Notes-01 ಆಧುನಿಕೋತ್ತರವಾದ: ಅರ್ಥ ಮತ್ತು ಸ್ವಭಾವ

Notes: ಆಧುನಿಕೋತ್ತರವಾದ:-ಅರ್ಥ ಮತ್ತು ಸ್ವಭಾವ;-

ಆಧುನಿಕೋತ್ತರವಾದವು ವಾದಗ್ರಸ್ತವು ಮತ್ತು ಗೊಂದಲಮಯವಾಗಿದ್ದರಿಂದ ಇದನ್ನು ವ್ಯಾಖ್ಯಾನಿಸುವುದು ಸುಲಭವಲ್ಲ. ಇದು ರಚನಾತ್ಮಕ ವಿಧಾನವಾಗಿದ್ದು, ವಿವೇಚನೆಯನ್ನು ಅವಲಂಬಿಸಿದೆ, ಹಾಗೂ ಆಧುನಿಕ ಸಮಾಜದ ಸ್ಥಾಪನೆ ಇದರ ಮುಖ್ಯ ಗುರಿಯಾಗಿದೆ. ಪಾಶ್ಚಿಮಾತ್ಯ ಪ್ರಾಯೋಗಿಕ ಚಳುವಳಿಗಳಲ್ಲಿ ಮೊದಲ ಬಾರಿಗೆ ಈ ಪದವನ್ನು ಕಲೆ, ಶಿಲ್ಪಶಾಸ್ತ್ರ, ಮತ್ತು ಸಾಂಸ್ಕೃತಿಕ ಬೆಳವಣಿಗೆಯ ರೂಪದಲ್ಲಿ ಬಳಸಲಾಗುತ್ತಿತ್ತು.

ವರ್ಗ ಪ್ರಾಬಲ್ಯ, ಮತ್ತು ಔದ್ಯೋಗಿಕರಣದಿಂದ ಅಸ್ತವ್ಯಸ್ತಗೊಂಡಿದ್ದ ಸಮಾಜಗಳು ಆಧುನಿಕೋತ್ತರವಾದ ಬೆಳವಣಿಗೆಯಿಂದ ಸ್ಥಳಾಂತರಗೊಂಡವು. ವರ್ಗ, ಧರ್ಮ, ಮತ್ತು ರಾಜನಿಷ್ಠೆ ಮುಂತಾದವುಗಳಿಂದ ವ್ಯಕ್ತಿ ವಾದವನ್ನು ಸ್ಥಳಾಂತರಿಸಲಾಯಿತು.

ತಂತ್ರಜ್ಞಾನ, ಸಾಮಾಜಿಕ ಅವಲಂಬನೆ, ನಗರ ಪಟ್ಟಣಗಳಿಗೆ ವಲಸೆ ಹೋಗುವುದು, ಸಾಕ್ಷರತೆ, ಮುಂದುವರೆದ ತಂತ್ರಜ್ಞಾನ, ವಿಜ್ಞಾನ, ನ್ಯಾಯದ ಕಲ್ಪನೆ, ಸರ್ಕಾರದಲ್ಲಿ ನಂಬಿಕೆ, ಮುಂತಾದವುಗಳನ್ನು ಅವಲಂಬಿಸಿದ ಸಮಾಜಗಳಿಗೆ ಆಧುನಿಕೋತ್ತರವಾದ ಅನ್ವಯಿಸುತ್ತದೆ. ಇದು ಜಗತ್ತಿನ ವಿವಿಧ ದೇಶಗಳಿಗೆ ಹಬ್ಬಿರುವುದರಿಂದ ಅದನ್ನು ಸಂಸ್ಕೃತಿ ಎಂದು ಕರೆಯಲಾಗುತ್ತದೆ.

