Yeshasvini Scheme: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ದರ ಪರಿಷ್ಕರಣೆ,69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಸೇರ್ಪಡೆ!

Yeshasvini Scheme: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ದರ ಪರಿಷ್ಕರಣೆ!

Yeshasvini Scheme: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ದರ ಪರಿಷ್ಕರಣೆ ಕುರಿತು ಸಂಕ್ಷಿಪ್ತ ವಿವರ

1. ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರವು 2022-23 ರಿಂದ ಮರು ಜಾರಿಗೊಳಿಸಿದೆ.

2. ಪ್ರಸ್ತುತ ಯಶಸ್ವಿನಿ ಯೋಜನೆಯಲ್ಲಿನ ಚಿಕಿತ್ಸಾ ದರಗಳು 2017-18 ಅವಧಿಯಲ್ಲಿ ನಿಗದಿ ಮಾಡಿದ ದರಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದಲ್ಲಿ ಅತ್ಯಂತ ಕಡಿಮೆ ಇರುವುದಾಗಿ ತಿಳಿಸಿ ಪ್ರಮುಖ ಆಸ್ಪತ್ರೆಗಳು ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಗಳಾಗಿ ಸೇರಿಕೊಳ್ಳಲು ಮುಂದೆ ಬರುತ್ತಿಲ್ಲ.

3. ಈ ಕಾರಣಕ್ಕಾಗಿ ಚಿಕಿತ್ಸೆಗಳ ದರಗಳನ್ನು ಪರಿಷ್ಕರಿಸಲು ಸರ್ಕಾರವು ದಿನಾಂಕ:26-08-2024 ರಲ್ಲಿ ಕೂಡ್ಲಿಗಿ ಕ್ಷೇತ್ರದ ಮಾನ್ಯ ಶಾಸಕರಾದ ಡಾ|| ಶ್ರೀನಿವಾಸ್ ಎನ್. ಟಿ ಇವರ ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ ದರ ಪರಿಷ್ಕರಣಾ ಸಮಿತಿಯನ್ನು ರಚಿಸಿದೆ.

4. ಸಮಿತಿಯು ಪ್ರಸ್ತುತ ಚಿಕಿತ್ಸಾ ದರಗಳನ್ನು ಪರಿಶೀಲಿಸಿ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರ ಸಂಸ್ಥೆಗಳ ಸದಸ್ಯರಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಹೊಸ ಚಿಕಿತ್ಸೆಗಳನ್ನು ಸೇರಿಸುವುದಲ್ಲದೇ ಈಗಿನ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುತ್ತದೆ.

5. ಸಮಿತಿಯಲ್ಲಿ ಹೆಸರಾಂತ ಪತಿಷ್ಟಿತ ಆಸ್ಪತ್ರೆಗಳ 8 ತಜ್ಞ ವೈದ್ಯರಲ್ಲದೇ ವಿವಿಧ ವೈದ್ಯಕೀಯ ವಿಭಾಗಗಳ 11 ವಿಶೇಷ ಆಹ್ವಾನಿತ ತಜ್ಞ ವೈದ್ಯರನ್ನು ಆಹ್ವಾನಿಸಿ 13 ಸಭೆಗಳನ್ನು ನಡೆಸಿ ಅವರುಗಳ ಸಲಹೆ ಸೂಚನೆಗಳನ್ನು ಪಡೆದು ದರ ಪರಿಷ್ಕರಣೆ ಮಾಡಲಾಗಿದೆ.

