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ IV A ರಲ್ಲಿ ಮತ್ತು ಸರ್ಕಾರದ ಸೇರ್ಪಡೆ ಸಂಖ್ಯೆ: RDPR/80/GPK/2021 (E), ದಿನಾಂಕ: 11-09-2024 ರ ಮೂಲಕ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ ||| ರಲ್ಲಿ ಪ್ರಕಟಿಸಿ ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಸಲ್ಲಿಸಲು ಆಹ್ವಾನಿಸಲಾಗಿರುವುದರಿಂದ,
ಸದರಿ ಕರಡನ್ನು ದಿನಾಂಕ: 05-07-2024 ಮತ್ತು 12-09-2024 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದರಿಂದ;
ಮತ್ತು ಈ ಸಂಬಂಧ ಸ್ವೀಕರಿಸಲಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿರುವುದರಿಂದ;
ಈಗ ಕರ್ನಾಟಕ ರಾಜ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಏನೆಂದರೆ:-
ನಿಯಮಗಳು
1.ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು, 2024 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2.ವ್ಯಾಖ್ಯಾನಗಳು: – (1) ಈ ನಿಯಮಗಳಲ್ಲಿ, ಸಂದರ್ಭಕ್ಕೆ ಅಗತ್ಯವಿಲ್ಲದ ಹೊರತು:
a) “ವಾಸ್ತವಿಕ ಕೆಲಸ” ಎಂದರೆ ಅವನ ದೈನಂದಿನ ಹಾಜರಾತಿಯನ್ನು ದಾಖಲಿಸುವ ಸ್ಥಳದಲ್ಲಿ ನೌಕರರು ಕೆಲಸ ಮಾಡುವುದು.
b) ‘ನೇಮಕಾತಿ” ಎಂದರೆ ನೇರ ನೇಮಕಾತಿ, ವಿಲೀನಗೊಳ್ಳುವಿಕೆ ಅಥವಾ ಬಡ್ತಿಯ ಮೂಲಕ ನೇಮಕಾತಿ;
c) ನೇಮಕಾತಿ ಪ್ರಾಧಿಕಾರ” ಎಂದರೆ,
i. ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸಂಬಂಧಿಸಿದಂತೆ ಆಯುಕ್ತರು, ಪಂಚಾಯತ್ ರಾಜ್ ಆಯುಕ್ತಾಲಯ.
ii. ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್- 1)ಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
iii. ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ).
d) “ಸಕ್ಷಮ ಪ್ರಾಧಿಕಾರ” ಎಂದರೆ ಅನುಸೂಚಿಯ ಕೋಷ್ಠಕ-1 ರಲ್ಲಿ ವ್ಯಾಖ್ಯಾನಿಸಿದಂತೆ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಪ್ರಾಧಿಕಾರ.
c) “ಕೌನ್ಸಿಲಿಂಗ್” ಎಂದರೆ ವರ್ಗಾವಣೆಗಾಗಿ ಪರಿಗಣಿಸಲಾದ ವ್ಯಕ್ತಿಗೆ ಈ ನಿಯಮಗಳ ಪ್ರಕಾರ ಲಭ್ಯವಿರುವ ಸ್ಥಳ ಅಥವಾ ಹುದ್ದೆಯನ್ನು ಆಯ್ಕೆ ಮಾಡಲು ಅವಕಾಶವನ್ನು ನೀಡುವ ಮೂಲಕ ಕೌನ್ಸಿಲಿಂಗ್ ಪ್ರಕ್ರಿಯೆ;
f) “ನೌಕರ” ಎಂದರೆ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ -1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ;
g) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆಗಳು;
b) “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ:
i) “ಗ್ರಾಮ ಪಂಚಾಯತಿ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993 ರ ಅಡಿಯಲ್ಲಿ ಸ್ಥಾಪಿಸಲಾದ ಗ್ರಾಮ ಪಂಚಾಯತಿ: (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14)
j) “ಗ್ರಾಮ ಪಂಚಾಯತಿ ಕಾರ್ಯದರ್ಶಿ” ಎಂದರೆ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ -1 ಮತ್ತು 2);
k) “ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ” ಎಂದರೆ ಕಾಲಕಾಲಕ್ಕೆ ಸರ್ಕಾರದಿಂದ ಅಧಿಸೂಚಿಸಲಾಗುವ ಗ್ರಾಮ ಪಂಚಾಯತಿಗಳ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ.
x) “ಜೇಷ್ಠತಾ ಘಟಕ” ಎಂದರೆ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ನೇಮಕಾತಿ ಮಾಡಲು ಪ್ರಕರಣಗಳಿಗನುಸಾರ ಸಕ್ಷಮ ನೇಮಕಾತಿ ಪ್ರಾಧಿಕಾರದ ಅಧಿಕಾರ ವ್ಯಾಪ್ತಿ;
(2) ಈ ನಿಯಮಗಳಲ್ಲಿ ಬಳಸಿದ, ಆದರೆ ವ್ಯಾಖ್ಯಾನಿಸದ ಪದಗಳು ಮತ್ತು ಅಭಿವ್ಯಕ್ತಿಗಳು ಕರ್ನಾಟಕ ರಾಜ್ಯ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅವುಗಳಿಗೆ ನಿಗಧಿಪಡಿಸಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.
3.ಸಾರ್ವಜನಿಕ ಹಿತದೃಷ್ಟಿಯಲ್ಲಿ ಅಥವಾ ಕೋರಿಕೆಯ ಮೇರೆಗೆ ನೌಕರರ ವರ್ಗಾವಣೆ: (1) ನೌಕರರ ವರ್ಗಾವಣೆಯನ್ನು ಈ ನಿಯಮಗಳ ಅಡಿಯಲ್ಲಿ ಕೌನ್ಸಿಲಿಂಗ್ ಮೂಲಕ ನಿಯಮ 7 ರಲ್ಲಿ ಸೂಚಿಸಿರುವಂತೆ ಖಾಲಿ ಹುದ್ದೆಗಳನ್ನು ತರ್ಕಬದ್ದವಾಗಿ ತುಂಬಲು ಕ್ರಮ ವಹಿಸತಕ್ಕದ್ದು.
