10th Class, ITI, Diploma. BSc, Degree, MBBS, MD, BE or BTech, ME or MTech or equivalent qualification.
ಹೂಮನ್ ಸ್ಪೇಸ್ ಫೈಟ್ ಸೆಂಟರ್ (ಎಚ್‌ಎಸ್‌ಎಫ್‌ಸಿ) ಬೆಂಗಳೂರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಸಂಘಟಿಸುವ ಸಂಸ್ಥೆಯಾಗಿದೆ. ಪ್ರಸ್ತುತ ಎಚ್‌ಎಸ್ಎಫ್‌ಸಿಯು ತಂತ್ರಜ್ಞ ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅ.9ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ: 103
ಹುದ್ದೆಗಳ ಕುರಿತು ಒಂದಿಷ್ಟು ಮಾಹಿತಿ.
ಮೆಡಿಕಲ್ ಆಫೀಸರ್ 3, ಸೈಂಟಿಸ್ಟ್ ಇಂಜಿನಿಯರ್ 10, ಟೆಕ್ನಿಕಲ್ ಅಸಿಸ್ಟೆಂಟ್ 28, ಸೈಂಟಿಫಿಕ್ ಅಸಿಸ್ಟೆಂಟ್ 1, ಟೆಕ್ನಿಷಿಯನ್-ಬಿ (ಫಿಟ್ಟರ್ 22, ಎಲೆಕ್ಟ್ರಾನಿಕ್ ಮೆಕಾನಿಕ್ 12, ಎಸಿ ಆ್ಯಂಡ್ ರೆಫ್ರಿಜೆರೇಷನ್ 1, ವೆಲ್ಡರ್ 2, ಮೆಕಾನಿಸ್ಟ್ 1, ಎಲೆಕ್ಟಿಕಲ್ 3, ಟರ್ನರ್ 1, ಗ್ಲೆಂಡರ್ 1), ಡ್ರಾಫ್ಟ್‌ಮನ್ -ಬಿ (ಮೆಕಾನಿಕಲ್ 9, ಸಿವಿಲ್ 4), ಅಸಿಸ್ಟೆಂಟ್ (ರಾಜಭಾಷಾ) 5.
ವಿದ್ಯಾರ್ಹತೆ ಎನು?
ಟೆಕ್ನಿಷಿಯನ್-ಬಿ ಹುದ್ದೆ:
ಈ ಹುದ್ದೆಗೆ 10ನೇ ತರಗತಿ, ಐಟಿಐ,
ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ
ಈ ಹುದ್ದೆಗೆ ಡಿಪ್ಲೊಮಾ ಪಾಸಾಗಿರಬೇಕು.
ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆ
ಈ ಹುದ್ದೆಗೆ ಬಿಎಸ್ಸಿ, ಪದವಿ,
ಅಸಿಸ್ಟೆಂಟ್ (ರಾಜಭಾಷಾ) ಹುದ್ದೆ
ಈ ಹುದ್ದೆಗೆ ಯಾವುದೇ ಪದವಿ,
ಮೆಡಿಕಲ್ ಆಫೀಸರ್ ಹುದ್ದೆ
ಈ ಹುದ್ದೆಗೆ ಎಂಬಿಬಿಎಸ್, ಎಂಡಿ,
ಸೈಂಟಿಸ್ಟ್ ಇಂಜಿನಿಯರ್ ಹುದ್ದೆ
ಈ ಹುದ್ದೆಗೆ ಬಿಇ ಅಥವಾ ಬಿಟೆಕ್, ಎಂಇ ಅಥವಾ ಎಂಟೆಕ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ ಎಷ್ಟು?
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷದೊಳಗಿರಬೇಕು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ನೀಡಲಾಗಿದೆ.
ವೇತನ ವಿವರ ಇಲ್ಲಿದೆ:
ಟೆಕ್ನಿಷಿಯನ್-ಬಿ
ಈ ಹುದ್ದೆಗೆ 21,700- 69,100.ರೂ
ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ- 44,900- 1,42,400.ರೂ
ಅಸಿಸ್ಟೆಂಟ್ (ರಾಜಭಾಷಾ) ಹುದ್ದೆಗೆ 25,500- 81,100ರೂ.,
ಮೆಡಿಕಲ್ ಆಫೀಸರ್ ಹುದ್ದೆಗೆ- 56,100-2,08,700.ರೂ
ಸೈಂಟಿಸ್ಟ್ ಇಂಜಿನಿಯರ್ ಹುದ್ದೆಗೆ– 56,100-1,77,500.ರೂ ವೇತನಶ್ರೇಣಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಸ್ಕ್ರೀನ್ ಟೆಸ್ಟ್, ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ..
ಅರ್ಜಿ ಶುಲ್ಕ ಎಷ್ಟು?
ಎಲ್ಲ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 750ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಕೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅ.9ರೊಳಗೆ hsfc.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ:9.10.2024
ಅಧಿಸೂಚನೆ– CLICK HERE
ಹೆಚ್ಚಿನ ಮಾಹಿತಿಗಾಗಿ- CLICK HERE
To serve Indian government