ಯುರೋಪಿನಲ್ಲಿ ಔದ್ಯೋಗಿಕ ಕ್ರಾಂತಿಯು ಮಹತ್ತರ ಬದಲಾವಣೆ ಉಂಟುಮಾಡಿತು ಎಂಬುದಾಗಿ ಹಂಟಿಂಗ್ಟನ್ ಹೇಳಿರುವುದು ಅರ್ಥಪೂರ್ಣವಾಗಿದೆ. ಆಧುನಿಕೋತ್ತರವಾದ ಮಾನವನ ಜೀವನದ ಎಲ್ಲಾ ರಂಗಗಳಲ್ಲಿ ಬದಲಾವಣೆಗಳನ್ನು ತಂದಿದೆ. ಉದಾಹರಣೆಗೆ: ನಾಗರಿಕತೆ, ಔದ್ಯೋಗಿಕರಣ, ಜಾತ್ಯಾತೀತ ತ್ವ ಶಿಕ್ಷಣ, ಮುಂತಾದವುಗಳು ಆಧುನಿಕೋತ್ತರವಾದದ ವಿವಿಧ ಮಜಲುಗಳಾಗಿವೆ.

ಮಾನಸಿಕವಾಗಿ ಆಧುನಿಕೋತ್ತರವಾದ ತನ್ನ ಇತರೆ ಮೌಲ್ಯಗಳಿಂದ ಮತ್ತು ಬಯಕೆಗಳಿಂದ ಬದಲಾವಣೆಗಳನ್ನು ತಂದಿದೆ. ನೈಸರ್ಗಿಕವಾಗಿ ಆಧುನಿಕ ಮಾನವ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಂಬುತ್ತಾನೆ, ಮತ್ತು ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ತನ್ನ ಜೀವನವನ್ನು ಹೊಂದಿಸಿಕೊಳ್ಳುತ್ತಾನೆ. ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಣೆಗಳು ಸಮಾಜವನ್ನು ಆಧುನಿಕತೆಯ ಕಡೆಗೆ ಸ್ಥಳಾಂತರಿಸುವ ಸಾಧನಗಳಾಗಿವೆ.

ಅನಿಶ್ಚಿತವೆಂಬುದು ಯಾವುದೂ ಇಲ್ಲವೆಂದು ಆಧುನಿಕೋತ್ತರ ವಾದಿಗಳು ವಾದಿಸಿದ್ದಾರೆ. ಸತ್ಯವು ಕೇವಲ ಆಡಂಬರವಾಗಿದೆ ಎಂಬುದನ್ನು ತಿರಸ್ಕರಿಸಿ ಉಪದೇಶ, ಚರ್ಚೆ, ಮತ್ತು ಪ್ರಜಾಪ್ರಭುತ್ವಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾಯಿತು. ಸಮಾಪ್ತಿ ವಾದವು ಆಧುನಿಕ ಸಮಾಜದ ಇನ್ನೊಂದು ಲಕ್ಷಣವಾಗಿದೆ. ಆಧುನಿಕತೆಯ ನಂತರ ಅಥವಾ ಆಧುನಿಕೋತ್ತರವಾದದ ರಾಜಕೀಯ ವಿಚಾರಗಳು ಮತ್ತು ಸಿದ್ಧಾಂತಗಳು ಅಪ್ರಸ್ತುತ ವೆಂಬುದು ಮನವರಿಕೆಯಾಗುತ್ತದೆ.