(2) ಈ ನಿಯಮಗಳ ಪ್ರಾರಂಭದ ದಿನಾಂಕದಂದು ಸೇವೆಯಲ್ಲಿರುವ ಗ್ರಾಮ ಪಂಚಾಯತಿಯ ನೌಕರನು ನಿರಂತರವಾಗಿ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಸೇವೆಯನ್ನು ಹೊಂದಿದ್ದಲ್ಲಿ, ಗ್ರಾಮ ಪಂಚಾಯತಿಯಲ್ಲಿನ ಸೇವಾ ಅವಧಿಯ ಆಧಾರದ ಮೇಲೆ ಅವನ ಕೋರಿಕೆಯ ಮೇರೆಗೆ ಅಥವಾ ಸಾರ್ವಜನಿಕ ಹಿತದೃಷ್ಟಿಯಲ್ಲಿ ಮತ್ತೊಂದು ಗ್ರಾಮ ಪಂಚಾಯತಿಗೆ ವರ್ಗಾಯಿಸಬಹುದು.
ಪರಂತು, ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ನೌಕರರನ್ನು ಸೇವಾ ಅವಧಿಯ ಆಧಾರದ ಮೇಲೆ ವರ್ಗಾವಣೆ ಮಾಡತಕ್ಕದ್ದು. ಗರಿಷ್ಠ ಸೇವಾ ಅವಧಿಯನ್ನು ಪೂರೈಸಿರುವ ನೌಕರರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿನ ಅವರ ಸೇವಾ ಅವಧಿಯ ಆಧಾರದ ಮೇಲೆ ಅವರೋಹಣ ಕ್ರಮದಲ್ಲಿ ಪರಿಗಣಿಸತಕ್ಕದ್ದು. ನಿಯಮ 4 ರಲ್ಲಿ ವಿಧಿಸಲಾದ ನಿರ್ಬಂಧಗಳಿಗೆ ಒಳಪಟ್ಟು ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯವಾಗಿ ವರ್ಗಾಯಿಸತಕ್ಕದ್ದು.
(3) ನಿಯಮ 4 ರಲ್ಲಿ ನಿರ್ದಿಷ್ಟಪಡಿಸಿದಂತೆ, 1, 2, 3, 4 ಮತ್ತು 5 ರ ವರ್ಗಗಳಿಗೆ ಸೇರಿದ ನೌಕರರು ಉಪ ನಿಯಮ (2) ರಲ್ಲಿ ನಿಗದಿಪಡಿಸಿದಂತೆ ಪ್ರಸ್ತುತ ನಿಯಮಿತ ನಿಯುಕ್ತಿಯ ಸ್ಥಳದಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿಯಮ 4 ರಲ್ಲಿ ವಿಧಿಸಿದ ನಿಬಂಧಗಳಿಗೆ ಒಳಪಟ್ಟು ವಿನಂತಿಸಬಹುದು. ಈ ಉದ್ದೇಶಕ್ಕಾಗಿ, ನಿಯಮ 4 ರಲ್ಲಿ ನಿರ್ದಿಷ್ಟಪಡಿಸಿದಂತೆ ನೌಕರರು 1, 2, 3, 4 ಮತ್ತು 5 ಯಾವುದಾದರೂ ವರ್ಗಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ನಿಯಮ 4 ರಲ್ಲಿ ಉಲ್ಲೇಖಿಸಿದಂತೆ 2, 3, 4 ಮತ್ತು 5 ವರ್ಗಗಳಲ್ಲಿನ ಅಂಕಗಳನ್ನು ಸೇರಿಸುವ ಮೂಲಕ ಒಟ್ಟು ವೈಟೇಜನ್ನು ಲೆಕ್ಕ ಹಾಕಲಾಗುತ್ತದೆ.
4.ವರ್ಗಾವಣೆಯ ಮೇಲಿನ ನಿರ್ಬಂಧ – ಕೌನ್ಸಿಲಿಂಗ್ ಮೂಲಕ ವರ್ಗಾವಣೆಗಳ ಪರಿಮಿತಿಯು
ಮಂಜೂರಾದ ಹುದ್ದೆಗಳ ಹದಿನೈದು ಪ್ರತಿಶತವನ್ನು ಮೀರತಕ್ಕದ್ದಲ್ಲ. ಒಟ್ಟು ಹದಿನೈದು ಪ್ರತಿಶತ ವರ್ಗಾವಣೆಗಳಲ್ಲಿ ಕನಿಷ್ಟ ಅವಧಿಯ ಸೇವೆಯನ್ನು ಪೂರ್ಣಗೊಳಿಸಿದ ನಂತರ ಸಾರ್ವಜನಿಕ ಹಿತದೃಷ್ಟಿಯಿಂದ ಕೌನ್ಸಿಲಿಂಗ್ ಮೂಲಕ ಮತ್ತು ಸಾಮಾನ್ಯ ಕೋರಿಕೆ ವರ್ಗಾವಣೆಗಳಿಗೆ ಒಂಭತ್ತು ಪ್ರತಿಶತವನ್ನು ಮೀಸಲಿಡಬೇಕು ಮತ್ತು ಉಳಿದ ಆರು ಪ್ರತಿಶತವನ್ನು ಕೆಳಗಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದಂತೆ 2, 3, 4 ಮತ್ತು 5 ವರ್ಗಗಳಿಗೆ ವಿನಂತಿಯ ಮೇರೆಗೆ ವರ್ಗಾವಣೆಗಳಿಗೆ ಮೀಸಲಿಡತಕ್ಕದ್ದು:
ಪರಂತು,
1.ಒಂದೇ ತಾಲ್ಲೂಕಿನಲ್ಲಿ ನಿರಂತರವಾಗಿ 7 ವರ್ಷ ಸೇವೆಯನ್ನು ಸಲ್ಲಿಸಿರುವ ವರ್ಗ-1 ರ ನೌಕರರನ್ನು ಅದೇ ತಾಲ್ಲೂಕಿನ ಗ್ರಾಮ ಪಂಚಾಯತಿಗೆ ಸ್ಥಳ ನಿಯುಕ್ತಿಗೊಳಿಸತಕ್ಕದ್ದಲ್ಲ.
