Karnataka Budget 2025 Main Highlights Information
Karnataka Budget 2025:
ಸನ್ಮಾನ್ಯ ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಆಯವ್ಯಯ ಮಂಡಿಸಿದ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಳೆದ ವರ್ಷ 3.71 ಲಕ್ಷ ಕೋಟಿ ರೂ ಆಯವ್ಯಯವನ್ನು ಸಿದ್ದರಾಮಯ್ಯ ಮಂಡನೆ ಮಾಡಿದ್ದರು ಆದರೆ, ಈ ಬಾರಿ ಮಂಡಿಸುತ್ತಿರುವ ಆಯವ್ಯಯ 4 ಲಕ್ಷ ಕೋಟಿ ರೂ ದಾಟಬಹುದು ಎಂದು ಅಂದಾಜಿಸಲಾಗಿದೆ.
ಬಜೆಟ್ ಲೆಕ್ಕ ಹೀಗಿದೆ:
*ಬಜೆಟ್ ಗಾತ್ರ – ₹4,09,549 ಕೋಟಿ
*ಬಂಡವಾಳ ವೆಚ್ಚ- ₹26,474 ಕೋಟಿ
*ರಾಜಶ್ವ ವೆಚ್ಚ – ₹71,336 ಕೋಟಿ
*ರಾಜಸ್ವ ಕೊರತೆ – ₹19,262 ಕೋಟಿ
*ಸಾಲ – ₹1,16,000 ಕೋಟಿ ಸಾಲದ ಮೊರೆ
*ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು – ₹2,92,477 ಕೋಟಿ
*ಈ ಪೈಕಿ ಸ್ವಂತ ತೆರಿಗೆ ರಾಜಸ್ವ – ₹2,08,100 ಕೋಟಿ
ಅತಿಥಿ ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ
*ಬಿಸಿಯೂಟ ಕಾರ್ಯಕರ್ತೆಯರ ಗೌರವ ಧನ 1 ಸಾವಿರ ರೂಪಾಯಿ ಹೆಚ್ಚಳ
*ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ. ಅವರ ಗೌರವ ಧನ ಮಾಸಿಕ ₹2,000 ಏರಿಕೆ.
*ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಕ್ಕೆ ವಿಸ್ತರಣೆ
*ವಾರದಲ್ಲಿ ಮೊಟ್ಟೆ, ಬಾಳೆ ಹಣ್ಣು ನೀಡಲು ₹1,500 ಕೋಟಿ ಮೀಸಲು
*500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭ, 50 ಪ್ರೌಢ ಶಾಲೆಗಳ ಉನ್ನತೀಕರಣ
*ಬಜೆಟ್ ಗಾತ್ರ – ₹4,09,549 ಕೋಟಿ
ಬಜೆಟ್ ಗಾತ್ರ ಎಷ್ಟು?
2025-26 ನೇ ಸಾಲಿಗೆ ಒಟ್ಟು 2,92,477 ಕೋಟಿ ರೂಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದೆ.
ಇದರಲ್ಲಿ 2,08,100 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂ. ತೆರಿಗೆಯೇತರ ರಾಜಸ್ವ ಬರುವ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಇನ್ನು ಕೇಂದ್ರ ಸರ್ಕಾರದ ಸ್ವೀಕೃತಿಯಲ್ಲಿ 67,877 ಕೋಟಿ ರೂ. ಹಣವನ್ನು ನಿರೀಕ್ಷೆ ಮಾಡಿದೆ. 2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರೂಪಾಯಿ ಸಾಲ ಮತ್ತು 170 ಕೋಟಿ ರೂಪಾಯಿಗಳ ಋಣೇತರ ಬಂಡವಾಳ ಸ್ವೀಕೃತಿ ಸಿಗಲಿದೆ ಎಂದು CM ಅಂದಾಜಿಸಿದ್ದಾರೆ.
ಹೊಸ ಯೋಜನೆಗಳು ಘೋಷಣೆ.. ಯಾವವು?
ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅವು,
* 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ.
