Recuritment: ನೇಮಕಾತಿ ಅಧಿಸೂಚನೆ ರದ್ದತಿಗೆ ಸುತ್ತೋಲೆ, ತಕ್ಷಣ ಜಾರಿಗೆ ಬರುವಂತೆ ಸೂಚನೆ-2025

Recuritment: ನೇಮಕಾತಿ ಅಧಿಸೂಚನೆ ರದ್ದತಿಗೆ ಸುತ್ತೋಲೆ, ತಕ್ಷಣ ಜಾರಿಗೆ ಬರುವಂತೆ ಸೂಚನೆ-2025

Recuritment: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇರ ನೇಮ ಕಾತಿ ಸಂಬಂಧ ಕಳೆದ ಅಕ್ಟೋಬ‌ರ್ 28ರ ಬಳಿಕ ನೇರ ನೇಮಕಾತಿಗೆ ಅಥವಾ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆ ಹೊರಡಿಸಿದ್ದರೆ ಕೂಡಲೇ ರದ್ದುಪಡಿ ಸುವಂತೆ ಸೂಚಿಸಿ ರಾಜ್ಯ ಸರಕಾರ ಮತ್ತೊಂದು ಸುತ್ತೋಲೆ ಹೊರಡಿಸಿದೆ.

 

ರಾಜ್ಯ ಸಿವಿಲ್ ಸೇವೆಗಳಲ್ಲಿ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ಆದೇಶದವರೆಗೆ ಹೊರಡಿಸದಂತೆ ಸರಕಾರ ಕಳೆದ ನ.25ರಂದು ಸುತ್ತೋಲೆ ಹೊರಡಿಸಿತ್ತು.

 

ನ.25ರ ಬಳಿಕ ಹೊರಡಿಸಿರುವ ಅಧಿಸೂಚನೆಗಳನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಿ 2025ರ ಮಾ.29ರಂದು ಸುತ್ತೋಲೆ ಹೊರಡಿಸಿತ್ತು.

 

ಈಗ ಮತ್ತೊಂದು ಸುತ್ತೋಲೆ ಹೊರಡಿಸಿರುವ ಸರಕಾರ ಕಳೆದ ಅ.28ರ ನಂತರ ನೇರ ನೇಮಕಾತಿಗಾಗಿ ಅಥವಾ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗಾಗಿ ಯಾವುದೇ ಹೊಸಅಧಿಸೂಚನೆ ಹೊರಡಿಸಿದ್ದರೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲು ಸಂಬಂಧ ನೇಮಕಾತಿ ಪ್ರಾಧಿಕಾರಗಳು ಕ್ರಮ ವಹಿಸುವಂತೆ ಪುನರುಚ್ಚರಿಸಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!