KSOU ADMISSION: 2025-26ರ ಜುಲೈ ಆವೃತ್ತಿಯಲ್ಲಿ ಓಡಿಎಲ್ ಮಾದರಿ (ಆಫ್ಲೈನ್)ಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿ ಪ್ರಕ್ರಿಯೆ ಆರಂಭ.
KSOU: 2025-26ರ ಜುಲೈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಓಡಿಎಲ್ ಮಾದರಿಯ (ಆಫ್ಲೈನ್) ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಕೆಳಕಂಡ ಶಿಕ್ಷಣ ಕ್ರಮಗಳಿಗೆ ಅಂತರ್ಜಾಲದಲ್ಲಿರುವ ಅಡ್ಮಿಶನ್ ಪೋರ್ಟಲ್ https://ksouportal.com/views/StudentHome.aspx) ನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನುಸಾರ ದಾಖಲಾತಿಗಳನ್ನು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿ ಮೈಸೂರು ಅಥವಾ ಹತ್ತಿರದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.
ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಮಾಹಿತಿ ಹಾಗೂ ವಿಧಾನ.
1. ಅರ್ಹತೆಯ ಮಾನದಂಡ ಹಾಗೂ ಶುಲ್ಕದ ವಿವರಗಳನ್ನು ವಿವರಣಾ ಪುಸ್ತಕ (ಪ್ರಾಸ್ಪೆಕ್ಟಸ್) ದಲ್ಲಿ ನಮೂದಿಸಲಾಗಿದೆ. ಅಭ್ಯರ್ಥಿಗಳು ಸಂಬಂಧಿತ ಕಾರ್ಯಕ್ರಮಗಳ ಪ್ರಾಸ್ಪೆಕ್ಟಸ್ನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು /ಡೌನ್ ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು, ಮೈಸೂರಿನಲ್ಲಿರುವ ಕರಾಮುವಿಯ ಕೇಂದ್ರ ಕಚೇರಿಯಲ್ಲಿ ನೇರವಾಗಿ / ಆನ್ಲೈನ್ ಮುಖಾಂತರ, ಅಥವಾ ತಮ್ಮ ಆಯ್ಕೆಯ ಸಮೀಪದ ಪ್ರಾದೇಶಿಕ ಕೇಂದ್ರಗಳಲ್ಲಿ ಮಾತ್ರವೇ ಖುದ್ದಾಗಿ ಪ್ರವೇಶಾತಿಯನ್ನು ಪಡೆಯುವುದು. ಆನ್ ಲೈನ್ ಪ್ರವೇಶ ಅರ್ಜಿ ಫಾರಂನ್ನು ಭರ್ತಿ ಮಾಡಲು KSOU Online Admission Portal ಗೆ ಭೇಟಿ ನೀಡಿ. ಪ್ರವೇಶಾತಿ ಹಾಗೂ ಇನ್ನಿತರ ಮಾಹಿತಿಗಾಗಿ ಅರ್ಜಿದಾರರು ಕರಾಮುವಿಯ ಅಧಿಕೃತ ವೆಬ್ಸೈಟ್ www.ksoumysuru.ac.in ನ್ನು ವೀಕ್ಷಿಸುವುದು.
▪️ಪ್ರವೇಶಪೂರ್ವ ಸಮಾಲೋಚನೆಗೆ ಮಾತ್ರ ಅರ್ಜಿದಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಕರಾಮುವಿಯ ಅಧಿಕೃತ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.
▪️ವಿದ್ಯಾರ್ಥಿಗಳು ಪಾವತಿಸಬೇಕಾದ ನಿಗದಿತ ಶುಲ್ಕವನ್ನು (ವಿವರಗಳು ವೆಬ್ಸೈಟ್ನಲ್ಲಿ ಲಭ್ಯವಿದೆ) ಮಾತ್ರ ಪಾವತಿಸಬೇಕು. ಹೆಚ್ಚುವರಿ ಪಾವತಿಗೆ ವಿಶ್ವವಿದ್ಯಾನಿಲಯವು ಜವಬ್ದಾರಿಯಾಗುವುದಿಲ್ಲ.
▪️ಪ್ರವೇಶಾತಿ ಶುಲ್ಕವನ್ನು ಆನ್ಲೈನ್ ವಿಧಾನದ ಮೂಲಕ ಮಾತ್ರ ಪಾವತಿಸತಕ್ಕದ್ದು.
▪️ಅಭ್ಯರ್ಥಿಗಳು ಗುರುತಿನ ಚೀಟಿಗಳು ಹಾಗೂ ಲಭ್ಯ ಸ್ವಯಂ ಕಲಿಕಾ ಸಾಮಗ್ರಿಗಳನ್ನು
▪️ಮೈಸೂರಿನಲ್ಲಿರುವ ಕರಾಮುವಿಯ ಆಡಳಿತ ಕಛೇರಿಯಿಂದ ಅಥವಾ ತಮ್ಮ ಆಯ್ಕೆಯ ಪ್ರಾದೇಶಿಕ ಕೇಂದ್ರದಿಂದ ಪಡೆಯಬಹುದು.
