Government Schemes: ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಸರಕಾರದ ಯೋಜನೆಗಳು,ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ-2025
Government Schemes: ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಸರಕಾರದ ಯೋಜನೆಗಳು,ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ-2025: ದೇಶದಲ್ಲಿ ಲಕ್ಷಾಂತರ ಸ್ಟಾರ್ಟಪ್ ಗಳು ಆರಂಭವಾಗಿವೆ. ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಉದ್ಯಮಗಳಾಗಿ ಹೊರಹೊಮ್ಮಿವೆ. ಇಷ್ಟಾದರೂ, ಯುವಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಪದವೀಧರರಾಗಿದ್ದರೂ ಸಮರ್ಪಕ ಉದ್ಯೋಗ ಸಿಗುತ್ತಿಲ್ಲ. ಸಣ್ಣದೊಂದು ವ್ಯಾಪಾರ ಆರಂಭಿಸಬೇಕು ಎಂದರೂ ಇವರಿಗೆ ಬಂಡವಾಳದ ಕೊರತೆ ಕಾಡುತ್ತದೆ.
ಆದರೆ, ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳ ಯುವಜನತೆಯು ಸರಕಾರದ ಯೋಜನೆಗಳನ್ನು ಬಳಸಿಕೊಂಡೇ ಸಣ್ಣ ಉದ್ಯಮಗಳನ್ನು ಸ್ಥಾಪಿಸಬಹುದು. ಆ ಮೂಲಕ ಜೀವನದಲ್ಲಿ ಸೆಟಲ್ ಆಗಬಹುದು. ಹಾಗಾದರೆ, ನಾಲೈದು ಲಕ್ಷ ರೂ.ವರೆಗೆ ಸಹಾಯಧನ, ಸಾಲ ನೀಡುವ ಯೋಜನೆಗಳು ಯಾವುವು? ಆರ್ಥಿಕ ಸಬಲೀಕರಣಕ್ಕಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗಾಗಿ ಇರುವ ಯೋಜನೆಗಳು ಯಾವುವು? ಅವುಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ವ್ಯಾಪಾರಕ್ಕೆ ಎಷ್ಟು ಹಣ ಸಿಗುತ್ತದೆ ಎಂಬುದರ ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ.
ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಪದವೀಧರರು, ಸ್ನಾತಕೋತ್ತರ ಪದವೀಧರರು ಕಾಲೇಜು-ವಿವಿಗಳಿಂದ ಹೊರಬರುತ್ತಾರೆ. ಹೀಗೆ, ವಿದ್ಯಾಭ್ಯಾಸ ಮುಗಿಸಿದವರಿಗೆಲ್ಲ ಉದ್ಯೋಗ ಸಿಗುವುದಿಲ್ಲ. ಸರಕಾರಿ ಕೆಲಸಗಳಂತೂ ಸಾವಿರಕ್ಕೆ ಒಬ್ಬರಿಗೆ ಸಿಗುವುದೇ ಕಷ್ಟವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕೇವಲ 75 ನಾಯನ್ ತಹಸೀಲ್ದಾರ್ ಹುದ್ದೆಗಳಿಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಕೆ ಶುಲ್ಕದಿಂದ ಸಂಗ್ರಹವಾದ ಮೊತ್ತವೇ 1.43 ಕೋಟಿ ರೂ. ಆಗಿದೆ! ಇದು ಸರಕಾರಿ ಉದ್ಯೋಗಗಳ ಸಂಖ್ಯೆ ಹಾಗೂ ಆಕಾಂಕ್ಷಿಗಳ ನಡುವಿನ ದೊಡ್ಡ ಅಂತರವನ್ನು ತೋರಿಸುತ್ತದೆ.