ಜೀನ್ ಫ್ರಾಂಕೋಯಿಸ್ ಲಿಯೋಟಾರ್ಡ್ ತನ್ನ “ಆಧುನಿಕೋತ್ತರವಾದದ ಪರಿಸ್ಥಿತಿ” ಎಂಬ ಗ್ರಂಥದಲ್ಲಿ(1984)ಆಧುನಿಕೋತ್ತರವಾದ ವಿಷಯವು ‘ನಂಬಿಕೆ ಇಲ್ಲದ ಕಥನ’ ಎಂದು ಹೇಳಿದ್ದಾನೆ. ಸಾಂಪ್ರದಾಯಿಕ ಭಿನ್ನಾಭಿಪ್ರಾಯಗಳು ಮತ್ತು ಆದರ್ಶದ ಸಂಪ್ರದಾಯಗಳು ವಿಶ್ವವ್ಯಾಪಿ ಸಿದ್ಧಾಂತಗಳಲ್ಲಿನ ಐತಿಹಾಸಿಕ ಆಧಾರಗಳಾಗಿವೆ. ಬದಲಾವಣೆಗೆ ಔದ್ಯೋಗೀಕರಣ ಮತ್ತು ವರ್ಗ ಗಳು ಕಾರಣವಾಗಿವೆ.

ವ್ಯಾಖ್ಯೆಗಳು;-

ಚಾರ್ಲ್ಸ್ ಅಲ್ವೇರಿ-,

‘ಆಧುನಿಕೋತ್ತರವಾದವು ನಿರ್ಜೀವ ಕಲ್ಪನೆಯಾಗಿದ್ದು ಅದರಲ್ಲಿ ಆಗಿರುವ ಬದಲಾವಣೆಯೇ ಆಧುನಿಕೋತ್ತರವಾದ.”

ಡಾನ್ ಪೂಲನ್, “ಕೇವಲ ಚರ್ಚೆಯನ್ನು ಪ್ರಾರಂಭಿಸುವ ಸಾಧನವೇ ಆಧುನಿಕೋತ್ತರವಾದ.” ಜೀನ್ ಫ್ರಾಂಕೋಯಿಸ್ ಲಿಯೋಟಾರ್ಡ್,

ಆಧುನಿಕೋತ್ತರವಾದವು ಎರೆಡು ಅಭಿಪ್ರಾಯಗಳನ್ನು ಹೊಂದಿದ್ದು ಮೊದಲನೆಯದಾಗಿ,ಆಧುನಿಕೋತ್ತರವಾದವು ಹುಟ್ಟಿಕೊಂಡಿದ್ದು ಆಧುನಿಕತಾವಾದ ದಿಂದ, ಎರಡನೆಯದಾಗಿ, ಆಧುನಿಕೋತ್ತರವಾದವು ಆಧುನಿಕತಾವಾದದ ಕೊನೆಯಾಗಿರದೆ, ಅದರ ಪ್ರಾರಂಭವಾಗಿದೆ, ಮತ್ತು ನಿರಂತರ ಪರಿಸ್ಥಿತಿಯಾಗಿದೆ.”

ಆಧುನಿಕ ಯುಗದಲ್ಲಿ ರಾಜಕೀಯ ಚರ್ಚೆ ವಿಶ್ವದಾದ್ಯಂತ ವಿವಾದಕ್ಕೆ ಆಸ್ಪದ ಕೊಟ್ಟಿತು. ಪ್ರತಿಯೊಂದು ಆದರ್ಶವೂ ತನ್ನದೇ ಆದ ಸತ್ಯವನ್ನು ವ್ಯಕ್ತಿಗಳು ಮತ್ತು ಸಮಾಜಗಳುಹೊಂದಿಕೊಳ್ಳುವಂತೆ ಮಾಡುತ್ತದೆ. ಆದುದರಿಂದಉದಾರವಾದ ಮತ್ತು ಮಾರ್ಕ್ಸ್ ವಾದಗಳು ಉತ್ತಮ ಕಥೆಗಳನ್ನು ತಿಳಿದುಕೊಳ್ಳಲಾಯಿತು.

