Khajane-2: ಕಾರ್ಯಚಟುವಟಿಕೆಗಳನ್ನು ಸರಳೀಕೃತಗೊಳಿಸುವ ಹಾಗೂ ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ ಕುರಿತು ಖಜಾನೆ ಇಲಾಖೆಯಿಂದ ನೂತನ ಸುತ್ತೋಲೆ

Khajane-2: ಕಾರ್ಯಚಟುವಟಿಕೆಗಳನ್ನು ಸರಳೀಕೃತಗೊಳಿಸುವ ಹಾಗೂ ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ ಕುರಿತು ಖಜಾನೆ ಇಲಾಖೆಯಿಂದ ನೂತನ ಸುತ್ತೋಲೆ.

 

Khajane-2: ಖಜಾನೆ-2ರಲ್ಲಿನ ಬಿಲ್ಲುಗಳಿಗೆ ಸಂಬಂಧಿಸಿದಂತೆ ಕೆಲವೊಂದು ಕಾರ್ಯಚಟುವಟಿಕೆಗಳನ್ನು ಸರಳೀಕೃತಗೊಳಿಸುವ ಹಾಗೂ ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ ಕುರಿತು.

 

2025-26ನೇ ಆರ್ಥಿಕ ಸಾಲಿನಲ್ಲಿ ಬಿಲ್ಲು ಮಾಡ್ಯೂಲ್‌ಗೆ ಸಂಬಂಧಿಸಿದಂತೆ, ಖಜಾನೆ-2ರಲ್ಲಿನ ಕೆಲವೊಂದು ಪ್ರಸ್ತುತ ಕಾರ್ಯಚಟುವಟಿಕೆಗಳನ್ನು ಸರಳೀಕೃತಗೊಳಿಸಿದ್ದು ಹಾಗೂ ಕೆಲವೊಂದು ಹೊಸ ಕಾರ್ಯಚಟುವಟಿಕೆಗಳನ್ನು ಸೇರ್ಪಡೆ ಮಾಡಿದ್ದು ಅವುಗಳ ಕುರಿತು ಈ ಕೆಳಕಂಡಂತೆ ಮಾಹಿತಿ ಹಾಗೂ ಸೂಚನೆಗಳನ್ನು ನೀಡಲಾಗಿದೆ.

 

1) Khajane-2 ಆನ್‌ಲೈನ್‌ನಲ್ಲಿ ಸಲ್ಲಿಸಿದ ಬಿಲ್ಲುಗಳ ಸಂಬಂಧ ಭೌತಿಕ ಬಿಲ್ಲಗಳನ್ನು ಸಲ್ಲಿಸುವ ಕಾಲಾವಧಿಯನ್ನು ಪರಿಷ್ಕರಣೆ:

ಪ್ರಸ್ತುತ, ಖಜಾನೆ-2 ಆನ್‌ಲೈನ್‌ನಲ್ಲಿ ಸಲ್ಲಿಸಿದ ಬಿಲ್ಲುಗಳ ಸಂಬಂಧ, ಭೌತಿಕ ಬಿಲ್ಲುಗಳನ್ನು ಸಂಬಂಧಿಸಿದ ಖಜಾನೆಗಳಿಗೆ ಸಲ್ಲಿಸುವ ಕಾಲಾವಧಿಯನ್ನು, ಆನ್‌ಲೈನ್‌ನಲ್ಲಿ ಬಿಲ್ಲುಗಳನ್ನು ಸಲ್ಲಿಸಿದ 7 ದಿನಗಳೆಂದು (ಕ್ಯಾಲೆಂಡರ್ ದಿನಗಳ) ನಿಗದಿಪಡಿಸಲಾಗಿದೆ. ಈ ಮಧ್ಯೆ ಸಾರ್ವಜನಿಕ ರಜೆಗಳು ಬಂದಲ್ಲಿ ಕಾಲಾವಧಿ ಕಡಿತವಾಗುವುದರಿಂದ ದಿನಾಂಕ 01.06.2025 ರಿಂದ, ಭೌತಿಕ ಬಿಲ್ಲಗಳನ್ನು ಸಲ್ಲಿಸುವ ಕಾಲಾವಧಿಯನ್ನು, ಕ್ಯಾಲೆಂಡರ್ 7 ದಿನಗಳ ಬದಲಾಗಿ, ಆನ್‌ಲೈನ್‌ನಲ್ಲಿ ಬಿಲ್ಲುಗಳನ್ನು ಸಲ್ಲಿಸಿದ 5 ಕೆಲಸದ ದಿನಗಳಿಗೆ (5 Working Days) ಪರಿಷ್ಕರಿಸಲಾಗಿದೆ.