ಈಗಿನ ಕಾಲದಲ್ಲಿ ಎಲ್ಲ ಯುವಕ-ಯುವತಿಯರಿಗೆ ಸರಕಾರಿ ಕೆಲಸಗಳು ಹಾಗೂ ಉತ್ತಮವಾದ ಖಾಸಗಿ ಕೆಲಸಗಳು ಸಿಗುವುದಿಲ್ಲ, ಅವರು ಒಂದಲ್ಲ ಒಂದು ರೀತಿಯ, ಚಿಕ್ಕದೋ ದೊಡ್ಡದೋ ವ್ಯವಹಾರವನ್ನು ಮಾಡಲೇಬೇಕಾಗುತ್ತದೆ. ಆದರೆ, ಯಾವುದೇ ವ್ಯಾಪಾರ, ಉದ್ದಿಮೆ ಆರಂಭಿಸಬೇಕು ಎಂದರೆ ಕನಿಷ್ಠ ಲಕ್ಷಗಳ ಲೆಕ್ಕದಲ್ಲಿ ಬಂಡವಾಳ ಬೇಕು. ಸಂಬಂಧಿಕರು, ಪರಿಚಯಸ್ಥರು, ಬ್ಯಾಂಕ್ಗಳಲ್ಲಿ ಸಾಲ ಪಡೆದರೆ ಬಡ್ಡಿ ಕಟ್ಟಿಯೇ ಹೈರಾಣ ಆಗಬೇಕಾಗುತ್ತದೆ. ಆಗಲ್ಲ, ಸಾಲ, ಬಡ್ಡಿ, ವ್ಯಾಪಾರ, ಅದರ ಲಾಭದ ಲೆಕ್ಕಾಚಾರ ಮಾಡಿ, ಯಾವುದಾದರೂ ಒಂದು ಕಂಪನಿಯು ಚಿಕ್ಕಾಸು ಸಂಬಳ ಕೊಟ್ಟರೂ ಸಾಕು ಎನ್ನುವ ಮನ್ನತಿ ಯುವಜನತೆಯದ್ದಾಗಿದೆ.
ಆದರೆ, ಬಂಡವಾಳ ಕೊರತೆ ಎದುರಾದಾಗ ಮತ್ತು ಬಡ್ಡಿ ಲೆಕ್ಕಾಚಾರದಿಂದ ಸುಸ್ತಾದಾಗ ಯುವಜನತೆಯುನಿರಾಶರಾಗಬೇಕಾಗಿಲ್ಲ, ಮಹತ್ವದ ಸರಕಾರಿ ಯೋಜನೆಗಳಿದ್ದು, ಅನೇಕರಿಗೆ ಮಾಹಿತಿಯ ಕೊರತೆ ಇದೆ. ಹೌದು, ಯುವಕ-ಯುವತಿಯರು ಸಣ್ಣಪುಟ್ಟ ಉದ್ಯಮ ಆರಂಭಿಸಿ ಜೀವನದಲ್ಲಿ ಸೆಟಲ್ ಆಗಲಿ ಎಂದೇ ರಾಜ್ಯದಲ್ಲಿ ಹಲವು ಸರಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಸರಕಾರಿ ಯೋಜನೆಗಳಿವೆ. ಇವುಗಳ ಕುರಿತು ನಿರ್ಲಕ್ಷ್ಯವೋ ಅಥವಾ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಕಾರಣವೋ ಏನೋ, ಹೆಚ್ಚಿನ ಜನ ಸರಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡೇ ರಾಜ್ಯದಲ್ಲಿರುವ ಸರಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಅದರಲ್ಲೂ ರಾಜ್ಯ ಸರಕಾರದ ಐಟಿ ಬಿಟಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳು ಹತ್ತಾರು ಯೋಜನೆಗಳನ್ನು ರೂಪಿಸಿದೆ. ಇವು ಉದ್ಯಮಶೀಲತೆಯನ್ನು ಬೆಳೆಸುವ ಮಹತ್ವದ ಕೊಡುಗೆಯನ್ನೂ ನೀಡುತ್ತಿವೆ. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು, ನೀವೇ ಒಂದು ಸಣ್ಣ ಉದ್ಯಮ ಆರಂಭಿಸಿ, ಆದರಿಂದ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದರ ಗೈಡೆನ್ಸ್ ಇಲ್ಲಿದೆ.
1. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ:
ಪರಿಶಿಷ್ಟ ಜಾತಿಯ ಯುವಕ-ಯುವತಿಯರು ಕೂಡ ಉದ್ಯಮ ಆರಂಭಿಸಬೇಕು ಎಂಬ ದೃಷ್ಟಿಯಿಂದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ. ನಿಗದಿತ ಸಮುದಾಯದವರು ಮೊಬೈಲ್ ಕ್ಯಾಂಟೀನ್ಗಳನ್ನು ಆರಂಭಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲಿ ಎಂಬುದು ಯೋಜನೆಯ ಉದ್ದೇಶವಾಗಿದೆ. ಮೊಬೈಲ್ ಕ್ಯಾಂಟೀನ್ಗಳನ್ನು ಆರಂಭಿಸಲು ಯೋಜನೆ ಅನ್ವಯ 4 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
2. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಜಾರಿಗೆ ತರಲಾದ ಸ್ವಯಂ ಉದ್ಯೋಗ (ನೇರ ಸಾಲ) ಯೋಜನೆಗೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಹಣ್ಣು, ತರಕಾರಿ, ಮೀನು ಮಾಂಸ ಮಾರಾಟ, ಕುರಿ, ಹಂದಿ, ಮೊಲ ಸಾಕಣೆ ಸೇರಿ ವಿವಿಧ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯ ನೀಡಲಾಗುತ್ತದೆ. ಪರಿಶಿಷ್ಟ ಜಾತಿಯ ನಿರುದ್ಯೋಗಿಗಳು ಯೋಜನೆ ಅನ್ವಯ 50 ಸಾವಿರ ರೂ. ಸಹಾಯಧನ ಹಾಗೂ 50 ಸಾವಿರ ರೂ. ಸಾಲ ಪಡೆಯಬಹುದು. ಸಾಲಕ್ಕೆ ವಾರ್ಷಿಕ ಕೇವಲ ಶೇ.4ರಷ್ಟು ಬಡ್ಡಿದರ ಇರುತ್ತದೆ. ಒಂದು ಲಕ್ಷ ರೂ ಬಂಡವಾಳ ಹಾಕಿ, ಸಣ್ಣ ಉದ್ಯಮ ಆರಂಭಿಸುವವರಿಗೆ ಇದು ఆనుజా ఆశారియాగిణి.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
3.ಪ್ರೇರಣಾ ಮೈಕ್ರೋ ಕ್ರೆಡಿಟ್ ಯೋಜನೆ:
ಪರಿಶಿಷ್ಟ ಜಾತಿ ಸಮುದಾಯದ ಮಹಿಳೆಯರನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕವಾಗಿ ಅವರನ್ನು ಸಬಲೀಕರಣಗೊಳಿಸಲು ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ಮಹಿಳಾ ಸ್ವಸಹಾಯ ಸಂಘಗಳ (ಕನಿಷ್ಠ 10 ಸದಸ್ಯರು) ವಿವಿಧ ಉದ್ದೇಶದ ಆರ್ಥಿಕ ಚಟುವಟಕೆಗಳಿಗೆ ಸಾಲ ಮತ್ತು ಸಹಾಯಧನ ನೀಡಲಾಗುವುದು. ಗರಿಷ್ಠ 5 ಲಕ್ಷರೂ.ನಲ್ಲಿ ಉದ್ಯಮ ಸೇರಿ ಯಾವುದೇ ಆರ್ಥಿಕ ಚಟುವಟಿಕ ಆರಂಭಿಸಬಹುದು. ಯೋಜನೆ ಅನ್ವಯ 2.5 ಲಕ್ಷ ರೂ. ಸಹಾಯಧನ ಹಾಗೂ 2.5 ಲಕ್ಷರೂ. ಸಾಲ (ಶೇ.4ರ ಬಡ್ಡಿದರ) ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
4. ಗಂಗಾ ಕಲ್ಯಾಣ ಯೋಜನೆ:
1.20 ರಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ಕೊಳವೆಬಾವಿ ಕೊರೆದು, ಪಂಪ್ಸೆಟ್ ಮತ್ತು ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲು ಯೋಜನೆ ಜಾರಿಗೆ ತರಲಾಗಿದೆ. ಇದರೊಂದಿಗೆ, ಸಣ್ಣಹಾಗೂ ಅತಿ ಸಣ್ಣರೈತರಿಗೆ ನೀರು ದೊರೆತು, ಅವರು ಉತ್ತಮ ಇಳುವರಿ ಪಡೆಯಲಿ ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಅನ್ವಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ರೈತರಿಗೆ 4.75 ಲಕ್ಷ ರೂ. ಸಹಾಯಧನ ದೊರೆಯುತ್ತವೆ. ಇನ್ನು, ಬೇರೆ ಜಿಲ್ಲೆಗಳಲ್ಲಿ 3.75 ಲಕ್ಷರೂ. ಸಹಾಯಧನ (50 ಸಾವಿರ ರೂ. ಸಾಲ ಸೇರಿ) ಲಭಿಸುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
