FLN-2025 ಕುರಿತು ಒಂದಿಷ್ಟು ಮಾಹಿತಿ

FLN-2025 ಕುರಿತು ಒಂದಿಷ್ಟು ಮಾಹಿತಿ.

FLN-2025 FLN ಒಂದಿಷ್ಟು ಮಾಹಿತಿಯನ್ನು ಒದಗಿಸಲಾಗಿದೆ.

☀️ FLN ಕನ್ನಡ ಮತ್ತು ಗಣಿತ ವಿಷಯಕ್ಕೆ ಮಾತ್ರ.

☀️ FLN ಇಂಗ್ಲೀಷ್ ವಿಜ್ಞಾನ ಪರಿಸರ ಸಮಾಜ ವಿಜ್ಞಾನ ಹಿಂದಿ ಇತರೆ ವಿಷಯಗಳಿಗೆ ಇರುವುದಿಲ್ಲ.

☀️ FLN ವರ್ಷಪೂರ್ತಿ ಇರುತ್ತದೆ

☀️ ಪ್ರತಿ ತಿಂಗಳು ಕನ್ನಡ 9 ಮತ್ತು ಗಣಿತದ 8 FLN ರುಬ್ರಿಕ್ಸ್ ಅಥವಾ ಕಲಿಕಾ ಫಲಗಳ ಆಧಾರದಲ್ಲಿ ಪ್ರಶ್ನೆ ಪತ್ರಿಕೆಯನ್ನು ತೆಗೆದು FLN ಸಾಧಿಸಿದ ಸಾಧಿಸದ ಮಕ್ಕಳನ್ನು ಗುರುತಿಸಿಕೊಂಡು ಕ್ರಿಯಾ ಯೋಜನೆ ಮಾಡಿಕೊಳ್ಳಬೇಕು

☀️ FLN ನಲ್ಲಿ ಕನ್ನಡದಲ್ಲಿ 9 , ಗಣಿತದಲ್ಲಿ 8 ಕಲಿಕಾ ಫಲಗಳು ಅಥವಾ ಸಾಮರ್ಥ್ಯಗಳು ಅಥವಾ ರುಬ್ರಿಕ್ಸ್ ಇರುತ್ತವೆ

☀️ A ಬಂದರೆ ಮಾತ್ರ FLN ಸಾಧಿಸಿದ ಮಕ್ಕಳು

☀️ BB, B, P ಬಂದರೆ FLN ಸಾಧಿಸದ ಮಕ್ಕಳು ಎಂದು ಗುರ್ತಿಸಿಕೊಳ್ಳಬೇಕು

☀️ ಒಂದು ವಿದ್ಯಾರ್ಥಿಗೆ A ಕೊಡಬೇಕಾದರೆ Oral Reading Writing Numeracy 95% ನಷ್ಟು ಸಾಧಿಸಿದ ಮಕ್ಕಳನ್ನು ಗುರುತಿಸಿಕೊಳ್ಳಬೇಕು

☀️ ಉದಾಹರಣೆಗೆ 10 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಯಲ್ಲಿ 9 ಅಥವಾ 10 ಪ್ರಶ್ನೆಗಳಿಗೆ ಸರಿ ಉತ್ತರವನ್ನು ಕೊಟ್ಟಿರಬೇಕು

☀️ FLN ಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟು ನಿರ್ವಹಿಸಬೇಕು

☀️ ಪ್ರತಿಪಾಠದ ನಂತರ ಕಲಿಕಾ ಫಲಗಳ ಪಟ್ಟಿ ಮಾಡಿಕೊಂಡು ತಿಂಗಳಿಗೊಂದು FLN ಪರೀಕ್ಷೆ ಮಾಡಿ ಸಾಧಿಸಿದ ಸಾಧಿಸದ ಮಕ್ಕಳನ್ನು ಗುರುತಿಸಿಕೊಳ್ಳಬೇಕು

☀️ ಪಾಠ ಮಾಡುವಾಗ ಅಥವಾ ಅಭ್ಯಾಸ ಚಟುವಟಿಕೆಗಳ ಮಾಡುವಾಗ FLN ನ ಯಾವ ಕಲಿಕಾ ಫಲಕ್ಕೆ ಪೂರಕವಾಗಿದೆ ಸಂಬಂಧಿಸಿದೆ ಎಂದು ತಿಳಿದು ಅದಕ್ಕೆ ಹೆಚ್ಚು ಒತ್ತು ನೀಡಬೇಕು

☀️ ಈಗಿರುವ ಎಲ್ಲಾ ಅಭ್ಯಾಸ ಚಟುವಟಿಕೆಗಳ ಮತ್ತು ಪಠ್ಯ ಪುಸ್ತಕಗಳು ಅಭ್ಯಾಸ ಪುಸ್ತಕಗಳು FLN ಆಧಾರಿತವಾಗಿವೆ ಪೂರಕವಾಗಿವೆ

