Notification published for the recruitment of Havaldar posts-2025
Notification published for the recruitment of Havaldar posts-2025: ಕ್ರೀಡಾ ಮೀಸಲಾತಿಯಡಿ ನೇಮಕಾತಿಗೆ ಅರ್ಜಿ ಆಹ್ವಾನ. ಜೂ.15ರೊಳಗೆ ಅರ್ಜಿ ಸಲ್ಲಿಸಿ ಅವಿವಾಹಿತರಿಗೆ ಅವಕಾಶ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ.
ಭಾರತೀಯ ಸೇನೆಯು ಕ್ರೀಡಾ ಮೀಸಲಿನಡಿ ಸುಬೇದಾರ್ ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಜೂ.15 ಕೊನೆಯ ದಿನವಾಗಿದೆ.
ಕ್ರೀಡಾ ಕೋಟಾದಡಿ ನೇಮಕಾತಿ:
ಅಥ್ಲೆಟಿಕ್ಸ್, ಅರ್ಚರಿ, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಡೈವಿಂಗ್, ಫುಟ್ಬಾಲ್, ಫೆನ್ಸಿಂಗ್, ಜಿಮ್ನಾಸ್ಟಿಕ್, ಹಾಕಿ, ಹ್ಯಾಂಡ್‌ಬಾಲ್, ಜೂಡೋ, ಕಾಯಕಿಂಗ್, ಕಬಡ್ಡಿ, ಸ್ವಿಮ್ಮಿಂಗ್, ಶೂಟಿಂಗ್, ಸೇಲಿಂಗ್, ಟ್ರಾಯಿತ್ಸಾನ್, ವಾಲಿಬಾಲ್, ವೇಯ್‌ಲಿಫ್ಟಿಂಗ್ ಸೇರಿದಂತೆ ವಿವಿಧ ವಿಂಟರ್ – ಗೇಮ್ಸ್‌ನ ಕ್ರೀಡಾಳುಗಳಿಗೆ ಇಲ್ಲಿ ಅವಕಾಶವಿದೆ.
ಈ ಕುರಿತಾಗಿ ಎಂಪ್ಲಾಯ್‌ಮೆಂಟ್ ನ್ಯೂಸ್‌ನಲ್ಲಿ ಅಧಿಸೂಚನೆ ಪ್ರಕಟಿಸಿರುವ ಸೇನೆಯು ನಿಗದಿಪಡಿಸಿದ ಕ್ರೀಡೆಗಳಲ್ಲಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಅಥವಾ ಅಖಿಲ ಭಾರತೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳಿಂದ ಭಾರತವನ್ನು ಪ್ರತಿನಿಧಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ವಿದ್ಯಾರ್ಹತೆ:
ಈ ಮೇಲ್ಕಂಡ ಎರಡೂ ಹುದ್ದೆಗಳಿಗೂ ಕನಿಷ್ಠ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಪಾಸು ಮಾಡಿರಬೇಕು.
ವಯೋಮಿತಿ ನಿಗದಿ:
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ವರ್ಷ ಆರು ತಿಂಗಳು ಮತ್ತು ಗರಿಷ್ಠ 25 ವರ್ಷ. ಅಂದರೆ 2000ನೇ ಇಸವಿ ಸೆಪ್ಟೆಂಬರ್ 30 ಮತ್ತು 2007ರ ಅಕ್ಟೋಬರ್ 1ರ ನಡುವೆ ಜನಿಸಿದವರಾಗಿರಬೇಕು.
ಆಯ್ಕೆ ಪ್ರಕ್ರಿಯೆ ವಿಧಾನ:
ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
▪️25 ವರ್ಷದೊಳಗಿನ ಅವಿವಾಹಿತರಿಗೆ ಮಾತ್ರ ಅವಕಾಶ
ಪ್ರಮುಖ ದಿನಾಂಕಗಳು:
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-06-2025
ಅರ್ಜಿ ಸಲ್ಲಿಕೆ ಬಗ್ಗೆ ಮುಖ್ಯ ಮಾಹಿತಿ
▪️ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ.
▪️ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್‌ಸೈಟ್ ಗೆ (https://joinindianarmy.nic.in) ಭೇಟಿ ನೀಡಿ ಅಲ್ಲಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಂಚೆಯ ಮೂಲಕ ಕಳುಹಿಸಬೇಕು.
ಅರ್ಜಿ ಸಲ್ಲಿಕೆಗೆ ವಿಳಾಸ:
Directorate of PT – Sports, General Staff Branch, IHQ of MoD (Army), Room No 747 ‘A’Wing, Sena Bhawan, PO New Delhi-110011
ಸಹಾಯವಾಣಿ :011-23019078
CLICK HERE TO DOWNLOAD NOTIFICATION
CLICK HERE TO DOWNLOAD APPLICATION FORM