2.ಇಲಾಖಾ ವಿಚಾರಣೆ/ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ನೌಕರರನ್ನು ಇಲಾಖಾ ವಿಚಾರಣೆ/ಕ್ರಿಮಿನಲ್ ಪ್ರಕ್ರಿಯೆಗಳು ಉದ್ಭವಿಸಿದ ಸ್ಥಳಗಳಿಗೆ ನಿಯುಕ್ತಿ ಮಾಡತಕ್ಕದ್ದಲ್ಲ.
ಕೋಷ್ಟಕ
2, 3, 4 ಮತ್ತು 5 ವರ್ಗಗಳಲ್ಲಿ ಸೂಚಿಸಲಾದ ಕೋಟಾ ಬಳಕೆಯಾಗದಿದ್ದಲ್ಲಿ ಅದನ್ನು ವರ್ಗ-1 ರಲ್ಲಿ ಬಳಸಿಕೊಳ್ಳಬಹುದು.
ವರ್ಗಾವಣೆಗಳಿಗೆ ವಿನಾಯಿತಿಗಳು: (1) ನಿಯಮ 4 ರ ಅಡಿಯಲ್ಲಿ ಸೂಚಿಸಿರುವ ಕೋಷ್ಟಕದಲ್ಲಿನ 2, 3, 4 ಮತ್ತು 5 ವರ್ಗಗಳಿಗೆ ಸೇರಿದ ನೌಕರರಿಗೆ ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಸೇವಾ ಅವಧಿಯನ್ನು ನೌಕರರು ಬಯಸಿದರೆ, ಒಂದು ವರ್ಷಕ್ಕೆ ಇಳಿಸಬಹುದು. ಈ ಸೌಲಭ್ಯವನ್ನು ಸಾಮಾನ್ಯವಾಗಿ ಒಟ್ಟು ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ ಪಡೆಯತಕ್ಕದ್ದು:
ಪರಂತು:-
i) ನೌಕರರ ಪತಿ-ಪತ್ನಿ ಅಥವಾ ಮಕ್ಕಳು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ನೌಕರರ ಕೆಲಸದ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಮತ್ತು ಅಂತಹ ಚಿಕಿತ್ಸೆಯು ಲಭ್ಯವಿರುವ ಸ್ಥಳಕ್ಕೆ ನೌಕರನನ್ನು ವರ್ಗಾವಣೆ ಮಾಡುವುದು ಅವಶ್ಯಕವಾಗಿದ್ದಲ್ಲಿ ಮೇಲಿನ ನಿಬಂಧನೆ ಅನ್ವಯವಾಗುವುದಿಲ್ಲ.
(ii) ಸಂಬಂಧಪಟ್ಟ ನೌಕರರು ಜಿಲ್ಲಾ ವೈದ್ಯಕೀಯ ಮಂಡಳಿ ಅಥವಾ ವಿಶೇಷ ಸರ್ಕಾರಿ ಸಂಸ್ಥೆಗಳಿಂದ ಖಾಯಿಲೆಯ ಸ್ವರೂಪವನ್ನು ನಿರ್ದಿಷ್ಟಪಡಿಸುವ ಪ್ರಮಾಣ ಪತ್ರವನ್ನು ಒದಗಿಸದ ಹೊರತು ಈ ನಿಬಂಧನೆಯ ಅಡಿಯಲ್ಲಿ ಯಾವುದೇ ವರ್ಗಾವಣೆಯನ್ನು ಪರಿಗಣಿಸತಕ್ಕದ್ದಲ್ಲ, ಅಗತ್ಯವಿರುವ ಚಿಕಿತ್ಸೆಯು ಅವರ ಮೂಲ ಕೆಲಸದ ಸ್ಥಳದಲ್ಲಿ ಲಭ್ಯವಿಲ್ಲದಿದ್ದರೆ, ಅಗತ್ಯವಿರುವ ಚಿಕಿತ್ಸೆಯು ಲಭ್ಯವಿರುವ ಸ್ಥಳವನ್ನು ಸಹ ನಿರ್ದಿಷ್ಟಪಡಿಸುವುದು ಮತ್ತು ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಲಭ್ಯವಿರುವ ಸ್ಥಳಕ್ಕೆ ಈ ವರ್ಗಾವಣೆ ಅಗತ್ಯವೆಂದು ಪ್ರಮಾಣೀಕರಿಸುವುದು.
(2) ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಸೇವೆಗಳ ಕನಿಷ್ಠ ಅವಧಿಯನ್ನು ಪೂರ್ಣಗೊಳಿಸಿದ ನೌಕರರು ಈ ಕೆಳಗಿನ ಸಂದರ್ಭಗಳಲ್ಲಿ ವರ್ಗಾವಣೆಯಿಂದ ವಿನಾಯಿತಿಗಳಿಗೆ ಒಳಪಟ್ಟಿರುತ್ತಾರೆ:-
i) ನೌಕರರು ಅಪೇಕ್ಷಿಸಿದಲ್ಲಿ ನಿವೃತ್ತಿಗಾಗಿ ಒಂದು ವರ್ಷಕ್ಕಿಂತ ಕಡಿಮೆ ಸೇವೆಯನ್ನು ಹೊಂದಿರುವ ನೌಕರನನ್ನು ವರ್ಗಾಯಿಸತಕ್ಕದ್ದಲ್ಲ.