* 1,080 ಕೋಟಿ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ
* ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂಪಾಯಿ ಮೀಸಲು
* ಕೈಗಾರಿಕಾ ವಲಯದಲ್ಲಿ 20 ಲಕ್ಷ ಉದ್ಯೋಗಸೃಷ್ಟಿ
* ವಿವಿಧ ಯೋಜನೆಗಳು, ಹೊಸ ಬಂಡವಾಳ ಆಕರ್ಷಿಸುವ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ
ಹೂಡಿಕೆದಾರರ ಆಕರ್ಷಿಸಲು 13,692 ಕೋಟಿ ರೂ. ನೆರವು
ಕೈಗಾರಿಕಾ ವಲಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಕರ್ನಾಟಕ ನೆಚ್ಚಿನ ರಾಜ್ಯವಾಗಿದೆ. ಹೂಡಿಕೆದಾರರನ್ನು ಆಕರ್ಷಿಸಲು 13,692 ಕೋಟಿ ರೂ. ಆರ್ಥಿಕ ನೆರವು ನೀಡಲು ಸರ್ಕಾರ ಸಮ್ಮತಿಸಿದೆ ಎಂದು ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 2030ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಬಜೆಟ್.. ಕೃಷಿ ಕ್ಷೇತ್ರಕ್ಕೆ ಸಿಎಂ ಘೋಷಿಸಿದ್ದು ಏನು?
ಸಿಎಂ ಸಿದ್ದರಾಮಯ್ಯ 2025ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಕೃಷಿಗಾಗಿ 1.81 ಲಕ್ಷ ರೈತರಿಗೆ ನೀರಾವರಿಗಾಗಿ ₹440 ಕೋಟಿ ಸಹಾಯಧನ. 5 ಸಾವಿರ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ & 12 ಸಾವಿರ ಕೃಷಿ ಹೊಂಡ ನಿರ್ಮಾಣ. ಡಿಜಿಟಲ್ ಕೃಷಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಬಜೆಟ್ ಘೋಷಿಸಿದ್ದಾರೆ. ಇನ್ನೂ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಭರ್ಜರಿ ಅನುದಾನ ಘೋಷಣೆ.
ಆರ್ಥಿಕ ಶಿಸ್ತು ಪಾಲಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ 51,300 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.
ರಾಜ್ಯ ಮಟ್ಟದಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಗೃಹಲಕ್ಷ್ಮಿ ಫಲಾನುಭವಿಗಳನ್ನು ಈ ಸೊಸೈಟಿಯಡಿಗೆ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಜೆಟ್ 2025-26: ಯಾವ ಇಲಾಖೆಗೆ ಎಷ್ಟು ಕೋಟಿ?
* ಈ ಬಾರಿಯ ಬಜೆಟ್ ಗಾತ್ರ-4.09 ಲಕ್ಷ ಕೋಟಿ ರೂ.
* ನೀರಾವರಿ ಇಲಾಖೆಗೆ-22,181 ಕೋಟಿ ರೂ.
* ಕೃಷಿ ವಲಯದ ಅಭಿವೃದ್ಧಿಗೆ-51,339 ಕೋಟಿ ರೂ.
* ಮಹಿಳಾ ಮತ್ತು ಕಲ್ಯಾಣ ಇಲಾಖೆಗೆ-34,955 ಕೋಟಿ ರೂ.
* ಶಾಲಾ ಮಕ್ಕಳಿಗೆ ಮೊಟ್ಟೆ-ಬಾಳೆ ಹಣ್ಣು ವಿತರಣೆಗೆ-1,500 ಕೋಟಿ ರೂ.
* ಮೂರನೇ ಹಂತದ ಮೆಟ್ರೋ ಯೋಜನೆಗೆ-8,916 ಕೋಟಿ ರೂ.
* ಇಂಧನ ಇಲಾಖೆಗೆ-26,896 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಇಲಾಖೆಗೆ-26,735 ಕೋಟಿ ರೂ.
* ಹನಿ, ತುಂತುರು ನೀರಾವರಿ ಅಳವಡಿಕೆಗೆ-440 ಕೋಟಿ ರೂ. ಅನುದಾನ.
BUDGET-2025 MAIN HIGHLIGHTS- UPDATE INFORMATION
ಬಜೆಟ್ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಬಳಸಿ.