Order to release school grants to government primary schools for the year 2024-25

Order to release school grants to government primary schools for the year 2024-25

Order to release school grants to government primary schools for the year 2024-25: ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರನ್ವಯ 2024-25ನೇ ಸಾಲಿಗೆ ಶಾಲಾನುದಾನ ಕಾರ್ಯಕ್ರಮದಡಿ 42136 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ರೂ. 11459.00 ಲಕ್ಷಗಳು ಅನುಮೋದನೆಯಾಗಿರುತ್ತದೆ.

ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ ಶಾಲೆಗಳನ್ನು ಹೊರತುಪಡಿಸಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇಕಡಾ 60 ರಷ್ಟು ಶಾಲಾನುದಾನವನ್ನು ಈಗಾಗಲೇ 3 ಹಂತದಲ್ಲಿ ಉಲ್ಲೇಖ (2) ಮತ್ತು (3) ರಂತೆ ಶಾಲಾನುದಾನ ಬಿಡುಗಡೆ ಮಾಡಲಾಗಿದೆ.

ಮುಂದುವರೆದು ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (4 ಹಂತದ) ಶಾಲೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ ZERO ENROLMENT ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ 41392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನಾಲ್ಕನೇ ಕಂತಿನ ಶೇಕಡಾ 40 ರಷ್ಟು ಶಾಲಾನುದಾನವನ್ನು ರೂ. 44,95,50,000/- ಗಳನ್ನು (ನಲವತ್ನಾಲ್ಕು ಕೋಟಿ ತೊಂಬತ್ತೈದು ಲಕ್ಷದ ಐವತ್ತು ಸಾವಿರ ಮಾತ್ರ) 35 ಜಿಲ್ಲೆಗಳಿಗೆ NON SNA – CSS Portal component code F.01.18 ರಡಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧ-1 ರಂತೆ ಬಿಡುಗಡೆ ಮಾಡಲಾಗಿದೆ.

ಸದರಿ ಮೊತ್ತವನ್ನು ಜಿಲ್ಲಾ ಹಂತದಿಂದ ಆಯಾ ಬ್ಲಾಕ್‌ಗಳಿಗೆ (ಅನುಬಂಧ-2 ರಂತೆ) ಹಾಗೂ ಬ್ಲಾಕ್‌ಗಳಿಂದ ಆಯಾ ಶಾಲೆಗಳಿಗೆ ಬಿಡುಗಡೆಗೊಳಿಸಲು ಸೂಚಿಸಿದೆ.

 

ನಿರ್ವಹಣೆ ಮಾಡುವುದು:

ಮೇಲ್ಕಂಡ ಚಟುವಟಿಕೆಗಳಿಗೆ ಮಾತ್ರ ನಿಯಮಾನುಸಾರ ಆಧ್ಯತೆಗನುಗುಣವಾಗಿ ಶಾಲಾನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಲು ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಕ್ರಮ ವಹಿಸುವುದು. ಅನಿವಾರ್ಯ ಕಾರಣಗಳಿಂದ ವೆಚ್ಚ ಮಾಡಲು ಸಾಧ್ಯವಿಲ್ಲದ ಅನುದಾನವನ್ನು ಮಾತ್ರ ರಾಜ್ಯ ಯೋಜನಾ ನಿರ್ದೇಶಕರ ಕಛೇರಿಗೆ ಹಿಂದಿರುಗಿಸುವುದು. ಸಂಬಂಧಿಸಿದ ತಾಲ್ಲೂಕು/ಜಿಲ್ಲೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮೇಲ್ವಿಚಾರಣೆ ಮತ್ತು ಅನುಪಾಲನೆ ಮಾಡಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.

ಷರತ್ತುಗಳು:

1. ಶಾಲಾನುದಾನವನ್ನು ಬಿಡುಗಡೆಗೊಳಿಸಲಾಗಿದ್ದು, ಯಾವ ಮಧ್ಯವರ್ತನೆಗಳಿಗೆ ಬಿಡುಗಡೆ ಮಾಡಲಾಗಿದೆಯೋ ಅದೇ ಮಧವರ್ತನೆಗಳಿಗೆ ಹಂಚಿಕೆ ಮಾಡಲಾದ ಅನುದಾನದ ಮಿತಿಯೊಳಗೆ ವೆಚ್ಚಭರಿಸಿ ಅನುಷ್ಠಾನಗೊಳಿಸುವುದು.

2. ಆಧತೆಯಲ್ಲಿ ವಿಳಂಬ ಮಾಡದೇ ಶಾಲಾನುದಾನದ ವೆಚ್ಚ ಭರಿಸಿ ಅನುಷ್ಠಾನಗೊಳಿಸುವುದು ಹಾಗೂ ವಿವರಗಳನ್ನು Prabandh Portal ನಲ್ಲಿ ಇಂದೀಕರಿಸುವುದು.

3. ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ವ್ಯವಹರಣೆಯಲ್ಲಿ ಪಾರದರ್ಶಕ ಅಧಿನಿಯಮ / ನಿಯಮಗಳನ್ನು (K.T.P.P ACT / RULES) ಕಡ್ಡಾಯವಾಗಿ ಪಾಲಿಸಿ ಅನುಷ್ಠಾನ ಗೊಳಿಸುವುದು,

4. ಅನುದಾನ ಸೆಳೆಯುವುದರಲ್ಲಿ ವಿಳಂಬ ಮಾಡದಂತೆ ಮತ್ತು ಅನುದಾನ ವ್ಯಪಗತವಾಗದಂತೆ ನೋಡಿಕೊಳ್ಳುವುದು.

ಸರ್ಕಾರಿ ಶಾಲೆಗಳಿಗೆ ಬಿಡುಗಡೆಯಾದ ಅನುದಾನ ಮತ್ತು ಖರ್ಚುವೆಚ್ಚದ ಕ್ರೋಢೀಕೃತ ಉಪಯೋಗಿತ ಪ್ರಮಾಣ ಪತ್ರವನ್ನು ಸಂಬಂಧಿಸಿದ ಎ.ಪಿ.ಸಿ ಮತ್ತು ಡಿ.ವೈ.ಪಿ.ಸಿ ಗಳು ಪರಿಶೀಲಿಸಿ, ದೃಢೀಕರಿಸಿ ಈ ಕಚೇರಿಗೆ ಸಲ್ಲಿಸುವುದು.

CLICK HERE TO DOWNLOAD 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!