2.ಪ.ಜಾ./ಪ.ಪ. ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ನಿಗಧಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿ.ವಿ.ಯ ಸ್ಕಾಲರ್ಷಿಪ್ ಘಟಕವು ವಿಧಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
▪️ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು / ಮಿಲಿಟರಿ ಸೇವೆಯಲ್ಲಿರುವ / ಮಾಜಿ ಸೈನಿಕ ವಿದ್ಯಾರ್ಥಿಗಳು / ಆಟೋ / ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ / ಮಕ್ಕಳಿಗೆ / ಕೆಎಸ್ಆರ್ಟಿಸಿ / ಬಿಎಂಟಿಸಿ /ಎನ್ಡಬ್ಲ್ಯೂಕೆಆರ್ಟಿಸಿ / ಕೆಕೆಆರ್ಟಿಸಿಯಲ್ಲಿನ ನೌಕರರುಗಳಿಗೆ ಯುಜಿ ಮತ್ತು ಪಿಜಿ ಪದವಿ ಶಿಕ್ಷಣ ಕ್ರಮಗಳಿಗೆ ಬೋಧನಾ ಶುಲ್ಕದಲ್ಲಿ ಶೇಕಡ 10%ರಷ್ಟು ರಿಯಾಯಿತಿಯನ್ನು ಪಡೆಯಬಹುದು.
▪️ತೃತೀಯ ಲಿಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
▪️ಕೋವಿಡ್-19 ಖಾಯಿಲೆಯಿಂದ ಮೃತಪಟ್ಟ ತಂದೆ / ತಾಯಿಯ ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
▪️ಸರ್ಕಾರವು ಆಗಿಂದ್ದಾಗ್ಗೆ ನಿಗದಿಪಡಿಸಿರುವ ಹಾಗೂ ಚಾಲ್ತಿಯಲ್ಲಿರುವ ಆದೇಶಗಳನ್ವಯ ಶೇಕಡ 50ಕ್ಕೂ ಹೆಚ್ಚಿನ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ (ಬಿ.ಎಡ್. ಮತ್ತು ಎಂ.ಬಿ.ಎ. ಹೊರತುಪಡಿಸಿ).
3. ಪ್ರಥಮ / ದ್ವೀತಿಯ ಯುಜಿ/ಪಿಜಿ ಶಿಕ್ಷಣ ಕ್ರಮ ಪೂರೈಸಿ ಕಾರಣಾಂತರದಿಂದ ಪದವಿಯನ್ನು ಪೂರ್ಣಗೊಳಿಸಿಕೊಂಡಿಲ್ಲದ ವಿದ್ಯಾರ್ಥಿಗಳು ಕರಾಮುವಿಯ ನಿಯಮಗಳಿಗೆ ಒಳಪಟ್ಟು ದ್ವಿತೀಯ/ತೃತೀಯ ಯುಜಿ/ಪಿಜಿ ಶಿಕ್ಷಣ ಕ್ರಮಗಳಿಗೆ ನೇರ ಪ್ರವೇಶಾತಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಈ ಸಂಬಂಧ ಅಂತರ್ಜಾಲದಲ್ಲಿ ಪ್ರಕಟಿಸಿರುವ ಸುತ್ತೋಲೆಯನ್ವಯ ಕ್ರಮಗಳನ್ನು ಅನುಸರಿಸುವುದು.
4. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಂಜೂರಾಗುವ ಶುಲ್ಕ ಪಾವತಿ ಸೌಲಭ್ಯದಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಯುಜಿ / ಪಿಜಿ ಕೋರ್ಸ್/ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್ಗಳಿಗೆ ಸೇರ ಬಯಸುವ ಅಲ್ಪ ಸಂಖ್ಯಾತ ವರ್ಗದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬುದ್ದಿಸ್ಟ್, ಮತ್ತು ಪಾರ್ಸಿ) ಅರ್ಹ ಅಭ್ಯರ್ಥಿಗಳು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಅಂತರ್ಜಾಲ https://dom.karnataka.gov.in ದಲ್ಲಿರುವ (KSOU)ದ ಪ್ರವೇಶಾತಿ ಪೋರ್ಟಲ್ ನ ಲಿಂಕ್ https://minority.ksouportal.com/ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ಅಗತ್ಯ ದಾಖಲಾತಿ (SSLC, PUC, Degree Marks cards, Aadhaar Card, Minority/Caste certificate, Income certificate, Passport size Photos, BPL card copy(if applicable), etc…) ಗಳೊಂದಿಗೆ ಹತ್ತಿರದ ಕರಾಮುವಿಯ ಅಧಿಕೃತ ಪ್ರಾದೇಶಿಕ ಕೇಂದ್ರಗಳಿಗೆ (Regional Centres) ಕೂಡಲೇ ಭೇಟಿ ನೀಡುವುದು.
CLICK HERE TO DOWNLOAD NOTIFICATION
CLICK HERE TO DOWNLOAD PRESS NOTE
CLICK HERE TO DOWNLOAD FEE STRUCTURE