6. ಈಗಿನ ಯಶಸ್ವಿನಿ ಯೋಜನೆಯಲ್ಲಿ 2128 ಚಿಕಿತ್ಸೆಗಳನ್ನು ಅಳವಡಿಸಿಕೊಂಡಿದ್ದು ಪ್ರಸ್ತುತ ಇರುವ ಚಿಕಿತ್ಸೆಗಳ ಪೈಕಿ 6 outdated ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಕೈಬಿಡಲಾಗಿದೆ. ಅದೇ ರೀತಿ ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ಪ್ರವರ್ಧಮಾನಕ್ಕೆ ಬಂದಿರುವ ಚಿಕಿತ್ಸೆಗಳ ಪೈಕಿ ಸಹಕಾರಿಗಳಿಗೆ / ರೈತಾಪಿ ವರ್ಗಕ್ಕೆ ಅಗತ್ಯವಾದ Interventional Radiology, CTVS, ಮಾನಸಿಕ ಕಾಯಿಲೆಗಳು ಮತ್ತು ಕ್ಯಾನ್ಸ‌ರ್ ಕಾಯಿಲೆಗಳು ಮುಂತಾದ ವಿಭಾಗಗಳ ಒಟ್ಟು 69 ಹೊಸ ಚಿಕಿತ್ಸೆಗಳನ್ನು ತಜ್ಞರ ಸಲಹೆಯಂತೆ ಸೇರಿಸಲಾಗಿದೆ. ಇದರಿಂದಾಗಿ ಒಟ್ಟು 2191 ಚಿಕಿತ್ಸೆಗಳನ್ನು ಅಂತಿಮಗೊಳಿಸಿದಂತಾಗಿದೆ.

7. ದರ ಪರಿಷ್ಕರಣೆಯಾದರೆ ಪ್ರಮುಖ ಆಸ್ಪತ್ರೆಗಳು ಯೋಜನೆಯಲ್ಲಿ ಸೇರಿಕೊಳ್ಳುವುದರಿಂದ ಹೆಚ್ಚು ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಳ್ಳಲು ಮುಂದೆ ಬರಲಿದ್ದು ಇದರಿಂದ ಹೆಚ್ಚು ವಂತಿಗೆ ಸಂಗ್ರಹವಾಗುವ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಅವಲಂಬನೆ ಕಡಿಮೆ ಆಗುವ ಸಾಧ್ಯತೆ ಇದೆ.

8. ಯಶಸ್ವಿನಿ ಯೋಜನೆಯಡಿ 2024-25ರಲ್ಲಿ 68,159 ಫಲಾನುಭವಿಗಳು ರೂ.117.79 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದು ಸರಾಸರಿ ಒಂದು ಚಿಕಿತ್ಸಾ ವೆಚ್ಚ ರೂ.17,000 ಆಗಿದೆ. ಮುಂದಿನ ಸಾಲಿನಲ್ಲಿ ಸುಮಾರು 75,000 ಫಲಾನುಭವಿಗಳು ಚಿಕಿತ್ಸೆ ಪಡೆಯುವ ಅಂದಾಜಿದ್ದು ಅದರಂತೆ ಸುಮಾರು ರೂ.127.50 ಕೋಟಿ ವೆಚ್ಚ ಆಗಲಿದೆ.

9. ಆರೋಗ್ಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉನ್ನತ ಮಟ್ಟದ ಚಿಕಿತ್ಸೆಗಳನ್ನು ಹೊಸದಾಗಿ ಸೇರಿಸುವುದರಿಂದ ಸರಾಸರಿ ಚಿಕಿತ್ಸಾ ದರದಲ್ಲಿ 50% ರಿಂದ 55% ರ ವರವಿಗೆ ದರ ಹೆಚ್ಚಳವಾಗುವ ಅಂದಾಜಿದ್ದು ಅದರಂತೆ ಸುಮಾರು ರೂ.70.00 ಕೋಟಿ ರವರೆಗೆ ದರ ಹೆಚ್ಚಳವಾಗುವ ಅಂದಾಜು ಇದ್ದು. ಇದರಿಂದ ರೂ.62.50 ಕೋಟಿ ಯಿಂದ 68.75 ಕೋಟಿ ಹೆಚ್ಚಿನ ಹೊರೆ ಬೀಳುವ ಸಂಭವವಿರುತ್ತದೆ.

10. ಈ ಹೆಚ್ಚಳವಾಗುವ ಸುಮಾರು ರೂ.70.00 ಕೋಟಿ ಅಧಿಕ ಆರ್ಥಿಕ ಹೊರೆಯನ್ನು ಸರ್ಕಾರದಿಂದ ರೂ.40.00 ಕೋಟಿ ಹೆಚ್ಚುವರಿ ಅನುದಾನವನ್ನು ಒದಗಿಸುವ ಮೂಲಕ ಮತ್ತು ಸದಸ್ಯರು ಪಾವತಿಸುವ ವಂತಿಗೆ ಮೊತ್ತದಿಂದ ರೂ.30.00 ಕೋಟಿಯನ್ನು ಭರಿಸುವ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್ವಿನಿ ಟ್ರಸ್ಟ್

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!