SATS ತಂತ್ರಾಂಶದಲ್ಲಿ ಪಠ್ಯಪುಸ್ತಕ, ದಿನಚರಿ,ಅಭ್ಯಾಸ ಪುಸ್ತಕಗಳ ಬೇಡಿಕೆ ದಾಖಲಿಸುವ ಕುರಿತು.
2025-26ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ 1 ರಿಂದ 10ನೇ ತರಗತಿಯ ಪಠ್ಯಪುಸ್ತಕ, 4 ರಿಂದ 9ನೇ ತರಗತಿಯ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10ನೇ ತರಗತಿಯ ದಿನಚರಿಗಳ ಬೇಡಿಕೆಯನ್ನು ದಾಖಲಿಸುವ ಬಗ್ಗೆ.
2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯು, ಹಿಂದಿನ ಸಾಲಿನಂತೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಅನುಷ್ಠಾನಗೊಳ್ಳಲಿದೆ. ಅದರಂತೆ ಅನುಪಾಲಿಸಿ ನಿರ್ದೇಶಿಸುವ (ಉಸ್ತುವಾರಿ ಮಾಡುವ) ಜವಾಬ್ದಾರಿಯನ್ನು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಆಯಾ ಹಂತದ ಅಧಿಕಾರಿ/ ಸಿಬ್ಬಂದಿಗಳಿಗೆ ನಿಗದಿಪಡಿಸಲಾಗಿದೆ.
2025-26ನೇ ಶೈಕ್ಷಣಿಕ ಸಾಲಿಗೆ 1 ರಿಂದ 10ನೇ ತರಗತಿಗಳ ಪಠ್ಯಪುಸ್ತಕ, 4 ರಿಂದ 9ನೇ ತರಗತಿಗಳ ಅಭ್ಯಾಸ ಪುಸ್ತಕ ಹಾಗೂ 1 ರಿಂದ 10ನೇ ತರಗತಿಗಳ ದಿನಚರಿಗಳ ಬೇಡಿಕೆಯನ್ನು ದಾಖಲಿಸುವ ಪ್ರಕ್ರಿಯೆಯು ದಿನಾಂಕ:29.11.2024 ರಿಂದ 09.12.2024ರವರೆಗೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಿಂದ ಪರಿಶೀಲನೆ ಹಾಗೂ ಅನುಪಾಲನೆಯ ಚಟುವಟಿಕೆಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ.
ಪಠ್ಯ ಪುಸ್ತಕ ಬೇಡಿಕೆ ಸಂಬಂಧ ಪೂರ್ವಸಿದ್ಧತಾ ಕಾರ್ಯ ಚಟುವಟಿಕೆಗಳು:
1.SATS ತಂತ್ರಾಂಶಕ್ಕೆ ಒಳಪಟ್ಟಿರುವ ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸರ್ಕಾರದಿಂದ ಅನುಮೋದಿಸಲ್ಪಟ್ಟಿರುವ ಅನುದಾನ ರಹಿತ ಶಾಲೆಗಳು ಹಾಗೂ ಇತರೇ ಇಲಾಖೆಗಳಿಂದ ನಡೆಯುವ ಮತ್ತು ಅಗತ್ಯಕ್ಕನುಗುಣವಾಗಿ ಹೊರರಾಜ್ಯಗಳ ಶಾಲೆಗಳನ್ನು ಒಳಗೊಂಡಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ತಾಲ್ಲೂಕಿನಲ್ಲಿರುವ ಯಾವ ಶಾಲೆಯೂ ಕೈ ಬಿಡದಂತೆ, ಖಾತ್ರಿ ಪಡೆಸಿಕೊಳ್ಳುವುದು.
2.ಶಾಲಾವಾರು ಬೇಡಿಕೆಯನ್ನು ಸಲ್ಲಿಸುವಾಗ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ಶೀರ್ಷಿಕೆಗಳಿಗೆ ಮಾತ್ರ (ಪ್ರಥಮ,ದ್ವಿತೀಯ, ತೃತೀಯ ಭಾಷೆ ಹಾಗೂ ಕೋರ್ ವಿಷಯಗಳ)
ಸಂಖ್ಯೆ ಸಮನಾಗಿರಬೇಕು. ಬೇಡಿಕೆಯನ್ನು ಸಲ್ಲಿಸುವ ಬಗ್ಗೆ ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ ಮತ್ತು ಬ್ಲಾಕ್ ಹಂತದಲ್ಲಿ BEO, BRC ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ಪರಿಶೀಲಿಸಿ, ಉಲ್ಲೇಖಿತ ಆದೇಶಗಳನ್ನಯ ಬೇಡಿಕೆಯು ಆಯಾ ಶಾಲಾ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇರುವುದರ ಬಗ್ಗೆ ಪರಿಶೀಲಿಸಿಕೊಂಡು ಅನುಮೋದಿಸುವುದು.
3.ಸರ್ಕಾರಿ (ಆದರ್ಶ ಶಾಲೆಗಳು, ಸ್ಥಳೀಯ ಸಂಸ್ಥೆ/ಕಾರ್ಪೋರೇಷನ್) ಶಾಲೆಗಳು, ಅನುದಾನಿತ ಶಾಲೆಗಳು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಅಗತ್ಯವಿರುವ ಬೇರೆ ರಾಜ್ಯಗಳ ಶಾಲೆಗಳು ಹಾಗೂ ಗಡಿನಾಡು ಶಾಲೆಗೆ (ಗಡಿ ರಾಜ್ಯಗಳ ಶಾಲೆಗಳಿಗೆ ಅವಶ್ಯವಿದ್ದಲ್ಲಿ ಕನ್ನಡ ಭಾಷಾ ಪಠ್ಯಪುಸ್ತಕಗಳು ಮಾತ್ರ) ಉಚಿತ ವಿಭಾಗದಡಿಯಲ್ಲಿ ಬೇಡಿಕೆಯನ್ನು ದಾಖಲಿಸಬೇಕು.
4.ಅನುದಾನ ರಹಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಯಡಿಯಲ್ಲಿ ನಡೆಯುವ ಶಾಲೆಗಳು ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
5.ಪ್ರಸಕ್ತ ಸಾಲಿಗೆ ದ್ವಿಭಾಷಾ (ಬೈಲಿಂಗ್ನಲ್) ಮತ್ತು ಆದರ್ಶ ಶಾಲೆಗಳಿಗೆ ಬೇಡಿಕೆಯನ್ನು ದಾಖಲಿಸುವಾಗ ಸದರಿ ಶಾಲೆಗಳಿಗೆ ನಿಗದಿಪಡಿಸಿರುವ ಶೀರ್ಷಿಕೆಗಳನ್ನು ಪರಿಶೀಲಿಸಿ ದಾಖಲಿಸುವುದು.
6.ಎಲ್ಲಾ ಶಾಲೆಗಳು ನಿಗದಿತ ಸಮಯದೊಳಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ನಿರಂತರವಾಗಿ ಪರಿಶೀಲಿಸಿ, ನಿಖರವಾದ ಬೇಡಿಕೆಯನ್ನು ಪಡೆಯಲು ಅಗತ್ಯ ಕ್ರಮವಹಿಸುವುದು.
7.ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ ಮತ್ತು ಸಿ.ಆರ್.ಪಿ.ಗಳಿಗೆ ಎಸ್.ಎ.ಟಿ.ಎಸ್-ಕೆ.ಟಿ.ಬಿ.ಎಸ್. ಮಾಡ್ಯೂಲ್‌ನ ಕುರಿತಂತೆ ತರಬೇತಿಯನ್ನು ಆಯೋಜಿಸುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎ.ಟಿ.ಎಸ್-ಕೆ.ಟಿ.ಬಿ.ಎಸ್. ಮಾಡ್ಯೂಲ್‌ನಲ್ಲಿ ಅಳವಡಿಸಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುವುದು. ತಾಲ್ಲೂಕು ಹಂತದಲ್ಲಿ ಹಾಗೂ ಕ್ಲಸ್ಟರ್ ಹಂತದಲ್ಲಿ ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಸಿ .ಆರ್ ಪಿ ರವರಿಗೆ ಈ ಸಂಬಂಧ ತರಬೇತಿ ನೀಡುವುದು.
8.ಪ್ರಮುಖವಾಗಿ ನಲಿ-ಕಲಿ ಶಾಲೆಗಳು, ಆದರ್ಶಶಾಲೆಗಳು, ಕನ್ನಡ ಮಾಧ್ಯಮ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಆಂಗ್ಲ ಮಾಧ್ಯಮ ವಿಭಾಗಗಳಿಗೆ (ದ್ವಿಭಾಷಾ ಪಠ್ಯಪುಸ್ತಕ) ಮೀಸಲಾದ ಶೀರ್ಷಿಕೆಗಳ ಬಗ್ಗೆ ಸ್ಪಷ್ಟವಾದ ಅರಿವನ್ನು ಮೂಡಿಸುವುದು.
2025-26ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಶಾಲೆಗಳಿಂದ ಪಡೆಯುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆಗೆ ಸಂಬಂಧಿಸಿದಂತೆ, ವಿವಿದ ಹಂತದ ಕಾರ್ಯ ಚಟುವಟಿಕೆಗಳು ಮತ್ತು ಜವಾಬ್ದಾರಿಯನ್ನು ಈ ಕೆಳಕಂಡಂತೆ ನಿರ್ವಹಿಸಲು ಎಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಿದೆ.
