Teacher Training-2025 ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English Language Enrichment Course (ELEC) ಜಿಲ್ಲಾ ಹಂತದ ತರಬೇತಿ ಆಯೋಜನೆ

Teacher Training-2025 ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English Language Enrichment Course (ELEC) ಜಿಲ್ಲಾ ಹಂತದ ತರಬೇತಿ ಆಯೋಜನೆ

 

 

 

Teacher Training-2025: ಮೇಲಿನ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ English Language Enrichment Course (ELEC) ಆಯೋಜಿಸಲು ಅಗತ್ಯವಿರುವ 102 Mentors (MRP)ಗಳಿಗೆ ರಾಜ್ಯದ 34 ಜಿಲ್ಲೆಗಳ ಡಯಟ್ ನ ELEC ನೋಡಲ್ ಅಧಿಕಾರಿಗಳು (01), ಪ್ರಾಥಮಿಕ ಶಾಲಾಶಿಕ್ಷಕರು (01) ಹಾಗೂ ಸಿ.ಆ‌ರ್.ಪಿ (01) ಒಟ್ಟು ಪ್ರತಿ ಜಿಲ್ಲೆಯಿಂದ ಮೂರು (03) ಸಂಪನ್ಮೂಲ ವ್ಯಕ್ತಿಗಳಿಗೆ ( week-1) ತರಬೇತಿಯನ್ನು ದಿನಾಂಕ: 03-02-2025 ಮತ್ತು 07-02-2025 ರವರೆಗೆ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಬೆಂಗಳೂರು 05 ದಿನಗಳ ಸನಿವಾಸ ತರಬೇತಿಯನ್ನು ಉಲ್ಲೇಖ(04)ರಂತೆ ಆಯೋಜಿಸಲಾಗಿತ್ತು.

 

 

 

ಉಲ್ಲೇಖ(5) ರ ಪತ್ರದಂತೆ ದಿ-12-03-2025ರಿಂದ ಪ್ರತಿ ವಾರಕ್ಕೊಮ್ಮೆ ಬುಧವಾರ ಸಂಜೆ 6.30 ರಿಂದ 8.00 ಗಂಟೆಯವರೆಗೆ online ವೆಬಿನಾರ್‌ತರಗತಿಗಳಲ್ಲಿ ಭಾಗವಹಿಸಿ, 07 ವಾರಗಳ online ವೆಬಿನಾರ್ ತರಬೇತಿಯನ್ನು 2-03-04-2025 ರಂದು ಪೂರ್ಣಗೊಳಿಸಿರುತ್ತಾರೆ.

 

 

 

ಸದರಿ 102 Mentors ಗಳಿಗೆ ದಿನಾಂಕ:07-04-2025 ರಿಂದ ದಿನಾಂಕ: 11-04-2025ರ ವರೆಗೆ, DSERT ಕಚೇರಿ ಬೆಂಗಳೂರು ಇಲ್ಲಿ week-9 ಮುಖಾಮುಖಿ (F2F) ಸನಿವಾಸ ತರಬೇತಿಯನ್ನು ಆಯೋಜಿಸಲಾಗಿತ್ತು. Tribyte ಸಂಸ್ಥೆಯವರಿಂದ ಜಿಲ್ಲಾ ಹಂತದ ತರಬೇತಿಗಳಿಗೆ Technology support ನೀಡುವ ಕುರಿತು ತರಬೇತಿ ನೀಡಲಾಯಿತು.

 

ಮುಂದುವರೆದು ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಬೆಂಗಳೂರು ರವರ Mentors ತರಬೇತಿಯನ್ವಯ ಆಯಾ ಜಿಲ್ಲೆಗಳ 03 ಮಾರ್ಗದರ್ಶಕರ(Mentors) ಸಹಯೋಗದೊಂದಿಗೆ ಮುಖಾಮುಖಿ ತರಬೇತಿ ಮತ್ತು ವೆಬಿನಾರ್ ಗಳನ್ನು ಆಯೋಜಿಸುವುದು.