“ಪೋಸ್ಟ್ ಮಾಡರ್ನ್ ಕಂಡೀಶನ್” ಎಂಬ ಗ್ರಂಥವು ವ್ಯತ್ಯಾಸಗಳ ಮಹತ್ವ, ಸಂವಾದ ಮತ್ತು ಚರ್ಚೆಯ ಮೇಲೆ ಬೆಳಕನ್ನು ಚೆಲ್ಲುತ್ತದೆ. ಇದು ನಿರ್ದಿಷ್ಟ ವ್ಯಕ್ತಿಗಳಿಗೆ, ಗುಂಪುಗಳಿಗೆ, ಮತ್ತು ಸಾಮಾಜಿಕ ರಚನೆಗೆ ಅನ್ವಯವಾಗುತ್ತದೆಯೇ ಹೊರತು, ವಿಶ್ವಕ್ಕೆ ಅಲ್ಲ. ಆಧುನಿಕೋತ್ತರವಾದವು ರಾಜಕೀಯ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಮತ್ತು ಸಹಿಷ್ಣುತೆಯ ತತ್ವವಾಗಿ ಹೊರಹೊಮ್ಮಿತು ಎಂದು ಕೆಲ ರಾಜ್ಯಶಾಸ್ತ್ರಜ್ಞರು ವಾದಿಸಿದ್ದಾರೆ. ಆದುದರಿಂದ ಆಧುನಿಕತೆಯ ಕೊನೆ, ಇತಿಹಾಸದ ಕೊನೆ, ಆದರ್ಶದ ಕೊನೆ, ಮತ್ತು ರಾಜಕಾರಣದ ಕೊನೆ ಎಂಬುದಾಗಿ ಆಧುನಿಕೋತ್ತರವಾದ ಭಾವಿಸುತ್ತದೆ.

ಆಧುನಿಕೋತ್ತರವಾದದ ಲಕ್ಷಣಗಳು;-

1. ಆಧುನಿಕೋತ್ತರವಾದವು ಮಾನವನ ವಿಧಾನದ ಬಗ್ಗೆ ವಿವರಿಸುತ್ತದೆ.

ಮತ್ತು ಅದರಿಂದ ಶಿಕ್ಷಣ ಹಾಗೂ ಸಂಪರ್ಕವನ್ನು ಹೆಚ್ಚಿಸುತ್ತದೆ. ಮಾನವನ ಜೀವನದಲ್ಲಿ ಬದಲಾವಣೆ,ಆರೋಗ್ಯದಲ್ಲಿ ಬದಲಾವಣೆ ಮತ್ತು ವೃತ್ತಿಯಲ್ಲಿ ಬದಲಾವಣೆಗಳು ನಿತ್ಯ ಜೀವನದ ಕರ್ಮಗಳಾಗಿವೆ.

2. ಆಧುನಿಕೋತ್ತರವಾದವು ವ್ಯಕ್ತಿಯ ನಂಬಿಕೆ ಮತ್ತು ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ.

3. ಆರ್ಥಿಕವಾಗಿ ಮಾರುಕಟ್ಟೆ, ಕೃಷಿ, ವಾಣಿಜ್ಯ ಮತ್ತು ಉದ್ದಿಮೆಗಳ ಕ್ಷೇತ್ರಗಳಲ್ಲಿ ಮಾನವನು ಅಗಾಧ ಸಾಧನೆಯನ್ನು ಮಾಡಿದ್ದು ಆಧುನಿಕೋತ್ತರವಾದವು ಬದಲಾವಣೆಯ ಒಂದು ಅದ್ಭುತ ಶಕ್ತಿಯಾಗಿ ಪರಿಣಮಿಸಿದೆ.

4. ಆಧುನಿಕೋತ್ತರವಾದವು ರಾಜಕೀಯ ಸ್ವಭಾವ ಮತ್ತು ವಿಧಾನದಲ್ಲಿ ಬದಲಾವಣೆಗಳನ್ನು ತಂದಿರುವುದರಿಂದ ಹಳೆಯ ವಿಚಾರಗಳನ್ನು ತೆರವು ಮಾಡಲಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಧುನಿಕೋತ್ತರವಾದವು ಸಾಮಾಜಿಕ ಹೊಂದಾಣಿಕೆಯ ಮತ್ತು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!