1) ಶಾಲಾ ಹಂತ: (ದಿ:29.11.2024 ರಿಂದ 09.12.2024ರ ವರೆಗೆ)
1) ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸುವ ಮೊದಲು ಆ ಶಾಲೆ ಯಾವ ಆಡಳಿತ ವ್ಯಾಪ್ತಿಗೆ ಒಳಪಡುತ್ತದೆ, ಶಾಲೆಯಲ್ಲಿರುವ ಮಾಧ್ಯಮಗಳು ಹಾಗೂ ಬೋಧಿಸುತ್ತಿರುವ ಭಾಷೆಗಳು(ಪ್ರಥಮ/ದ್ವಿತೀಯ/ತೃತೀಯ ಭಾಷೆ ) ಹಾಗೂ ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳನ್ನು ಖಾತ್ರಿಪಡಿಸಿಕೊಳ್ಳ ಬೇಕು.
2) ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ತರಗತಿವಾರು, ಶೀರ್ಷಿಕವಾರು, ಮಾಧ್ಯಮವಾರು ಅವಶ್ಯವಿರುವ ಪಠ್ಯಪುಸ್ತಕಗಳ ಬೇಡಿಕೆಯನ್ನು 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಮಾತ್ರ SATS ತಂತ್ರಾಂಶದಲ್ಲಿ ನಿಖರವಾಗಿ ದಾಖಲಿಸುವುದು.
3) 2024-25ನೇ ಸಾಲಿಗೆ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿರುವುದರಿಂದ ಭಾಗ-1 ಮತ್ತು ಭಾಗ-2 ಎರಡೂ ಪಠ್ಯಪುಸ್ತಕಗಳಿಗೂ ಸಮಪ್ರಮಾಣದಲ್ಲಿ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ
4) ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳವರು ಉಚಿತ ವಿಭಾಗದಲ್ಲಿ ಮಾತ್ರ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವುದು.
5) ಶಾಲಾ ಹಂತದಲ್ಲಿ ತಮ್ಮ SATS LOG IN ಮೂಲಕ ದಿನಾಂಕ: 29.11.2024 ರಿಂದ 09.12.2024ರವರೆಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಿದೆ. ನಿಗದಿತ ದಿನಾಂಕದೊಳಗೆ ಮುಖ್ಯಶಿಕ್ಷಕರು ಬೇಡಿಕೆ ಸಲ್ಲಿಸುವುದು.
6) ಆದರ್ಶ ಶಾಲೆಗಳು, ಸರ್ಕಾರಿ ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಆಂಗ್ಲ ಮಾಧ್ಯಮ (ದ್ವಿ ಭಾಷೆ) ವಿಭಾಗಗಳಿಗೆ ನಿಗದಿಪಡಿಸಿರುವ ಶೀರ್ಷಿಕೆಗಳಿಗೆ ಮಾತ್ರ ಬೇಡಿಕೆಯನ್ನು ದಾಖಲಿಸುವುದು.
7) ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನಚರಿಯನ್ನು ಹಾಗೂ 4 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕಗಳನ್ನು 2025-26ನೇ ಸಾಲಿಗೆ ವಿತರಣೆ ಮಾಡುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮಾತ್ರ ಬೇಡಿಕೆ ಸಲ್ಲಿಸುವುದು.
8) ಯಾವುದೇ ಅನುದಾನಿತ ಶಾಲೆಗಳಲ್ಲಿ ಅನುದಾನ ರಹಿತ ವಿಭಾಗಗಳಿದ್ದಲ್ಲಿ ಆ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಗತ್ಯವಿರುವ ಶೀರ್ಷಿಕೆಗಳ ಬೇಡಿಕೆಯನ್ನು ಕಡ್ಡಾಯವಾಗಿ ಮಾರಾಟ ವಿಭಾಗದಲ್ಲಿ ದಾಖಲಿಸುವುದು. ಬೇಡಿಕೆಯನ್ನು Freeze ಮಾಡುವ ಮುನ್ನ ಅನುದಾನಿತ/ಅನುದಾನ ರಹಿತ ವಿಭಾಗಗಳಡಿಯಲ್ಲಿ ಬೇಡಿಕೆಯನ್ನು ನಿಖರವಾಗಿ ದಾಖಲಿಸಿರುವುದನ್ನು ಪಡಿಸಿಕೊಳ್ಳುವುದು.
9) ಖಾಸಗಿ ಅನುದಾನರಹಿತ ಶಾಲೆಗಳವರು ಮಾರಾಟ ವಿಭಾಗದಡಿಯಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವುದು ಹಾಗೂ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್.ಟಿ.ಇ. ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ವಿಭಾಗದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವುದು.
10) ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿಯಲ್ಲಿರುವ ಶಾಲೆಗಳು ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ಸಲ್ಲಿಸುವುದು.
11) SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು Submit ಮಾಡುವ ಮೊದಲು ತಮ್ಮ ಶಾಲೆಗೆ ಅವಶ್ಯವಿರುವ ಎಲ್ಲಾ ತರಗತಿ/ಮಾಧ್ಯಮದ ಶೀರ್ಷಿಕೆಗಳ ಬೇಡಿಕೆಯನ್ನು ಅಗತ್ಯ ಸಂಖ್ಯೆಯಲ್ಲಿ ದಾಖಲಿಸಿರುವ ಬಗ್ಗೆ, ಮತ್ತೊಮ್ಮೆ ಪರಿಶೀಲಿಸಿ ಖಾತರಿ ಪಡಿಸಿಕೊಳ್ಳುವುದು. ಬೇಡಿಕೆಯನ್ನು ಪ್ರಿಂಟ್ ಔಟ್ ತೆಗೆದು, ದೃಢೀಕರಿಸಿ ಒಂದು ಪ್ರತಿಯನ್ನು ಶಾಲೆ/ಸಂಸ್ಥೆಯಲ್ಲಿ ಕಾಯ್ದಿರಿಸುವುದು. ಮತ್ತೊಂದು ಪ್ರತಿಯನ್ನು ತಮ್ಮ ವ್ಯಾಪ್ತಿಯ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.) ರವರಿಗೆ ನೀಡುವುದು.
12) ಶಾಲೆಗೆ ಅಗತ್ಯವಿಲ್ಲದ ಶೀರ್ಷಿಕೆಗಳಿಗೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚುವರಿ ಬೇಡಿಕೆ ಸಲ್ಲಿಸಿದ್ದಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರಾಗುತ್ತಾರೆ ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಆಯಾ ಮುಖ್ಯ ಶಿಕ್ಷಕರೇ ಭರಿಸಬೇಕಾಗುವುದು. ಅಂತೆಯೇ ಅಗತ್ಯವಿರುವ ಶೀರ್ಷಿಕೆಗಳಿಗೆ ಬೇಡಿಕೆಯನ್ನು ಸಲ್ಲಿಸದಿದ್ದಲ್ಲಿ, ಮುಂದಿನ ಆಗುಹೋಗುಗಳಿಗೆ ಆಯಾ ಶಾಲಾ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ.
13) ಅನುದಾನ ರಹಿತ ಖಾಸಗಿ ಶಾಲೆಗಳವರು ಮಾರಾಟ ಪಠ್ಯಪುಸ್ತಕಗಳಿಗೆ ಸಂಬಂಧಿಸದಂತೆ ಶೇ.10 ರಷ್ಟು ಮುಂಗಡ ಹಣವನ್ನು SATS Payment gateway ಮೂಲಕ ಪಾವತಿಸುವುದು. ಇಲ್ಲವಾದಲ್ಲಿ ಅಂತಹ ಶಾಲೆಗಳ ಬೇಡಿಕೆಯನ್ನು ಮುದ್ರಣಕ್ಕೆ ಪರಿಗಣಿಸುವುದಿಲ್ಲ.
14) ಬೇಡಿಕೆ ಸಲ್ಲಿಕೆಯಾದ ನಂತರ ನಿಗದಿತ ನಮೂನೆಯಲ್ಲಿ ದೃಢೀಕರಣವನ್ನು CRPರವರಿಗೆ ಸಲ್ಲಿಸುವುದು.
ವಿಶೇಷ ಸೂಚನೆ:
ಎಲ್ಲಾ ವಿಧದ ಶಾಲೆಗಳವರು ಪಠ್ಯಪುಸ್ತಕಗಳ ಬೇಡಿಕೆಯನ್ನು ಇಲಾಖಾ ನಿಯಮಾನುಸಾರ ಅವಶ್ಯಕತೆಗನುಗುಣವಾಗಿ ತರಗತಿವಾರು/ಶೀರ್ಷಿಕೆವಾರು/ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವುದು. ಮಾಧ್ಯಮವಾರು SATS
ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ Enroll ಆಗಿರುವ ವಿದ್ಯಾರ್ಥಿಗಳ ದಾಖಲಾತಿ ಅನ್ವಯ ಬೇಡಿಕೆಯನ್ನು ದಾಖಲಿಸುವುದು. ವ್ಯತ್ಯಾಸವಿದ್ದಲ್ಲಿ ಸಕಾರಣವನ್ನು ದೃಢೀಕರಿಸಿ ನೀಡುವುದು.
ಮಾರಾಟ ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಶೇ.10 ರಷ್ಟು ಮುಂಗಡ ಹಣ ಪಾವತಿಸುವುದು.
ಅರೇಬಿಕ್ ಹಾಗೂ NSQF ಪುಸ್ತಕಗಳಿಗೆ ಭೌತಿಕವಾಗಿ ಬೇಡಿಕೆ ಸಲ್ಲಿಸಬೇಕು.
ಮುಖ್ಯಶಿಕ್ಷಕರು ಬೇಡಿಕೆಯನ್ನು Freeze ಮಾಡುವ ಮೊದಲು ಶಾಲೆಯ ಸಹ ಶಿಕ್ಷಕರಿಂದ ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
ಶಾಲಾ ಹಂತದಲ್ಲಿ ದಾಖಲಿಸಿದ ಬೇಡಿಕೆಗೆ ಆಯಾ ಶಾಲಾ ಮುಖ್ಯಶಿಕ್ಷಕರು ಜವಾಬ್ದಾರರಾಗಿರುತ್ತಾರೆ. ಸಲ್ಲಿಸಿದ ಬೇಡಿಕೆಯ ಪ್ರತಿಯೊಂದನ್ನು ಶಾಲಾ ಹಂತದಲ್ಲಿ ಸಂಗ್ರಹಿಸಿಡುವುದು ಕಡ್ಡಾಯವಾಗಿರುತ್ತದೆ.