☀️ ORWN ಅಂದ್ರೆ ☀️

O = Oral
R = reading
W = writting
N = Numeracy

☀️ ಕನ್ನಡ ಗಣಿತ ಸೇರಿ ಒಟ್ಟು 17 ರುಬ್ರಿಕ್ಸ್/ ಕಲಿಕಾ ಫಲಗಳು / LOs/ ಸಾಮರ್ಥ್ಯಗಳು/ ಲಕ್ಷಸ್ ಇವೆ

☀️ ಸೇತುಬಂಧ ಪರೀಕ್ಷೆ ಜೊತೆಗೆ FLN ಕನ್ನಡ ಗಣಿತಕ್ಕೆ ಪ್ರತ್ಯೇಕ ಪರೀಕ್ಷೆ ನಡೆಸಬೇಕು

☀️ ಪರಿಹಾರ ಬೋಧನೆಯ ಮಕ್ಕಳ ಪಟ್ಟಿಯಂತೆ , FLN ಹಿಂದುಳಿದ ಮಕ್ಕಳ ಪಟ್ಟಿಯನ್ನು ಕೂಡ ಮಾಡಿಕೊಳ್ಳಿ

☀️ FLN ಸಾಧಿಸದ ಮಕ್ಕಳಿಗೆ ಕ್ರಿಯಾ ಯೋಜನೆ ಜೊತೆಗೆ TLM ಬಳಸಿಕೊಂಡು FLN ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು

☀️ ಪ್ರತಿ ತಿಂಗಳ ಕೆಲಸದ 2ನೇ ದಿನ FLN ಪರೀಕ್ಷೆ ಮಾಡಿ ಸಾಧಿಸಿದ ಸಾಧಿಸದ ಮಕ್ಕಳನ್ನು ಪ್ರತಿ ತಿಂಗಳು ಗುರ್ತಿಸಿ ಕೊಂಡು ಕ್ರಿಯಾ ಯೋಜನೆ ಮಾಡಿಕೊಳ್ಳಿ. ಇದೇ ರೀತಿ ಪ್ರತಿ ತಿಂಗಳು ಮಾಡಿಕೊಳ್ಳಿ, ಇದನ್ನು ವರ್ಷಪೂರ್ತಿ ಮಾಡಬೇಕು.

☀️ FLN ಸಾಧಿಸಿದ ಸಾಧಿಸದ ಮಕ್ಕಳನ್ನು ಗುರ್ತಿಸಿಕೊಂಡು FLN ರಿಜಿಸ್ಟರ್ ನಲ್ಲಿ ಸಾಧಿಸಿದ ಸಾಧಿಸದ ಮಕ್ಕಳನ್ನು ಗುರ್ತಿಸಿಕೊಳ್ಳಿ

☀️ FLN ಸಾಧಿಸಿದ ನಂತರ ಆ ಮಗುವನ್ನು FLN ಪಟ್ಟಿಯಿಂದ ಕೈ ಬಿಡುವುದು.

☀️ ಪೂರ್ಣ, ಅಧಿಕೃತ ಮಾಹಿತಿಗಾಗಿ 21.05.2025 ರ DESERT ಡಿ ಎಸ್ ಇ ಆರ್ ಟಿ ಸುತ್ತೋಲೆ

☀️ FLNನ ಪ್ರಮುಖಾಂಶಗಳು ☀️

FLN ಪರೀಕ್ಷೆ ಮಾಡಿ FLN ರೂಬಿಕ್ಸ್ ಅಥವಾ ಗ್ರೇಡ್ ನೀಡುವುದು ಹೇಗೆ ? ಸಂಪೂರ್ಣ ಓದಿ

ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಗ್ರವಾಗಿದ್ದು, ಪೂರ್ವಪ್ರಾಥಮಿಕ ಶಿಕ್ಷಣವನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ತರಲಾಗಿದೆ.

2020 ರ ರಾ.ಶಿ.ನೀ.ಯು 3 ನೇ ತರಗತಿಯೊಳಗಿನ ಪ್ರತಿ ಮಗುವಿನಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಕೌಶಲಗಳನ್ನು ಬೆಳೆಸುವ ಕುರಿತು ಪ್ರಸ್ತಾಪಿಸಿದೆ.

ಈ ಬಗ್ಗೆ ಕೇಂದ್ರ ಸರ್ಕಾರವು National Initiative for Proficiency in Reading with Understanding and Numeracy or NIPUN BHARAT ಗೆ ಚಾಲನೆ ನೀಡಲಾಗಿದೆ.

FLN ಮಿಷನ್ ಹಿನ್ನೆಲೆ ಮತ್ತು ಪ್ರಾಮುಖ್ಯತೆ

  • ಪ್ರತಿ ಮಗುವು FLN ಕೌಶಲಗಳನ್ನು ಕರಗತ ಮಾಡಿಕೊಳ್ಳಲು ಅಗತ್ಯವಾದ ವಾತಾವರಣವನ್ನು ಸೃಜಿಸುವ ದೃಷ್ಟಿಕೋನವನ್ನು NIPUN BHARAT ಹೊಂದಿದೆ.

3 ರಿಂದ 9 ವಯೋಮಾನದ ಮಕ್ಕಳ ಕಲಿಕಾ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ.

