Whereas, the draft of the Karnataka Civil Services (General Recruitment) (Amendment) Rules, 2024, was published as required by clause (a) of sub-section (2) of Section 3 read with Section 8 of the Karnataka State Civil Services Act, 1978 (Karnataka Act 14 of 1990), in Notification No. DPAR 295 SRR 2023, dated 15.02.2024 in Part IV-A of the Karnataka Gazette Extraordinary (No.84), dated 15.02.2024 inviting objections and suggestions from persons likely to be affected thereby within fifteen days from the date of publication of draft in the Official Gazette.
And whereas the said Gazette was made available to the public on 15th February
2024, And, whereas, objections and suggestions received in this behalf have been considered by the State Government,
Now, therefore, in exercise of the powers conferred by sub-section (1) of section
3 read with section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely;
RULES
- Title and commencement.- (1) These rules may be called the Karnataka Civil Services (General Recruitment) (Amendment) Rules, 2024.
- (2) They shall come into force from the date of their final publication in the Official Gazette.
- Amendment of Rule 9.- In the Karnataka Civil Services (General Recruitment) Rules, 1977 in rule 9, in sub-rule (1), after clause (1D) the following shall be inserted, namely:
“(1E) Notwithstanding anything contained in the rules of recruitment made in respect of any services or post, in all direct recruitment two percentage of the sanctioned cadre strength of each Department is set apart for that method in each of the categories of General Merit, Scheduled Castes, Scheduled Tribes and in each of the categoriesamong other Backward Classes shall, subject to any general instructions that may be issued by the Government regarding the manner of appointment, be filled from among sports achiever candidates:
Provided that, every Appointing Authority shall provide a separate column for
Sports achievers in the application for recruitment to any category of Group-A, B, C or D posts for the convenience of sports achiever persons.
Provided further that, if sufficient number of eligible sports achievers are not
available, to the extent of two percent, the unfilled vacancies shall be filled by others
category belonging to the same category.
A candidate shall be considered as a meritorious sportsperson only if he has
participated in the sports or games specified in the table in the National or International events hereunder either as an individual participant or a member of the team sports or games:
Note:
a. The achievements in above sports / games in para category shall be treated on par with the achievements of the able-bodied sportspersons;
b. The reservation of two percent for sports category will be confined to sports
person who represents Karnataka State.
c. In the reservation of two percent set apart for sports reservation, individual
events may be given preference over team events within each category of posts if many meritorious sports men applied for the post.
d. Participation at higher level may be considered only when it is supported by
winning medal at lower level.
e. By whom eligibility sports certificate to be issued may be included in the
notification in consultation with Department of Youth Services and Sports.
For the purpose of this sub rule a sports achiever person shall have priority as
follows:
The one highest sports achievement shall alone be considered for determining
the merit of the applicant under these Rules.
By Order and in the name of the
Governor of Karnataka,
(Veerabhadra)
Under Secretary to Government,
Department of personnel & Administrative Reforms (Service Rules-1)
____________________
ಅಧಿಸೂಚನೆ
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 2024ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 2(ಎ) ಉಪ ಪ್ರಕರಣವನ್ನು ಪ್ರಕರಣ 8 ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ, ಕರಡು ನಿಯಮಗಳನ್ನು ದಿನಾಂಕ:15.02.2024ರ ರಾಜ್ಯ ಪತ್ರ ವಿಶೇಷ ಸಂಚಿಕೆಯ ಭಾಗ-IV-ಎ (ನಂ.84) ರಲ್ಲಿ ಅಧಿಸೂಚನೆ ಸಂಖ್ಯೆ:ಸಿಆಸುಇ 295 ಸೆನೆನಿ 2023, ದಿನಾಂಕ:15.02.2024ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಬಹುದಾದಂತಹ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿರುವುದರಿಂದ,
ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ:15ನೇ ಫೆಬ್ರವರಿ 2024ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿರುವುದರಿಂದ,
ಮತ್ತು ಸ್ವೀಕೃತವಾಗಿರುವ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ,
ಪ್ರಸ್ತುತ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 1ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು,
(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು,
- ನಿಯಮ 9ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ)ನಿಯಮಗಳು, 1977 ರಲ್ಲಿ ನಿಯಮ 9 ರ ಉಪ-ನಿಯಮ (1), ಖಂಡ (1D) ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು:-
“(1E) ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಅಂಥ ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಯನ್ನು ಒಂದು ವಿಧಾನವನ್ನಾಗಿ ನಿಗದಿಪಡಿಸಿದ್ದಲ್ಲಿ ಅಂಥ ವಿಧಾನದ ಮೂಲಕ ನೇಮಕ ಮಾಡುವುದಕ್ಕಾಗಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾ ಎರಡರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಮೀಸಲಿರಿಸತಕ್ಕದ್ದು.”
ಪರಂತು, ಪ್ರತಿ ನೇಮಕಾತಿ ಪ್ರಾಧಿಕಾರವು ಗ್ರೂಪ್-ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಅರ್ಜಿಯಲ್ಲಿ ಕ್ರೀಡಾ ಸಾಧಕ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಕಾಲಂ ಅನ್ನು ಒದಗಿಸಬೇಕು.
ಮತ್ತೂ ಪರಂತು, ಕ್ರೀಡಾ ಸಾಧಕ ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾವಾರು ಎರಡರಷ್ಟು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದಲ್ಲಿ, ಅಂಥ ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು.
ಒಬ್ಬ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಈ ಕೆಳಗಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದ ಕ್ರೀಡೆಗಳು ಅಥವಾ ಆಟಗಳಲ್ಲಿ ವೈಯಕ್ತಿಕವಾಗಿ ಅಥವಾ ತಂಡದ ಕ್ರೀಡೆಗಳು ಅಥವಾ ಆಟಗಳ ಸದಸ್ಯರಾಗಿ ಭಾಗವಹಿಸಿದ್ದರೆ ಮಾತ್ರ ಅವರನ್ನು ಪ್ರತಿಭಾವಂತ ಕ್ರೀಡಾಪಟು ಎಂದು ಪರಿಗಣಿಸತಕ್ಕದ್ದು:
ಟಿಪ್ಪಣಿ:
a. The achievements in above sports / games in para category shall be treated on par with the achievements of the able-bodied sportspersons;
b. The reservation of two percent for sports category will be confined to sports person who represents Karnataka State.
c. In the reservation of two percent set apart for sports reservation, individual events may be given preference over team events within each category of posts if many meritorious sports men applied for the post.
d. Participation at higher level may be considered only when it is supported by winning medal at lower level.
e. By whom eligibility sports certificate to be issued may be included in the notification in consultation with Department of Youth Services and Sports.
ಈ ಉಪ ನಿಯಮದ ಉದ್ದೇಶಕ್ಕಾಗಿ ಕ್ರೀಡಾ ಸಾಧಕ ವ್ಯಕ್ತಿಯು ಈ ಕೆಳಗಿನಂತೆ ಆದ್ಯತೆಯನ್ನು ಹೊಂದಿರತಕ್ಕದ್ದು:-
ಈ ನಿಯಮಗಳ ಅಡಿಯಲ್ಲಿ ಅರ್ಜಿದಾರರ ಅರ್ಹತೆಯನ್ನು ನಿರ್ಧರಿಸಲು ಒಂದು ಅತ್ಯುನ್ನತ ಕ್ರೀಡಾ ಸಾಧನೆಯನ್ನು ಮಾತ್ರ ಪರಿಗಣಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ವೀರಭದ್ರ)
ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1)