2) ಖಜಾನೆ-2 ರಲ್ಲಿ ಆಕ್ಷೇಪಿತ ಬಿಲ್ಲು ಗಳನ್ನು ನಿರ್ವಹಿಸುವ ಕಾರ್ಯವಿಧಾನದ ಸರಳೀಕರಣ:

ಪ್ರಸ್ತುತ ಖಜಾನೆಗಳಲ್ಲಿ, ಬಿಲ್ಲುಗಳು ನಿಯಮಾನುಸಾರ ಅಕ್ಷೇಪಿತವಾದಾಗ. ಸದರಿ ಆಕ್ಷೇಪಿತ ಬಿಲ್ಲುಗಳನ್ನು ಫ್ರಂಟ್ ಆಫೀಸಿನ ಮುಖಾಂತರ ಸಂಬಂಧಿಸಿದ ಡಿಡಿಓಗಳಿಗೆ ಹಿಂದಿರುಗಿಸಲಾಗುತ್ತದೆ. ಸದರಿ ಹಿಂದಿರುಗಿಸಿದ ಆಕ್ಷೇಪಿತ ಬಿಲ್ಲುಗಳು ಡಿಡಿಓರವರ ಕಾರ್ಯಪಟ್ಟಿಯಲ್ಲಿ (ಆಕ್ಷೇಪಿತ ಬಿಲ್ಲುಗಳ ಕಾರ್ಯಪಟ್ಟಿ) ಲಭ್ಯವಾಗಲಿದ್ದು, ಡಿಡಿಓರವರು ಅವಶ್ಯಕತೆಯಿದ್ದಲ್ಲಿ ಅಕ್ಷೇಪಣೆಗಳನ್ನು ಸರಿಪಡಿಸಿ ಹೊಸದಾಗಿ ಬಿಲ್ಲುಗಳನ್ನು ಸೃಜಿಸಿ ಪುನಃ ಸಲ್ಲಿಸಬೇಕಾಗಿರುತ್ತದೆ. ಆಕ್ಷೇಪಿತ ಬಿಲ್ಲುಗಳನ್ನು ಸರಿಪಡಿಸಿ ಪುನಃ ಸಲ್ಲಿಸುವ ಕಾರ್ಯವಿಧಾನವನ್ನು ಸರಳೀಕೃತಗೊಳಿಸುವ ಉದ್ದೇಶದಿಂದ ನೂತನ ಕಾರ್ಯವಿಧಾನವೊಂದನ್ನು ಖಜಾನೆ 2ರಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

1) ಖಜಾನೆಗಳಿಂದ ಆಕ್ಷೇಪಿತ ಬಿಲ್ಲುಗಳಿಗೆ ಸಂಬಂಧಿಸಿದಂತೆ ಖಜಾನೆ-2ರಲ್ಲಿ ಡಿಡಿಓರವರಿಗೆ 1) ತ್ಯಜಿಸು (DISCARD) ii) ಪುನರ್ನಿಮಿಸು (RECREATE) ಎರಡು ಆಯ್ಕೆಗಳು ಲಭ್ಯವಾಗಲಿವೆ.

2) ಆಕ್ಷೇಪಿತ ಬಿಲ್ಲನು ಸರಿಪಡಿಸಿ ಮರುಸಲ್ಲಿಸುವ ಉದ್ದೇಶವಿಲ್ಲದಿದ್ದಲ್ಲಿ, ಡಿಡಿಒರವರು ಮೊದಲ ಆಯ್ಕೆಯನ್ನು(ತ್ಯಜಿಸು) ಆಯ್ಕೆಮಾಡಿಕೊಳ್ಳಬೇಕಾಗುತ್ತದೆ ಆಗ ಸದರಿ ಆಕ್ಷೇಪಿತ ಬಿಲ್ಲು ನಿಷ್ಕ್ರಿಯಗೊಳ್ಳುತ್ತದೆ.

3) ಆಕ್ಷೇಪಿತ ಬಿಲ್ಲನ್ನು ಸರಿಪಡಿಸಿ ಪುನಃ ಸಲ್ಲಿಸ ಬಯಸಿದಲ್ಲಿ, ಡಿಡಿಒರವರು ಎರಡನೆಯ ಆಯ್ಕೆಯನ್ನು (ಪುನರ್ನಿಮಿಸು) ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ಪುನರ್ನಿಮಿಸು (RECREATE) ಆಯ್ಕೆಯನ್ನು ಆಯ್ಕೆ ಮಾಡಿಕೊಂಡಾಗ, ಹಿಂದಿರುಗಿಸಿದ ಆಕ್ಷೇಪಿತ ಬಿಲ್ಲುಗಳು ಡಿಡಿಓರವರ ಕಾರ್ಯಪಟ್ಟಿಯಲ್ಲಿ (ಆಕ್ಷೇಪಿತ ಬಿಲ್ಲುಗಳ ಕಾರ್ಯಪಟ್ರಿ) ಲಭ್ಯವಾಗಲಿದ್ದು, ಆಕ್ಷೇಪಣೆಯನ್ನು ಸರಿಪಡಿಸಿ ಹೊಸ ಟೋಕನ್‌ನೊಂದಿಗೆ ಸದರಿ ಬಿಲ್ಲನ್ನು ಖಜಾನೆಗೆ ಮರು ಸಲ್ಲಿಸಬಹುದಾಗಿರುತ್ತದೆ. ಸದರಿ ಬಿಲ್ಲು ಸರಿಪಡಿಸಿದ ಆಕ್ಷೇಪಿತ ಅಂಶಗಳನ್ನು ಒಳಗೊಂಡಿದ್ದು, ಪುನಃ ಹೊಸದಾಗಿ ಬಿಲ್ಲನ್ನು ಸೃಜಿಸುವ ಅವಶ್ಯಕತೆಯಿರುವುದಿಲ್ಲ.