ii) ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ, ಕೇಂದ್ರ ಪದಾಧಿಕಾರಿಯಾದ ನೌಕರರು ವಿನಂತಿ ಮಾಡದ ಹೊರತು ಸಂಬಂಧಪಟ್ಟ ಪದಾಧಿಕಾರಿಯ ಅವಧಿ ಪೂರ್ಣಗೊಳ್ಳುವವರೆಗೆ ವರ್ಗಾವಣೆ ಮಾಡತಕ್ಕದ್ದಲ್ಲ.
iii. ಅಂಗವಿಕಲತೆಯ ಮಾನದಂಡದ ಮಟ್ಟವುಳ್ಳ ನೌಕರರನ್ನು ಅವರ ವಿನಂತಿಯಿಲ್ಲದೆ ವರ್ಗಾಯಿಸತಕ್ಕದ್ದಲ್ಲ.
iv. ಗಂಭೀರ ಕಾಯಿಲೆ ಇರುವ ನೌಕರರನ್ನು ಅವರ ಕೋರಿಕೆ ಇಲ್ಲದೆ ವರ್ಗಾವಣೆ ಮಾಡಬಾರದು.
(3) ಅಮಾನತ್ತು/ಶಿಸ್ತಿನ ಪ್ರಕ್ರಿಯೆಗಳು/ಕ್ರಿಮಿನಲ್ ಮೊಕದ್ರಮಗಳ ಅಡಿಯಲ್ಲಿ ನೌಕರರನ್ನು ಮರುಸ್ಥಾಪಿಸುವುದು ಮತ್ತು ಸ್ಥಳ ನಿಯುಕ್ತಿ ಮಾಡುವುದು ಯಾವುದಾದರೂ ಇದ್ದರೆ ಅವನು/ಅವಳನ್ನು ಅಮಾನತ್ತುಗೊಳಿಸಿದ ಅಥವಾ ಶಿಸ್ತಿನ ಪ್ರಕ್ರಿಯೆಗಳು/ಕ್ರಿಮಿನಲ್ ಮೊಕದ್ದಮೆಗಳು ಉದ್ಭವಿಸಿದ ಸ್ಥಳವನ್ನು ಹೊರತುಪಡಿಸಿ ಖಾಲಿ ಹುದ್ದೆಗಳಿಗೆ ಮಾತ್ರ ಮಾಡತಕ್ಕದ್ದು, ಅಂತಹ ವರ್ಗಾವಣೆಯನ್ನು ಇಡೀ ವರ್ಷದಲ್ಲಿ, ಅಂತಹ ಸಂದರ್ಭಗಳು ಉದ್ಭವಿಸಿದಾಗಲೆಲ್ಲಾ ಮಾಡಬಹುದು.
6.ಆದ್ಯತಾ ಪಟ್ಟಿಗಳ ತಯಾರಿ: (1) ನೌಕರರ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯನ್ನು ಆದ್ಯತಾ ಪಟ್ಟಿಯ ಪ್ರಕಾರ ಪ್ರಸ್ತುತ ಸ್ಥಳವನ್ನು ಹೊರತುಪಡಿಸಿ ವರ್ಗಾವಣೆಗಾಗಿ ಪಟ್ಟಿ ಮಾಡಲಾದ ಇನ್ಯಾವುದೇ ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಲು ಅವಕಾಶ ನೀಡುವ ಮೂಲಕ ವರ್ಗಾವಣೆಗಳನ್ನು ಮಾಡತಕ್ಕದ್ದು. ಯಾವುದೇ ವರ್ಗಗಳ ನೌಕರರ ವರ್ಗಾವಣೆಯಿಂದಾಗಿ ಸ್ಥಳಾಂತರಗೊಂಡ ನೌಕರರಿಗೆ ಈ ನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ 15% ಮಿತಿಯೊಳಗೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ಮಾಡತಕ್ಕದ್ದು. draft Rules
(2) ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಒಂದು ಸ್ಥಳದಲ್ಲಿ ಕನಿಷ್ಠ ಸೇವಾವಧಿಯನ್ನು ಮತ್ತು ಗರಿಷ್ಠ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ನೌಕರರ ಆದ್ಯತೆಯ ಪಟ್ಟಿಗಳನ್ನು ಮತ್ತು ನಿಯಮ 3 ರ ಉಪ-ನಿಯಮ (3) ರ ಅಡಿಯಲ್ಲಿ ವರ್ಗಾವಣೆಗಾಗಿ ವಿನಂತಿಸಿದ ನೌಕರರ ಪ್ರತ್ಯೇಕ ಪಟ್ಟಿ ಮತ್ತು ಪುಸ್ತುತ ನಿಯಮಿತ ಸ್ಥಳದಲ್ಲಿ ನಿಯಮ 5 ರಲ್ಲಿ ನಿರ್ದಿಷ್ಟ ಪಡಿಸಿದ ಕನಿಷ್ಠ ಸೇವೆಯ ಸಡಿಲಿಕೆ ಪಡೆಯಲು ಇಚ್ಛಿಸುವ ನೌಕರರ ಪಟ್ಟಿಯನ್ನು ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯುಕ್ತರು, ಪಂಚಾಯತ್ ರಾಜ್ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪಡಿಸತಕ್ಕದ್ದು.
