LBA- 2025 ಪಾಠ ಆಧಾರಿತ ಮೌಲ್ಯಾಂಕನ ತಿದ್ದುಪಡಿ ಸುತ್ತೋಲೆ ಪ್ರಕಟ.
LBA-2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು (LBA) ಬಳಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಸಾಧಿಸುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸಾಧಿಸಲು ಹಾಗೂ ಪ್ರತಿ ಪಾಠದ ನಂತರ ವಿದ್ಯಾರ್ಥಿಗಳ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಲಾಗಿದೆ. ಸದರಿ ಪ್ರಶ್ನೆಕೋಠಿಯ ಬಳಕೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಅನುಪಾಲನೆ ಸಂಬಂಧ ಉಲ್ಲೇಖಿತ-1 ರ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.
ಮುಂದುವರೆದು, ಉಲ್ಲೇಖ-2 ರಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ನೀಡಿದ ಮಾರ್ಗದರ್ಶನದಂತೆ, ಸುತ್ತೋಲೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದ್ದು, ಉಳಿದಂತೆ ಎಲ್ಲಾ ಅಂಶಗಳು ಯಥಾವತ್ತಾಗಿರುತ್ತವೆ.
1. 1 ರಿಂದ 5ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 10 ಅಂಕಗಳಿಗೆ ಲಿಖಿತ ಹಾಗೂ 05 ಅಂಕಗಳಿಗೆ ಮೌಖಿಕ ಒಟ್ಟು 15 ಅಂಕಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ದಾಖಲಿಸುವುದು.
2. 6 & 7ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 20 ಅಂಕಗಳಿಗೆ LBA ಪ್ರಶ್ನೆಕೋಠಿಯ ವಸ್ತು ನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಲಿಖಿತ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ದಾಖಲಿಸುವುದು.
3. 8 ರಿಂದ 10ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 20 ಅಂಕಗಳಿಗೆ LBA ಪ್ರಶ್ನೆಕೋಠಿಯ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಲಿಖಿತ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ದಾಖಲಿಸುವುದು.
4. ಮರುಸಿಂಚನ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವ ಜಿಲ್ಲೆಗಳು 6 ರಿಂದ 10ನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಹೊರತುಪಡಿಸಿ 15 ಅಂಕಗಳಿಗೆ LBA ಪ್ರಶ್ನೆಕೋರಿಯ ಹಾಗೂ 05 ಅಂಕಗಳಿಗೆ ಮರುಸಿಂಚನ ಕಾರ್ಯಕ್ರಮದ ಪ್ರಶ್ನೆಗಳನ್ನು ಪರಿಗಣಿಸಿ ಒಟ್ಟು 20 ಅಂಕಗಳಿಗೆ ಲಿಖಿತ ಪಾಠ ಆಧಾರಿತ ಮೌಲ್ಯಾಂಕನ (Unit Test) ಮಾಡುವುದು ಹಾಗೂ SATS ತಂತ್ರಾಂಶದಲ್ಲಿ ದಾಖಲಿಸುವುದು.
5. ಭಾಷಾ ವಿಷಯದಲ್ಲಿ ಪ್ರತಿ ಪಾಠ ಆಧಾರಿತ ಮೌಲ್ಯಾಂಕನಕ್ಕೆ ಒಂದು ಪಾಠ ಮತ್ತು ಒಂದು ಪದ್ಯವನ್ನು ಪರಿಗಣಿಸುವುದು.
6. 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಪ್ರತಿ 3 ಪಾಠಗಳಿಗೆ ಒಂದು ಪಾಠ ಆಧಾರಿತ ಮೌಲ್ಯಾಂಕನ ಮಾಡುವುದು. (ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಂದ ಅನುಮೋದಿಸಲ್ಪಟ್ಟಿದೆ)
CLICK HERE TO DOWNLOAD