KGID: ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರವಾರು ಸ್ವೀಕೃತಿಯಾಗುತ್ತಿರುವ ವಿಮಾಕಂತಿನ ಮೊಬಲಗಿನಲ್ಲಿ ಇರುವ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ-2025

KGID: ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರವಾರು ಸ್ವೀಕೃತಿಯಾಗುತ್ತಿರುವ ವಿಮಾಕಂತಿನ ಮೊಬಲಗಿನಲ್ಲಿ ಇರುವ ವ್ಯತ್ಯಾಸವನ್ನು ಸರಿಪಡಿಸುವ ಬಗ್ಗೆ

KGID: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್. ಖಜಾನೆ-॥ ಮತ್ತು ವಿಮಾ ಇಲಾಖೆಯ ಅನುಕಲನ ವ್ಯವಸ್ಥೆಯಲ್ಲಿ ವಿಮಾ ಇಲಾಖೆಗೆ ಸ್ವೀಕೃತಿಯಾಗುತ್ತಿರುವ ವಿಮಾ ಕಂತಿನ ಮೊಬಲಗು ಮತ್ತು ವಿಮಾ ಇಲಾಖೆಯ Verified ದತ್ತಾಂಶದಲ್ಲಿರುವ ಪಾಲಿಸಿಗಳನ್ನು ಹೋಲಿಸಿ ನೋಡಿದಾಗ ವಿಮಾದಾರರವಾರು ವಿಮಾ ಕಂತಿನ ಮೊಬಗಿನಲ್ಲಿ ಈ ಕೆಳಗಿನ ವಿವರದಂತೆ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ.

ಮೇಲ್ಕಂಡ 15,287 ಪ್ರಕರಣಗಳನ್ನು ಜಿಲ್ಲಾವಾರು ಪ್ರತ್ಯೇಕಿಸಿ, Excel Sheet ನಲ್ಲಿ ನಮೂದಿಸಿ, ಸಂಬಂಧಪಟ್ಟ ಜಿಲ್ಲಾ ವಿಮಾಧಿಕಾರಿಗಳಿಗೆ e-mail ಮೂಲಕ ಕಳುಹಿಸಲಾಗಿದ್ದು, ಈ ದತ್ತಾಂಶವನ್ನು ಸರಿಪಡಿಸಲು ಈ ಕೆಳಕಂಡ ಕ್ರಮಗಳನ್ನು ಪಾಲಿಸುವುದು.

1. ಸದರಿ Excel Sheet ನಲ್ಲಿ ನಮೂದಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೌತಿಕ ಕಡತದಲ್ಲಿನ ದತ್ತಾಂಶ ಮತ್ತು KGID Data Verification Portal ನ ದತ್ತಾಂಶಗಳನ್ನು ಹೋಲಿಕೆ ಮಾಡಿ, ನ್ಯೂನತೆ ಇದ್ದಲ್ಲಿ ಭೌತಿಕ ಕಡತದಲ್ಲಿನ ದತ್ತಾಂಶದಂತೆ KGID Data Verification Portal ನಲ್ಲಿ ದತ್ತಾಂಶವನ್ನು ಸರಿಪಡಿಸಿ ಜಿಲ್ಲಾ ವಿಮಾಧಿಕಾರಿಗಳಿಂದ ಇ-ಸಹಿ ಮಾಡಿಸುವುದು.

2. ದತ್ತಾಂಶ ಮರು ಪರಿಶೀಲನೆಗಾಗಿ ನೀಡಿರುವ ಪ್ರಕರಣಗಳನ್ನು ಭೌತಿಕ ಕಡತದೊಂದಿಗೆ ಹೋಲಿಸಿ ನೋಡಿದಾಗ, ವಿಮಾ ಇಲಾಖೆಯ ದತ್ತಾಂಶದಲ್ಲಿ ಯಾವುದೇ ನ್ಯೂನತೆಗಳಲ್ಲಿ ಪ್ರಕರಣಗಳನ್ನು ಪ್ರತ್ಯೇಕಿಸಿ, ಅಂತಹ ಪ್ರತಿಯೊಂದು ಪ್ರಕರಣದ ವಿವರವನ್ನು ಪ್ರತ್ಯೇಕವಾಗಿ “ದತ್ತಾಂಶ ತಿದ್ದುಪಡಿ ಅವಶ್ಯಕತೆ ಇಲ್ಲ” ಎಂಬ ದೃಢೀಕರಣದೊಂದಿಗೆ, ಉಪ ನಿರ್ದೇಶಕರು, ಗಣಕ ಶಾಖೆ ಇವರಿಗೆ ಕಳುಹಿಸುವುದು.

3. ಮೇಲಿನಂತೆ ವಿಮಾ ಇಲಾಖೆಯ ದತ್ತಾಂಶ ಸರಿಯಿದ್ದು, ವಿಮಾದಾರರು ಅವರು ಹೊಂದಿರುವ ಪಾಲಿಸಿಗಳ ಮೇಲೆ ಪಾವತಿಸಬೇಕಾದ ವಿಮಾ ಕಂತಿನ ಮೊಬಲಗಿಗಿಂತ ಹೆಚ್ಚಿಗೆ /ಕಡಿಮೆ ಪಾವತಿಸುತ್ತಿರುವ ಬಗ್ಗೆ, ವಿಮಾದಾರರಿಗೆ ಹಾಗೂ ಅವರ ಮೇಲಧಿಕಾರಿಗಳಿಗೆ (ವಿಮಾದಾರರ ಪ್ರಸ್ತುತ ವೇತನ ಬಟವಾಡೆ ಅಧಿಕಾರಿಗಳ ಮಾಹಿತಿಯನ್ನು Excel Sheet ನಲ್ಲಿ ನೀಡಲಾಗಿದೆ) ಪತ್ರದ ಮೂಲಕ ತಿಳಿಸಿ, ಸೂಕ್ತ ತಿದ್ದುಪಡಿಗಳನ್ನು ಮಾಡಿಸುವುದು.

4. ಪಾಲಿಸಿಗಳನ್ನು ರದ್ದುಪಡಿಸಬೇಕಾಗಿದ್ದಲ್ಲಿ, ಪಾಲಿಸಿ ರದ್ದತಿಗಾಗಿ ಎ.ವಿ.ಜಿ., ಶಾಖೆಗೆ ಪತ್ರ ಬರೆದು, ಗಣಕ ಶಾಖೆಗೆ ಪ್ರತಿ ಹಾಕುವುದು.

ಮೇಲೆ ಸೂಚಿಸಿದ ಎಲ್ಲಾ ಕಾರ್ಯಗಳನ್ನು ಕಡ್ಡಾಯವಾಗಿ ದಿನಾಂಕ 15-08-2025 ರ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!