  • ಅದರಂತೆ ಕಲಿಕಾ ಅಂತರಗಳನ್ನು ಹಾಗೂ ಅವುಗಳ ಕಾರಣವನ್ನುಖ ಗುರ್ತಿಸಿ, ಸ್ಥಳೀಯ ಸಂದರ್ಭ, ಸನ್ನಿವೇಶಗಳಿಗೆ ತಕ್ಕಂತೆ ಪೂರಕವಾದ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ.

FLN ಮಿಷನ್ ಹಿನ್ನೆಲೆ ಮತ್ತು ಪ್ರಾಮುಖ್ಯತೆ

  • ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಆರಂಭಿಕ ತರಗತಿಗಳ ನಡುವೆ ಬಲವಾದ ಕೊಂಡಿ ಸೃಜಿಸಿ, ಮಕ್ಕಳು ತಡೆರಹಿತವಾಗಿ ಮುಂದುವರೆಯುವುದನ್ನು ಖಾತ್ರಿಪಡಿಸಿಕೊಳ್ಳುವುದು.
  • 2026-27 ರೊಳಗೆ FLN ಕೌಶಲಗಳನ್ನು ತಲುಪುವ ಗುರಿ ಹೊಂದಲಾಗಿದೆ.

FLN ರೂಬಿಕ್ಸ್ ಅಥವಾ ಗ್ರೇಡ್ ನೀಡುವುದು👇

BB – Below Basic – ಕನಿಷ್ಠ
B – Basic – ಪ್ರಾಥಮಿಕ
P – proficient – ಪ್ರಾವೀಣ್ಯ
A – Advanced – ಸುಧಾರಿತ / ಮುಂದುವರೆದ

1.FLN ಸಾಧಿಸದ ಮಗು ಎಂದರೆ ಯಾರು?

BB ಮತ್ತು B ,

ಮುಂದುವರೆದು BB ಯಿಂದ B ಗೆ , B ಯಿಂದ Pಗೆ , P ಯಿಂದ A. ಗೆ ತರುವ ಪ್ರಯತ್ನ ಆಗಬೇಕೆಂದೇ FLNನ ಆಶಯವಾಗಿದೆ.

ಮುಖ್ಯ ಶಿಕ್ಷಕರ ಜವಾಬ್ದಾರಿಗಳು

  • ಪ್ರತಿ ತಿಂಗಳ ಎರಡನೇ ಕೆಲಸದ ದಿನದಂದು FLN ಸಾಧಿಸಿದ/ಸಾಧಿಸದ ವಿದ್ಯಾರ್ಥಿಗಳನ್ನು ಗುರ್ತಿಸುವುದು ಹಾಗೂ ಸಾಧನೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು.

ಪೋಷಕರ ಸಹಭಾಗಿತ್ವದೊಂದಿಗೆ ವಿದ್ಯಾರ್ಥಿಗಳ ಗೈರುಹಾಜರಿಯನ್ನು ತಪ್ಪಿಸುವುದು.

ಶಾಲೆಯಲ್ಲಿ ಲಭ್ಯವಿರುವ ಕಲಿಕೋಪಕರಣಗಳನ್ನು – ಓದು ಕರ್ನಾಟಕ ಸಾಮಗ್ರಿಗಳು, ಗಣಿತ ಕಲಿಕಾ ಆಂದೋಲನದ ಕಿಟ್, ಕಲಿಕಾಸರೆ, ಕಲಿಕಾ ಚೇತರಿಕೆ ಅಭ್ಯಾಸದ ಹಾಳೆಗಳು, ವಾಚಕಗಳು ಇತ್ಯಾದಿ FLN ಗಳ ಸಾಧನೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಚರ್ಚಿಸಿ, ಅಂತಿಮಗೊಳಿಸುವುದು.

☀️ ಮುಖ್ಯ ಶಿಕ್ಷಕರ ಜವಾಬ್ದಾರಿಗಳು ☀️

ಎಲ್ಲಾ ವಿಷಯಗಳ ಶಿಕ್ಷಕರ ಸಹಕಾರದೊಂದಿಗೆ ತರಗತಿ ಶಿಕ್ಷಕರು ದಾಖಲೆ ನಿರ್ವಹಿಸುವುದು ಹಾಗೂ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ದಾಖಲೆಗಳನ್ನು ಸಲ್ಲಿಸುವ ಜವಾಬ್ದಾರಿ ತರಗತಿ ಶಿಕ್ಷಕರದ್ದಾಗಿರುತ್ತದೆ.

ಪ್ರತಿ ತಿಂಗಳ ಅಂತ್ಯಕ್ಕೆ ಅನುಬಂಧ 4 (1) ರಲ್ಲಿರುವ ನಮೂನೆಯಂತೆ ತರಗತಿವಾರು ಹಾಗೂ ಒಟ್ಟು ಶಾಲಾವಾರು ಮಾಹಿತಿಯನ್ನು ಸಿದ್ಧಪಡಿಸಿ, ತಿಂಗಳ ಕೆಲಸದ ಮೂರನೇ ದಿನದಂದು ಮುಖ್ಯ ಶಿಕ್ಷಕರು CRP ರವರಿಗೆ ಸಲ್ಲಿಸುವುದು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!