Course cancellation order-2025: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ PGDHPE ಕೋರ್ಸ್ ಮತ್ತು CPHN ಕೋರ್ಸ್‌ನ್ನು ರದ್ದುಪಡಿಸುವ ಕುರಿತು.
Post Graduate Diploma in Health Promotion Education & Certificate in Public Health Nursing Order to cancel courses
ಮೇಲೆ ಓದಲಾದ ಕಡತದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಪಿ.ಜಿ.ಡಿ.ಹೆಚ್.ಪಿ.ಇ. ಕೋರ್ಸ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ತರಬೇತಿ ನೀಡುವ ಒಂದು ವರ್ಷದ ಕೋರ್ಸ್ ಆಗಿದ್ದು, ಪ್ರಸ್ತುತ ಸದರಿ ಕೋರ್ಸ್‌ಗೆ ಸಂಸ್ಥೆಯು ಮಾನ್ಯತೆ ಪಡೆದಿರುವುದಿಲ್ಲ. ಅಲ್ಲದೆ, ಸದರಿ. ಕೋರ್ಸ್‌ಗೆ ಪ್ರಸ್ತುತ 14 ಮಂದಿ ಅಭ್ಯರ್ಥಿಗಳಷ್ಟೇ ನೊಂದಾಯಿಸಲ್ಪಟ್ಟಿದ್ದು, ಸದರಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆಯಲ್ಲಿ NHM ಅಡಿಯಲ್ಲಿ 12 ಮಂದಿ ಸಿಬ್ಬಂದಿಗಳು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪ್ರಸ್ತಾಪಿಸಲಾಗಿದೆ.
ಮುಂದುವರೆದು CPHN (Certificate in Public Health Nursing) ং ಆರೋಗ್ಯ ಸಹಾಯಕರಿಗೆ ತರಬೇತಿ ನೀಡುವ 18 ತಿಂಗಳ ಕೋರ್ಸ್ ಆಗಿದ್ದು, ಪ್ರಸ್ತುತ ಸದರಿ ಕೋರ್ಸ್‌ಗೆ ಸಂಸ್ಥೆಯು ಮಾನ್ಯತೆ ಪಡೆದಿರುವುದಿಲ್ಲ. ಅಲ್ಲದೆ, ಸದರಿ ಕೋರ್ಸ್‌ಗೆ ಪ್ರಸ್ತುತ 30 ಅಭ್ಯರ್ಥಿಗಳು ನೊಂದಾಯಿಸಲ್ಪಟ್ಟಿದ್ದು, ಸದರಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆಯಲ್ಲಿ NHM ಅಡಿಯಲ್ಲಿ 11 ಮಂದಿ ಸಿಬ್ಬಂದಿಗಳು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪ್ರಸ್ತಾಪಿಸಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿನ ಈ ಮೇಲಿನ ಪಿ.ಜಿ.ಡಿ.ಹೆಚ್.ಪಿ.ಇ. ಮತ್ತು ಸಿ.ಪಿ.ಹೆಚ್.ಎನ್. ಕೋರ್ಸ್‌ಗಳಿಗೆ ಮಾನ್ಯತೆ ಪಡೆದಿಲ್ಲದಿರುವುದರಿಂದ ಹಾಗೂ ಪ್ರಸ್ತುತ ಕಡಿಮೆ ಅಭ್ಯರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಮತ್ತು ಬೇರೆ ಸಂಸ್ಥೆಗಳಲ್ಲಿ ಸದರಿ ಕೋರ್ಸ್ ಅನ್ನು ಮಾಡಲು ಅವಕಾಶಗಳಿದ್ದು SIHFW ನಲ್ಲಿನ ಸದರಿ 02 ಕೋರ್ಸ್‌ಗಳನ್ನು ರದ್ದುಗೊಳಿಸುವುದರಿಂದ ಇಲಾಖೆಗೆ ಮಾನವ ಸಂಪನ್ಮೂಲದ ಉಳಿತಾಯವಾಗುವುದನ್ನು ಸರ್ಕಾರವು ಮನಗಂಡು SIHFW ಪಿ.ಜಿ.ಡಿ.ಹೆಚ್. ಪಿ.ಇ. ಮತ್ತು ಸಿ.ಪಿ.ಹೆಚ್.ಎನ್. ಕೋರ್ಸ್‌ಗಳನ್ನು ರದ್ದುಪಡಿಸಲು ಮತ್ತು ಪ್ರಸ್ತುತ ತರಬೇತಿಯಲ್ಲಿರುವ ನೌಕರರನ್ನು ಇಲಾಖಾ ಕರ್ತವ್ಯಕ್ಕೆ ಮರಳಿ ಪಡೆಯಲು ತೀರ್ಮಾನಿಸಿದ್ದು, ಅದರಂತೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-
ಸರ್ಕಾರದ ಆದೇಶ ಸಂಖ್ಯೆ : ಆಕುಕ 128 ಹೆಚ್‌ಎಸ್‌ಎಂ 2025,ಬೆಂಗಳೂರು, ದಿನಾಂಕ: 28-04-2025
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ PGDHPE ಕೋರ್ಸ್ ಮತ್ತು CPHN ಕೋರ್ಸ್‌ಗಳನ್ನು ರದ್ದುಗೊಳಿಸಿ, ಪ್ರಸ್ತುತ ತರಬೇತಿಯಲ್ಲಿರುವ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಹಿರಿಯ ಆರೋಗ್ಯ ಸಹಾಯಕ ವೃಂದದ ನೌಕರರನ್ನು ಇಲಾಖಾ ಕರ್ತವ್ಯಕ್ಕೆ ಹಿಂಪಡೆದು ಕಾರ್ಯವರದಿ ಮಾಡಿಸಿಕೊಳ್ಳಲು ಆದೇಶಿಸಿದೆ.