ಬೇಡಿಕೆ ಸಲ್ಲಿಸುವ ಮೊದಲು ಶಾಲಾ ಹಂತದಲ್ಲಿನ ಎಲ್ಲಾ ರೀತಿಯ ಬದಲಾವಣೆಗಳನ್ನು, (Merging of Schools ಶಾಲಾ ಆಡಳಿತ ಬದಲಾವಣೆ ಇತ್ಯಾದಿ) ಅಳವಡಿಸಲು ಕ್ರಮವಹಿಸುವುದು.
ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಹಾಗೂ ದಿನಚರಿಗಳಿಗೆ ಈ ಕಛೇರಿಯಿಂದ ನೀಡಿರುವ ನಿಗದಿತ ಅವಧಿಯೊಳಗೆ SATS ತಂತ್ರಾಂಶದ ಮೂಲಕ ಸಲ್ಲಿಸುವ ಬೇಡಿಕೆಯನ್ನು ಮಾತ್ರ ಮುದ್ರಣಕ್ಕೆ ಪರಿಗಣಿಸಲಾಗುವುದು. ಭೌತಿಕವಾಗಿ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದಿಲ್ಲ. ಇದರಿಂದ ಉಂಟಾಗುವ ಅನಾನುಕೂಲಗಳಿಗೆ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರೇ ನೇರ ಹೊಣೆಗಾರರಾಗುತ್ತಾರೆ. ಈ ರೀತಿಯ ವ್ಯತ್ಯಯಕ್ಕೆ ಈ ಕಛೇರಿಯು ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ.
ಪ್ರಸ್ತುತ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳು ಮುದ್ರಿತವಾಗುತ್ತಿದ್ದು, ಅದೇ ಮಾದರಿಯಲ್ಲಿ ಬೇಡಿಕೆಯನ್ನು ಪಡೆಯಲಾಗುವುದು. ಆದುದರಿಂದ ಮಾರಾಟ ವಿಭಾಗದಲ್ಲಿ ಸಲ್ಲಿಕೆಯಾಗುವ ಬೇಡಿಕೆಗೆ ಹಿಂದಿನ ಸಾಲಿನ ದರಗಳನ್ನಯ ಭಾಗ-1 ಮತ್ತು ಭಾಗ-2 ಪುಸ್ತಕಗಳಿಗೆ ದರಗಳನ್ನು ವಿಭಾಗಿಸಿ SATS ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆ ಪ್ರಕಾರ ಶೇ.10 ರಷ್ಟು ಮುಂಗಡವನ್ನು ಪಾವತಿಸಲು ಸೂಚಿಸಿದೆ. ನಿಖರವಾದ ದರಗಳನ್ನು ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗುವುದು.
2) ಕ್ಲಸ್ಟರ್ ಹಂತ (ದಿ:30-11-2024 ರಿಂದ ದಿ:11-12-2024 ರವರೆಗೆ)
1) ಆಯಾ ಕ್ಲಸ್ಟರ್‌ನ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಅನುದಾನರಹಿತ, ಇತರೆ ಇಲಾಖೆಗಳ ಶಾಲೆಗಳಿಂದ ಪಠ್ಯಪುಸ್ತಕ, ಅಭ್ಯಾಸಪುಸ್ತಕ ಹಾಗು ದಿನಚರಿಗಳ ಬೇಡಿಕೆಯನ್ನು ಉಲ್ಲೇಖಿತ ಸರ್ಕಾರದ ಆದೇಶಗಳಂತೆ ಪಡೆಯುವ ಸಂಪೂರ್ಣ ಜವಾಬ್ದಾರಿಯು ಆಯಾ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.) ರವರಾಗಿರುತ್ತದೆ.
2) 2025-26ನೇ ಸಾಲಿಗೆ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿರುವುದರಿಂದ ಭಾಗ-1 ಮತ್ತು ಭಾಗ-2 ಎರಡೂ ಪಠ್ಯಪುಸ್ತಕಗಳಿಗೂ ಸಮ ಪ್ರಮಾಣದಲ್ಲಿ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಈ ಬಗ್ಗೆ ಪರಿಶೀಲಿಸಿಕೊಂಡು ಬೇಡಿಕೆಯನ್ನು ಅನುಮೋದಿಸಲು ಕ್ರಮ ವಹಿಸುವುದು.
3) ಆಯಾ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ವಿಧದ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ನಿಗದಿತ ಅವಧಿಯೊಳಗೆ ತರಗತಿವಾರು, ಶೀರ್ಷಿಕವಾರು, ಮಾಧ್ಯಮವಾರು ದಾಖಲಿಸುವ ಬಗ್ಗೆ ಸೂಕ್ತ ತರಬೇತಿ ನೀಡುವುದು ಹಾಗು ಸಕಾಲದಲ್ಲಿ ಬೇಡಿಕೆ ಸಲ್ಲಿಸಲು ಕ್ರಮವಹಿಸುವುದು.
4) ಶಾಲೆಗಳು ದಾಖಲಿಸಿರುವ ಬೇಡಿಕೆಯು ಸಮಪರ್ಕವಾಗಿಲ್ಲದಿದ್ದರೆ, ಅಂತಹ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ “reject” ಮಾಡಿ ಶಾಲೆಗಳಿಗೆ ಹಿಂತಿರುಗಿಸಿ ಸರಿಪಡಿಸಿದ ನಂತರ ಪುನರ್ ಬೇಡಿಕೆಯನ್ನು ಶಾಲೆಗಳಿಂದ ಕಡ್ಡಾಯವಾಗಿ SATS ತಂತ್ರಾಂಶದ ಮೂಲಕವೇ ಪಡೆಯುವುದು. ನಂತರ ಮತ್ತೊಮ್ಮೆ ಪರಿಶೀಲಿಸಿ ಸರಿ ಇರುವುದನ್ನು ಖಾತರಿ ಪಡಿಸಿಕೊಂಡು ತಂತ್ರಾಂಶದಲ್ಲಿ ಅನುಮೋದಿಸುವುದು (Approve). ಹಾಗಾಗಿ ಶಾಲೆಗಳು ಬೇಡಿಕೆ ಸಲ್ಲಿಸಿದ ನಂತರ ಆ ಶಾಲೆಗಳಲ್ಲಿನ ತರಗತಿ, ವಿದ್ಯಾರ್ಥಿಗಳ ಸಂಖ್ಯೆ, ಮಾಧ್ಯಮ, ಭಾಷೆಗಳಿಗೆ ಪೂರಕವಾಗಿಯೇ ಬೇಡಿಕೆ ಸಲ್ಲಿಸಿರುವುದನ್ನು ದಾಖಲೆ ಸಹಿತ ಪರಿಶೀಲಿಸಬೇಕು.
5) ಎಲ್ಲಾ ಶಾಲೆಗಳ ಮುಖ್ಯಸ್ಥರು SATS ತಂತ್ರಾಂಶದಲ್ಲಿ ನಿಖರವಾಗಿ ಬೇಡಿಕೆ ಸಲ್ಲಿಸಿದ ನಂತರ ನೀಡಿದ ದೃಢೀಕೃತ ಪ್ರತಿಯನ್ನು SATS ತಂತ್ರಾಂಶದಲ್ಲಿ ಲಭ್ಯವಿರುವ ಕ್ರೋಢೀಕೃತ ಮಾಹಿತಿಯೊಂದಿಗೆ ತುಲನೆ ಮಾಡಿ ಶಾಲಾವಾರು ದಾಖಲಿಸಿರುವ ಬೇಡಿಕೆಯು ನಿಖರವಾಗಿದ್ದಲ್ಲಿ ಮಾತ್ರ ದೃಢೀಕರಿಸಿ, SATS ತಂತ್ರಾಂಶದಲ್ಲಿ Approve ಮಾಡಿ (ಅನುಮೋದಿಸಿ) ಬ್ಲಾಕ್ ಹಂತಕ್ಕೆ ದಿನಾಂಕ:11.12.2024 ರೊಳಗೆ ನೀಡುವುದು.
6) ಬೇಡಿಕೆ ಸಲ್ಲಿಕೆಯ ಬಗ್ಗೆ ಮುಖ್ಯ ಶಿಕ್ಷಕರಿಂದ ನಿಗದಿತ ನಮೂನೆಯಲ್ಲಿ ದೃಢೀಕರಣ ಪಡೆದುಕೊಂಡು CRPರವರು ತಮ್ಮ ದೃಢೀಕರಣವನ್ನು ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಸಲ್ಲಿಸುವುದು.
7) CRPರವರು ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ದಾಖಲಾತಿಗನುಗುಣವಾಗಿಯೇ ಪಠ್ಯ ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿರುವುದರ ಬಗ್ಗೆ, ಕಡ್ಡಾಯವಾಗಿ ಶೇ.100ರಷ್ಟು ಖಾತ್ರಿ ಪಡಿಸಿಕೊಂಡು, ದೃಢೀಕೃತ ಪ್ರತಿ ನೀಡುವುದು.
ವಿಶೇಷ ಸೂಚನೆ:
ಶಾಲೆಗಳಿಂದ ಬೇಡಿಕೆಯನ್ನು ನಿಖರವಾಗಿ ಪಡೆಯುವುದರೊಂದಿಗೆ ಈಗಾಗಲೇ ಸೂಚಿಸಿರುವಂತೆ ಶಾಲೆಗಳಲ್ಲಿ ಉಳಿಕೆ ಇರುವ ಪಠ್ಯಪುಸ್ತಕಗಳನ್ನು ತಾಲ್ಲೂಕು ಹಂತದ ಗೋದಾಮುಗಳಿಗೆ ಹಿಂತಿರುಗಿಸಿರುವುದರ ಬಗ್ಗೆ ಖಾತರಿಪಡಿಸಿಕೊಳ್ಳುವುದು ಹಾಗೂ ಶಾಲಾವಾರು ಉಳಿಕೆ ಪುಸ್ತಕಗಳ ನಿಖರ ಮಾಹಿತಿಯನ್ನು STOCK ENTRY ಮೂಲಕ ದಾಖಲಿಸುವುದು.