 

Week – 1 ಮತ್ತು Week 6, ಮುಖಾಮುಖಿ (F2F) ತರಬೇತಿಯ ಘಟಕ ವೆಚ್ಚ ರೂ.290 ಹಾಗೂ Technology Support ಗಾಗಿ ರೂ.7000/-ಗಳು ಆಗಿದ್ದು ಪ್ರತಿ ಜಿಲ್ಲೆಗೆ ಶಿಕ್ಷಕರ ಸಂಖ್ಯೆಗನುಗುಣವಾಗಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಅನುದಾನ ಬಿಡುಗಡೆಯ ಅನುಬಂಧ – 1ನ್ನು ಮತ್ತು ಜಿಲ್ಲಾ ಹಂತದ ತರಬೇತಿಯ ವೇಳಾಪಟ್ಟಿಯನ್ನು ಈ ಸುತ್ತೋಲೆಯೊಂದಿಗೆ ಅಡಕಗೊಳಿಸಿದೆ.

 

ಶಿಬಿರಾರ್ಥಿಗಳಿಗೆ ತರಬೇತಿಯನ್ನು ಆಯೋಜಿಸುವಾಗ ಅನುಸರಿಸಬೇಕಾದ ಮಾದರಿ ಬ್ರೇಕ್ಅಪ್ ಈ ಕೆಳಕಂಡಂತಿದೆ.

 

 

ವಿಶೇಷ ಸೂಚನೆ : Technology Support ಗಾಗಿ ಅನುಮೋದಿತ ಕ್ರಿಯಾಯೋಜನೆಯಂತೆ ಪ್ರತಿ ಜಿಲ್ಲೆಗೆ ಇಂಟರ್‌ನೆಟ್ ವೆಚ್ಚ, ಇಂಟರ್‌ನೆಟ್ ಗೆ ಅಗತ್ಯ ಸಾಧನಗಳ ಬಾಡಿಗೆ ವೆಚ್ಚ, ಸ್ಮಾರ್ಟ್ ಟಿ.ವಿ, ಯು.ಪಿ.ಎಸ್, ಜನರೇಟರ್ ಖರ್ಚು ವೆಚ್ಚಕ್ಕಾಗಿ ರೂ.7000/-ಗಳನ್ನು 09 ವಾರಗಳ ತರಬೇತಿಗಾಗಿ ಬಿಡುಗಡೆಗೊಳಿಸಲಾಗಿದೆ.

 

ತರಬೇತಿಯ ವಿವಿಧ ಹಂತಗಳಲ್ಲಿ ಅನುಸರಿಸಬೇಕಾದ ಕ್ರಮಗಳು.

 

1. ಜಿಲ್ಲಾ ಹಂತದ ಶಿಕ್ಷಕರ Week- 1( ಮುಖಾಮುಖಿ ( F21) ತರಬೇತಿಯನ್ನು ದಿ-09-06-2025 ರಿಂದ 13-06-2025 ರವರೆಗೆ ಆಯೋಜಿಸುವುದು.

 

2. 13:16-06-2025 ರಿಂದ Week-2 online ವೆಬಿನಾ‌ರ್ ಗಳನ್ನು ಪ್ರಾರಂಭಿಸುವುದು.

 

3. 6 ನೇ ವಾರದಲ್ಲಿ ದಿನಾಂಕ: 14-07-2025 ರಿಂದ ದಿನಾಂಕ: 18-07-2025 ರ ವರೆಗೆ ಶಿಕ್ಷಕರ Week-6, ಮುಖಾಮುಖಿ (F2F) ತರಬೇತಿಯನ್ನು ಆಯೋಜಿಸುವುದು.

 

4. ರಾಜ್ಯದ 34 ಜಿಲ್ಲೆಗಳಿಂದ ಒಟ್ಟು 1125 ಶಿಕ್ಷಕರಿಗೆ ತರಬೇತಿಯನ್ನು ಆಯೋಜಿಸುವುದು (ಅನುಮೋದಿತ ಕ್ರಿಯೋಜನೆಯಲ್ಲಿ ಉಲ್ಲೇಖಿಸಿರುವಂತೆ)

 

5. ಪ್ರತಿ ಜಿಲ್ಲೆಯಿಂದ 33 ಶಿಕ್ಷಕರನ್ನು ಹಾಗೂ ಬಳ್ಳಾರಿ ಜಿಲ್ಲೆಯಿಂದ ಹೆಚ್ಚುವರಿಯಾಗಿ 3 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಅದರಂತೆ ತರಬೇತಿಯನ್ನು ಆಯೋಜಿಸಲಾಗುವುದು.