5.ಭೂ ಒಡೆತನ ಯೋಜನೆ:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗಾಗಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ನಿಗಮಗಳ ಅಡಿಯಲ್ಲಿ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಹಿಳಾ ಕೃಷಿ ಕಾರ್ಮಿಕರು ಜಮೀನು ಖರೀದಿಸಲು ಯೋಜನೆ ನೆರವಾಗಲಿದೆ. ಯೋಜನೆ ಅನ್ವಯ ಮಹಿಳಾ ಕೃಷಿ ಕಾರ್ಮಿಕರು ಜಮೀನು ಖರೀದಿಸಲು ಸುಮಾರು 20-25 ಲಕ್ಷ ರೂ. ವರೆಗೆ ಸಾಲ ಹಾಗೂ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
5. ಹೈನುಗಾರಿಕೆಗೆ ಉತ್ತೇಜನ ನೀಡುವ ಯೋಜನೆ:
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐಎಸ್ ಬಿ) ಅಡಿಯಲ್ಲಿ ಬ್ಯಾಂಕ್ ಗಳ ಸಹಯೋಗದೊಂದಿಗೆ ಹೈನುಗಾರಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಎರಡು ಎಮ್ಮೆ ಅಥವಾ ಹಸುಗಳನ್ನು ಸಾಕಣೆ ಮಾಡಲು 1.25 ಲಕ್ಷರೂ.ವರೆಗೆ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
6. ಸ್ವಾವಲಂಬಿ ಸಾರಥಿ ಯೋಜನೆ:
ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐಎಸ್ ಬಿ) ಅಡಿಯಲ್ಲಿ ಬ್ಯಾಂಕ್ ಗಳ ಸಹಯೋಗದೊಂದಿಗೆ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ಯುವಜನತೆಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಘಟಕ ವೆಚ್ಚ ಶೇ.75 ರಷ್ಟು ಅಥವಾ ಗರಿಷ್ಟ 4 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಯುವಕರು ಸಹಾಯಧನವನ್ನು ಬಳಸಿಕೊಂಡು ಟ್ಯಾಕ್ಸಿ, ಗೂಡ್ಡ ವಾಹನಗಳನ್ನು ಖರೀದಿಸಿ, ಜೀವನ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 10
7. ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (పిఎంఎభోఎంఇ)
ಕೇಂದ್ರ ಸರಕಾರವು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಿದೆ. ಇದಕ್ಕೆ ರಾಜ್ಯ ಸರಕಾರದ ಕೊಡುಗೆಯೂ ಇದೆ. ಕಿರು ಆಹಾರ ಉದ್ದಿಮೆ ಸ್ಥಾಪಿಸಲು ಶೇ.50ರಷ್ಟು ಅಥವಾ ಗರಿಷ್ಟ 15 ಲಕ್ಷ ಸಾಲ ಆಧಾರಿತ ಸಹಾಯಧನ ನೀಡಲಾಗುತ್ತದೆ. ಯೋಜನೆ ಎಲ್ಲರಿಗೂ ಲಭ್ಯವಿರುತ್ತದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಬಡ್ಡಿ ಸಹಾಯ ದರ ಇರುತ್ತದೆ.
ಈ ಯೋಜನೆಯಲ್ಲಿ ಸಿರಿಧಾನ್ಯ ಆಧಾರಿತ ಒಪ್ಪಂದಗಳು, ಎಣ್ಣೆ ಬೀಜ ಆಧಾರಿತ ಉತ್ಪನ್ನಗಳು, ಮೆಣಸಿನಕಾಯಿ ಆಧಾರಿತ ಉತ್ಪನ್ನಗಳು ಅಥವಾ ಇನ್ಯಾವುದೇ ಆಹಾರ ಉತ್ಪನ್ನಗಳ ಉದ್ದಿಮೆ ಸ್ಥಾಪಿಸಲು ಅವಕಾಶ ಇದೆ. ಆಸಕ್ತರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ವಿದ್ಯುತ್ ಬಿಲ್, ಫೋಟೊ, ಬ್ಯಾಂಕ್ ಪಾಸ್ಬುಕ್, ಯಂತ್ರೋಪಕರಣಗಳ ವಿವರ, ಕೊಟೇಶನ್, ಜಾಗದ ಕರಾರು ಪತ್ರ ಅಥವಾ ಇತರೆ ದಾಖಲೆಗಳನ್ನು ಕೇಂದ್ರ ಕಚೇರಿ ಬೆಂಗಳೂರು ಅಥವಾ ಸಂಬಂಧಪಟ್ಟ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬಹುದು.
ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗಾಗಿ ವಿಶೇಷ ಅಭಿಯಾನ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೌತಿನ್ ಸಭಾ ಅಥವಾ ಪ್ರೇಮ್ ಎಚ್.ಜಿ ಅವರನ್ನು ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ:080-22271190/22271198
ವೆಬ್ಸೈಟ್ :https://pmfme.mofpi.gov.in/
ಉದ್ಯಮಗಳ ಎಲಿವೇಟ್ ಯೋಜನೆ:
ಕರ್ನಾಟಕದಲ್ಲಿ ಸ್ಟಾರ್ಟಪ್ಗಳು, ಉದ್ಯಮಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರವು ಎಲಿವೇಟ್ ಸರಣಿಯ ಯೋಜನೆ ರೂಪಿಸಿದೆ. ನವೋದ್ಯಮಗಳಿಗೆ
50 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡುವುದು ಯೋಜನೆಯ ಗುರಿಯಾಗಿದೆ. ಮೂರು ಯೋಜನೆಗಳ ಕುರಿತ ಹೆಚ್ಚಿನ ವಿವರ ತಿಳಿಯೋಣ ಬನ್ನಿ.
ಅನುದಾನ: 50 ಲಕ್ಷ ರೂ. 1 ಕೊನೆಯ ದಿನಾಂಕ: ಸೆಪ್ಟೆಂಬರ್ 15
ಅರ್ಜಿ ಸಲ್ಲಿಸಲು ವೆಬ್ಸೈಟ್ : http://eitbt.karnataka.gov.in/
ಸಂಪರ್ಕ ಸಂಖ್ಯೆ : 080-22231007
ಎಲಿವೇಟ್ 2025
ಅರ್ಹತಾ ಮಾನದಂಡಗಳು:
1. ಕರ್ನಾಟಕದಲ್ಲಿ ನೋಂದಾಯಿತ ಕಚೇರಿ ಹೊಂದಿರಬೇಕು. ಕಂಪನಿಗಳ ಕಾಯಿದೆ 2013ರ ಅನ್ವಯ ಪೈವೇಟ್ ಲಿಮಿಟೆಡ್, ಎಲ್ ಎಲ್ ಪಿ ಅಥವಾ ಪಾಲುದಾರಿಕೆ ಸಂಸ್ಥೆಗಳು ಯೋಜನೆಯ ಲಾಭ ಪಡೆಯಬಹುದು. ಪಾಲುದಾರಿಕೆ ಕಾಯಿದೆ 1932ರ ಸೆಕ್ಷನ್ 59ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಪಾಲುದಾರಿಕೆ ಸಂಸ್ಥೆಯಾಗಿ ಅಥವಾ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯಿದೆ 2008ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯಾಗಿ ನೋಂದಣಿ ಆಗಿರಬೇಕು.
2. ನೋಂದಾಯಿತ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯ 100 ರೂ.ಗಿಂತ ಕಡಿಮೆ ಇರಬೇಕು.
3. ನವೋದ್ಯಮಗಳು ಅರ್ಜಿ ಆಹ್ವಾನಗೊಂಡ ದಿನಾಂಕ ಅಥವಾ ಅರ್ಜಿಸಲ್ಲಿಸುವ ಕೊನೆಯ ದಿನಾಂಕದವರೆಗೆ 10 ವರ್ಷಗಳನ್ನು ಮೀರಿರಬಾರದು.
4. ನವೋದ್ಯಮಗಳು ಉತ್ಪನ್ನ/ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ, ಉದ್ಯೋಗ ಸೃಷ್ಟಿ ಅಥವಾ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯ ಹೊಂದಿರುವ ಲಾಭದಾಯಕ ವ್ಯವಹಾರ ಮಾದರಿಯಾಗಿರಬೇಕು.
