Teacher Recuritment-2025: ಸೈನಿಕ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ
Teacher Recuritment-2025: ಭಾರತೀಯ ಸೇನಾ ಸಿಬ್ಬಂದಿ ಮಕ್ಕಳಿಗೆ ನಿಟ್ಟಿನಲ್ಲಿ ದೇಶದಾದ್ಯಂತ ಸ್ಥಾಪಿತವಾಗಿರುವ ಆರ್ಮಿ ಪಬ್ಲಿಕ್ ಸ್ಕೂಲ್‌ಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಆಗಸ್ಟ್ 16 ಕೊನೆಯ ದಿನವಾಗಿದೆ.
2025-26ರ ಶೈಕ್ಷಣಿಕ ವರ್ಷಕ್ಕೆ ಈ ನೇಮಕ ನಡೆಯುತ್ತಿದೆ. ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ), ಟ್ರೇನ್ಸ್ ಗ್ರಾಜುಯೇಟ್ ಟೀಚರ್ (ಟಿಜಿಟಿ) ಮತ್ತು ಪೈಮರಿ ಟೀಚರ್ (ಪಿಆರ್‌ಟಿ) ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ಹುದ್ದೆಗಳ ವಿವರ:
ಕಂಪ್ಯೂಟರ್ ಸೈನ್ಸ್, ಫಿಸಿಕಲ್ ಎಜುಕೇಶನ್, ಇಂಗ್ಲಿಷ್, ಹಿಂದಿ, ಸಂಸ್ಕೃತ, ಹಿಸ್ಟರಿ, ಜಿಯಾಗ್ರಫಿ, ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಮಾಥ್ಸ್, ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಬಯೋ ಟೆಕ್ನಾಲಜಿ, ಸೈಕಾಲಜಿ, ಕಾಮರ್ಸ್, ಹೋಂ ಸೈನ್ಸ್ ವಿಭಾಗಗಳಲ್ಲಿ ಪಿಜಿಟಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ:
ಪಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು B.Ed ಜೊತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಗಣಿತ, ವಿಜ್ಞಾನ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪಿಜಿಟಿ ಟಿಜಿಟಿ ಹುದ್ದೆಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು B.Ed ಜೊತೆಗೆ ಆಯಾ ವಿಭಾಗಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಹಾಗೆಯೇ ಸಂಸ್ಕೃತ, ಹಿಂದಿ, ಇಂಗ್ಲಿಷ್, ಸೋಷಿಯಲ್ ಸ್ಟಡೀಸ್, ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಟಿಜಿಟಿ ಹುದ್ದೆಗಳಿವೆ. ಇವುಗಳಿಗೆ ಅರ್ಜಿ ಸಲ್ಲಿಸುವವರು ಪದವಿ ಜೊತೆಗೆ B.Ed ಪೂರ್ಣಗೊಳಿಸಿರಬೇಕು. ಇನ್ನು ಪಿಆರ್‌ಟಿ ಹುದ್ದೆಗಳ ಆಕಾಂಕ್ಷಿಗಳು ಪದವಿ ಜೊತೆಗೆ ಡಿ. ಇಐ.ಎಡ್/ಬಿಎಡ್ ಅರ್ಹತೆ ಹೊಂದಿರಬೇಕು. ನಿಗದಿತ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಶೇಕಡಾ 50 ಅಂಕ ಗಳಿಸಿರುವುದು ಕಡ್ಡಾಯ.
ನೇಮಕ ಹೇಗೆ?
ಮೊದಲಿಗೆ ಆನ್‌ಲೈನ್‌ನಲ್ಲಿ ಸ್ಟೀನಿಂಗ್ ಟೆಸ್ಟ್ / ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದ ನಂತರ ಬೋಧನಾ ಪರೀಕ್ಷೆ ನಡೆಯಲಿದೆ.
ಪ್ರಮುಖ ಮಾಹಿತಿ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2025
ಪರೀಕ್ಷಾ ದಿನಾಂಕ: ಸೆಪ್ಟೆಂಬರ್ 20-21
ಅರ್ಜಿ ಶುಲ್ಕ: 385 ರೂ.
ಪರೀಕ್ಷೆ ಕೇಂದ್ರಗಳು: ರಾಜ್ಯದಲ್ಲಿ ಬೆಂಗಳೂರು ಪರೀಕ್ಷಾ ಕೇಂದ್ರವಾಗಿದೆ.