 

6. ಅದೇ ರೀತಿ, 34 ವೆಬಿನಾರ್ ಗುಂಪುಗಳಿದ್ದು. (ದಿನಕ್ಕೆ, 7 ಗುಂಪು ಗಳಂತೆ ಸೋಮವಾರದಿಂದ ಶುಕ್ರವಾರದವರೆಗೆ) ವೆಬಿನಾರ್ ತರಗತಿಗಳನ್ನು ಆಯೋಜಿಸಲಾಗುತ್ತದೆ.

 

7. ಅಜೀಂ ಪ್ರೇಮ್ ಜೀ ವಿಶ್ವ ವಿದ್ಯಾನಿಲಯದ ಅಧ್ಯಾಪಕರುಗಳು ಹಾಗೂ ಡಿ.ಎಸ್.ಇ.ಆರ್.ಟಿ. ಕಛೇರಿಯ ಅಧಿಕಾರಿಗಳಿಂದ ಜಿಲ್ಲಾ ಹಂತದ ತರಬೇತಿಯ ಭೇಟಿ ಮತ್ತು ಅನುಪಾಲನೆ ನಿರ್ವಹಿಸಲಾಗುತ್ತದೆ.

 

8. ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ಶೌಚಾಲಯಗಳ ಶುಚಿತ್ವವನ್ನು ಕಾಪಾಡುವುದು.

 

9. ನಿರೀಕ್ಷಿತ ಎಲ್ಲಾ ಕಾರ್ಯಗಳಿಗೆ ತಗುಲುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವ ಅನುದಾನದಲ್ಲಿ ಬ್ರೇಕ್‌ಅಪ್ ಅನ್ನು ಮಾಡಿಕೊಳ್ಳುವುದು.(ಮಾದರಿ ಬ್ರೇಕ್ ನೀಡಲಾಗಿದೆ)

 

10. ಘಟಕ ವೆಚ್ಚ ರೂ. 290 /- ರಂತೆ ಅಂತರಿಕ ಹೊಂದಾಣಿಕೆ ಮೂಲಕ ಖರ್ಚುವೆಚ್ಚ ಭರಿಸುವುದು.

 

11. ಸದರಿ ಕಾರ್ಯಕ್ರಮದ ಅಡಿಯಲ್ಲಿ ಖರೀದಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವುದು.

 

12. ಶಿಬಿರಾರ್ಥಿಗಳಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ನಿಗದಿತ ಭತ್ಯೆ ಮತ್ತು ಸಂಭಾವನೆ ಮೊತ್ತವನ್ನು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು. ನಗದು ರೂಪದಲ್ಲಿ ಪಾವತಿಸಲು ಅವಕಾಶವಿರುವುದಿಲ್ಲ.

 

13. ರಾಜ್ಯದ ಎಲ್ಲಾ ಜಿಲ್ಲೆಯವರು ತರಬೇತಿಯ ನಂತರ ಉಪಯೋಗಿತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ DSERT ಗೆ ಸಲ್ಲಿಸುವುದು. ಮೂಲ ಓಚರ್ ಗಳನ್ನು ಡಯಟ್ ನಲ್ಲಿ ರಕ್ಷಿಸಿಡುವುದು ಹಾಗೂ ಆಡಿಟ್ ಸಂದರ್ಭದಲ್ಲಿ ಹಾಜರುಪಡಿಸುವಂತೆ ಸಂಬಂಧಿಸಿದ ಡಯಟ್‌ಗಳ ಪ್ರಾಂಶುಪಾಲರು ಕ್ರಮವಹಿಸುವುದು.

 

 

 

CLICK HERE MORE INFORMATION 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!