ಯಾವುದೇ ಶಾಲೆಗೆ ಅಗತ್ಯವಿರದ ತರಗತಿ ಮಾಧ್ಯಮದ ಶೀರ್ಷಿಕೆಗಳಿಗೆ ಹಾಗೂ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಸಲ್ಲಿಸಿದ ಬೇಡಿಕೆಯನ್ನು ಅನುಮೋದನೆ ಮಾಡಿದರೆ ಸಂಬಂಧಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ)ರವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಆಯಾ ಸಿ.ಆರ್.ಪಿ.ರವರೇ ಭರಿಸಬೇಕಾಗುವುದು.
ಮಾರಾಟ ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಶೇ.10 ರಷ್ಟು ಮುಂಗಡ ಹಣವನ್ನು SATS Payment gateway ಮೂಲಕ ಪಾವತಿಸಿರುವ ಬಗ್ಗೆ, ಪರಿಶೀಲಿಸಿ ಕ್ರಮವಹಿಸುವುದು.
ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಹಾಗೂ ದಿನಚರಿಗಳಿಗೆ ಈ ಕಛೇರಿಯಿಂದ ನೀಡಿರುವ ನಿಗದಿತ ಅವಧಿಯೊಳಗೆ SATS ತಂತ್ರಾಂಶದ ಮೂಲಕ ಸಲ್ಲಿಸುವ ಬೇಡಿಕೆಯನ್ನು ಮಾತ್ರ ಮುದ್ರಣಕ್ಕೆ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳಲ್ಲಿ ಬೇಡಿಕೆಯನ್ನು ಸಲ್ಲಿಸಲು ಪ್ರಯತ್ನಿಸಿದ್ದಲ್ಲಿ ಸದರಿ ಬೇಡಿಕೆಯನ್ನು ಪರಿಗಣಿಸಲಾಗುವುದಿಲ್ಲ. ಇದರಿಂದ ಉಂಟಾಗುವ ಅನಾನುಕೂಲಗಳಿಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಆಯಾ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳು(ಸಿ.ಆರ್.ಪಿ.) ನೇರ ಹೊಣೆಗಾರರಾಗುತ್ತಾರೆ. ಈ ರೀತಿಯ ವ್ಯತ್ಯಯಕ್ಕೆ ಈ ಕಛೇರಿಯು ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ. ಅದಕ್ಕಾಗಿ CRPರವರು, ತಮ್ಮ ಕ್ಲಸ್ಟರ್ ನ ಬೇಡಿಕೆಯ ಪ್ರತಿಯನ್ನು ದೃಢೀಕರಿಸಿ ತಮ್ಮ ಹಂತದಲ್ಲಿ ಸಂಗ್ರಹಿಸಿಡುವುದು.
ಪ್ರಸ್ತುತ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳು ಮುದ್ರಿತವಾಗುತ್ತಿದ್ದು ಭಾಗ-1 ಮತ್ತು ಭಾಗ-2 ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಪಡೆಯಲಾಗುವುದು. ಆದುದರಿಂದ ಮಾರಾಟ ವಿಭಾಗದಲ್ಲಿ ಸಲ್ಲಿಕೆಯಾಗುವ ಬೇಡಿಕೆಗೆ ಹಿಂದಿನ ಸಾಲಿನ ದರಗಳನ್ನಯ ಭಾಗ-1 ಮತ್ತು ಭಾಗ-2 ಪುಸ್ತಕಗಳಿಗೆ ದರಗಳನ್ನು ವಿಭಾಗಿಸಿ SATS ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆ ಪ್ರಕಾರ ಶೇ.10 ರಷ್ಟು ಮುಂಗಡವನ್ನು ಪಾವತಿಸಿರುವ ಬಗ್ಗೆ, ಪರಿಶೀಲಿಸಿಕೊಳ್ಳಲು ಸೂಚಿಸಿದೆ. ನಿಖರವಾದ ದರಗಳನ್ನು ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಅದರಂತೆ ಉಳಿಕೆ ಬಾಕಿ ಮೊತ್ತವನ್ನು ಪಾವತಿಸಿಕೊಂಡು ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮವಹಿಸುವುದು.
CRPರವರು ತಮ್ಮ ವ್ಯಾಪ್ತಿಯ ಪ್ರತಿ ಶಾಲೆಗಳ ಬೇಡಿಕೆ ಪಟ್ಟಿ ಹಾಗೂ ಕ್ರೂಢೀಕೃತ ಪಟ್ಟಿಯನ್ನು ಸಂಗ್ರಹಿಸಿಡುವುದು.
3) ಬ್ಲಾಕ್ ಹಂತದ ನೋಡಲ್ ಅಧಿಕಾರಿಗಳು: (ದಿನಾಂಕ: 09.12.2024 ರಿಂದ ದಿನಾಂಕ: 12.2024ರವರೆಗೆ):
1) ಮೊದಲಿಗೆ ಶಾಲೆಗಳಲ್ಲಿ ಉಳಿಕೆಯಾಗಿರುವ (ಸರ್ಕಾರಿ ಮತ್ತು ಅನುದಾನಿತ) 2024-25ನೇ ಸಾಲಿನ ಉಚಿತ ಪಠ್ಯಪುಸ್ತಕಗಳನ್ನು ತಾಲ್ಲೂಕು ಗೋದಾಮುಗಳಿಗೆ ಹಿಂಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಹಾಗೂ ಶಾಲಾವಾರು ಉಳಿಕೆ ಪುಸ್ತಕಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಬೇಕು.
2) ತರಗತಿವಾರು / ಮಾಧ್ಯಮವಾರು / ಶೀರ್ಷಿಕವಾರು ಉಳಿಕೆ ಪಠ್ಯಪುಸ್ತಕಗಳ ಮಾಹಿತಿಯನ್ನು ನಿಖರವಾಗಿ ಅಯಾ ವಹಿಗಳಲ್ಲಿ ದಾಖಲಿಸಿ ಕ್ರೋಢೀಕರಿಸುವುದು ಹಾಗೂ ವ್ಯವಸ್ಥಿತವಾಗಿ ತರಗತಿವಾರು, ಮಾಧ್ಯಮವಾರು, ಶೀರ್ಷಿಕವಾರು ಪಠ್ಯಪುಸ್ತಕಗಳನ್ನು ಗೋದಾಮುಗಳಲ್ಲಿ ಜೋಡಿಸಿಡುವುದು.
3) SATS ತಂತ್ರಾಂಶದಲ್ಲಿ stock entry ಕಡ್ಡಾಯವಾಗಿ ದಾಖಲಿಸುವುದು ಹಾಗೂ ದಾಖಲಿಸಿರುವಷ್ಟು ಸಂಖ್ಯೆಯ ಉಳಿಕೆ ಪಠ್ಯಪುಸ್ತಕಗಳು ಗೋದಾಮಿನಲ್ಲಿರುವ ಬಗ್ಗೆ, ಖಾತರಿಪಡಿಸಿಕೊಳ್ಳುವುದು. Stock Entry ನಂತರ ಯಾವುದೇ ವ್ಯತ್ಯಯಗಳ ಕುರಿತು ಬರುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ. Stock Entry ದಾಖಲಾತಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಯಲ್ಲಿ ವಿವರವಾಗಿ ತಿಳಿಸಿದೆ.
4) ಬ್ಲಾಕ್ ಹಂತದ ಅಧಿಕಾರಿಯು ತನ್ನ ವ್ಯಾಪ್ತಿಯ ಎಲ್ಲಾ ಕ್ಲಸ್ಟರ್/ಎಲ್ಲಾ ಶಾಲೆಗಳ ಬೇಡಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿ, ಉಸ್ತುವಾರಿ ಮಾಡುವ ಎಲ್ಲಾ ಚಟುವಟಿಕೆಗಳಿಗೆ SATS ತಂತ್ರಾಂಶದಲ್ಲಿ ಅನುಕೂಲಿಸಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.
5) ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ರವರು SATS ತಂತ್ರಾಂಶದಲ್ಲಿ ಕ್ರಮಬದ್ಧವಾಗಿ ಪರಿಶೀಲಿಸಬೇಕು. ಶಾಲೆಗಳ ಹಾಗೂ CRPರವರಿಂದ ವ್ಯತ್ಯಯಗಳಾಗಿದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು.
6) 2024-25ನೇ ಸಾಲಿಗೆ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿರುವುದರಿಂದ ಭಾಗ-1 ಮತ್ತು ಭಾಗ-2 ಎರಡೂ ಪಠ್ಯಪುಸ್ತಕಗಳಿಗೂ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ಸಮ ಪ್ರಮಾಣದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಈ ಬಗ್ಗೆ ಪರಿಶೀಲಿಸಿಕೊಂಡು ಬೇಡಿಕೆಯನ್ನು ಅನುಮೋದಿಸಲು ಕ್ರಮ ವಹಿಸುವುದು.
7) ಬ್ಲಾಕ್ ಹಂತದಲ್ಲಿ ತಾಲ್ಲೂಕು ನೋಡಲ್ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿ, ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.), ಶಿಕ್ಷಣ ಸಂಯೋಜಕರು (ಇ.ಸಿ.ಒ) ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ SATS ತಂತ್ರಾಂಶದಲ್ಲಿ ಬೇಡಿಕೆ ಸಲ್ಲಿಸುವ ಬಗ್ಗೆ ತರಬೇತಿ ನೀಡುವುದು.
