UPSC 2025: ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ.

UPSC 2025: ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

UPSC 2025: ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ ಮಾಡಲಾಗಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2025ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಆಯೋಗವು ಮುಖ್ಯ ಪರೀಕ್ಷೆಗಾಗಿ ವಿವರವಾದ ಅರ್ಜಿ ನಮೂನೆ-1 (DAF-1) ವಿಂಡೋವನ್ನು  ತೆರೆದಿದೆ. ಈ ನಮೂನೆಯನ್ನು ಸಲ್ಲಿಸುವ ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ DAF-I ಅನ್ನು ಭರ್ತಿ ಮಾಡದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು UPSC ತಿಳಿಸಿದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು, DAF-I ಅನ್ನು ಯುಪಿಎಸ್‌ಸಿ ವೆಬ್‌ ಸೈಟ್ upsc.gov.in ನಲ್ಲಿ ಜೂನ್ 16ರಿಂದ ಜೂನ್ 25ರ ನಡುವೆ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಅಭ್ಯರ್ಥಿಗಳು ತಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರ ವಿವರಗಳನ್ನು ನಮೂದಿಸಬೇಕು.

DAF-I ಎಂದರೇನು?:

DAF-I ಅನ್ನು ‘ಅರ್ಜಿ ನಮೂನೆ-1’ ಎಂದು ಪ್ರಾಥಮಿಕ ಪರೀಕ್ಷೆಯ ನಂತರದ ಹಂತವಾಗಿದೆ. ಮುಖ್ಯ ಪರೀಕ್ಷೆಗೆ ಉಮೇದುವಾರಿಕೆಯನ್ನು ಅಂತಿಮಗೊಳಿಸಲು ಇದು ಅಗತ್ಯವಾಗಿರುತ್ತದೆ. ಇದು ವೈಯಕ್ತಿಕ ವಿವರಗಳು, ಶಿಕ್ಷಣ, ದಾಖಲೆಗಳ ಅಪ್‌ಲೋಡ್, ಸೇವಾ ಆದ್ಯತೆಗಳು ಮತ್ತು ಪಿಡಬ್ಲ್ಯುಡಿ ಇತರ ಅವಶ್ಯಕತೆಗಳನ್ನು ಒಳಗೊಂಡಿದೆ.

ಮುಖ್ಯ ಪರೀಕ್ಷೆ ಯಾವಾಗ ನಡೆಯಲಿದೆ?:

UPSC ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ ಆಗಸ್ಟ್ 22ರಿಂದ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ.

ಅರ್ಜಿ ನಮೂನೆ-1 ಭರ್ತಿ ಮಾಡಿದ ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಹಾಲ್ ಟಿಕೆಟ್‌ಗಳನ್ನು ನೀಡಲಾಗುವುದು. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಡೌನ್‌ಲೋಡ್ ಮಾಡಬಹುದು.

ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಜೂನ್ 11ರಂದು = ಘೋಷಿಸಲಾಯಿತು. ಇದರಲ್ಲಿ ಒಟ್ಟು 14,161 – ಜನರು ಯಶಸ್ವಿಯಾಗಿದ್ದರು. ಅವರೆಲ್ಲ ಮುಂದಿನ ಆಯ್ಕೆ ಪ್ರಕ್ರಿಯೆಗಾಗಿ ಈಗ ಮುಖ್ಯ ಪರೀಕ್ಷೆಗೆ 5 ಹಾಜರಾಗಲಿದ್ದಾರೆ.

 

ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು – CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!