Create SDMC-2025: ಕ್ರಮಬದ್ದವಾಗಿ SDMCಳನ್ನು ರಚಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದಿಂದ ಶಾಲೆಗಳಿಗೆ ಸೂಚನೆ.

Create SDMC:2025 ಸರಕಾರಿ ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಗಳನ್ನು ರಚಿಸಲು ನಿರ್ಲಕ್ಷ್ಯ ತಳೆದಿದ್ದು, ಕ್ರಮಬದ್ದವಾಗಿ ಸಮಿತಿಗಳನ್ನು ರಚಿಸು ವಂತೆ ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ) ಶಾಲೆಗಳಿಗೆ ಸೂಚಿಸಿದೆ.

 

Create SDMC: 2025-26 ನೇ ಸಾಲಿನಲ್ಲಿ “ಉತ್ತಮ SDMC”ಕಾರ್ಯಕ್ರಮದಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಾಲೆಗಳಿಗೆ ಪ್ರಶಸ್ತಿ ನೀಡುವ ಬಗ್ಗೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖದನ್ವಯ 2024-25 ನೇ ಸಾಲಿನಲ್ಲಿ “ಪುಷ್ಠಿ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಎಂಸಿ ಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ವಿದ್ಯಾ ವಾಹಿನಿ ತಂತ್ರಾಂಶದ ಮೂಲಕ ಸರ್ಕಾರಿ ಶಾಲೆಗಳನ್ನು ಸರ್ವೆಗೆ ತೊಡಗಿಸಿಕೊಂಡ ವೇಳೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಲಾಯಿತು.

1. ರಾಜ್ಯದ 1581 ಸರ್ಕಾರಿ ಶಾಲೆಗಳಲ್ಲಿ ಎಸ್ ಡಿ ಎಂ ಯನ್ನು ರಚನೆಯೇ ಮಾಡದಿರುವುದು. (ಪಟ್ಟಿ ಲಗತ್ತಿಸಿದೆ.)

2. ರಾಜ್ಯದ 1571 ಸರ್ಕಾರಿ ಶಾಲೆಗಳಲ್ಲಿ ಎಸ್ ಡಿ ಎಂ ಸಿ ಯನ್ನು ಕ್ರಮಬದ್ಧವಾಗಿ ಸರ್ಕಾರಿ ಆದೇಶದಂತೆ ರಚನೆ ಮಾಡದಿರುವುದು.

3. ವಿದ್ಯಾ ವಾಹಿನಿಯ ತಂತ್ರಾಂಶದಲ್ಲಿ ಶಾಲಾ ಮಾಹಿತಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರು ಬೇಜವಾಬ್ದಾರಿತನವನ್ನು ತೋರಿಸಿರುವುದು.

4. ಕ್ಲಸ್ಟರ್ ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೇಲ್ವಿಚಾರಣೆ ಅಧಿಕಾರಿಗಳು ಅಲಕ್ಷತೆಯನ್ನು ತೋರಿರುವುದು. ಇದರಿಂದಾಗಿ ಅರ್ಹತೆ ಹೊಂದಿರುವ ಶಾಲೆಗಳು ಮೌಲ್ಯ ಮಾಪನದಿಂದ ವಂಚಿತರಾಗಿರುವುದು. ( SDMC ಅವರಿಂದ ಬಂದಿರುವ ದೂರು)

5. ಸಕಾಲದಲ್ಲಿ ಶಾಲಾ SDMC ಯ ಮೌಲ್ಯಮಾಪನವನ್ನು ಮೇಲ್ವಿಚಾರಣಾ ಅಧಿಕಾರಿಗಳು ಕೈಗೊಳ್ಳದೆ ಇರುವುದು ಇತ್ಯಾದಿ.

2025-26 ನೇ ಸಾಲಿನಲ್ಲಿ ಮೇಲಿನ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ 2025-26 ನೇ ಸಾಲಿನ ಪಿಎಬಿಯಲ್ಲಿ ಅನುಮೋದನೆ ಕೊಂಡಂತೆ ಪ್ರತಿ ಬ್ಲಾಕ್ ಗೆ ಮೂರು ಶಾಲೆಗಳಿಗೆ ಉತ್ತಮ SDMC ಹೊಂದಿರುವ ಶಾಲೆ ಎಂದು ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯ ಭಾಗವಾಗಿ ಶಾಲೆಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ LPS-50,000/-, HPS-75,000/- GHS-1,00,000/-ರೂ ಗಳನ್ನು ಬಿಡುಗಡೆಗೆ ಅನುಮೋದನೆ ದೊರೆತಿರುತ್ತದೆ.

ಆದ್ದರಿಂದ ಹಿಂದಿನ ಶೈಕ್ಷಣಿಕ ವರ್ಷದ ಪುಷ್ಟಿ ಕಾರ್ಯಕ್ರಮದ ಅನುಭವದ ಮೇಲೆ ಸರ್ಕಾರಿ ಶಾಲೆಯ ಎಲ್ಲಾ ಮುಖ್ಯಸ್ಥರು ಹಾಗೂ SDMC ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಶಾಲೆಗಳಲ್ಲಿನ ಲೋಪ ದೋಷಗಳನ್ನು ಸರಿಪಡಿಸಿಕೊಂಡು, ಮಾಡಿರುವ ಉತ್ತಮ ಕೆಲಸಗಳಿಗೆ ಬೇಕಾಗಿರುವ ಪೂರಕ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವುದು. ಮುಂದಿನ ದಿನಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾ ವಾಹಿನಿ ತಂತ್ರಾಂಶದಲ್ಲಿ ನಿಖರವಾಗಿ ಮಾಹಿತಿಯನ್ನು ತುಂಬಲು ಸಹಾಯವಾಗುವುದು.

ಮುಂದುವರೆದು ಮೇಲ್ವಿಚಾರಣಾ ಅಧಿಕಾರಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಡಲಾಗಿರುವ ಲೋಪದೋಷಗಳನ್ನು ಗಮನಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ SDMC ಯ ಮೌಲ್ಯಮಾಪನವನ್ನು ನೀಡಲಾಗುವ ಅವಧಿಯಲ್ಲಿಯೇ ಸಂಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ತಿಳಿಸಿದೆ. ಈ ಸುತ್ತೋಲೆ ತಲುಪಿದ ತಕ್ಷಣದಿಂದ ಶಾಲೆಗಳಿಗೆ ಸಕಾಲದಲ್ಲಿ ಮಾಹಿತಿಯನ್ನು ನೀಡಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕ್ರಮಬದ್ಧವಾಗಿ SDMC ರಚನೆಯನ್ನು ಮಾಡಿಸುವುದು ಹಾಗೂ ಸಮೀಕ್ಷಾ ಕಾರ್ಯದಲ್ಲಿ ತಮ್ಮ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗಳು ಕೈ ಬಿಡದಂತೆ ಗಮನಹರಿಸಿ ವ್ಯಾಪಕ ಪ್ರಚಾರವನ್ನು ಮಾಡಲು ತಿಳಿಸಿದೆ.

ಸದರಿ ಸುತ್ತೋಲೆ SDMC ಯ ಸಮೀಕ್ಷಾ ಕಾರ್ಯದ ಸಿದ್ಧತೆಗಾಗಿ ಹೊರಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಈ ಸಂಬಂಧ ಸುದೀರ್ಘವಾದ ಜ್ಞಾಪನವನ್ನು ಹೊರಡಿಸಲಾಗುವುದು ಹಾಗೂ ಅದರಂತೆ ಕಾರ್ಯನಿರ್ವಹಿಸಲು ಸೂಚಿಸಿದೆ.

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!