8) ಶಾಲೆಗಳವರು ಪಠ್ಯಪುಸ್ತಕಗಳ ಬೇಡಿಕೆಯನ್ನು SATS ನಲ್ಲಿ ದಾಖಲಿಸುತ್ತಿರುವ ಪ್ರಕ್ರಿಯೆಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಉಸ್ತುವಾರಿ ಮಾಡಿ ಎಲ್ಲಾ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆಯ ವಿದ್ಯಾರ್ಥಿಗಳ ಅವಶ್ಯಕತೆಗನುಗುಣವಾಗಿ ಬೇಡಿಕೆಯನ್ನು ದಾಖಲಿಸುವ ಬಗ್ಗೆ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಗಳು ಅನುಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಿ ಪ್ರತಿ ದಿನ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು.
9) ಶಾಲೆಗಳು ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ದಿನದಿಂದಲೇ ಬ್ಲಾಕ್ ಹಂತದ ಉಸ್ತುವಾರಿ ಕಾರ್ಯವು ಚಾಲ್ತಿಯಲ್ಲಿರಬೇಕು ಹಾಗೂ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನವನ್ನು ನೀಡಬೇಕು.
10) ವಿಶೇಷ ಬೇಡಿಕೆಯನ್ನು (Special Indent) ಸಲ್ಲಿಸಲು ಬ್ಲಾಕ್ ಹಂತಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಉನ್ನತ ಶಿಕ್ಷಣಕ್ಕೆ ಅವಶ್ಯವಿರುವ ಪಠ್ಯಪುಸ್ತಕಗಳು ಮತ್ತು ಇತರೆ ಕಾರಣಗಳಿಗಾಗಿ ಸಾರ್ವಜನಿಕರಿಂದ ಬರುವ ಬೇಡಿಕೆ ಹಾಗೂ ಇತರೇ ರಾಜ್ಯಗಳಿಂದ ಸಲ್ಲಿಕೆಯಾಗುವ ಬೇಡಿಕೆಯನ್ನು ಒಳಗೊಂಡಂತೆ ಬ್ಲಾಕ್ ಹಂತದಲ್ಲಿ ಅಂದಾಜಿಸಿ, ಸೂಕ್ತ ದಾಖಲೆ ಹಾಗೂ ಸಮರ್ಥನೀಯ ಅಂಶಗಳನ್ನು ಪಡೆದು, ಪಠ್ಯಪುಸ್ತಕಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವುದು. ಈ ಬಗ್ಗೆ ಸಂಬಂಧಪಟ್ಟವರಿಂದ ಅಗತ್ಯ ದೃಢೀಕರಣದೊಂದಿಗೆ ಲಿಖಿತವಾಗಿ ಬೇಡಿಕೆಯನ್ನು ಪಡೆದುಕೊಳ್ಳುವುದು. ಮಾರಾಟ ವಿಭಾಗದಡಿ ದಾಖಲಿಸುವಾಗ ಬೇಡಿಕೆಗೆ ಶೇ.10 ರಷ್ಟು ಮುಂಗಡ ಹಣವನ್ನು SATS Payment gateway ಮೂಲಕ ಪಾವತಿಸಿಕೊಳ್ಳುವುದು.
11) ಗಡಿನಾಡ ಶಾಲೆಗಳಿಗೆ ವಿಶೇಷ ಬೇಡಿಕೆ ಅಡಿಯಲ್ಲಿ ಕನ್ನಡ ಪಠ್ಯಪುಸ್ತಕಗಳ ಬೇಡಿಕೆಯನ್ನು ಉಚಿತ ವಿಭಾಗದಡಿಯಲ್ಲಿ ಬ್ಲಾಕ್ ಹಂತದಲ್ಲಿ ದಾಖಲಿಸುವುದು. ಇತರೆ ಅಗತ್ಯ ಪಠ್ಯಪುಸ್ತಕಗಳಿಗೆ ಮಾರಾಟ ವಿಭಾಗದಡಿಯಲ್ಲಿ ಬೇಡಿಕೆಯನ್ನು ದಾಖಲಿಸುವುದು.
12) ತಾಲ್ಲೂಕು ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳು ತರಗತಿ/ಮಾಧ್ಯಮವಾರು ಅವಶ್ಯವಿರುವ ಶೀರ್ಷಿಕೆಗಳ ಬೇಡಿಕೆಯನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ SATS ತಂತ್ರಾಂಶದಲ್ಲಿ ದಾಖಲಿಸಿರುವ ಬಗ್ಗೆ ಪರಿಶೀಲಿಸಿ ಸರಿ ಇರುವ ಬಗ್ಗೆ,, ಖಾತರಿ ಪಡಿಸಿಕೊಳ್ಳುವುದು.
13) ಕ್ಲಸ್ಟರ್ ಹಂತದಲ್ಲಿ ಅನುಮೋದನೆಯಾಗಿರುವ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ಪರಿಶೀಲಿಸಿ, ಶಾಲೆಗಳು ದಾಖಲಿಸಿರುವ ಬೇಡಿಕೆಯು ಸಮರ್ಪಕವಾಗಿಲ್ಲದಿದ್ದರೆ ಅಂತಹ ಶಾಲೆಗಳ ಬೇಡಿಕೆಯನ್ನು SATS ತಂತ್ರಾಂಶದಲ್ಲಿ Reject’ ಮಾಡಿ ಶಾಲೆಗಳಿಗೆ ಹಿಂತಿರುಗಿಸಿ ಸರಿಪಡಿಸಿದ ಪುನರ್ ಬೇಡಿಕೆಯನ್ನು ಶಾಲೆಗಳಿಂದ ಕಡ್ಡಾಯವಾಗಿ SATS ತಂತ್ರಾಂಶದ ಮೂಲಕವೇ ಪಡೆಯುವುದು. ನಂತರ ಮತ್ತೊಮ್ಮೆ ಪರಿಶೀಲಿಸಿ, ಸರಿ ಇರುವುದನ್ನು ಖಾತರಿ ಪಡಿಸಿಕೊಂಡು, ತಂತ್ರಾಂಶದಲ್ಲಿ ಅನುಮೋದಿಸಿ, ಮುಂದಿನ ಹಂತಕ್ಕೆ ದಿನಾಂಕ:13.12.2024ರೊಳಗೆ ನೀಡುವುದು.
14) ಸದರಿ ಮಾಹಿತಿಯು ನಿಖರವಾಗಿದ್ದಲ್ಲಿ, ತಾಲ್ಲೂಕಿನ ಎಲ್ಲಾ ಶಾಲೆಗಳ ಸಂಖ್ಯೆಗನುಗುಣವಾಗಿ ಮತ್ತು ಅವಶ್ಯಕತೆಗನುಗುಣವಾಗಿ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದು ಪರಿಗಣಿಸಲಾಗುವುದು. ಮುಂದುವರೆದು, ಮುಂದಿನ ದಿನಗಳಲ್ಲಿ ಉಂಟಾಗುವ ಯಾವುದೇ ಪಠ್ಯಪುಸ್ತಕಗಳ ವ್ಯತ್ಯಯಗಳಿಗೆ (ಕೊರತೆ/ಹೆಚ್ಚುವರಿ) ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಕ್ಷೇತ್ರ ಸಮನ್ವಯಾಧಿಕಾರಿಗಳು (BRC) ಮತ್ತು ಪಠ್ಯಪುಸ್ತಕ ನೋಡಲ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
15) ಆಯಾ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಎಲ್ಲಾ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆ ಎಸ್.ಎ.ಟಿ.ಎಸ್. ನಲ್ಲಿ ಸಲ್ಲಿಕೆಯಾಗಿದೆಯೇ ಎಂಬ ಬಗ್ಗೆ ಸಂಬಂಧಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು/ಕ್ಷೇತ್ರ ಸಮನ್ವಯ ಅಧಿಕಾರಿಗಳು ಮತ್ತು ತಾಲ್ಲೂಕು ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು ಖುದ್ದು ಪರಿಶೀಲಿಸಿಕೊಳ್ಳುವುದು.
16) ತಾಲ್ಲೂಕುಗಳ ಪಠ್ಯಪುಸ್ತಕ ಗೋದಾಮು ವಿಳಾಸವನ್ನು ಕಡ್ಡಾಯವಾಗಿ SATS ತಂತ್ರಾಂಶದಲ್ಲಿ ಅಳವಡಿಸುವುದು.
17) ಶಾಲೆಗಳು ಸಲ್ಲಿಸಿರುವ ಬೇಡಿಕೆಯು ಸಮರ್ಪಕವಾಗಿರುವುದನ್ನು ದೃಢೀಕರಿಸಿಕೊಳ್ಳಲು, ಕ್ಷೇತ್ರ. ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶೇ.10 ರಷ್ಟು ಶಾಲೆಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಶೇ.10ರಷ್ಟು ಬೇಡಿಕೆಯನ್ನು ದಾಖಲೆ ಸಹಿತ ಪರಿಶೀಲಿಸಿ ದೃಢೀಕರಿಸಬೇಕು ಹಾಗೂ ಇದಕ್ಕೆ ದಾಖಲೆ ಸಂಗ್ರಹಿಸಬೇಕು.
18) CRPರವರ ದೃಢೀಕರಣಗಳನ್ನು ಸಂಗ್ರಹಿಸಿ ತಾಲ್ಲೂಕು ದೃಢೀಕರಣವನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾ ಹಂತಕ್ಕೆ ಸಲ್ಲಿಸುವುದು.
19) ತಾಲ್ಲೂಕು ಹಂತದ ಕ್ರೋಢೀಕೃತ ನಮೂನೆಯನ್ನು ದೃಢೀಕರಣದೊಂದಿಗೆ ನೋಡಲ್ ಅಧಿಕಾರಿಗಳು ಸಂಗ್ರಹಿಸಿಡುವುದು.
20) ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಮ್ಮ ವ್ಯಾಪ್ತಿಯ ಶೇ.10ರಷ್ಟು ಶಾಲೆಗಳಿಗೆ ಭೇಟಿ ನೀಡಿ, ದಾಖಲಾತಿಗೆ ಅನುಗುಣವಾಗಿ ಪಠ್ಯ ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿರುವುದರ ಬಗ್ಗೆ ಖಾತ್ರಿ ಪಡಿಸಿಕೊಂಡು, ದೃಢೀಕೃತ ಪ್ರತಿ ನೀಡುವುದು.
ವಿಶೇಷ ಸೂಚನೆ:
ಶಾಲಾ ಹಂತದಿಂದ ಸಲ್ಲಿಸಿದ ಪಠ್ಯಪುಸ್ತಕಗಳ ಬೇಡಿಕೆಯಲ್ಲಿ ಯಾವುದೇ ರೀತಿಯ ತಿದ್ದುಪಡಿ ಅವಶ್ಯವಿದ್ದಲ್ಲಿ ಸದರಿ ಪಠ್ಯಪುಸ್ತಕಗಳ ಬೇಡಿಕೆಯನ್ನು ನೇರವಾಗಿ ಶಾಲಾ ಹಂತಕ್ಕೆ ಹಿಂತಿರುಗಿಸುವುದು ಹಾಗೂ ಶಾಲಾ ಹಂತದಿಂದಲೇ ತಿದ್ದುಪಡಿ ಅಳವಡಿಸಿ ಹೊಸದಾಗಿ ಬೇಡಿಕೆಯನ್ನು ದಾಖಲಿಸಲು/ಸಲ್ಲಿಸಲು ಅಗತ್ಯ ಕ್ರಮವಹಿಸುವುದು.
ಅನುದಾನ ರಹಿತ ಶಾಲೆಗಳು ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸುವಾಗ ಶೇ.10% ಮುಂಗಡ ಮೊತ್ತವನ್ನು SATS Payment Gateway ಮೂಲಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಅಂತಹ ಶಾಲೆಗಳ ಪಠ್ಯಪುಸ್ತಕಗಳ ಬೇಡಿಕೆಯನ್ನು ಪರಿಗಣಿಸಲಾಗುವುದಿಲ್ಲ.
ಆಯಾ ಬ್ಲಾಕ್ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯವಿರದ ತರಗತಿ/ಮಾಧ್ಯಮ/ಶೀರ್ಷಿಕೆಗಳಿಗೆ ಬೇಡಿಕೆಯನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಕ್ಷೇತ್ರ ಸಮನ್ವಯಾಧಿಕಾರಿಗಳು (BRC)/ನೋಡಲ್ ಅಧಿಕಾರಿಗಳು ಸಂಪೂರ್ಣ ಜವಾಬ್ದಾರರಾಗುತ್ತಾರೆ ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಭರಿಸಬೇಕಾಗುತ್ತದೆ.
ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಹಾಗೂ ದಿನಚರಿಗಳಿಗೆ ಈ ಕಛೇರಿಯಿಂದ ನೀಡಿರುವ ನಿಗದಿತ ಅವಧಿಯೊಳಗೆ ಬೇಡಿಕೆಯನ್ನು ಸಲ್ಲಿಸುವಂತೆ ಶಾಲೆಗಳಿಗೆ ಸೂಚಿಸುವುದು ಹಾಗೂ ಎಲ್ಲಾ ಶಾಲೆಗಳು ಅಗತ್ಯವಿರುವ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸಿರುವ ಬಗ್ಗೆ ಪರಿಶೀಲಿಸುವುದು. ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳಲ್ಲಿ ಬೇಡಿಕೆಯನ್ನು ಸಲ್ಲಿಸಲು ಪ್ರಯತ್ನಿಸಿದ್ದಲ್ಲಿ ಸದರಿ ಬೇಡಿಕೆಯನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಇದರಿಂದ ಉಂಟಾಗುವ ಅನಾನುಕೂಲಗಳಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇರ ಹೊಣೆಗಾರರಾಗುತ್ತಾರೆ. ಈ ರೀತಿಯ ವ್ಯತ್ಯಯಕ್ಕೆ ಈ ಕಛೇರಿಯು ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ.
ಪ್ರಸ್ತುತ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳು ಮುದ್ರಿತವಾಗುತ್ತಿದ್ದು, ಭಾಗ-1 ಮತ್ತು ಭಾಗ-2 ಪಠ್ಯವುಸ್ತಕಗಳಿಗೆ ಬೇಡಿಕೆಯನ್ನು ಪಡೆಯಲಾಗುವುದು. ಆದುದರಿಂದ ಮಾರಾಟ ವಿಭಾಗದಲ್ಲಿ ಸಲ್ಲಿಕೆಯಾಗುವ ಬೇಡಿಕೆಗೆ ಹಿಂದಿನ ಸಾಲಿನ ದರಗಳನ್ನಯ ಭಾಗ-1 ಮತ್ತು ಭಾಗ-2 ಪುಸ್ತಕಗಳಿಗೆ ದರಗಳನ್ನು ವಿಭಾಗಿಸಿ SATS ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆ ಪ್ರಕಾರ ಶೇ.10 ರಷ್ಟು ಮುಂಗಡವನ್ನು ಪಾವತಿಸಿಕೊಳ್ಳಲು ಸೂಚಿಸಿದೆ. ನಿಖರವಾದ ದರಗಳನ್ನು ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಅದರಂತೆ ಉಳಿಕೆ ಬಾಕಿ ಮೊತ್ತವನ್ನು ಪಾವತಿಸಿಕೊಂಡು ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮವಹಿಸುವುದು.
5) ಜಿಲ್ಲಾ ಹಂತ (ದಿನಾಂಕ 12.12.2024 ರಿಂದ 16.12.2024 ರವರೆಗೆ)
1) ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಲು ಪ್ರಾರಂಭಿಸಿದ ದಿನದಿಂದ ಶಾಲಾವಾರು, ಕ್ಲಸ್ಟರ್‌ವಾರು, ತಾಲ್ಲೂಕುವಾರು ಬೇಡಿಕೆಯನ್ನು ನಿಗದಿತ ದಿನಾಂಕದವರೆಗೆ ದಾಖಲಿಸುತ್ತಿರುವ ಬಗ್ಗೆ ಪ್ರತಿ ದಿನವು ಉಸ್ತುವಾರಿ ಮಾಡುವುದು ಹಾಗು ಪ್ರಗತಿಯನ್ನು ವೇಳಾಪಟ್ಟಿಯನುಸಾರ ಅನುಪಾಲಿಸುವುದು.
2) 2025-26ನೇ ಸಾಲಿಗೆ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿರುವುದರಿಂದ ಭಾಗ-1 ಮತ್ತು ಭಾಗ-2 ಎರಡೂ ಪಠ್ಯಪುಸ್ತಕಗಳಿಗೂ ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಈ ಬಗ್ಗೆ ಪರಿಶೀಲಿಸಿಕೊಂಡು ಬೇಡಿಕೆಯನ್ನು ಅನುಮೋದಿಸಲು ಕ್ರಮ ವಹಿಸುವುದು.
3) ನಿಗದಿತ ದಿನಾಂಕದೊಳಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬ್ಲಾಕ್‌ಗಳ/ಎಲ್ಲಾ ಕ್ಲಸ್ಟರ್‌ಗಳ/ ಎಲ್ಲಾ ಶಾಲೆಗಳ ಪಠ್ಯಪುಸ್ತಕಗಳ ಬೇಡಿಕೆಯು SATS ನಲ್ಲಿ ದಾಖಲಾಗುವಂತೆ ಸೂಕ್ತ ಕ್ರಮವಹಿಸುವುದು.
4) ಬ್ಲಾಕ್ ಹಂತದಿಂದ ವಿಶೇಷ ಬೇಡಿಕೆಯಡಿಯಲ್ಲಿ (Special Indent) ದಾಖಲಿಸುವ ಬೇಡಿಕೆಯನ್ನು ಪರಿಶೀಲಿಸಿ, ಅನುಮೋದಿಸುವ ಜವಾಬ್ದಾರಿಯನ್ನು ಜಿಲ್ಲಾ ಹಂತಕ್ಕೆ ನೀಡಲಾಗಿದ್ದು, ಅದರಂತೆ ಕ್ರಮವಹಿಸುವುದು, ಜಿಲ್ಲಾ ಹಂತದಲ್ಲಿ ಪರಿಶೀಲಿಸಿ ದಿನಾಂಕ:16.12.2024 ರೊಳಗೆ ಅನುಮೋದಿಸಿದ ಬೇಡಿಕೆಗಳನ್ನು ಮಾತ್ರ ಪರಿಗಣಿಸಲಾಗುವುದು.
5) ರಾಜ್ಯ ಕಚೇರಿಯಿಂದ ನೀಡಿರುವ ವೇಳಾ ಪಟ್ಟಿಯನ್ವಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಕೊಂಡು ಪಠ್ಯಪುಸ್ತಕಗಳ ಬೇಡಿಕೆಯನ್ನು ಸಮಗ್ರವಾಗಿ SATS ತಂತ್ರಾಂಶದಲ್ಲಿ ದಾಖಲಿಸಲು ಸೂಕ್ತ ಕ್ರಮವಹಿಸುವುದು.
6) ಜಿಲ್ಲಾ ವ್ಯಾಪ್ತಿಯ ಎಲ್ಲಾ ವಿಧದ ಶಾಲೆಗಳವರು 2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸಿರುವ ಮಾಹಿತಿಯ ಭೌತಿಕ ಪ್ರತಿಯನ್ನು ದೃಢೀಕರಣದೊಂದಿಗೆ ಕರ್ನಾಟಕ ಪಠ್ಯಪುಸ್ತಕ ಸಂಘದ ಕಛೇರಿಗೆ ನಿಗದಿತ ಸಮಯದೊಳಗೆ ಸಲ್ಲಿಸುವುದು.