ಎಲಿವೇಟ್ ಉನ್ನತಿ 2025:
ಅರ್ಹತಾ ಮಾನದಂಡಗಳು:
1. ಕರ್ನಾಟಕದಲ್ಲಿ ನೋಂದಾಯಿತ ಕಚೇರಿ ಹೊಂದಿರಬೇಕು. ಕಂಪನಿಗಳ ಕಾಯಿದೆ 2013ರ ಅನ್ವಯ ಪೈವೇಟ್ ಲಿಮಿಟೆಡ್, ಎಲ್ ಎಲ್ ಪಿ ಅಥವಾ ಪಾಲುದಾರಿಕೆ ಸಂಸ್ಥೆಗಳು ಯೋಜನೆಯ ಲಾಭ ಪಡೆಯಬಹುದು. ಪಾಲುದಾರಿಕೆ ಕಾಯಿದೆ 1932ರ ಸೆಕ್ಷನ್ 59ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಪಾಲುದಾರಿಕೆ ಸಂಸ್ಥೆಯಾಗಿ ಅಥವಾ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯಿದೆ 2008ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯಾಗಿ ನೋಂದಣಿ ಆಗಿರಬೇಕು.
2. ನೋಂದಾಯಿತ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯ 100 ರೂ.ಗಿಂತ ಕಡಿಮೆ ಇರಬೇಕು.
3. ನವೋದ್ಯಮಗಳು ಅರ್ಜಿ ಆಹ್ವಾನಗೊಂಡ ದಿನಾಂಕ ಅಥವಾ ಆರ್ಜಿಸಲ್ಲಿಸುವ ಕೊನೆಯ ದಿನಾಂಕದವರೆಗೆ 10 ವರ್ಷಗಳನ್ನು ಮೀರಿರಬಾರದು.
4. ನವೋದ್ಯಮಗಳು ಉತ್ಪನ್ನ/ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ, ಉದ್ಯೋಗ ಸೃಷ್ಟಿ ಅಥವಾ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯ ಹೊಂದಿರುವ ಲಾಭದಾಯಕ ವ್ಯವಹಾರ ಮಾದರಿಯಾಗಿರಬೇಕು.
5. ನಿರ್ದೇಶಕ (ರು) ಅಥವಾ ಪಾಲುದಾರ(ರು) ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿರಬೇಕು. ಕಂಪನಿಯಲ್ಲಿ ಇವರು ಶೇ.70ರಷ್ಟು ಷೇರುಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿದ ದಿನಾಂಕದಿಂದ ಹಾಗೂ ಯೋಜನೆಯ ಸಂಪೂರ್ಣ ಅವಧಿಯಲ್ಲಿ ಷೇರುದಾರರ ಮಾದರಿಯು ಈ ನಿಯಮದಂತೆ ಬದ್ಧವಾಗಿರಬೇಕು. ಈ ಷರತ್ತನ್ನು ಉಲ್ಲಂಘಿಸುವ ಅಥವಾ ಯಾವುದೇ ಮಾಲೀಕತ್ವದ (ಡಿಲ್ಯುಷನ್) ಬದಲಾವಣೆಯು ಸಂಭವಿಸಿದಲ್ಲಿ ಅರ್ಹತೆಯನ್ನು ಅಮಾನ್ಯಗೊಳಿಸಲಾಗುತ್ತದೆ.
6. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರ್ದೇಶಕ(ರು) ಅಥವಾ ಪಾಲು ದಾರ(ರು) ಕರ್ನಾಟಕ ಸರಕಾರದ ಕಂದಾಯ ಇಲಾಖೆಯಿಂದ ನೀಡಲಾದ ಆರ್ಡಿ ಸಂಖ್ಯೆಯೊಂದಿಗೆ ಡಿಜಿಟಲ್ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
ಎಲಿವೇಟ್ ಅಲ್ಪಸಂಖ್ಯಾತರು 2025:
ಅರ್ಹತಾ ಮಾನದಂಡಗಳು:
1. ಕರ್ನಾಟಕದಲ್ಲಿ ನೋಂದಾಯಿತ ಕಚೇರಿ ಹೊಂದಿರಬೇಕು. ಕಂಪನಿಗಳ ಕಾಯಿದೆ 2013ರ ಅನ್ವಯ ಪೈವೇಟ್ ಲಿಮಿಟೆಡ್, ಎಲ್ ಎಲ್ ಪಿ ಅಥವಾ ಪಾಲುದಾರಿಕೆ ಸಂಸ್ಥೆಗಳು ಯೋಜನೆಯ ಲಾಭ ಪಡೆಯಬಹುದು. ಪಾಲುದಾರಿಕೆ ಕಾಯಿದೆ 1932ರ ಸೆಕ್ಷನ್ 59ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಪಾಲುದಾರಿಕೆ ಸಂಸ್ಥೆಯಾಗಿ ಅಥವಾ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯಿದೆ 2008ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಸಂಸ್ಥೆಯಾಗಿ ನೋಂದಣಿ ಆಗಿರಬೇಕು.
