ಇಂಜಿನಿಯರಿಂಗ್ ಪದವೀಧರರಿಗೆ ಸರ್ಕಾರಿ ಉದ್ಯೋಗಾವಕಾಶಗಳ ಬಾಗಿಲು ತೆರೆದಿದೆ. ಇತ್ತ ಕರ್ನಾಟಕ ಲೋಕಸೇವಾ ಆಯೋಗವು ಸಹಾಯಕ ಕಾರ್ಯಪಾಲಕ ಇಂಜಿನಿಯರ್ » ಕೆಪಿಎಸ್‌ಸಿ ಗಳ ನೇಮಕಕ್ಕೆ ಅಧಿಸೂಚನೆ ಅಧಿಸೂಚನೆ ಹೊರಡಿಸಿದೆ. ಅತ್ತ, ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೂಡ. ಭಾರತೀಯ ಇಂಜಿನಿಯರಿಂಗ್ ಸೇವೆ (ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್-ಐಇಎಸ್) ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಎರಡೂ ಹುದ್ದೆಗಳು ಗ್ರೂಪ್ ಎ ವೃಂದಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳ (ಗ್ರೇಡ್-1) ಕೆಪಿಎಸ್ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ: ಉಳಿಕೆ ಮೂಲ ವೃಂದ-30 ಹಾಗೂ ಹೈದರಾಬಾದ್ ಕರ್ನಾಟಕ-12 ಸೇರಿ ಒಟ್ಟು 42 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಅ.3ರಿಂದ ಅವಕಾಶವಿರಲಿದ್ದು, ನ.4 ಕೊನೆಯ ದಿನವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ದಿನವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಕೆಪಿಎಸ್ಸಿ ಹೇಳಿದೆ. ಸಿವಿಲ್ ಇಂಜಿನಿಯರಿಂಗ್ ಹಾಗೂ ಸಂಬಂಧಿಸಿದ ಪದವಿ ಹಾಗೂ ಡಿಪ್ಲೊಮಾಗಳನ್ನು ಪೂರೈಸಿದವರು ಕೆಪಿಎಸ್‌ಸಿ ಉದ್ಯೋಗ ತಂತ್ರಾಂಶದ ಮೂಲಕ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ.
ವಿದ್ಯಾರ್ಹತೆ ಏನು?
ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ/ ಕನ್‌ಸ್ಟ್ರಕ್ಟನ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್/ ಬಿಲ್ಡಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ/ ಸಿವಿಲ್ ಇಂಜಿನಿಯರಿಂಗ್ ಆ್ಯಂಡ್ ಪ್ಲಾನಿಂಗ್/ ಸಿವಿಲ್ ಟೆಕ್ನಾಲಜಿ/ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ/ ಕನ್‌ಸ್ಟ್ರಕ್ಷನ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ ಮೆಂಟ್/ ಜಿಯೋಮೆಕಾನಿಕ್ಸ್ ಆ್ಯಂಡ್ ಸ್ಟ್ರಕ್ಚರ್ಸ್/ ಸ್ಟಕ್ಟರಲ್ ಆ್ಯಂಡ್ ಫೌಂಡೇಷನಲ್ ಇಂಜಿನಿಯರಿಂಗ್/ ಸ್ಟಕ್ಟರಲ್ ಇಂಜಿನಿಯರಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆಯಿಂದ ಡಿಪ್ಲೊಮಾ ಪ್ರಮಾಣಪತ್ರ ಪಡೆದವರು ಅರ್ಜಿ ಸಲ್ಲಿಸಬಹುದು.
ಮುಖ್ಯ ಸೂಚನೆ:
ಲೋಪ- ದೋಷಗಳಿದ್ದಲ್ಲಿ, ಅರ್ಜಿ ಸಲ್ಲಿಕೆ ಕೊನೆಯ ದಿನದವರೆಗೂ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ತದನಂತರ ಸಲ್ಲಿಸಿದ ಯಾವುದೇ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಯೋಮಿತಿ, ವಿದ್ಯಾರ್ಹತೆ ಹಾಗೂ ಮೀಸಲಾತಿ ಕೋರಿಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕದವರೆಗೆ ಚಾಲ್ತಿಯಲ್ಲಿರುವಂತೆ, ಅಧಿಸೂಚನೆಯಲ್ಲಿ ನೀಡಲಾಗಿರುವ ನಮೂನೆಯಲ್ಲೇ ಕಡ್ಡಾಯವಾಗಿ ಪಡೆದಿಟ್ಟುಕೊಳ್ಳುವುದು ಹಾಗೂ ಅರ್ಜಿ ಜತೆಗೆ ಅಪ್‌ಲೋಡ್ ಮಾಡತಕ್ಕದ್ದು. ದಾಖಲಾತಿ ಪರಿಶೀಲನೆ ವೇಳೆ ಇವೇ ಪ್ರಮಾಣಪತ್ರಗಳನ್ನು ಹಾಜರುಪಡಿಸತಕ್ಕದ್ದು. ಯಾವುದೇ ಹಂತದ ಪರಿಶೀಲನೆ ವೇಳೆ ನ್ಯೂನ್ಯತೆಗಳು ಕಂಡುಬಂದಲ್ಲಿ ಅರ್ಜಿ ತಿರಸ್ಕೃತವಾಗಲಿದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಹುದ್ದೆಗಳ ಸಂಖ್ಯೆಯ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಕನ್ನಡ, ಇಂಗ್ಲಿಷ್ ಭಾಷಾ ಪರೀಕ್ಷೆಗಳು ಅರ್ಹತಾದಾಯಕವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ 1 ಹಾಗೂ ತಾಂತ್ರಿಕ ವಿಷಯದ ನಾಲ್ಕು ಪತ್ರಿಕೆಗಳು ಸೇರಿ ಐದು ಕಡ್ಡಾಯ ಪತ್ರಿಕೆಗಳಿರಲಿವೆ. ಪ್ರತಿ ಪತ್ರಿಕೆಗೆ 100 ಅಂಕಗಳನ್ನು ನಿಗದಿ ಮಾಡಲಾಗಿದೆ. ಸಂದರ್ಶನಕ್ಕೆ ಗರಿಷ್ಠ 25 ಅಂಕಗಳಿರಲಿವೆ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಹಿಂದುಳಿದ ವರ್ಗಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50, ಪರಿಶಿಷ್ಟ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ.
ವಯೋಮಿತಿ: ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35, ಹಿಂದುಳಿದ ವರ್ಗದವರಿಗೆ 38ಹಾಗೂ ಪ್ರವರ್ಗ-1 ಹಾಗೂ ಪರಿಶಿಷ್ಟರಿಗೆ ಗರಿಷ್ಠ ವಯೋಮಿತಿ 40 ವರ್ಷ ಎಂದು ನಿಗದಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.kpsc.kar.nic.in ಸಂಪರ್ಕಿಸಿ
_________________________
This job is use full
Well
Job is easy to gain or not
Study well