7) ವಿಶೇಷ ಬೇಡಿಕೆಯಡಿಯಲ್ಲಿ ಸಲ್ಲಿಸಿದ ಮಾರಾಟ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಮಾರಾಟ ಮಾಡುವಂತೆ ಬ್ಲಾಕ್ ಹಂತಕ್ಕೆ ಸೂಚನೆಗಳನ್ನು ನೀಡುವುದು ಹಾಗೂ ಸದರಿ ಮಾರಾಟ ಪಠ್ಯಪುಸ್ತಕಗಳಿಗೆ ಮುಂಗಡವನ್ನು ಪಡೆದು ಅನುಮೋದಿಸುವುದು.
8) ತಾಲ್ಲೂಕು ನೋಡಲ್ ಅಧಿಕಾರಿಗಳ ದೃಢೀಕರಣ ಸಂಗ್ರಹಿಸಿಕೊಂಡು ದೃಢೀಕರಣವನ್ನು ನಿಗದಿತ ನಮೂನೆಯಲ್ಲಿ ರಾಜ್ಯ ಹಂತಕ್ಕೆ ಸಲ್ಲಿಸುವುದು. ಜಿಲ್ಲಾ ಹಂತದ ದೃಢೀಕರಣವನ್ನು ನಿಗದಿತ ನಮೂನೆಯಲ್ಲಿ ರಾಜ್ಯ ಹಂತಕ್ಕೆ ಸಲ್ಲಿಸುವುದು.
9) ಜಿಲ್ಲಾ ಹಂತದ ದೃಢೀಕೃತ ಪ್ರತಿಯೊಂದನ್ನು ಜಿಲ್ಲಾ ನೋಡಲ್ ಅಧಿಕಾರಿಗಳು ಸಂಗ್ರಹಿಸಿಡುವುದು.
10) ಜಿಲ್ಲಾ ನೋಡಲ್ ಅಧಿಕಾರಿಗಳು ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸರಿಯಾಗಿ ಬೇಡಿಕೆ ಪ್ರಕ್ರಿಯೆ ನಡೆಸಲು ಮಾರ್ಗದರ್ಶನ ನೀಡಬೇಕು.
11) ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ಇವರು, ತಮ್ಮ ವ್ಯಾಪ್ತಿಯ ಶೇ.5ರಷ್ಟು ಶಾಲೆಗಳಿಗೆ ಭೇಟಿ ನೀಡಿ, ದಾಖಲಾತಿಗೆ ಅನುಗುಣವಾಗಿ ಪಠ್ಯ ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿರುವುದರ ಬಗ್ಗೆ ಖಾತ್ರಿ ಪಡಿಸಿಕೊಂಡು, ದೃಢೀಕೃತ ಪ್ರತಿ ನೀಡುವುದು.
ವಿಶೇಷ ಸೂಚನೆ:
ಶಾಲಾ ಹಂತದಿಂದ ಬ್ಲಾಕ್ ಹಂತದವರೆಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವ ಎಲ್ಲಾ ಕಾರ್ಯಚಟುವಟಿಕೆಗಳ ನಿರಂತರ ಪರಿಶೀಲನೆ ಹಾಗೂ ಅನುಪಾಲನೆಯನ್ನು ಎಲ್ಲಾ ಹಂತದ ಅಧಿಕಾರಿಗಳು ನಿರ್ವಹಿಸುವಂತೆ ಕ್ರಮವಹಿಸುವುದು. ತನ್ಮೂಲಕ 2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಾಲಾ ಹಂತದಿಂದ ಪಡೆಯುವ ಪ್ರಕ್ರಿಯೆಯನ್ನು ನಿಖರಗೊಳಿಸುವುದು.
ಆಯಾ ಜಿಲ್ಲಾ ವ್ಯಾಪ್ತಿಯ ಶಾಲೆಗಳಿಗೆ ಅಗತ್ಯವಿರದ ತರಗತಿ/ಮಾಧ್ಯಮ/ಶೀರ್ಷಿಕೆಗಳಿಗೆ ಬೇಡಿಕೆಯನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು ಸಂಪೂರ್ಣ ಜವಾಬ್ದಾರರಾಗುತ್ತಾರೆ ಹಾಗೂ ಅಂತಹ ಪಠ್ಯಪುಸ್ತಕಗಳ ಒಟ್ಟು ಮೌಲ್ಯವನ್ನು ಉಪನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳೇ ಭರಿಸಬೇಕಾಗುತ್ತದೆ.
ರಾಜ್ಯದ ಎಲ್ಲಾ ವಿಧದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುವ ಕಾರ್ಯಕ್ರಮವು ಇಲಾಖೆಯ ಮಹತ್ತರ ಯೋಜನೆ ಆಗಿರುವುದರಿಂದ ಈ ಬಗ್ಗೆ,ಆದ್ಯ ಗಮನ ಹರಿಸಿ ಯಾವುದೇ ಲೋಪಗಳು ಉಂಟಾಗದಂತೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು.
ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು ಹಾಗೂ ದಿನಚರಿಗಳಿಗೆ ಈ ಕಛೇರಿಯಿಂದ ನೀಡಿರುವ ನಿಗದಿತ ಅವಧಿಯೊಳಗೆ ಬೇಡಿಕೆಯನ್ನು ಸಲ್ಲಿಸುವಂತೆ ಶಾಲೆಗಳಿಗೆ ಸೂಚಿಸುವುದು ಹಾಗೂ ಎಲ್ಲಾ ಶಾಲೆಗಳು ಅಗತ್ಯವಿರುವ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸಿರುವ ಬಗ್ಗೆ ಅನುಪಾಲನೆ ಮಾಡುವುದು. ಮುಂದಿನ ದಿನಗಳಲ್ಲಿ ಭೌತಿಕವಾಗಿ ಬೇಡಿಕೆಯನ್ನು ಸಲ್ಲಿಸಲು ಆಸ್ಪದವಿರುವುದಿಲ್ಲ. ಅಂತಹ ಬೇಡಿಕೆಯನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಇದರಿಂದ ಉಂಟಾಗುವ ಅನಾನುಕೂಲಗಳಿಗೆ ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ)ರವರೇ ನೇರ ಹೊಣೆಗಾರರಾಗುತ್ತಾರೆ. ಈ ರೀತಿಯ ವ್ಯತ್ಯಯಕ್ಕೆ KTBS ಯಾವುದೇ ರೀತಿಯಲ್ಲಿ ಹೊಣೆಯಾಗುವುದಿಲ್ಲ.
ಪ್ರಸ್ತುತ SA 1 ಮತ್ತು SA 2 ಮಾದರಿಯಲ್ಲಿ ಪಠ್ಯಪುಸ್ತಕಗಳು ಮುದ್ರಿತವಾಗುತ್ತಿದ್ದು, ಭಾಗ-1 ಮತ್ತು ಭಾಗ-2 ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಪಡೆಯಲಾಗುವುದು. ಆದುದರಿಂದ ಮಾರಾಟ ವಿಭಾಗದಲ್ಲಿ ಸಲ್ಲಿಕೆಯಾಗುವ ಬೇಡಿಕೆಗೆ ಹಿಂದಿನ ಸಾಲಿನ ದರಗಳನ್ನಯ ಭಾಗ-1 ಮತ್ತು ಭಾಗ-2 ಪುಸ್ತಕಗಳಿಗೆ ದರಗಳನ್ನು ವಿಭಾಗಿಸಿ SATS ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆ ಪ್ರಕಾರ ಶೇ.10 ರಷ್ಟು ಮುಂಗಡವನ್ನು ಪಾವತಿಸಿಕೊಳ್ಳಲು ಸೂಚಿಸಿದೆ. ನಿಖರವಾದ ದರಗಳನ್ನು ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗುವುದು. ಅದರಂತೆ ಉಳಿಕೆ ಬಾಕಿ ಮೊತ್ತವನ್ನು ಪಾವತಿಸಿಕೊಂಡು ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮವಹಿಸಲು ತಾಲ್ಲೂಕುಗಳಿಗೆ ಸೂಚನೆ ನೀಡುವುದು.
2025-26ನೇ ಶೈಕ್ಷಣಿಕ ಸಾಲಿಗೆ SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಅಳವಡಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ “User manual” SATS Login ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ನೋಡಲ್ ಅಧಿಕಾರಿಗಳು ಹಾಗೂ SATS ತಂಡವನ್ನು ಇ-ಮೇಲ್ ವಿಳಾಸ satsmdktbs2023@gmail.com ಗೆ ಹಾಗೂ ದೂರವಾಣಿ ಸಂಖ್ಯೆ:9448442463 ಈ ಸಹಾಯವಾಣಿ ಮೂಲಕ ಸಂಪರ್ಕಿಸಲು ತಿಳಿಸಿದೆ. SATS ನಲ್ಲಿ ದಾಖಲಾಗಿರುವ ಮಕ್ಕಳ ದಾಖಲಾತಿ ಅನ್ವಯ ಪಠ್ಯಪುಸ್ತಕಗಳ ಬೇಡಿಕೆಯನ್ನು ದಾಖಲಿಸುವ ಬಗ್ಗೆ ಸಂಬಂಧಿಸಿದವರಿಗೆ ತರಬೇತಿಯನ್ನು ನೀಡುವುದು ಹಾಗು ತರಬೇತಿ ನೀಡಿದ ಬಗ್ಗೆ ದಾಖಲೆಗಳೊಂದಿಗೆ ವರದಿಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಸಲ್ಲಿಸುವುದು.
