IBPS: ಆಧಾರ್ ದೃಢೀಕರಿಸಲು IBPS ನಿರ್ಧಾರ-2025,ಹಣಕಾಸು ಸೇವೆಗಳ ಇಲಾಖೆ ಮಹತ್ವದ ಹೆಜ್ಜೆ.
IBPS: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ವಿವಿಧ ಸ್ಪರ್ಧಾತ್ಮಕ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಮಹತ್ವದ ಹೆಜ್ಜೆಯಿಟ್ಟಿದೆ.
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಲು ಆಧಾರ್ ಆಧರಿತ ದೃಢೀಕರಣವನ್ನು ಬಳಸಲು ಸರಕಾರ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಗೆ (IBPS) ಅಧಿಕಾರ ನೀಡಿದೆ. ಈ ಕುರಿತು ಹಣಕಾಸು ಇಲಾಖೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.
“IBPS ನೇಮಕ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡುವುದು ಮಾತ್ರ ಇದರ ಉದ್ದೇಶವಲ್ಲ. ಅಕ್ರಮ ಚಟು ವಟಿಕೆಗಳಿಂದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ಆಧಾರ್ ಆಧರಿತ ದೃಢೀಕರಣದಿಂದ ಸಂಸ್ಥೆಗೆ ಆಡಳಿತಾತ್ಮಕ ಹೊರೆ ಕಡಿಮೆಯಾಗಲಿದೆ ಮಾತ್ರವಲ್ಲ, IBPS ನಂಥ ಸಂಸ್ಥೆಮೇಲೆ ಸಾರ್ವಜನಿಕರಿಗೆ ನಂಬಿಕೆ ಹೆಚ್ಚಾಗುತ್ತದೆ ಹಾಗೂ ಇದರಿಂದ ಇಡೀ ಪರೀಕ್ಷಾ ವ್ಯವಸ್ಥೆ ಸುಧಾರಿಸಲಿದೆ” ಎಂದು ಇಲಾಖೆ ತಿಳಿಸಿದೆ. ಸಿಬ್ಬಂದಿ ನೇಮಕಾತಿ ಆಯೋಗವೂ ತಾನು ನಡೆಸುವ ಪರೀಕ್ಷೆಗಳಲ್ಲಿ ಆಧಾರ್ ದೃಢೀಕರಣ ಕಡ್ಡಾಯವೆಂದು ಕಳೆದ ಏಪ್ರಿಲ್‌ನಲ್ಲಿಯೇ ಆದೇಶ ಹೊರಡಿಸಿತ್ತು.