2. ನೋಂದಾಯಿತ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯ 100 ರೂ.ಗಿಂತ ಕಡಿಮೆ ಇರಬೇಕು.
3. ನವೋದ್ಯಮಗಳು ಅರ್ಜಿ ಆಹ್ವಾನಗೊಂಡ ದಿನಾಂಕ ಅಥವಾ ಅರ್ಜಿಸಲ್ಲಿಸುವ ಕೊನೆಯ ದಿನಾಂಕದವರೆಗೆ 10 ವರ್ಷಗಳನ್ನು ಮೀರಿರಬಾರದು.
4. ನವೋದ್ಯಮಗಳು ಉತ್ಪನ್ನ/ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ, ಉದ್ಯೋಗ ಸೃಷ್ಟಿ ಅಥವಾ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯ ಹೊಂದಿರುವ ಲಾಭದಾಯಕ ವ್ಯವಹಾರ ಮಾದರಿಯಾಗಿರಬೇಕು.
5. ನಿರ್ದೇಶಕ (ರು) ಅಥವಾ ಪಾಲುದಾರ(ರು) ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಮತ್ತು ಅಂತಹ ಸದಸ್ಯರು ಕಂಪನಿ/ಸಂಸ್ಥೆಯಲ್ಲಿ ಕನಿಷ್ಠ ಶೇ.51ರಷ್ಟು ಷೇರುಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಿದ ದಿನಾಂಕದಿಂದ ಹಾಗೂ ಯೋಜನೆಯ ಸಂಪೂರ್ಣ ಅವಧಿಯಲ್ಲಿ ಷೇರುದಾರರ ಮಾದರಿಯು ಈ ನಿಯಮದಂತೆ ಬದ್ಧವಾಗಿರಬೇಕು. ಈ ಷರತ್ತನ್ನು ಉಲ್ಲಂಘಿಸುವ ಅಥವಾ ಯಾವುದೇ ಮಾಲೀಕತ್ವದ (ಡಿಲ್ಯುಷನ್) ಬದಲಾವಣೆಯು ಸಂಭವಿಸಿದರೆ ಅದರ ಅರ್ಹತೆ ಅಮಾನ್ಯಗೊಳಿಸಲಾಗುತ್ತದೆ.
6. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಿರ್ದೇಶಕ(ರು) ಅಥವಾ ಪಾಲುದಾರ (ರು) ಕರ್ನಾಟಕ ಸರಕಾರದ ಕಂದಾಯ ಇಲಾಖೆಯಿಂದ ನೀಡಲಾದ ಆರ್ಡಿ ಸಂಖ್ಯೆಯೊಂದಿಗೆ ಡಿಜಿಟಲ್ ಜಾತಿ ಪ್ರಮಾಣಪತ್ರ ಹೊಂದಿರಬೇಕು.
ಗಮನಿಸಿ: ಆರ್ಥಿಕ ಸಬಲೀಕರಣ, ಉದ್ಯಮ, ಉದ್ಯೋಗ, ಬಿಸಿನೆಸ್ಗೆ ನೆರವಾಗಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಾಕಷ್ಟು ಯೋಜನೆಗಳಿವೆ. ಇಲ್ಲಿ ಒಂದಿಷ್ಟು ಯೋಜನೆಗಳ ಬಗೆಗೆ ಮಾಹಿತಿ ನೀಡಲಾಗಿದೆ. ನಿಯಮಿತವಾಗಿ ಇಂಥ ಯೋಜನೆಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ಪ್ರಕಟಣೆಗಳನ್ನು ಮತ್ತು ಇಲಾಖೆಯ ವೆಬ್ಸೈಟ್ಗಳನ್ನು ಗಮನಿಸಬೇಕು.
ಅರ್ಜಿ ಸಲ್ಲಿಕೆಯ ವೆಬ್ಸೈಟ್
sevasindhu.karnataka.gov.in
ಆಫ್ಲೈನ್ ವಿಧಾನ
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿಯೂ ಅರ್ಜಿ ಸಲ್ಲಿಕೆ ಸಾಧ್ಯ.
ಸಹಾಯವಾಣಿ
9482300400