ತಾಲ್ಲೂಕು/ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳೇ ಪ್ರಸಕ್ತ ಸಾಲಿಗೆ ಬೇಡಿಕೆಯನ್ನು ದಾಖಲಿಸುವ ಹಾಗು ಪರಿಶೀಲಿಸಿ ಕ್ರೋಢೀಕರಿಸುವ ಸಂಪೂರ್ಣ ಪ್ರಕ್ರಿಯೆಯ ಜವಾಬ್ದಾರಿಯನ್ನು ನಿರ್ವಹಿಸುವುದು. ಸದರಿ ಪ್ರಕ್ರಿಯೆಯ ನಿರ್ವಹಣೆಗೆ ಕ್ಷೇತ್ರ ಸಮನ್ವಯಾಧಿಕಾರಿ (ಬಿ.ಆರ್.ಸಿ.) ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಪ್ರೋಗ್ರಾಮರ್‌ಗಳನ್ನು ಕಡ್ಡಾಯವಾಗಿ ನಿಯೋಜಿಸಿ, ವಿವರವನ್ನು ಕ.ಪ.ಪು.ಸಂಘಕ್ಕೆ ಸಲ್ಲಿಸುವುದು.
2025-26ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ಒಂದು ಬಾರಿ ಮಾತ್ರ ಪಡೆಯಲಾಗುವುದು. ಬೇಡಿಕೆಯ ಅನ್ವಯ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸರಬರಾಜು ಮಾಡಲಾಗುತ್ತದೆ.
ತತ್ಸಂಬಂಧ ಎಲ್ಲಾ ಹಂತದ ಉಸ್ತುವಾರಿ ಅಧಿಕಾರಿಗಳು ಪ್ರಸಕ್ತ ಸಾಲಿನಲ್ಲಿ ಯಾವುದೇ ರೀತಿಯ ಪಠ್ಯಪುಸ್ತಕಗಳು ಕೊರತೆ/ಹೆಚ್ಚುವರಿಯಾಗದಂತೆ ಸೂಕ್ತ ಕ್ರಮಕೈಗೊಳ್ಳುವುದು.
ಸಾರ್ವಜನಿಕ ವಲಯದಲ್ಲಿ ಪಠ್ಯಪುಸ್ತಕಗಳ ವಿತರಣೆ ಬಗ್ಗೆ ಯಾವುದೇ ರೀತಿಯ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಆ ಕಾರಣ ಎಲ್ಲಾ ಹಂತದ ಉಸ್ತುವಾರಿ ಅಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿರುವ ನಿಯಮಗಳನ್ವಯ ಕಾರ್ಯೋನ್ಮುಖರಾಗಿ ಎಸ್.ಎ.ಟಿ.ಎಸ್.ಕೆ.ಟಿ.ಬಿ.ಎಸ್. ತಂತ್ರಾಂಶದಲ್ಲಿ ಬೇಡಿಕೆಯನ್ನು ನಿಖರವಾಗಿ ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ತಿಳಿಸಿದೆ. ವಿಶೇಷವಾಗಿ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಖಾಸಗಿ ಶಾಲೆಗಳು ಉಲ್ಲೇಖ(1)ರ ಆದೇಶದಂತೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕದ ಬೇಡಿಕೆಯನ್ನು ಸಲ್ಲಿಸಲು ಅಗತ್ಯ ಕ್ರಮವಹಿಸುವುದು. 2025-26ನೇ ಸಾಲಿಗೆ ಎರಡನೇ ಬಾರಿಗೆ ಹೆಚ್ಚುವರಿ ಬೇಡಿಕೆಯನ್ನು ಸಲ್ಲಿಸಲು ಯಾವುದೇ ರೀತಿಯ ಅವಕಾಶವಿರುವುದಿಲ್ಲ.
ವಿಶೇಷ ಸೂಚನೆ:
2025-26ನೇ ಶೈಕ್ಷಣಿಕ ಸಾಲಿಗೆ ಈ ಕೆಳಕಂಡ ತರಗತಿಯ ಶೀರ್ಷಿಕೆಗಳು ಬದಲಾವಣೆ ಆಗುವುದರಿಂದ ಬೇಡಿಕೆ ಸಲ್ಲಿಸುವಾಗ ಸ್ಟಾಕ್‌ನಲ್ಲಿ ಉಳಿಕೆಯಾದ ಪಠ್ಯಪುಸ್ತಕಗಳನ್ನು ಪರಿಗಣಿಸುವಂತಿಲ್ಲ.
4) 2024-25ನೇ ಸಾಲಿಗೆ ಶಾಲಾ ಬ್ಯಾಗ್ ಹೊರೆಯ ಕಾರಣ SA-1 SA-2 ಮಾದರಿಯಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲಾಗಿತ್ತು. 2025-26ನೇ ಸಾಲಿಗೆ 100 ಪುಟಗಳಿಗಿಂತ ಕಡಿಮೆ ಇರುವ ಕೆಲವು ಶೀರ್ಷಿಕೆಗಳನ್ನು ಒಂದೇ ಪುಸ್ತಕವಾಗಿ ಮುದ್ರಿಸಿ, ಸರಬರಾಜು ಮಾಡಲಾಗುವುದು. 2024-25ನೇ ಸಾಲಿಗೆ SA- 1 SA-2 ಮಾದರಿಯಲ್ಲಿ ಮುದ್ರಿಸಿ ಸರಬರಾಜು ಮಾಡಿರುವ ಅಂತಹ ಪುಸ್ತಕಗಳು ಉಳಿಕೆಯಾಗಿದ್ದಲ್ಲಿ ಮೊದಲಿಗೆ ವಿತರಿಸಲು ಕ್ರಮ ವಹಿಸುವುದು.
ಅನುಪಯುಕ್ತ ಪಠ್ಯಪುಸ್ತಕಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿದೆ; ಅದರಂತೆ ಕ್ರಮವಹಿಸುವುದು.
ಅನುಪಯುಕ್ತ ಪಠ್ಯಪುಸ್ತಕಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿದೆ; ಅದರಂತೆ ಕ್ರಮವಹಿಸುವುದು.
ಸರ್ಕಾರಿ ಕನ್ನಡ ಮತ್ತು ಉರ್ದು ಶಾಲೆಗಳಲ್ಲಿ ಪ್ರಾರಂಭಿಸಿರುವ ಆಂಗ್ಲ ಮಾಧ್ಯಮ ವಿಭಾಗಗಳಿಗೆ 6ನೇ ತರಗತಿಯಲ್ಲಿ ದ್ವಿಭಾಷಾ ಪಠ್ಯಕ್ರಮ ಇರುವುದಿಲ್ಲವಾದ್ದರಿಂದ 1 ರಿಂದ 5ನೇ ತರಗತಿ (ಆಂಗ್ಲ ಮತ್ತು ಉರ್ದು) ಮತ್ತು 1 ರಿಂದ 5ನೇ ತರಗತಿಯ (ಆಂಗ್ಲ ಮತ್ತು ಕನ್ನಡ) ದ್ವಿಭಾಷಾ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದನ್ನು ಗಮನಿಸಲು ಸೂಚಿಸಿದೆ. 6ನೇ ತರಗತಿಗೆ ಎನ್.ಸಿ.ಇ.ಆರ್.ಟಿ.ಯ ಆಂಗ್ಲ ಹಾಗೂ ಹಿಂದಿ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ಸಲ್ಲಿಸುವುದು.
ಮೇಲಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಜಿಲ್ಲಾ/ತಾಲ್ಲೂಕು ನೋಡಲ್ ಅಧಿಕಾರಿಗಳು ಮತ್ತು ಪಠ್ಯಪುಸ್ತಕಗಳ ಜಿಲ್ಲಾ/ತಾಲ್ಲೂಕು ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಯಾವುದೇ ರೀತಿಯ ವ್ಯತ್ಯಯಗಳು ಉಂಟಾಗದಂತೆ ಕಾಲಮಿತಿಯೊಳಗೆ ಕ್ರಮವಹಿಸುವುದು. ಹೆಚ್ಚಿನ ಮಾಹಿತಿಗಾಗಿ ‘ಪಠ್ಯಪುಸ್ತಕಗಳ ಬೇಡಿಕೆ, ಸ್ವೀಕೃತಿ, ಪೂರೈಕೆ ಕೈಪಿಡಿ”ಯನ್ನು ಅವಲೋಕಿಸುವುದು.
2025-26ನೇ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ಬೇಡಿಕೆ, ಸರಬರಾಜು ಮತ್ತು ವಿತರಣೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು SATS ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ದಾಖಲಿಸುವುದು. ಎಲ್ಲಾ ವಿಧದ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನಿಗದಿತ ಸಮಯದೊಳಗೆ ಒದಗಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ನಿಖರವಾಗಿ ವೇಳಾಪಟ್ಟಿಯನ್ವಯ ದಾಖಲಿಸಿ, ಪಠ್ಯಪುಸ್ತಕಗಳ ಬೇಡಿಕೆ ಪ್ರಕ್ರಿಯೆಯನ್ನು ದಿನಾಂಕ:16.12.2024 ರೊಳಗೆ ಯಶಸ್ವಿಗೊಳಿಸಲು ಈ ಮೂಲಕ ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ: CLICK HERE
ಬೇಡಿಕೆ ಸಲ್ಲಿಸುವುದು ಹೇಗೆ ಈ ವಿಡಿಯೋ ವೀಕ್ಷಿಸಿ-CLICK HERE
1 thought on “SATS ತಂತ್ರಾಂಶದಲ್ಲಿ ಪಠ್ಯಪುಸ್ತಕ,ಅಭ್ಯಾಸ ಪುಸ್ತಕ, ದಿನಚರಿ ಪುಸ್ತಕಗಳ ಬೇಡಿಕೆ ದಾಖಲಿಸುವ ಬಗ್ಗೆ-2025-26”