DCET-2024: ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ದಿನಾಂಕ 15-07-2024 ರ ವರೆಗೆ ವಿಸ್ತರಣೆ.

DCET-2024: ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ದಿನಾಂಕ 15-07-2024 ರ ವರೆಗೆ ವಿಸ್ತರಣೆ.

DCET-2024 : ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ದಿನಾಂಕ ವಿಸ್ತರಣೆ 15-07-2024 ಸಂ.8.00 ರ ವರೆಗೆ ವಿಸ್ತರಣೆ ಮಾಡಲಾಗಿದೆ.

1.ಮಾನ್ಯ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ – ರಿಟ್ ಅರ್ಜಿ 18145/2024

ಮೇಲಿನ ಉಲ್ಲೇಖದಲ್ಲಿನ ಮಧ್ಯಂತರ ಆದೇಶದಂತೆ ಎನ್‌ಟಿಟಿಎಫ್ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಫಲಿತಾಂಶ ವನ್ನು ನೀಡಿ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು. ಈ ಹಿನ್ನಲೆಯಲ್ಲಿ ಎನ್‌ಟಿಟಿಎಫ್ ತೇರ್ಗಡೆಯಾಗಿರುವ ಅಭ್ಯರ್ಥಿಗಳು 13-07-2024 ರಂದು ಮಧ್ಯಾಹ್ನ .200 ಗಂಟೆಗೆ ( ವರದಿ ಮಾಡಿಕೊಳ್ಳುವ ಸಮಯ : ಮ.1.45) ಅಥವಾ 14-07-2024 ರಂದು ಬೆ.11.00 ಗಂಟೆಗೆ ಎಲ್ಲಾ ಮೂಲ ದಾಖಲಾತಿಗಳು ಹಾಗು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಿದೆ. ದಾಖಲೆಗಳ ಪರಿಶೀಲನೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ OPTIONS ಗಳನ್ನು ದಾಖಲಿಸಲು ಅವಕಾಶ ನೀಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

2.ವೃತ್ತಿನಿರತ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ (working professional)

ಡಿಸಿಇಟಿ-2024 ಕ್ಕೆ ಅರ್ಜಿ ಸಲ್ಲಿಸಿರುವ ವೃತ್ತಿನಿರತ ಡಿಪ್ಲೊಮ ಅಭ್ಯರ್ಥಿಗಳು ನಿಗದಿತ ಒಂದು ವರ್ಷದ ಸೇವಾ ಪ್ರಮಾಣ ಪತ್ರವನ್ನು ಸಲ್ಲಿಸದೇ ಇರುವ ಕಾರಣದಿಂದ ವೃತ್ತಿನಿರತ ಕೋಟದ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆದಿರುವುದಿಲ್ಲ. ಅಂತಹ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಿ ವೆರಿಫಿಕೇಶನ್ ಸ್ಲಿಪ್ ಪಡೆದು Regular Diploma ಅಭ್ಯರ್ಥಿಗಳೆಂದು ಪರಿಗಣಿಸಲು ಕೋರಿರುತ್ತಾರೆ. ಸದರಿ ಅಭ್ಯರ್ಥಿಗಳಿಗೆ ರೆಗ್ಯುಲರ್ ಯಾಂಕ್ ನೀಡಲಾಗುವುದು ಮತ್ತು OPTIONS ಗಳನ್ನು ದಾಖಲಿಸಲು ಅವಕಾಶ ನೀಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.

3.ದಾಖಲೆಗಳ ಪರಿಶೀಲನೆಗೆ ಹಾಜರಾಗದಿರುವ ಅಭ್ಯರ್ಥಿಗಳು (ಇಂಜಿನಿಯರಿಂಗ್ / ಆರ್ಕಿಟೆಕ್ಟರ್) ಡಿಸಿಇಟಿ-2024 ಕ್ಕೆ ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ / ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆಯಲು ದಾಖಲೆಗಳ ಪರಿಶೀಲನೆಗೆ ಹಾಜರಾಗದಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿರುತ್ತಾರೆ. ಅಂತಹ ಅಭ್ಯರ್ಥಿಗಳು ದಿನಾಂಕ 13-07-2024 ರಂದು ಮ.200 ಗಂಟೆಗೆ (ವರದಿ ಮಾಡಿಕೊಳ್ಳುವ ಸಮಯ: ಮ.1.45) ಅಥವಾ 14-07-2024 ರಂದು ಬೆ.11.00 ಗಂಟೆಗೆ ಎಲ್ಲಾ ಮೂಲ ದಾಖಲಾತಿಗಳು ಹಾಗು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಿದೆ. (ಸಿಪ್ಯಾಟ್ ಅಭ್ಯರ್ಥಿಗಳೂ ಸೇರಿದಂತೆ)

DCET-2024: ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಪ್ರಾಧಿಕಾರಕ್ಕೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು ದಿನಾಂಕ ವಿಸ್ತರಣೆ.

ಈ ಮೇಲೆ ತಿಳಿಸಿದ ಕಾರಣಗಳು ಹಾಗು ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಟ್ಟ ಸೀಟುಗಳನ್ನು ಸರ್ಕಾರವು ಸೀಟ್ ಮ್ಯಾಟ್ರಿಕ್ಸ್ ಗೆ ಸೇರ್ಪಡೆ ಮಾಡುವುದರಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ OPTIONS ಗಳನ್ನು ದಾಖಲಿಸಲು 15-07-2024 ಸಂ.8.00 ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಸೀಟು ಹಂಚಿಕೆಯ ನಂತರದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು. ಎಂದು KEA ತಿಳಿಸಿದೆ.

 

ಹೆಚ್ಚಿನ ಮಾಹಿತಿಗಾಗಿ – CLICK HERE

Leave a Comment