(3) ಪ್ರತಿಯೊಂದು ಜೇಷ್ಟತಾ ಘಟಕದೊಳಗೆ, ಈ ನಿಯಮಗಳ ಅಡಿಯಲ್ಲಿ ಪ್ರತಿ ವರ್ಗಕ್ಕೆ ಪ್ರತ್ಯೇಕವಾಗಿ ಆದ್ಯತೆಯ ಪಟ್ಟಿಗಳನ್ನು ಸಿದ್ಧಪಡಿಸತಕ್ಕದ್ದು. ನಿಯಮ 4 ರ ಅಡಿಯಲ್ಲಿನ ಕೋಷ್ಟಕದಲ್ಲಿ ನಮೂದಿಸಲಾದ ಪರಿಮಾಣದ ಆಧಾರದ ಮೇಲೆ ಈ ಮುಂದಿನಂತೆ ಆದ್ಯತೆಯ ಕ್ರಮದಲ್ಲಿ ವರ್ಗಾವಣೆಗಳನ್ನು ಮಾಡಲಾಗುತ್ತದೆ. ನೌಕರರು ಸಮಾನ ಪರಿಮಾಣ ಪಡೆದ ಸಂದರ್ಭದಲ್ಲಿ, ಆದ್ಯತಾ ಪಟ್ಟಿಯನ್ನು ಈ ಕೆಳಗಿನ ಕ್ರಮದಲ್ಲಿ ಸಿದ್ಧಪಡಿಸಬೇಕು ಅವುಗಳೆಂದರೆ:-
i. ಅಂಗವಿಕಲತೆಯ ಮಾನದಂಡದ ಮಟ್ಟವುಳ್ಳ ವ್ಯಕ್ತಿಗಳ ಪ್ರಕರಣಗಳು.
ii. ಗಂಭೀರ ಕಾಯಿಲೆ ಪ್ರಕರಣಗಳು.
iii. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಒಂಟಿ ಮಹಿಳೆ ಅಥವಾ ಒಂಟಿ ಪೋಷಕರ ಪ್ರಕರಣಗಳು ಅಥವಾ ದೈಹಿಕವಾಗಿ ಅವಲಂಬಿತ ಪತಿ/ಪತ್ನಿಯನ್ನು ಹೊಂದಿರುವ ನೌಕರರು /ಅಂಗವಿಕಲತೆಯ ಮಾನದಂಡದ ಮಟ್ಟವುಳ್ಳ / ಗಂಭೀರ ಕಾಯಿಲೆಯಿರುವ ಮಕ್ಕಳನ್ನು ಹೊಂದಿರುವ ನೌಕರರು.
iv. ಪತಿ-ಪತ್ನಿ ಪ್ರಕರಣಗಳು.
V. ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಗಳು.
vi. ಸ್ವಂತ ಕೋರಿಕೆ (i) – (iv) ಹೊರತುಪಡಿಸಿ.
(4) ನೌಕರರು ತಮ್ಮ ಪ್ರಸ್ತುತ ಕೆಲಸದ ಸ್ಥಳದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿರುವುದನ್ನು ಆದ್ಯತೆಯ ಆಧಾರದ ಮೇಲೆ ಪರಿಗಣಿಸತಕ್ಕದ್ದು ಮತ್ತು ಸೇವೆಯ ಅವಧಿ ಸಮಾನವಾದಾಗ, ನೌಕರನ ವಯಸ್ಸು ಪರಿಗಣನೆಯ ಮಾನದಂಡವಾಗಿರತಕ್ಕದ್ದು (ಕಿರಿಯ ನೌಕರನ ಮೇಲೆ ಹಿರಿಯ ನೌಕರನು ಆದ್ಯತೆಯನ್ನು ಪಡೆಯುತ್ತಾನೆ).
(5) ಸಕ್ಷಮ ಪ್ರಾಧಿಕಾರಗಳು ಮೇಲೆ ನಿರ್ದಿಷ್ಟಪಡಿಸಿದ ಕಾರ್ಯವಿಧಾನದ ಪ್ರಕಾರ ತಾತ್ಕಾಲಿಕ ಆದ್ಯತೆಯ ಪಟ್ಟಿಗಳನ್ನು ಸಿದ್ಧಪಡಿಸಬೇಕು ಹಾಗೂ ಸಕ್ಷಮ ಪ್ರಾಧಿಕಾರಗಳು ಯಾವುದೇ ಆಕ್ಷೇಪಣೆಗಳನ್ನು ನಿಗದಿಪಡಿಸಿದ ಸಮಯದೊಳಗೆ ಸಲ್ಲಿಸಲು ಅಧಿಸೂಚಿಸಬೇಕು. ನೌಕರರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ, ಈ ನಿಯಮಗಳ ಪ್ರಕಾರ ಅದನ್ನು ಪರಿಗಣಿಸಬಹುದು ಅಥವಾ ತಿರಸ್ಕರಿಸಬಹುದು ಮತ್ತು ಅಂತಿಮ ಆದ್ಯತೆಯ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
7.ಕೌನ್ಸಿಲಿಂಗ್ ನಡೆಸುವ ವಿಧಾನ – (1) ಕೌನ್ಸಿಲಿಂಗ್ ಕಾರ್ಯವಿಧಾನವನ್ನು ಪ್ರಾರಂಭಿಸುವ ಮೊದಲು, ಮಂಜೂರಾದ ಹುದ್ದೆಗಳ ಸಂಖ್ಯೆ ಕಾರ್ಯನಿರತ ಸಂಖ್ಯೆ ಮತ್ತು ಖಾಲಿ ಹುದ್ದೆಗಳು, ಕನಿಷ್ಠ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಮತ್ತು ಹುದ್ದೆಯಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಪರಿಣಾಮವಾಗಿ ಉದ್ಭವಿಸುವ ಖಾಲಿ ಹುದ್ದೆಗಳನ್ನು ನಮೂನೆ-11 ರಲ್ಲಿ ಸೂಚಿಸಿರುವ ಪ್ರಪತ್ರದಲ್ಲಿ ಅಧಿಸೂಚಿಸತಕ್ಕದ್ದು.
(2) ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ವಿವಿಧ ವರ್ಗಗಳಿಗೆ ಸೇರಿದ ನೌಕರರು ಕೋರಿಕೆಯ ಮೇರೆಗೆ ವರ್ಗಾವಣೆಗಾಗಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರಿಗಳು ಅಧಿಸೂಚಿಸತಕ್ಕದ್ದು
(3) ಸಾರ್ವಜನಿಕ ಹಿತದೃಷ್ಟಿಯಿಂದ ಕೌನ್ಸಿಲಿಂಗ್ ಮೂಲಕ ಮಾಡಲಾಗುವ ಕಡ್ಡಾಯ ವರ್ಗಾವಣೆಯಿಂದ ಖಾಲಿಯಾಗುವ ಅಥವಾ ಭರ್ತಿ ಮಾಡಬೇಕಾಗಿರುವ ಹುದ್ದೆಗಳನ್ನು ಸಕ್ಷಮ ಪ್ರಾಧಿಕಾರಿಗಳು ಅಧಿಸೂಚಿಸಬೇಕು.
(4) ಕೊನೆಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸತಕ್ಕದ್ದು ಮತ್ತು ವರ್ಗಾವಣೆ ಅರ್ಜಿಯಲ್ಲಿ ತಪ್ಪಾದ ಮಾಹಿತಿಯನ್ನು ಒದಗಿಸಿರುವುದು ಕಂಡು ಬಂದಲ್ಲಿ, ಕರ್ನಾಟಕ ಸಿವಿಲ್ ಸೇವೆಗಳ (ನಡತೆ) ನಿಯಮಗಳು, 2021ರ ಅಡಿಯಲ್ಲಿ ದುರ್ನಡತೆ ಎಂದು ಪರಿಗಣಿಸತಕ್ಕದ್ದು ಹಾಗೂ ಕರ್ನಾಟಕ ನಾಗರಿಕ ಸೇವೆಗಳ (ನಿಯಂತ್ರಣ, ವರ್ಗೀಕರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ಪ್ರಕಾರ ಅರ್ಜಿದಾರರ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಪ್ರಾರಂಭಿಸಬಹುದು.
(5) ಆಯಾ ಸಕ್ಷಮ ಪ್ರಾಧಿಕಾರಗಳಿಂದ ಸೂಚನೆಗಳನ್ನು ಸ್ವೀಕರಿಸಿದ ನೌಕರರು ಕೌನ್ಸಿಲಿಂಗ್ ಹಾಜರಾಗಬೇಕು ಮತ್ತು ಈ ನಿಯಮಗಳ ಅಡಿಯಲ್ಲಿ ಸಕ್ಷಮ ಪ್ರಾಧಿಕಾರಗಳು ನಿಗದಿಪಡಿಸಿದ ಸಮಯದೊಳಗೆ ಪ್ರದರ್ಶಿಸಲಾದ ಯಾವುದೇ ಸ್ಥಳವನ್ನು ಆಯ್ಕೆ ಮಾಡಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡದ ಹೊರತು, ಕೋರಿಕೆಯ ಮೇರೆಗೆ ಕೌನ್ಸಿಲಿಂಗ್‌ಗೆ ನೌಕರರು ಅಧಿಸೂಚಿಸಲಾದ ಸಮಯದ ಅನುಸಾರ ಹಾಜರಾಗಲು ವಿಫಲವಾದಲ್ಲಿ ಮತ್ತು ನಿಗದಿತ ಸಮಯದೊಳಗೆ ಸ್ಥಳವನ್ನು ಆಯ್ಕೆ ಮಾಡಲು ವಿಫಲವಾದರೆ, ನೌಕರರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಸಲಾಗಿದೆ ಎಂದು ಪರಿಗಣಿಸತಕ್ಕದ್ದು:
ಪರಂತು, ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಗಾಗಿ ಕೌನ್ಸಿಲಿಂಗ್‌ಗೆ ಹಾಜರಾಗಬೇಕಾದ ನೌಕರನು ಕೌನ್ಸಿಲಿಂಗ್‌ಗೆ ಹಾಜರಾಗದಿದ್ದರೆ ಅಥವಾ ನಿಗದಿತ ಸಮಯದೊಳಗೆ ಸ್ಥಳವನ್ನು ಆಯ್ಕೆ ಮಾಡಲು ವಿಫಲವಾದರೆ ಆಗ ಸಕ್ಷಮ ಪ್ರಾಧಿಕಾರವು ಕೌನ್ಸಿಲಿಂಗ್ ಕೊನೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಕಡ್ಡಾಯ ವರ್ಗಾವಣೆ ಮಾಡಬೇಕಾದ ನೌಕರರನ್ನು ಯಾವುದೇ ಪ್ರದರ್ಶಿತ ಸ್ಥಳಗಳ ವಿರುದ್ಧ ವರ್ಗಾಯಿಸಲು ಮತ್ತು ಸ್ಥಳ ನಿಯುಕ್ತಿ ಮಾಡಲು ಅಧಿಕಾರವನ್ನು ಹೊಂದಿರುತ್ತದೆ.
ಪರಂತು, ನೌಕರರು ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ, ಅದನ್ನು ಕರ್ನಾಟಕ ನಾಗರಿಕ ಸೇವೆಗಳ (ನಡತೆ) ನಿಯಮಗಳು 2021 ರಂತೆ ದುರ್ನಡತೆ ಎಂದು ಪರಿಗಣಿಸತಕ್ಕದ್ದು ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ನಿಯಂತ್ರಣ, ವರ್ಗೀಕರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ಅಡಿಯಲ್ಲಿ ಸೂಕ್ತ ಶಿಸ್ತು ಕ್ರಮಕ್ಕೆ ಗುರಿಯಾಗತಕ್ಕದ್ದು.
ಪರಂತು, ಅಲ್ಲದೆ ನೌಕರರ ಕೋರಿಕೆಯ ಮೇರೆಗೆ ನಿಯಮ 4 ರ ಅಡಿ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದ 2 ಮತ್ತು 3 ವರ್ಗಗಳಿಗೆ ಸೇರಿದ ನೌಕರರು, ಪ್ರಸ್ತುತ ಸ್ಥಳ ನಿಯುಕ್ತಿಗೊಂಡಿರುವ ಸ್ಥಳದಲ್ಲಿ ಕನಿಷ್ಠ ಸೇವಾ ಅವಧಿಯನ್ನು ಪೂರ್ಣಗೊಳಿಸಿದ್ದರೆ ಅವರನ್ನು ಅದೇ ಹುದ್ದೆಯಲ್ಲಿ ಇನ್ನು ಒಂದು ವರ್ಷದ ಅವಧಿಗೆ ಮುಂದುವರಿಸಬಹುದು ಮತ್ತು 4 ಮತ್ತು 5 ವರ್ಗಗಳಿಗೆ ಸಂಬಂಧಪಟ್ಟಂತೆ ಒಂದು ಬಾರಿಗೆ ಒಂದು ವರ್ಷಕ್ಕೆ ಗರಿಷ್ಠ ಎರಡು ವರ್ಷಗಳ ಅವಧಿಗೆ ಅದೇ ಹುದ್ದೆಯಲ್ಲಿ ಮುಂದುವರೆಸಬಹುದು.
(6) ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ನಿಯಮ-6 ರ ಉಪ-ನಿಯಮ (5) ರಲ್ಲಿ ಸೂಚಿಸಿದಂತೆ ಪ್ರದರ್ಶಿಸಲಾದ ಖಾಲಿ ಹುದ್ದೆಗಳು ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಮಿತಿಗಳಲ್ಲಿ ಗರಿಷ್ಠ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ನೌಕರರ ಕಡ್ಡಾಯ ವರ್ಗಾವಣೆಯಿಂದ ಉಂಟಾಗುವ ಖಾಲಿ ಹುದ್ದೆಗಳನ್ನು ಒಳಗೊಂಡಿರಬೇಕು. ನಿಯಮ 4ರ ಅಡಿಯಲ್ಲಿರುವ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದಂತೆ 2, 3, 4 ಮತ್ತು 5 ವರ್ಗಗಳಿಗೆ ಸೇರಿದ ನೌಕರರು ಕೌನ್ಸಿಲಿಂಗ್ ಮೂಲಕ ಅಧಿಸೂಚಿಸಲಾದ ಮತ್ತು ಪ್ರದರ್ಶಿಸಲಾದ ಹುದ್ದೆಗಳನ್ನು ಆಯ್ಕೆ ಮಾಡಲು ಅನುಮತಿಸತಕ್ಕದ್ದು. ಆದರೆ ಸದರಿ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ (ಮೂಲ) ಸ್ಥಳದಲ್ಲಿ ಮುಂದುವರಿಯಲು ಇಚ್ಛಿಸಿದಲ್ಲಿ, ಅವನನ್ನು/ಅವಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಕಡ್ಡಾಯವಾಗಿ ವರ್ಗಾವಣೆಗೊಳಿಸದೆ ಇದ್ದಲ್ಲಿ
ಅವನನ್ನು/ಅವಳನ್ನು ಅಲ್ಲಿಯೇ ಮುಂದುವರಿಸತಕ್ಕದ್ದು. ಮುಂದುವರೆದು, ಕೌನ್ಸಿಲಿಂಗ್ ಮೂಲಕ ಪ್ರದರ್ಶಿಸಲಾದ ಹುದ್ದೆಗಳನ್ನು ನೌಕರರು ಆಯ್ಕೆ ಮಾಡಿದ ನಂತರ, ಮುಂದಿನ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾದ ಹುದ್ದೆಗಳನ್ನು ಪಟ್ಟಿಯಿಂದ ತೆಗೆದುಹಾಕತಕ್ಕದ್ದು.
(7) ನಿಯಮ 4 ರ ಅಡಿಯಲ್ಲಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದ 2, 3, 4 ಮತ್ತು 5 ವರ್ಗಗಳಿಗೆ ಸೇರಿದ ನೌಕರರಿಗೆ ಮೊದಲ ಸುತ್ತಿನ ಕೌನ್ಸಿಲಿಂಗ್ ನಂತರ ಉಂಟಾಗುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ಎರಡನೇ ಸುತ್ತಿನ ಕೌನ್ಸಿಲಿಂಗ್‌ಗೆ ಅಧಿಸೂಚಿಸತಕ್ಕದ್ದು ಮತ್ತು ಪ್ರದರ್ಶಿಸತಕ್ಕದ್ದು. ನಂತರ ಸಕ್ಷಮ ಪ್ರಾಧಿಕಾರಗಳು ನಿಯಮ 4 ರ ಅಡಿಯಲ್ಲಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದಂತೆ 2, 3, 4 ಮತ್ತು 5 ವರ್ಗಗಳಿಗೆ ಸೇರಿದ ನೌಕರರಿಗೆ ಎರಡನೇ ಸುತ್ತಿನ ಕೌನ್ಸಿಲಿಂಗನ್ನು ನಡೆಸತಕ್ಕದ್ದು.
(8) ಎರಡನೇ ಸುತ್ತಿನ ಕೌನ್ಸಿಲಿಂಗ್ ಮುಗಿದ ನಂತರ ಮೊದಲ ಎರಡು ಸುತ್ತಿನ ಕೌನ್ಸಿಲಿಂಗ್‌ನಿಂದ ಉಂಟಾಗುವ ಖಾಲಿ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ಷಮ ಪ್ರಾಧಿಕಾರಗಳು ಅಧಿಸೂಚಿಸಬೇಕು ಮತ್ತು ಪ್ರದರ್ಶಿಸಬೇಕು. ಅದರ ನಂತರ, ಸಾರ್ವಜನಿಕ ಹಿತದೃಷ್ಟಿಯಿಂದ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲು ಮತ್ತು ಸಾಮಾನ್ಯ ಕೋರಿಕೆಯ ವರ್ಗಾವಣೆಗಾಗಿ ಕೌನ್ಸಿಲಿಂಗನ್ನು ನಡೆಸತಕ್ಕದ್ದು. ಮುಂದುವರೆದು, ಕೌನ್ಸಿಲಿಂಗ್ ಮೂಲಕ ಪ್ರದರ್ಶಿಸಲಾದ ಹುದ್ದೆಗಳನ್ನು ನೌಕರನು ಆಯ್ಕೆ ಮಾಡಿದ ನಂತರ, ಆಯ್ಕೆ ಮಾಡಲಾದ ಹುದ್ದೆಗಳನ್ನು ಮುಂದಿನ ಕೌನ್ಸಿಲಿಂಗ್ ಪಟ್ಟಿಯಿಂದ ತೆಗೆದುಹಾಕತಕ್ಕದ್ದು.
