“State Level Essay Competition”- Complete information about competition organization

ಕಿತ್ತೂರು ರಾಣಿ ಚನ್ನಮ್ಮಾಜಿಯವರ 200ನೇ ವರ್ಷದ ವಿಜಯೋತ್ಸವದ ನಿಮಿತ್ಯ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಕುರಿತು.

ಸನ್ 2024 ರ ಕಿತ್ತೂರು ಉತ್ಸವ ಹಾಗೂ 200 ನೇ ವರ್ಷದ ವಿಜಯೋತ್ಸವವನ್ನು ವೈಭವಯುತವಾಗಿ ಆಚರಿಸಬೇಕೆಂದು ಮಾನ್ಯ ಕಂದಾಯ ಸಚಿವರು ಹಾಗೂ ಅಧ್ಯಕ್ಷರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಅಧ್ಯಕ್ಷರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಇವರು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು. ಆಯ್ಕೆ ವಿಧ್ಯಾರ್ಥಿಗಳನ್ನು ಉತ್ಸವದಲ್ಲಿ ಗೌರವಿಸಿ ಬಹುಮಾನ ವಿತರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು, ಬೆಳಗಾವಿ ರವರ ದಿನಾಂಕ:09/09/2024ರ ಪತ್ರದಲ್ಲಿ ಕೋರಿರುತ್ತಾರೆ. ಹಾಗೂ ರಾಜ್ಯ ಶಿಕ್ಷಣ ಇಲಾಖೆಯ 4 ವಿಭಾಗಗಳಲ್ಲಿ ತಲಾ ಪ್ರಥಮ, ದ್ವಿತೀಯ, ತೃತಿಯ ಹೀಗೆ ಮೂರು ಜನ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ ಆಯ್ಕೆ ವಿಧ್ಯಾರ್ಥಿಗಳನ್ನು ಕಿತ್ತೂರು ಉತ್ಸವ ಸಮಯದಲ್ಲಿ ಅಂದರೆ ದಿನಾಂಕ:25/10/2024 ರಂದು ಜರಗುವ ಸಮಾರೋಪ ಸಮಾರಂಭದ ಕಾರ್ಯಕ್ರಮಕ್ಕೆ ಕಳುಹಿಸಿಕೊಡುವಂತೆ ಕೋರಿರುತ್ತಾರೆ. ಅದರಂತೆ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ತಿಳಿಸಿದೆ.

ಶಾಲೆಗಳಲ್ಲಿ ಪ್ರಸ್ತುತ ದಿನಾಂಕ:23/09/2024 ರಿಂದ 30/09/2024 ರವರೆಗೆ ಪ್ರಥಮ ಸಂಕಲನಾತ್ಮಕ ಮೌಲ್ಯಮಾಪನ ಚಟುವಟಿಕೆಗಳು ನಡೆಯುತ್ತಿರುವುದರಿಂದ, ಶಾಲಾ ಹಂತದಲ್ಲಿ ಸದರಿ ಸ್ಪರ್ಧೆಯನ್ನು ದಿನಾಂಕ:30/09/2024ರೊಳಗೆ ಸೂಕ್ತ ಸಮಯದಲ್ಲಿ ಅಂದರೆ ಒಂದು ಘಂಟೆ ಗುರುತಿಸಿ ಈ ಕೆಳಗಿನಂತೆ ಶಾಲಾ ಹಂತದಲ್ಲಿ ಕಟ್ಟು ನಿಟ್ಟಾಗಿ ಸ್ಪರ್ಧೆಯನ್ನು ಏರ್ಪಡಿಸುವುದು ಹಾಗೂ ಸದರಿ ವಿಧ್ಯಾರ್ಥಿಗಳು ಪ್ರಬಂಧವನ್ನು ಸ್ಮ-ಹಸ್ತಾಕ್ಷರದಲ್ಲಿ ಬರೆಯುವಂತೆ ಕ್ರಮವಹಿಸುವುದು.

ಶಾಲಾ ಹಂತದ ಸ್ಪರ್ಧೆ ಏರ್ಪಡಿಸಿದ ನಂತರ ಮುಂದಿನ ವಿವಿಧ ಹಂತಗಳಲ್ಲಿ ಈ ಕೆಳಗಿನಂತೆ ಕ್ರಮವಹಿಸಲು ತಿಳಿಸಿದೆ.

ಸದರಿ ಕಾರ್ಯಕ್ರಮದ ಕುರಿತು ನಿರ್ದೇಶಕರು, ಡಿ.ಎಸ್.ಇ.ಆರ್.ಟಿ. ಬೆಂಗಳೂರು ರವರು ಸದರಿ ಕಾರ್ಯಕ್ರಮವನ್ನು ತಮ್ಮ  ಹಂತದಲ್ಲಿ ಅನುಪಾಲಿಸಿ ಕ್ರಮವಹಿಸಲು ಕೋರಿದ ಬಗ್ಗೆ.

ಸಂಪೂರ್ಣ ಮಾಹಿತಿಗಾಗಿ: CLICK HERE

Leave a Comment