3)ಬಿಲ್ಲುಗಳ ಸಂಚಲನೆಗೆ ಕಾಲಾಮಿತಿ ನಿಗದಿ:

ಖಜಾನೆ-2ರಲ್ಲಿ, ಬಿಲ್ಲುಗಳು, ವಿಷಯ ನಿರ್ವಾಹಕರಿಂದ ಸೃಜಿಸಲ್ಪಟ್ಟು ಪರಿಶೀಲನೆಗಾಗಿ ಪರಿಶೀಲಕರಿಗೆ (ಅಧೀಕ್ಷಕರು) ಕಳುಹಿಸಲ್ಪಡುತ್ತದೆ. ಅಧೀಕ್ಷಕರಿಂದ ಸದರಿ ಬಿಲ್ಲು ಪರಿಶೀಲಿಸಲ್ಪಟ್ಟು ಅನುಮೋದನೆಗಾಗಿ ಅನುಮೋದಕರಿಗೆ (ಡಿಡಿಓ) ಕಳುಹಿಸಲ್ಪಡುತ್ತದೆ. ಪ್ರಸ್ತುತ ಈ ಸಂಚಲನೆಗೆ ಯಾವುದೇ ಕಾಲಮಿತಿಯಿರುವುದಿಲ್ಲ. ಈ ರೀತಿ ಬಿಲ್ಲುಗಳು ಅಧಿಕ ಕಾಲದವರೆಗೆ ಪೈಪ್‌ಲೈನ್‌ನಲ್ಲಿ ಸಂಗ್ರಹವಾಗುತ್ತಿರುವುದರಿಂದ, ಅನುದಾನ ಅಂದಾಜು. ಕೋರಿಕೆ, ಬಳಕೆ, ಬಿಡುಗಡೆ ಇವುಗಳನ್ನು ನಿಖರವಾಗಿ ನಿರ್ವಹಿಸಲು ಆಡಳಿತ ಇಲಾಖೆ/ಸಿಓ/ಸಿಸಿಓರವರಿಗೆ ಸಾಧ್ಯವಾಗುತ್ತಿಲ್ಲ.

ದಿನಾಂಕ:01.06.2025 ರಿಂದ, ಈ ರೀತಿ ಸಂಚಲನೆಗೆ ಪ್ರತಿ ಹಂತದಲ್ಲೂ 15 ದಿನಗಳ ಕಾಲಮಿತಿ ನಿಗದಿಗೊಳಿಸಲಾಗಿದೆ. ಅಂದರೆ ವಿಷಯ ನಿರ್ವಾಹಕರು ಬಿಲ್ಲನ್ನು ಸೃಜಿಸಿದ 15 ದಿನಗಳ ಒಳಗೆ ಪರಿಶೀಲಕರಿಗೆ ಕಳುಹಿಸದಿದ್ದಲ್ಲಿ, ಪರಿಶೀಲಕರು ಬಿಲ್ಲನ್ನು ಸ್ವೀಕರಿಸಿದ 15 ದಿನಗಳ ಒಳಗೆ ಅನುಮೋದಕರಿಗೆ ಕಳುಹಿಸದಿದ್ದಲ್ಲಿ ಹಾಗೂ ಅನುಮೋದಕರು ಬಿಲ್ಲನ್ನು ಸ್ವೀಕರಿಸಿದ 15 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸದರಿ ಬಿಲ್ಲು ನಿಷ್ಕ್ರಿಯವಾಗುತ್ತದೆ (ಮರೆಯಾಗುತ್ತದೆ).

ಮೇಲ್ಕಂಡ ಪರಿಷ್ಕರಣೆಗಳು ದಿನಾಂಕ:01.06.2025 ರಿಂದ ಜಾರಿಗೆ ಬರುತ್ತದೆ. ಈ ಕುರಿತು ಡಿಡಿಓ ರವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸಹ ಸೂಚಿಸಿದೆ.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!