(9) ನಿಗದಿತ ಕೋಟಾವನ್ನು ತಲುಪಿದ ಮೇಲೆ ವರ್ಗಾವಣೆ ಪ್ರಕ್ರಿಯೆಯು ಮುಕ್ತಾಯವಾಗುತ್ತದೆ.
8.ಆದೇಶಗಳ ವಿತರಣೆ -ಸಕ್ಷಮ ಪ್ರಾಧಿಕಾರಗಳು ಕೌನ್ಸಿಲಿಂಗ್‌ನ ಸೂಕ್ತ ಪ್ರಕ್ರಿಯೆಯು ಪೂರ್ಣಗೊಂಡ ನಂತರ ವಿನಂತಿಯ ಮೇರೆಗೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಆಯ್ಕೆ ಮಾಡಿದ ಅಥವಾ ಮಂಜೂರು ಮಾಡಿದ ಹುದ್ದೆಯ ವಿರುದ್ಧ ವರ್ಗಾವಣೆ ಆದೇಶಗಳನ್ನು ಹೊರಡಿಸತಕ್ಕದ್ದು. ಸಕ್ಷಮ ಪ್ರಾಧಿಕಾರಗಳು ಆದೇಶದ ಪ್ರತಿಗಳನ್ನು ವಿತರಿಸತಕ್ಕದ್ದು ಮತ್ತು ಸಕ್ಷಮ ಪ್ರಾಧಿಕಾರಗಳ ವೆಬ್‌ಸೈಟ್‌ನಲ್ಲಿ ಆರೋಹಣ ಮಾಡತಕ್ಕದ್ದು. ಯಾವುದೇ ನೌಕರನುಸ್ಥಳ ನಿಯುಕ್ತಿಗೊಳ್ಳದೆ ಉಳಿದಿರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು.
9.ವರ್ಗಾವಣೆ ಅವಧಿ – ಸಾರ್ವಜನಿಕ ಹಿತಾಸಕ್ತಿ ಅಥವಾ ಕೋರಿಕೆಯ ಮೇರೆಗೆ ಮಾಡಬೇಕಾದ ಎಲ್ಲಾ ವರ್ಗಾವಣೆಗಳನ್ನು ಸಾಮಾನ್ಯವಾಗಿ ಕ್ಯಾಲೆಂಡರ್ ವರ್ಷದ ಏಪ್ರಿಲ್ ಮತ್ತು ಮೇ ಮಾಹೆಗಳ ನಡುವಿನಲ್ಲಿ ಮಾಡಬಹುದು ಅಥವಾ ಅಸಾಧಾರಣ ಸಂದರ್ಭಗಳಲ್ಲಿ ಸರ್ಕಾರವು ಅಧಿಸೂಚಿಸಿದಂತೆ ಮಾಡತಕ್ಕದ್ದು:
ಪರಂತು, ಮೇಲಿನ ವರ್ಗಾವಣೆ ಅವಧಿಯು ನಿಯಮ 10ರ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ.
10.ಸಕ್ಷಮ ಪ್ರಾಧಿಕಾರಗಳ ಅಧಿಕಾರಗಳು ಈ ನಿಯಮಗಳಲ್ಲಿ ಏನೇ ಇದ್ದರೂ, ಯಾವುದೇ ನೌಕರರ ವಿರುದ್ಧ ದುರ್ನಡತೆ/ ಅವ್ಯವಹಾರ/ ಹಣಕಾಸು ದುರ್ಬಳಕೆ ಅಥವಾ ಯಾವುದೇ ಶಿಸ್ತು ಕ್ರಮ ಇದ್ದಲ್ಲಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಜಿಲ್ಲೆಯಲ್ಲಿನ ಯಾವುದೇ ಸ್ಥಳಕ್ಕೆ ಮತ್ತು ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸಾರ್ವಜನಿಕ ಹಿತಾಸಕ್ತಿಯಿಂದ ಯಾವುದೇ ಸ್ಥಳಕ್ಕೆ ನಿಯುಕ್ತಿಗೊಳಿಸಲು ಆಯಾ ಸಕ್ಷಮ ಪ್ರಾಧಿಕಾರಗಳು ವರ್ಗಾವಣೆ ಮಾಡಬಹುದು. ಗಂಭೀರ ಅನಾರೋಗ್ಯದ ವರ್ಗದ ನೌಕರರನ್ನು ಹೊರತುಪಡಿಸಿ, ಅಂತಹ ನೌಕರರ ಮೇಲೆ ದಂಡ ವಿಧಿಸಿದ ಪರಿಣಾಮವಾಗಿ ಕೌನ್ಸಿಲಿಂಗ್‌ಗೆ ಮೊದಲನೆ ಅವಕಾಶ ಪಡೆದ ಸಂದರ್ಭದಲ್ಲಿ ತನ್ನ ಇಚ್ಛೆಯ ಸ್ಥಳವನ್ನು ಆಯ್ಕೆ ಮಾಡಲು ನಿರ್ಬಂಧಿಸಲಾಗಿದೆ.
11.ವಿಧಿ 371-8. ವಿಧಿ 371-ಜೆ , ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು.
ಸಂಪೂರ್ಣ ಅಧಿಸೂಚನೆ ಡೌನ್‌ಲೋಡ್ ಮಾಡಲು- CLICK HERE