Family planning: ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳನ್ವಯ ವಿಶೇಷ ವೇತನ ಬಡ್ತಿ ಮಂಜೂರಾತಿ ಕುರಿತು ಸ್ಪಷ್ಟೀಕರಣ-2025

Family planning: ಕುಟುಂಬ ಯೋಜನಾ ಕ್ರಮಗಳನ್ನು ಅನುಸರಿಸುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳನ್ವಯ ವಿಶೇಷ ವೇತನ ಬಡಿ ಮಂಜೂರಾತಿ ಕುರಿತು ಸ್ಪಷ್ಟೀಕರಣ

Family planning: 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಜಾರಿಗೆ ಬಂದಿರುವ ಪರಿಷ್ಕೃತ ರಾಜ್ಯ ವೇತನ ಶ್ರೇಣಿಗಳ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ.

ಈ ವೇತನ ಶ್ರೇಣಿಗಳಲ್ಲಿ ವೇತನ ನಿಗಧಿಕರಣವನ್ನು ದಿನಾಂಕ:1.7.2022 ರಿಂದ ಮಾಡಲು ಅವಕಾಶವಿರುವುದಾಗಿದೆ. ಅಲ್ಲದೇ ದಿನಾಂಕ:1.7.2022 ರಿಂದ 31.7.2024 ರವರೆಗಿನ ಅವಧಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನ ನಿಗದಿಯಿಂದಾಗಿ ಅಥವಾ ಪುನರ್‌ನಿಗಧಿಯಿಂದಾಗಿ ವೇತನ ಮತ್ತು ಭತ್ಯೆಗಳನ್ನು ಮತ್ತು ನಿವೃತ್ತಿ ವೇತನದ ಹೆಚ್ಚಳಕ್ಕೆ ಯಾವುದೇ ಸರ್ಕಾರಿ ನೌಕರನು ಅರ್ಹನಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ದಿನಾಂಕ:1.7.2022 ರಿಂದ 31.7.2024ರ ಅವಧಿಯಲ್ಲಿ ಮಿತ ಕುಟುಂಬ ಯೋಜನಾ ಕ್ರಮವನ್ನು ಅಳವಡಿಸಿಕೊಂಡ ಪ್ರಕರಣಗಳಲ್ಲಿ ವೈಯಕ್ತಿಕ ವೇತನ ರೂಪದಲ್ಲಿ ನೀಡಲಾಗುವ ವಿಶೇಷ ವೇತನ ಬಡ್ತಿಯನ್ನು 2024ರ ರಾಜ್ಯ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಲಭ್ಯವಾಗುವ ವಾರ್ಷಿಕ ವೇತನದ ಬಡ್ತಿಯ ದರದಲ್ಲಿ ದಿನಾಂಕ:1.7.2022 ರಿಂದ ಜಾರಿಗೆ ಬರುವಂತೆ ಕಾಲ್ಪನಿಕವಾಗಿ ನೀಡತಕ್ಕದಾಗಿರುತ್ತದೆ.

ದಿನಾಂಕ:1.7.2022 ರಿಂದ 31.7.2024 ರವರೆಗಿನ ಅವಧಿಗೆ ಪರಿಷ್ಕೃತ ಶ್ರೇಣಿಯಲ್ಲಿನ ವಿಶೇಷ ವೇತನ ಬಡ್ತಿ ಮಂಜೂರಾತಿಯಿಂದ ಉಂಟಾದ ಆರ್ಥಿಕ ಹೆಚ್ಚಳಕ್ಕೆ ಸರ್ಕಾರಿ ನೌಕರರು ಅರ್ಹರಾಗಿರುವುದಿಲ್ಲ. ಈ ಅವಧಿಯಲ್ಲಿ ಪರಿಷ್ಕರಣೆಯ ಪೂರ್ವದ ವೇತನ ಶ್ರೇಣಿಯಲ್ಲಿ ನಿಗದಿಪಡಿಸಿದ ವೇತನ ಬಡ್ತಿಯಂತೆ ಆರ್ಥಿಕ ಲಾಭವನ್ನು ಪಡೆಯಲು ಸರ್ಕಾರಿ ನೌಕರರು ಅರ್ಹರಿರುತ್ತಾರೆ.

ಆದರೆ, ಈ ಯೋಜನೆಯಲ್ಲಿ ಮಂಜೂರು ಮಾಡುವ ವೈಯಕ್ತಿಕ ವೇತನ ಬಡ್ತಿ ದರದ ಆರ್ಥಿಕ ಸೌಲಭ್ಯವು ದಿನಾಂಕ:1.8.2024 ರಿಂದ ಲಭ್ಯವಾಗುತ್ತದೆ. ಉಳಿದಂತೆ ಈ ಸೌಲಭ್ಯ ಪಡೆಯುವ ನೌಕರರು ದಿನಾಂಕ:1.10.1985ರ ಸರ್ಕಾರಿ ಆದೇಶ ಸಂಖ್ಯೆ: ಆಇ 27 ಎಸ್‌ಆರ್‌ಎಸ್ 1985 ಹಾಗೂ ಈ ಸಂಬಂಧ ಕಾಲಕಾಲಕ್ಕೆ ಹೊರಡಿಸಿರುವ ಆದೇಶ/ಸುತ್ತೋಲೆ/ಸೇರ್ಪಡೆ ಆದೇಶ ಮುಂತಾದವುಗಳಲ್ಲಿ ನಿಗಧಿಪಡಿಸಿರುವ ಎಲ್ಲಾ ಷರತ್ತು ಮಾರ್ಗಸೂಚಿಗಳನ್ನು ಪೂರೈಸಿರಬೇಕೆಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!